ಶಾರೀರಿಕವಾಗಿ ಒಂದಲ್ಲ ಒಂದು ಸಮಸ್ಯೆ ಮನುಷ್ಯನಿಗೆ ಕಾಡುವುದು ಸಹಜ ಹಾಗಂತ ಪ್ರತಿಯೊಂದಕ್ಕೆ ಆಂಗ್ಲ ಮಾತ್ರೆಗಳನ್ನು ಸೇವಿಸುವ ಬದಲು ನಮ್ಮ ದೇಶಿ ಮನೆಮದ್ದುಗಳನ್ನು ಬಳಸಿ ಆರೋಗ್ಯವನ್ನು ವೃದ್ಧಿಸಿಕೊಳ್ಳುವುದು ಉತ್ತಮ, ಯಾಕೆಂದರೆ ನೈಸರ್ಗಿಕ ಮನೆಮದ್ದಿನಿಂದ ಯಾವುದೇ ಅಡ್ಡ ಪರಿಣಾಮವಿರೋದಿಲ್ಲ. ಆದ್ದರಿಂದ ಆರೋಗ್ಯಕ್ಕೆ ಮನೆಮದ್ದುಗಳು ಉತ್ತಮ ಅನ್ನೋದನ್ನ ಪಂಡಿತರು ಸಹ ಹೇಳುತ್ತಾರೆ.

ಇನ್ನು ಕಾಲಿನ ಪಾದಗಳು ಉರಿಯಾಗುತ್ತಿದ್ರೆ ಈ ಸುಲಭ ಉಪಾಯ ಮಾಡಿ ತಕ್ಷಣವೇ ರಿಲೀಫ್ ಪಡೆಯಬಹದು. ಅದು ಹೇಗೆ ಅನ್ನೋದನ್ನ ಇಲ್ಲಿ ನೋಡಿ ನಿಮಗೆ ಗೂತ್ತಿರುವ ಹಾಗೆ ಸಂಪಿಗೆ ಹೂವು ಹಲವು ಪೂಜೆ ಕಾರ್ಯಗಳಿಗೆ ಬಳಸಾಕಾಗುತ್ತದೆ. ಈ ಸಂಪಿಗೆ ಹೂವನ್ನು ಬಳಸಿ ಇದರ ಎಲೆ, ಹೂವು ಮರದ ಚಕ್ಕೆ ಎಲ್ಲವು ಕೂಡ ಔಷದಿ ಗುಣಗಳನ್ನು ಹೊಂದಿದೆ.

ಕಾಲಿನ ಪಾದ ಉರಿ ನಿವಾರಣೆಗೆ ಸಂಪಿಗೆ ಮರದ ಎಲೆಗಳನ್ನು ಬಿಸಿ ನೀರಲ್ಲಿ ಹಾಕಿ ಆ ನೀರಲ್ಲಿ ಕಾಲಿಟ್ಟುಕೊಳ್ಳಬೇಕು. ಇನ್ನು ಕಾಲಿನ ಹಿಮ್ಮಡಿ ಒಡೆಯುತ್ತಿದ್ದರೆ ಅದಕ್ಕೆ ಸಂಪಿಗೆಯ ಮೊಗ್ಗು ಮತ್ತು ಬೀಜವನ್ನು ಅರೆದು ಹಿಮ್ಮಡಿಗೆ ಹಚ್ಚಿದರೆ ಪರಿಹಾರವನ್ನು ಕಾಣಬಹುದು

ಜ್ವರವನ್ನು ನಿಯಂತ್ರಿಸಲು ಸಂಪಿಗೆ ಮರದ ಚಕ್ಕೆಯನ್ನು ಬಳಸಿ ಕಷಾಯ ಮಾಡಿ ಸೇವಿಸುವುದರಿಂದ ಜ್ವರ ಕಡಿಮೆಯಾಗುತ್ತದೆ, ಹೊಟ್ಟೆ ನೋವು ಏನಾದ್ರು ಇದ್ರೆ ಸಂಪಿಗೆ ಮರದ ಎಲೆಗಳ ರಸವನ್ನು ಜೇನುತುಪ್ಪದ ಜೊತೆ ಸೇವನೆ ಮಾಡೋದ್ರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ.

ಮೂತ್ರ ಸಂಬಂದಿ ರೋಗಗಳು ಅಂದರೆ ಮೂತ್ರ ಕಟ್ಟುವುದು ಹಾಗು ಮೂತ್ರ ಸಲೀಸಾಗಿ ಹೋಗದೆ ಇದ್ರೆ ಸಂಪಿಗೆಯ ಹೂಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಮುಚ್ಚಿಡಬೇಕು. ಅದು ಆರಿದ ಬಳಿಕ ಸೇವಿಸುವುದರಿಂದ ಮೂತ್ರ ಸಲೀಸಾಗಿ ಹೋಗುತ್ತದೆ. ಹೀಗೆ ಹತ್ತಾರು ಔಷಧಿಯ ಗುಣಗಳನ್ನು ಈ ಸಂಪಿಗೆ ಗಿಡ ಹೊಂದಿದೆ

Leave a Reply

Your email address will not be published. Required fields are marked *