ಸಾಮಾನ್ಯವಾಗಿ ಎಲ್ಲರ ಮನೆಯ ಸುತ್ತಲೂ ಹಲವಾರು ಗಿಡಗಳು ಇದ್ದೇ ಇರುತ್ತವೆ, ಕೆಲವರು ಮನೆಯ ಶ್ರುಂಗಾರಕ್ಕಾಗಿ ಗಿಡಗಳನ್ನು ಬಳಸುತ್ತಾರೆ ಇನ್ನೂ ಕೆಲವರು ಮನೆಗೆ ತರಕಾರಿ ಮತ್ತು ಸೊಪ್ಪು ಉಪಯೋಗಕ್ಕೆ ಬರಲೆಂದು ಕೆಲವು ತರಕಾರಿ ಮತ್ತು ಸೊಪ್ಪಿನ ಗಿಡಗಳನ್ನು ಬಳಸುತ್ತಾರೆ ಇನ್ನೂ ಕೆಲವರು ಹೂವಿನ ಗಿಡಗಳನ್ನು ದೇವರ ಪೂಜೆಗಾಗಿ ಇರಲೆಂದು ಬಳಸುತ್ತಾರೆ. ಆದರೆ ನಾವು ಬೆಳೆಸುವ ಗಿಡಗಳ ಜೊತೆಗೆ ಒಮ್ಮೊಮ್ಮೆ ಇನ್ನೂ ಹಲವಾರು ಗಿಡಗಳು ಬೆಳೆಯುವುದುಂಟು ಅಲ್ಲದೆ ಹಲವಾರು ಗಿಡಗಳು ಅವುಗಳಲ್ಲಿ ವಿಷಕಾರಿ ಗಿಡಗಳೂ ಉಂಟು ಇಂತಹ ಗಿಡಗಳನ್ನು ಮನೆಯ ಬಳಿ ಇಟ್ಟುಕೊಳ್ಳುವುದು ಯೋಗ್ಯವಲ್ಲ ಅದರಲ್ಲಿಯೂ ಚಿಕ್ಕ ಚಿಕ್ಕ ಮಕ್ಕಳಿರುವ ಮನೆಗಳ ಅಕ್ಕಪಕ್ಕಗಳಲ್ಲಿ ಇಂತಹ ಗಿಡಗಳು ಇರಲೇಬಾರದು ಹಾಗಾದ್ರೆ ಆ ಗಿಡಗಳೂ ಯಾವುವು ಅವುಗಳಿಂದಾಗುವ ಅನಾನೂಕೂಲಗಳೇನು ಎಂಬುದರ ಬಗ್ಗೆ ಮಾಹಿತಿಯನ್ನು ನೋಡೋಣ ಬನ್ನಿ

ಮೊದಲನೆಯದಾಗಿ ಗುಲಗಂಜಿ ಗಿಡ ಅಥವಾ ರೋಸರಿ ಫೀ ಈ ಗಿಡವು ಸಾಮಾನ್ಯವಾಗಿ ಕೆಂಪು ಹಾಗೂ ಕಪ್ಪು ಬಣ್ಣದ ಬೀಜಗಳನ್ನು ಹೊಂದಿರುತ್ತದೆ, ಇವುಗಳನ್ನು ಅನೇಕ ರೀತಿಯ ಆಭರಣಗಳಿಗಾಗಿ ಉಪಯೋಗಿಸಲಾಗುತ್ತದೆ ಅಲ್ಲದೆ ಎಷ್ಟೋ ಜನರು ಅದರ ಆಭರಣಗಳನ್ನು ತಯಾರಿಸುವಲ್ಲಿ ಆ ಬೀಜದ ವಿಷದಿಂದ ಸಾವನ್ನಪ್ಪಿದ್ದಾರೆ. ಹೌದು ಆ ಬೀಜಗಳು ನೋಡಲು ಬಹು ಸುಂದರವಾಗಿರುತ್ತವೆ ಆದರೆ ಅವುಗಳಲ್ಲಿ ಏಬ್ರಿನ್ ಎಂಬ ವಿಷಕಾರಿ ಅಂಶವಿರುತ್ತದೆ ಇದನ್ನು ತಿಂದರೆ ಸಾವನ್ನಪ್ಪುವುದಂತೂ ಖಂಡಿತ ಹಾಗಾಗಿ ಇಂತಹ ಗುಲಗಂಜಿ ಗಿಡಗಳೂ ಮನೆಯ ಬಳಿ ಇರಿಸಿಕೊಳ್ಳಲು ಸೂಕ್ತವಲ್ಲ

