ಕನಸಿನಲ್ಲಿ ಈ 5 ದೇವರ ದರ್ಶನ ಆದ್ರೆ ಇದರ ಸೂಚನೆ ಏನು ಗೊತ್ತೇ?

Astrology Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಪ್ರತಿ ಒಬ್ಬರಿಗೂ ಕೂಡಾ ನಿತ್ಯ ಜೀವನದಲ್ಲಿ ಕನಸುಗಳು ಬರುವುದು ಸಹಜ. ಆದರೆ ಆ ಪ್ರತೀ ಕನಸುಗಳು ಸಹ ಒಂದೊಂದು ರೀತಿಯ ಅರ್ಥವನ್ನು ಕೊಡುತ್ತೆ ಆದರೆ, ಮುಖ್ಯವಾಗಿ ನಿಮ್ಮ ಜೀವನದಲ್ಲಿ ಏನಾದರೂ ಈ 5೫ ದೇವರುಗಳ ಕನಸು ಬಂತು ಎಂದಾದರೆ, ಈ 5 ದೇವರ ದರ್ಶನ ನಿಮಗೆ ಕನಸಲ್ಲಿ ಆದರೆ ಯಾವ ರೀತಿಯ ಫಲ ನಿಮಗೆ ಸಿಗತ್ತೆ ಜೀವನದಲ್ಲಿ ಯಾವ ರೀತಿಯ ಕಾರ್ಯಗಳನ್ನು ಕೈಗೊಳ್ಳಬೇಕು ಅನ್ನೋದನ್ನ ಈ ಲೇಖನದ ಮೂಲಕ ತಿಳಿಸಿಕೊಡಲಾಗುವುದು.

ದೇವರ ಕನಸು ಏನಾದ್ರು ಬಿದ್ದರೆ ಮಾವು ಮೊದಲು ಗಿಂದಲಕ್ಕೆ ಈಡಾಗುತ್ತೇವೆ. ಗೋಂದಲದಲ್ಲಿ ವಿಚಾರ ಮಾಡ್ತೇವೆ. ಈ ರೀತಿಯ ಕಮಸು ಬಿದ್ದರೆ ಯಾವ ರೀತಿಯ ಫಲ ಇರತ್ತೆ ಅನ್ನೋದರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದ್ದೆ ಇರತ್ತೆ. ಅದೇ ರೀತಿಯಾಗಿ ಈ ಐದು ದೇವರುಗಳ ಕನಸು , ಸೂಚನೆ ಸಂಖ್ಯೆಯ ಸಿಕ್ಕಿದೆ ಎಂದರೆ, ಯಾವ ರೀತಿಯ ಫಲಗಳನ್ನು ಪಡೆಯುತ್ತೀರಿ ಎಂದು ನೋಡುವುದಾದರೆ.

ಮೊದಲಿಗೆ ಈಶ್ವರ ಅಥವಾ ಈಶ್ವರ ದೇವಸ್ಥಾನ, ವಿಗ್ರಹ ಏನಾದ್ರು ನಿಮ್ಮ ಕನಸಲ್ಲಿ ಬಂದರೆ, ನುಮ್ಮ ಜೀವನದಲ್ಲಿ ಒಂದು ದೊಡ್ಡ ಬದಲಾವಣೆ ಆಗಲಿದೆ. ಹೊಸ ವ್ಯಕ್ತಿಯ ಆಗಮನ ನಿಮ್ಮ ಜೀವನದಲ್ಲಿ ಆಗಲಿದೆ ಎನ್ನುವ ಸೂಚನೆಯನ್ನ ನೀಡತ್ತೆ. ಶಿವ ಏನಾದ್ರು ನಿಮ್ಮ ಕನಸಲ್ಲಿ ಬಂದಿದ್ದರೆ ಮೊದಲು ಒಂದು ವಿಚಾರವನ್ನ ತಿಳಿದುಕೊಳ್ಳಿ. ನಿಮಗೆ ಮದುವೆ ಆಗುವದು ಆಗಿರಬಹುದು / ಹೊಸ ವ್ಯಕ್ತಿಯ ಆಗಮನ, ಸ್ನೇಹಿತರ ಅಥವಾ ಪ್ರಿಯ ಆಗಮನ ಆಗಬಹುದು. ಮದುವೆ ಆಗಿದ್ರ್ರ್, ಸಂತಾನ ಫಲದಿಂದ ಆ ಮಗುವಿನ ರೂಪದಲ್ಲಿ ಅದೃಷ್ಟ ಬರಬಹುದು.

