ಪಪ್ಪಾಯ ಹಣ್ಣನ್ನು ಹಣ್ಣುಗಳ ರಾಣಿ ಎಂದು ಕರೆಯಲಾಗುತ್ತದೆ. ಪಪ್ಪಾಯ ಹಣ್ಣು ಆಯುರ್ವೇದ ದಲ್ಲಿ ಹೆಚ್ಚು ಬಳಕೆ ಆಗುತ್ತದೆ. ಪಪ್ಪಾಯ ಹಣ್ಣನ್ನು ಸೇವಿಸಿವುದರಿಂದ ನಾವು ಹಲವಾರು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಹಾಗೂ ನಮ್ಮ ದೇಹಕ್ಕೆ ಸಾಕಷ್ಟು ಆರೋಗ್ಯಕರ ಲಾಭವನ್ನೂ ಪಡೆಯಬಹುದು. ಹಾಗೂ ಪಪ್ಪಾಯ ಹಣ್ಣನ್ನು ಸೇವಿಸುವುದರಿಂದ ಮುಖದ ಕಾಂತಿಯನ್ನು ಸಹ ಹೆಚ್ಚಿಸಿಕೊಳ್ಳಬಹುದು. ಊಟಕ್ಕೂ ಮೊದಲು ಪಪ್ಪಾಯವನ್ನು ಸೇವಿಸುವುದರಿಂದ ನಮಗೆ ಏನೆಲ್ಲ ಲಾಭವಿದೆ ಎನ್ನುವುದನ್ನು ನೋಡೋಣ.

ಊಟಕ್ಕೊ ಮೊದಲು ಪಪ್ಪಾಯ ಹಣ್ಣನ್ನು ಸೇವಿಸುವುದರಿಂದ ಮೂತ್ರ ಸಂಬಂಧಿತ ರೋಗಗಳು ನಿವಾರಣೆ ಆಗುವವು ಎಂದು ತಿಳಿದು ಬಂದಿದೆ. ಹಾಗಾಗಿ ಯಾರಿಗಾದರೂ ಮೂತ್ರ ಸಂಬಂಧಿತ ಸಮಸ್ಯೆ ಇದ್ದಲ್ಲಿ ಊಟಕ್ಕೂ ಮೊದಲು ಪಪ್ಪಾಯ ಹಣ್ಣು ಸೇವಿಸುವುದು ಉತ್ತಮ. ಬಾಣಂತಿಯರು ಪಪ್ಪಾಯ ಹಣ್ಣನ್ನು ಸೇವಿಸುವುದರಿಂದ ಎದೆಯ ಹಾಲು ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ ಪಪ್ಪಾಯ ಹಣ್ಣನ್ನು ಹಾಲು ಹಾಗೂ ಜೇನುತುಪ್ಪದ ಜೊತೆ ಬೆರೆಸಿ ಸೇವಿಸುವುದರಿಂದ ಹೃದಯದ ಆರೋಗ್ಯ ಚೆನ್ನಾಗಿ ಇರುತ್ತದೆ. ಮುಖದಲ್ಲಿ ಮೊಡವೆಗಳ ಸಮಸ್ಯೆ ಕಂಡು ಬಂದರೆ ಪಪ್ಪಾಯಿ ಹಣ್ಣಿನ ಲೇಪನವನ್ನು ಹಚ್ಚಿದರೆ ಮುಖದಲ್ಲಿರುವ ಮೊಡವೆ ನಿವಾರಣೆ ಆಗಿ ಮುಖ ಕಾಂತಿಯುತವಾಗಿ ಇರುತ್ತದೆ.

ದೇಹದಲ್ಲಿ ಪೆಟ್ಟು ಬಿದ್ದು ಗಾಯ ಆದ ಜಾಗದಲ್ಲಿ ನೋವು ಮತ್ತು ಬಾವು ಕಾಣಿಸಿಕೊಂಡರೆ ಅಲ್ಲಿ ಅದಕ್ಕೆ ಪಪ್ಪಾಯ ಎಲೆಯನ್ನು ಜಜ್ಜಿ ಅದರ ರಸ ತೆಗೆದು ಗಾಯ ಮತ್ತು ಬಾವು ಇರುವ ಜಾಗದಲ್ಲಿ ಹಚ್ಚಬೇಕು. ಕಡಿಮೆ ಆಗುತ್ತದೆ. ಮಲಬದ್ಧತೆಯ ಸಮಸ್ಯೆ ಇರುವವರು ರಾತ್ರಿ ಊಟ ಆದ ನಂತರ ಪಪ್ಪಾಯ ಹಣ್ಣನ್ನು ಸೇವಿಸಿ ಒಂದು ಲೋಟ ಹಾಲು ಕುಡಿಯುವುದರಿಂದ ಮಲಬದ್ಧತೆ ನಿವಾರಣೆ ಆಗುತ್ತದೆ. ಇಷ್ಟೇ ಅಲ್ಲದೆ ಪಪ್ಪಾಯ ಹಣ್ಣು ಮತ್ತು ಎಲೆಗಳಿಂದ ಇನ್ನೂ ಹತ್ತು ಹಲವಾರು ಉಪಯೋಗಗಳು ಇವೆ.

By

Leave a Reply

Your email address will not be published. Required fields are marked *