ಎರಡನೆಯದಾಗಿ ಕಣಗಲೆ ಗಿಡ ಹೌದು ಈ ಕಣಗಳಲೆ ಗಿಡವು ಹಲವಾರು ಕಡೆ ಪಾರ್ಕ್ ಗಳಲ್ಲಿ ರೋಡುಗಳಲ್ಲಿ ಹಾಗೆಯೇ ಹಲವಾರು ಮನೆಯ ಅಕ್ಕ ಪಕಗಳಲ್ಲಿ ಕಾಣಸಿಗುತ್ತವೆ ಅಲ್ಲದೇ ಕಣಗಲೆಯ ಹೂವುಗಳನ್ನು ಅನೇಕ ಪೂಜೆಗಳಲ್ಲಿ ಉಪಯೋಗಿಸುತ್ತಾರೆ, ಆದರೆ ಈ ಗಿಡದ ಎಲೆಗಳು ಕೊಂಬೆ ಮತ್ತು ಹೂವುಗಳು ಎಲ್ಲವೂ ಕೂಡ ವಿಷಪೂರಿತವಾಗಿರುತ್ತವೆ ಹಾಗಾಗಿ ಇವುಗಳನ್ನು ತಿಂದರೆ ಅಲ್ಲದೇ ಇವುಗಳನ್ನು ಸುಡುವ ಹೊಗೆ ಉಸಿರಾಟ ಕ್ರಿಯೆಯಲ್ಲಿ ಬೆರೆಯುವುದರಿಂದ ಹೃದಯ ಹಾಗೂ ನರಗಳಿಗೆ ಸಂಬಂದಿಸಿದ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಮೂರನೆಯದಾಗಿ ದತ್ತೂರಿ ಗಿಡ ಈ ಗಿಡವು ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿಯೂ ಬೆಳೆಯುತ್ತದೆ ಆದರೆ ಈ ಗಿಡದ ಎಲೆಗಳು ಹೂವು ಎಲ್ಲವೂ ವಿಷಕಾರಿಯೇ ಅಲ್ಲದೇ ಇದರ ಬೀಜಗಳಂತು ತುಂಬಾ ವಿಷಕಾರಿ ಇವುಗಳನ್ನು ಅಪ್ಪಿತಪ್ಪಿಯೂ ಕೂಡ ಸೇವಿಸುವುದರಿಂದ ಇದರ ಅಂಶ ಮನುಷ್ಯನ ದೇಹಕ್ಕೆ ಸೇರಿಕೊಳ್ಳುವುದರಿಂದ ಅವನ ಸಾವು ಸಂಭವಿಸುತ್ತದೆ, ಹಾಗಾಗಿ ಈ ಗಿಡವನ್ನು ಮನೆಯ ಬಳ್ಳಿ ಎಲ್ಲಿಯೂ ಬೆಳೆಸಬಾರದು ಕೆಲವರು ಇದರ ಬೀಜಗಳನ್ನು ಪುಡಿಮಾಡಿ ಸೇವಿಸಿ ಆತ್ಮಹತ್ಯೆಗೆ ಗುರಿಯಾದವರಿದ್ದಾರೆ.

ಇನ್ನೂ ನಾಲ್ಕನೆಯದಾಗಿ ಹರಳಿ ಗಿಡ ಹೌದು ದೇಹಕ್ಕೆ ತಂಪು ನೀಡುವಂತ ಹರಳೆಣ್ಣೆಯನ್ನು ನಾವೆಲ್ಲರೂ ನೋಡಿದ್ದೇವೆ ಆದರೆ ಅದರ ಗಿಡದ ಬೀಜಗಳು ಅಂದರೆ ಹರಳಿ ಬೀಜಗಳು ತುಂಬಾ ಅಪಾಯಕಾರಿ ಅವುಗಳನ್ನು ಸೇವಿಸುವುದರಿಂದ ವಾಂತಿ ಬೇದಿ ಆಗುವುದಲ್ಲದೇ ಇದರಿಂದ ಮನುಷ್ಯ ಸಾಯಲೂಬಹುದು ಹಾಗಾಗಿ ಇಂತಹ ವಿಷಕಾರಿ ಗಿಡಗಳನ್ನು ಮನೆಯ ಬಳಿಯಲ್ಲಿ ಬೆಳೆಸುವುದು ಸೂಕ್ತವಲ್ಲ. ನಿಮಗೆ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!