ನಾವು ಪ್ರತೀ ದಿನ ಹಲವಾರು ರೀತಿಯ ತರಕಾರಿ ಸೊಪ್ಪುಗಳನ್ನು ಬಳಕೆ ಮಾಡುತ್ತೇವೆ. ಹಾಗೆಯೇ ನಾವು ಪ್ರತೀ ದಿನ ಉಪಯೋಗ ಮಾಡುವ ತರಕಾರಿಗಳಲ್ಲಿ ಬೆಂಡೆಕಾಯಿಯೂ ಒಂದು. ಬೆಂಡೆಕಾಯಿಗೆ ಯಾವುದೇ ರೀತಿಯ ಋತುಗಳ ಸಮಸ್ಯೆಯೇ ಇಲ್ಲ ಹಾಗಾಗಿ ಯಾವ ಋತುವಿನಲ್ಲಿ ಬೇಕಾದರೂ ಇದು ಸುಲಭವಾಗಿ ಎಲ್ಲ ಕಾಲದಲ್ಲಿಯೂ ಬೆಂಡೆಕಾಯಿ ದೊರೆಯುತ್ತದೆ. ಬೆಂಡೆಕಾಯಿಂದ ಸಾಂಬಾರ್, ಪಲ್ಯ ಬೆಂಡೆಕಾಯಿ ಫ್ರೈ ಹೀಗೆ ಹಲವಾರು ಬಗೆಯ ಅಡುಗೆಗಳನ್ನು ನಾವು ಮಾಡಬಹುದು. ಬೆಂಡೆಕಾಯಿ ಇಂದ ಯಾವ ಬಗೆಯ ಅಡುಗೆಯನ್ನು ಮಾಡಿದ್ರು ಅದು ರುಚಿಯಾಗಿಯೇ ಇರುತ್ತೆ. ನಮ್ಮ ಆರೋಗ್ಯವನ್ನು ರಕ್ಷಿಸುವ ಕೆಲವು ಆರೋಗ್ಯಕರ ಅಂಶಗಳೂ ಸಹ ಬೆಂಡೆಕಾಯಿಯಲ್ಲಿ ಇದೆ. ಅದೇ ರೀತಿ ಕೆಲವು ಗುಣಗಳನ್ನು ಸಹ ನಾವು ಇದರಿಂದ ಕಡಿಮೆ ಮಾಡಿಕೊಳ್ಳಬಹುದು. ನಮಗೆ ಬೆಂಡೆ ಕಾಯಿಯನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಏನೆಲ್ಲ ಆರೋಗ್ಯಕರ ಲಾಭಗಳು ಇರಬಹುದು ಅನ್ನೋದನ್ನ ನೋಡೋಣ.

ಎರಡು ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಎರಡು ತುದಿಗಳನ್ನು ಕತ್ತರಿಸಿ ನಂತರ ಒಂದು ಗ್ಲಾಸ್ ನೀರಿನಲ್ಲಿ ಈ ಎರಡೂ ಬೆಂಡೆಕಾಯಿಗಳನ್ನು ಹಾಕಿ ಒಂದು ಮುಚ್ಚಳ ಮುಚ್ಚಿ ಇಡಬೇಕು.ಇದನ್ನು ರಾತ್ರಿ ಮಾಡಿಟ್ಟು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಈ ಬೆಂಡೆಕಾಯಿ ನೀರನ್ನು ಕುಡಿಯಬೇಕು. ಇದರಿಂದ ಹಲವಾರು ಪ್ರಯೋಜನಗಳು ಇವೆ ಅವು ಈ ರೀತಿಯಲ್ಲಿದೆ ರಾತ್ರಿ ನೆನೆಸಿಟ್ಟ ಬೆಂಡೆಕಾಯಿ ನೀರನ್ನು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಕರುಳು ಮತ್ತು ಜೀರ್ಣಾಶಯ ಸ್ವಚ್ಛವಾಗಿ ಇರುತ್ತದೆ. ಅಲ್ಸರ್ ಸಮಸ್ಯೆ ಇದ್ದರೆ ಕಡಿಮೆ ಆಗುತ್ತದೆ. ಗ್ಯಾಸ್, ಅಸಿಡಿಟಿ ಹಾಗೂ ಮಲಬದ್ಧತೆಯ ಸಮಸ್ಯೆ ಇದ್ದರೂ ಆಹಾ ದೂರ ಆಗುತ್ತದೆ.

