ಅರ್ಧ ಹೋಳು ನಿಂಬೆ ಹಣ್ಣಿಗೆ ಲವಂಗವನ್ನು ಚುಚ್ಚಿ ಇಟ್ರೆ, ಏನ್ ಲಾಭವಿದೆ ಗೊತ್ತೇ

0 2

ನಿಂಬೆಹಣ್ಣು ಅಂದ್ರೆ ಸಾಕು ಗಾತ್ರದಲ್ಲಿ ಚಿಕ್ಕದು ಆದ್ರೆ ಇದರ ಮಹತ್ವ ದೊಡ್ಡದು ಎಂಬುದಾಗಿ ನಮಗೆ ತಿಳಿಯುತ್ತದೆ, ಈ ನಿಂಬೆ ನೋಡಲು ದುಂಡನೆ ಆಕಾರವನ್ನು ಹೊಂದಿದ್ದು ಹಸಿರು ಹಾಗೂ ಹಳದಿಬಣ್ಣವನ್ನು ಹೊಂದಿರುತ್ತದೆ. ಇದರಲ್ಲಿ ದೇಹಕ್ಕೆ ಬೇಕಾಗುವಂತ ಹತ್ತಾರು ಆರೋಗ್ಯಕಾರಿ ಗುಣಗಳಿವೆ. ಇನ್ನು ಈ ನಿಂಬೆಹಣ್ಣು ಪೂಜೆ ಕಾರ್ಯಗಳಿಗೆ ಅಷ್ಟೇ ಅಲ್ಲದೆ ಅಡುಗೆ ಹಾಗೂ ಮನೆ ಔಷಧಿಯಾಗಿ ಕೂಡ ಬಳಸಲಾಗುತ್ತದೆ.

ಮುಖ್ಯವಾಗಿ ವಿಷ್ಯಕ್ಕೆ ಬರೋಣ ಈ ಮೂಲಕ ನಾವುಗಳು ಮುಖ್ಯವಾಗಿ ತಿಳಿಯಲು ಹೊರಟಿರುವ ವಿಚಾರ ಏನು ಅಂದ್ರೆ ಅರ್ಧ ಹೋಳು ನಿಂಬೆಯನ್ನು ಮನೆಯ ಮುಖ್ಯ ಸ್ಥಳಗಳಲ್ಲಿ ಅಂದರೆ ಮಲಗುವ ಕೋಣೆ ಅಥವಾ ಅಡುಗೆ ಮನೆಗಳಲ್ಲಿ ಅರ್ಧ ಹೋಳು ನಿಂಬೆಗೆ ಲವಂಗವನ್ನು ಚುಚ್ಚಿ ಇಟ್ರೆ ಏನ್ ಆಗುತ್ತೆ ಇದರಿಂದ ನಮಗೇನು ಲಾಭ ಅನ್ನೋದನ್ನ ತಿಳಿಯೋಣ.

ಮನೆ ಅಂದ ಮೇಲೆ ನೊಣಗಳು, ಕ್ರಿಮಿಕೀಟಗಳು, ಸೊಳ್ಳೆಗಳು ಬರುತ್ತಿರುತ್ತವೆ ಇವುಗಳ ನಿಯಂತ್ರಣ ಮಾಡಬಹುದಾಗಿದೆ. ಹೌದು ನಿಂಬೆ ಹಣ್ಣಿನ ವಾಸನೆ ಇಂದ ಹುಳಗಳು ಬರಲ್ಲ. ನೊಣ ಸೊಳ್ಳೆ ಬರಲ್ಲ, ನಿಂಬೆ ಹಣ್ಣಿಗೆ ಲವಂಗ ಚುಚ್ಚಿ ಇಡೀ ಯಾವ ಹುಳನು ಬರಲ್ಲ. ಅಲ್ಲದೆ ರೋಗಾಣುಗಳನ್ನ ನಾಶ ಮಾಡುತ್ತೆ. ಇನ್ನು ನಿಂಬೆಹಣ್ಣು ಬ್ಯಾಕ್ಟಿರಿಯಾಗಳನ್ನು ನಾಶ ಪಡಿಸುವ ಶಕ್ತಿ ಹೊಂದಿದೆ.

ನಿಮ್ಮ ಮನೆಯಲ್ಲಿ ಶುಚಿಯಾಗಿ ಇಡಲು ಈ ನಿಂಬೆಹಣ್ಣು ಕೂಡ ಸಹಕಾರಿಯಾಗಿದೆ ಅಲ್ಲದೆ ನೀವು ಮಲಗುವ ಕೊಣೆಯಲ್ಲಿ ಯಾವುದೇ ಕ್ರಿಮಿಕೀಟ ನೊಣಗಳು ಸೊಳ್ಳೆ ಮುಂತಾದವುಗಳು ಬರದೇ ಇರಲು ಈ ನಿಂಬೆಹಣ್ಣು ಬಳಸಬಹುದಾಗಿದೆ, ಇನ್ನು ಇದರ ವಾಸನೆಗೆ ನೆಮ್ಮದಿ ನಿದ್ರೆ ಬರುತ್ತದೆ. ಕೆಲವೊಮ್ಮೆ ರಾತ್ರಿ ಮಲಗುವಾಗ ಸೊಳ್ಳೆ, ನೊಣ, ಕ್ರಿಮಿಕೀಟಗಳ ಕಾಟದಿಂದ ಸರಿಯಾಗಿ ನಿದ್ರೇನೇ ಬರೋದಿಲ್ಲ ಆದ್ದರಿಂದ ಇದು ಉಪಯೋಗಕಾರಿ. ಮನೆ ಸ್ವಚ್ಛ ಇದ್ರೆ ಯಾವುದೇ ಕಾಯಿಲೆ ರೋಗಗಳು ಹರಡೋದಿಲ್ಲ. ಇದು ಬಹುತೇಕ ಸಾಮಾನ್ಯ ಜನರಿಗೆ ಹಾಗೂ ಬಡವರಿಗೆ ತುಂಬಾನೇ ಉಪಯೋಗಕಾರಿ ಅನ್ನಬಹುದು.

ಇನ್ನು ನಿಂಬೆಹಣ್ಣಿನ ಕುರಿತು ಮುಂದಿನ ಲೇಖನದಲ್ಲಿ ಇನ್ನು ಹೆಚ್ಚಾಗಿ ತಿಳಿಸಲಾಗುವುದು ನಿಮಗೆ ಈ ನಿಂಬೆಹಣ್ಣಿನ ಟಿಪ್ಸ್ ಇಷ್ಟ ಆದಲ್ಲಿ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಇದರ ಸುಲಭ ಉಪಯೋಗವನ್ನು ಪಡೆದುಕೊಳ್ಳಲಿ. ಅಲ್ಲದೆ ಪ್ರತಿದಿನ ಹೊಸ ಹೊಸ ಮಾಹಿತಿಯನ್ನು ತಿಳಿಯಲು ಮರೆಯದೆ ನಮ್ಮ ಪುಟವನ್ನು ಶೇರ್ ಮಾಡಿ ಧನ್ಯವಾದಗಳು ಶುಭವಾಗಲಿ.

Leave A Reply

Your email address will not be published.