ನಿಮ್ಮ ಮನೆಯಲ್ಲಿ ಒಂದು ಗಾಜಿನ ಲೋಟಕ್ಕೆ ಕಲ್ಲು ಉಪ್ಪನ್ನು ಹಾಕಿ ಮನೆಯ ಈ ಜಾಗದಲ್ಲಿ ಇಟ್ಟರೆ ಅದ್ಭುತವಾದ ಫಲಗಳು ದೊರೆಯುತ್ತವೆ. ಸಾಕ್ಷಾತ್ ಶನಿ ದೇವರ ಕೃಪೆಗೆ ಪಾತ್ರರಾಗುತ್ತೀರ. ಶನಿ ರಾಹುವಿನ ಅನುಗ್ರಹ ಕೃಪೆ ಇದ್ದರೆ ಆ ಮನೆಯಲ್ಲಿ ಕಷ್ಟಗಳು ಕಡಿಮೆ ಆಗುತ್ತವೆ. ಇದನ್ನ ಯಾವ ರೀತಿ ಮಾಡ್ಬೇಕು ಯಾವ ದಿನ ಮಾಡಬೇಕು ಹೇಗೆ ಅನ್ನೋದನ್ನ ಈ ಲೇಖನದಲ್ಲಿ ಓದಿ ತಿಳಿದುಕೊಳ್ಳಿ.

ಎಲ್ಲಾ ಜನರ ಮನೆಯಲ್ಲೂ ಕಷ್ಟಗಳು ಸರ್ವೇ ಸಾಮಾನ್ಯ. ಯಾರ ಮನೆಯಲ್ಲಿ ಅತೀ ಹೆಚ್ಚು ಹಣಕಾಸಿನ ಸಮಸ್ಯೆ ಇದೆ, ಯಾವುದೇ ಕೆಲಸ ಕೈಗೂಡ್ತಾ ಇಲ್ಲ ನಷ್ಟ ಹೆಚ್ಚಾಗಿದೆ, ಮನೆಯಲ್ಲಿ ಶಾಂತಿ, ನೆಮ್ಮದಿ ಇಲ್ಲದೆ ಜಗಳ ಕಲಹ ಹೆಚ್ಚು ಆಗಿದ್ದರೆ, ಅಂತಹ ಮನೆಯಲ್ಲಿ ಶಾಂತಿ ನೆಲೆಸಬೇಕು ಎಲ್ಲರಂತೆ ನೀವು ಕೂಡ ಬದುಕಬೇಕು ಅಂದ್ರೆ ಈ ಒಂದು ಚಿಕ್ಕ ತಂತ್ರವನ್ನು ಮಾಡಿನೋಡಿ. ಈ ಒಂದು ಚಿಕ್ಕ ತಂತ್ರವನ್ನು ಮಾಡುತ್ತಾ ಬಂದಲ್ಲಿ ಪ್ರತೀ ವಾರ ನಿಮ್ಮ ಮನೆಯಲ್ಲಿ ಬದಲಾವಣೆಗಳು ಉಂಟಾಗುತ್ತವೆ ಸಮಸ್ಯೆಗಳು ನಿವಾರಣೆ ಆಗುತ್ತವೆ. ಈ ತಂತ್ರವನ್ನು ಮಾಡೋಕೆ ನೀವು ಒಂದು ಗಾಜಿನ ಬಟ್ಟಲು ಅಥವಾ ಒಂದು ಗಾಜಿನ ಲೋಟವನ್ನು ತೆಗೆದುಕೊಳ್ಳಬೇಕು. ಅದಕ್ಕೆ ಎಡ ಹಾಗೂ ಬಳ ಎರಡು ಕೈಗಳಲ್ಲಿ ಒಂದೊಂದು ಮುಷ್ಟಿ ಅಷ್ಟು ಕಲ್ಲುಪ್ಪನ್ನು ಹಾಕಬೇಕು. ಆ ಗಾಜಿನ ಪಾತ್ರೆ ಅಥವಾ ಲೋಟದ ಕೆಳಗೆ ಒಂದು ಪ್ಲೇಟ್ ಇಟ್ಟು ಅದನ್ನ ನೀವು ಸ್ನಾನ ಮಾಡುವ ಕೋಣೆಯ ಒಂದು ಮೂಲೆಯಲ್ಲಿ ಇಡಬೇಕು. ಇದನ್ನ ಶನಿವಾರ ಮಾಡಬೇಕು. ಯಾರು ಮನೆಯಲ್ಕಿ ಬೇಗ ಸ್ನಾನ ಮಾಡುತ್ತಾರೋ ಅವರು ಸ್ನಾನ ಆದ ನಂತರ ಗಾಜಿನ ಪಾತ್ರೆಗೆ ಎರಡು ಮುಷ್ಟಿ ಅಷ್ಟು ಕಲ್ಲು ಉಪ್ಪನ್ನು ಹಾಕಿ ಇಡಬೇಕು.