ಫೈಬರ್, ವಿಟಮಿನ್ ಇ , ಮ್ಯಾಗ್ನಿಶಿಯಂ ಮತ್ತು ಫಾಸ್ಪರಸ್ ಇದರಿಂದ ಹೇರಳವಾಗಿ ದೊರೆಯುತ್ತದೆ. ಇವುಗಳಿಂದ ನಮ್ಮ ದೇಹಕ್ಕೆ ಒಳ್ಳೆಯ ಪೋಷಕಾಂಶಗಳು ದೊರೆಯುತ್ತದೆ. ರಕ್ತ ಸಂಚಾರ ಹೆಚ್ಚಾಗುತ್ತದೆ. ಹೃದಯದ ಕಾರ್ಯ ವೈಖರಿ ಚೆನ್ನಾಗಿ ಒರುತ್ತದೆ. ಅಧಿಕ ರಕ್ತದೊತ್ತಡ ಕಡಿಮೆ ಆಗುತ್ತದೆ. ರಕ್ತದಲ್ಲಿ ಇರುವಂತಹ ಸಕ್ಕರೆಯ ಅಂಶವನ್ನು ಹತೋಟಿಗೆ ತರುವ ಮೂಲಕ ಮಧುಮೇಹ ಕಾಯಿಲೆಯನ್ನು ಸಹ ನಿಯಂತ್ರಣಕ್ಕೆ ತರುತ್ತದೆ. ಮೂಳೆಗಳು ಗಟ್ಟಿ ಆಗಲು ಬೆಂಡೆಕಾಯಿ ಸಹಾಯ ಮಾಡುತ್ತದೆ ಹಾಗೆ ಸ್ತ್ರೀಯರಿಗೆ ಋತು ಸಮಯದಲ್ಲಿ ಉಂಟಾಗುವ ಸಮಸ್ಯೆಗಳು ಕಡಿಮೆ ಆಗುತ್ತದೆ. ಅಧಿಕ ಉಷ್ಣ ಶರೀರ ಉಳ್ಳವರು ಬೆಂಡೆಕಾಯಿ ನೀರು ಕುಡಿಯುವುದರಿಂದ ಶರೀರವನ್ನು ತಂಪಾಗಿ ಇಡಲು ಸಹಾಯ ಮಾಡುತ್ತದೆ. ದೇಹದಲ್ಲಿ ಇರುವ ಅಧಿಕ ಕೊಬ್ಬನ್ನು ಕಡಿಮೆ ಮಾಡಿ ದೇಹದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಚರ್ಮ ಕಾಂತಿಯುತವಾಗಲು ಹಾಗೂ ಕೂದಲು ಧೃಢವಾಗಿ ಬೆಳೆಯಲು ಕೂಡಾ ಸಹಾಯಕಾರಿ ಆಗಿದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಣ್ಣಿನ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.

ನಮಗೆ ಇಷ್ಟೆಲ್ಲ ಆರೋಗ್ಯಕಾರಿ ಲಾಭಗಳನ್ನು ನೀಡುವ ಬೆಂಡೆಕಾಯಿಯನ್ನು ಪ್ರತೀ ದಿನ ಎರಡು ಬೆಂಡೆಕಾಯಿಯನ್ನು ರಾತ್ರಿ ನೀರಿನಲ್ಲಿ ನೆನಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲೂ ಸೇವಿಸುವುದರಿಂದ ಇಷ್ಟೆಲ್ಲ ಲಾಭವನ್ನು ಪಡೆಯಬಹುದು

Leave a Reply

Your email address will not be published. Required fields are marked *

error: Content is protected !!