ಎದೆ ನೋವು ಕಡಿಮೆ ಮಾಡುವ ಸಿಂಪಲ್ ಕಷಾಯ ಮಾಡಿ

0 32

ಇತ್ತೀಚಿನ ದಿನಗಳಲ್ಲಿ ಎದೆನೋವು ಅನ್ನೋದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ, ಆದ್ರೆ ಈ ಎದೆನೋವು ಯಾವ ಕಾರಣಕ್ಕೆ ಬರುತ್ತದೆ ಎಂಬುದಾಗಿ ತಿಳಿಯೋದಿಲ್ಲ ಹಲವು ಕಾರಣಗಳಿಂದ ಉಂಟಾಗುತ್ತದೆ. ಆದ್ದರಿಂದ ಎದೆನೋವಿನ ಬಗ್ಗೆ ಒಂದಿಷ್ಟು ವಿಚಾರವನ್ನು ನಾವುಗಳು ಇಲ್ಲಿ ತಿಳಿದುಕೊಳ್ಳಬೇಕಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಈ ಲೇಖನವನ್ನು ತಿಳಿಸುತ್ತಿದ್ದೇವೆ, ನಿಮಗೆ ಈ ಮಾಹಿತಿ ಇಷ್ಟ ಆದಲ್ಲಿ ನಿಮ್ಮ ಸ್ನೇಹಿತರಿಗೂ ಕೂಡ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.

ಮೊದಲನೆಯದಾಗಿ ಹೃದಯದ ಮಾಂಸಖಂಡಗಳಿಗೆ ಆಮ್ಲಜನಕದ ಕೊರತೆ ಉಂಟಾದರೆ ರೋಗಿಗಳು ಉಸಿರಾಡಲು ಕಷ್ಟವಾಗುತ್ತದೆ ಆಗಲೇ ಎದೆನೋವು ಬರುತ್ತದೆ, ಇದು ಯಾರಿಗೆ ಬೇಕಾದರೂ ಬರಬಹುದು ಇದಕ್ಕೆ ವಯೋಮಿತಿ ಇಲ್ಲ ಹೃದಯದ ಮಾಂಸಖಂಡಗಳಿಗೆ ಸೂಕ್ತ ಪ್ರಮಾಣದಲ್ಲಿ ರಕ್ತ ಪೂರೈಕೆಯಾಗದೆ ಇದ್ದಲ್ಲಿ ಕೊರೋನರಿ ಹಾರ್ಟ್ ಡಿಸೀಸ್ CHD ಸಂಭವಿಸುವ ಸಾಧ್ಯತೆ ಇರುತ್ತದೆ ಇದಾಗುತ್ತಿದ್ದಂತೆಯೇ ಎದೆನೋವು ಪ್ರಾರಂಭವಾಗುತ್ತದೆ. ಇದರಿಂದ ಹೆಚ್ಚು ಭಯಪಡದೆ ದೈರ್ಯವಾಗಿರಬೇಕು.

ಎದೆನೋವು ಕಡಿಮೆ ಮಾಡುವ ಮನೆಮದ್ದುಗಳು
ಎಳೆ ನಿಂಬೆಕಾಯಿ ಕಷಾಯ ತಯಾರಿಸಿ ಮಜ್ಜಿಯೊಂದಿಗೆ ಸೇವಿಸಿದರೆ ಎದೆನೋವು ಕಡಿಮೆಯಾಗುತ್ತದೆ. ಇನ್ನು ಎರಡನೆಯದಾಗಿ ಹಣ್ಣುಗಳಲ್ಲಿ ಒಂದಾಗಿರುವಂತ ದಾಳಿಂಬೆಹಣ್ಣು ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಆದ್ದರಿಂದ ದಾಳಿಂಬೆಹಣ್ಣು ತಿನ್ನೋದ್ರಿಂದ ಹೃದಯದ ಅರೋಗ್ಯ ಸುಧಾರಿಸುತ್ತದೆ ಹಾಗು ನೋವು ಕಡಿಮೆ ಮಾಡುತ್ತದೆ.

ಮೂರನೆಯದಾಗಿ ಕೊತ್ತಂಬರಿ ಸೊಪ್ಪನ್ನು ಎಳನೀರಿನೊಂದಿಗೆ ಮಿಕ್ಸಿಯಲ್ಲಿ ಹಾಕಿ ಚನ್ನಾಗಿ ರುಬ್ಬಿಕೊಂಡು ಅದಕ್ಕೆ ಕಲ್ಲುಸಕ್ಕರೆ ಏಲಕ್ಕಿ ಪುಡಿ ಬೆರಸಿ ಪ್ರತಿನಿತ್ಯ ೨ ಬಾರಿ ಸೇವಿಸಿದರೆ ಎದೆನೋವು ಗುಣವಾಗುವುದು. ಅಲ್ಲದೆ ಕೊತ್ತಂಬರಿ ಬೀಜವನ್ನು ಚನ್ನಾಗಿ ಪುಡಿಮಾಡಿ ಅದನ್ನು ನೀರಿನಲ್ಲಿ ಬೆರಸಿ ಕಷಾಯ ತಯಾರಿಸಿ ಅದಕ್ಕೆ ಹಾಲು ಸಕ್ಕರೆ ಬೆರಸಿ ಸೇವಿಸುವುದರಿಂದ ಎದೆನೋವು ಕಡಿಮೆಯಾಗುವುದು.

ನಿಂಬೆಹಣ್ಣಿನ ರಸವನ್ನು ಪ್ರತಿನಿತ್ಯ ೨ ಬಾರಿಯಂತೆ ಸೇವಿಸುತ್ತಿದ್ದರೆ ಎದೆನೋವು ಕಡಿಮೆಯಾಗುತ್ತದೆ. ಒಟ್ಟಾರೆಯಾಗಿ ಎದೆನೋವು ಕಡಿಯಾಗಲು ಈ ಮೇಲಿನ ಯಾವುದರಲ್ಲಿ ಒಂದನ್ನು ಮಾಡಿ ನೋವು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಧನ್ಯವಾದಗಳು ಶುಭವಾಗಲಿ

Leave A Reply

Your email address will not be published.