ಹೀಗೆ ಮಾಡುವುದರಿಂದ ಮನೆಯಲ್ಲಿ ಇರಿವ ನಕಾರಾತ್ಮಕ ಶಕ್ತಿಗಳು ದೂರ ಆಗುತ್ತವೆ. ಉಪ್ಪಿಗೆ ವಿಶೇಷ ಶಕ್ತಿ ಇರತ್ತೆ ಇದು ಮನೆಯಲ್ಲಿ ಇರುವ ಕೆಟ್ಟ ಆಲೋಚನೆಗಳು, ಕೆಟ್ಟ ಶಕ್ತಿಗಳು, ನಕಾರಾತ್ಮಕ ಶಕ್ತಿಗಳನ್ನ ಉಪ್ಪು ಸೆಳೆದುಕೊಳ್ಳುತ್ತದೆ. ಹಾಗಾಗಿ ಉಪ್ಪನ್ನ ಸ್ನಾನದ ಕೊನೆಯಲ್ಲಿ ಇಡುವುದರಿಂದ ಅದ್ಭುತವಾದ ಫಲ ಸಿಗತ್ತೆ. ಇದನ್ನ ಶನಿವಾರ ಮಾಡಬೇಕು. ಶನಿವಾರ ಇತ್ತು ಮುಂದಿನ ಶನಿವಾರ ಅಂದರೆ ಒಂದು ವಾರದ ನಂತರ ಅದನ್ನ ಕಸಕ್ಕೆ ಹಾಕಬೇಕು. ಮುಂದಿನ ವಾರ ಅದೇ ಗಾಜಿನ ಪಾತ್ರೆಗೆ ಬೇರೆ ಎರಡು ಮುಷ್ಟಿ ಕಲ್ಲುಪ್ಪನ್ನು ಹಾಕಿ ಅದೇ ಜಾಗದಲ್ಲಿ ಇಡಬೇಕು. ಈ ರೀತಿ ಮಾಡುವುದರಿಂದ ಮನೆಗೆ ಒಳ್ಳೆಯದು ಆಗತ್ತೆ. ಯಾವುದೇ ಅಡೆತಡೆಗಳು ಇದ್ದರೆ, ಕೈ ಕಟ್ಟಿ ಹಾಕಿದ್ದರೆ , ಶತ್ರುಗಳು ಇದ್ದರೆ, ಮಾಟ ಮಂತ್ರ ಮಾಡಿಸಿದ್ರೆ, ಹಣಕಾಸಿನ ಸಮಸ್ಯೆ ಇದ್ದರೆ ನಿವಾರಣೆ ಆಗತ್ತೆ. ನಿಮ್ಮೆಲ್ಲ ಕೆಲಸ ಕಾರ್ಯಗಳಿಗೆ ಅನುಕೂಲ ಆಗತ್ತೆ ಹಾಗೂ ಅದರ ಜೊತೆಗೆ ಶನಿ ಹಾಗೂ ರಾಹುವಿನ ಅನುಗ್ರಹ ಕೂಡ ಆಗತ್ತೆ. ಶನಿ ಮಯ್ತು ರಾಹುವಿನ ಅನುಗ್ರಹ ಆದರೆ ಆ ಮನೆಯಲ್ಲಿನ ಕಷ್ಟಗಳು ದೂರ ಆಗತ್ತೆ. ಇದನ್ನ ಪ್ರತೀ ವಾರ ನಿಮಗೆ ಒಳ್ಳೆಯದು ಆಗುವವರೆಗೂ ಮಾಡುತ್ತ ಇರಬೇಕು.

ಇದರ ಜೊತೆ ಗಮನದಲ್ಲಿ ಇಟ್ಟುಕೊಳ್ಳಬೇಕಾದ ಅಂಶ ಎಂದರೆ, ಪ್ರತೀ ಅಮಾವಾಸ್ಯೆ ಹಾಗೂ ಹುಣ್ಣಿಮೆಯ ದಿನ ಇದನ್ನು ಬದಲಿಸಬಹುದು. ಹಾಗೆ ಸ್ನಾನ ಮಾಡುವಾಗ ನೀರಿಗೆ ಚಿಟಿಕೆ ಅಷ್ಟು ಕಲ್ಲುಪ್ಪನ್ನು ಬೆರೆಸಿ ಸ್ನಾನ ಮಾಡುವುದರಿಂದ ನಿಮಗೆ ಏನಾದ್ರು ದೃಷ್ಟಿ ಆಗಿದ್ದರೆ ಕೆಟ್ಟ ಕಣ್ಣು ಬಿದ್ದಿದ್ದರು ಅಂತಹ ದೃಷ್ಟಿಗಳು ನಿವಾರಣೆ ಆಗತ್ತೆ.

By

Leave a Reply

Your email address will not be published. Required fields are marked *