ಇನ್ನು ಎರಡನೆಯದಾಗಿ ಗಣೇಶ ಗಣಪತಿ ಏನಾದ್ರು ನಿಮ್ಮ ಕನಸಲ್ಲಿ ಬಂದರೆ, ನೀವು ನಿಮ್ಮ ಜೀವನದಲ್ಲಿ ಅಂದುಕೊಂಡ ಕೆಲಸವನ್ನ ಸಾಧಿಸಿ ಜಯ ಗಳಿಸುತ್ತೀರ ಎಂದು ಗಣಪತಿ ನಿಮ್ಮ ಕನಸಲ್ಲಿ ಬಂದು ಸೂಚನೆ ನೀಡುವುದು. ಸಾಕ್ಷಾತ್ ಗಮಪತಿಯೇ ನಿಮ್ಮ ಎಲ್ಲಾ ಕೆಲಸಗಳಲ್ಲಿ ವಿಘ್ನವನ್ನು ನಿವಾರಣೆ ಮಾಡಿ ಕೆಲಸವನ್ನು ಮಾಡುವ ಹಾಗೇ ಕೃಪೆ ತೋರುತ್ತಾನೆ. ನಿಮಗೆ ಮುಂದೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಉನ್ನತ ಸ್ಥಾನಕ್ಕೆ ಇರಬೇಕು ಎಂದು ಅಂದುಕೊಂಡಿದ್ದರೆ, ಗಣೇಶ ನಿಮ್ಮ ಕನಸಲ್ಲಿ ಬರುವುದರಿಂದ ನೀವು ಅಂದುಕೊಂಡಿರುವ ಎಲ್ಲಾ ಕನಸುಗಳು ಈಡೇರುತ್ತವೆ ಎಲ್ಲ ಕೆಲಸಗಳು ಸಾಕಾರಗೊಳ್ಳುತ್ತವೆ. ಹಾಗೇ ನೀವು ಯಾವುದಾದರೂ ಕೆಲಸವನ್ನೂ ನನ್ನಿಂದ ಮಾಡಲು ಸಾಧ್ಯ ಇಲ್ಲ ಎಂದು ಬಿಟ್ಟಿದ್ದರೆ ಅಂತಹ ಕೆಲಸಗಳು ಸಹ ಪೂರ್ಣಗೊಳಿಸುವ ಸೂಚನೆ ಈ ಕನಸು ನೀಡತ್ತೆ.

ಇನ್ನು ಮೂರನೆಯದಾಗಿ ಸಾಕ್ಷಾತ್ ಮಹಾಲಕ್ಷ್ಮೀ ದೇವಿ ಏನಾದರೂ ನಿಮ್ಮ್ ಕನಸಲ್ಲಿ ಬಂದರೆ, ಅಥವಾ ಮನೆಗೆ ಪ್ರವೇಶ ಮಾಡುವ ಹಾಗೇ ಕನಸು ಬಿದ್ದರೆ, ಸಣ್ಣ ಪುಟ್ಟ ಕೇಲಸಗಳು ಕೂಡ ದೊಡ್ಡದಾಗಿ ಮಾರ್ಪಟ್ಟು ದೊಡ್ಡ ಪ್ರಮಾಣದ ಲಾಭವನ್ನು ತಂದುಕೊಡುತ್ತದೆ. ಆದಾಯದ ಮೂಲ ಹೆಚ್ಚಾಗತ್ತೇ. ಹಣಕಾಸಿನ ಸಮಸ್ಯೆ ದೂರ ಆಗತ್ತೆ ಹಾಗೆ ದುಡ್ಡು ಕಾಸಿನ ವಿಚಾರದಲಿ ಮುಂದಿನ ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆ ಕಂಡುಬರತ್ತೆ ಅನ್ನೋ ಸೂಚನೆಯನ್ನ ಈ ಕನಸು ತಿಳಿಸತ್ತೇ.

ಇನ್ನು ನಿಮ್ಮ ಕನಸಲ್ಲಿ ಆಂಜನೇಯ ಸ್ವಾಮಿ ಏನಾದರೂ ಬಂದರೆ, ಶತೃಗಳಿಂದ ನಿಮಗೆ ಏನಾದರೂ ಹಾನಿ ಆಗುತ್ತಾ ಇದ್ದರೆ ಅಂತಹ ಕಷ್ಟ, ಸಂಕಷ್ಟಗಳಿಂದ ಆಂಜನೇಯ ಸ್ವಾಮಿ ಕನಸು ಸೂಚನೆ ನೀಡತ್ತೆ. ಶತ್ರುಗಳ ಭಯ ನಿಮಗೆ ದೂರ ಆಗತ್ತೆ . ಶತೃಗಳಿಂದ ರಕ್ಷಣೆ ಸಿಗತ್ತೆ ಅನ್ನುವ ಸೂಚನೆಯನ್ನು ಇದು ನೀಡತ್ತೆ. ಅಂಜನೆವ ಸ್ವಾಮಿ ಕನಸಲ್ಲಿ ಬಂದರೆ ಮೊದಲು ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಸುಂದರಕಾಂಡ ಪಾರಾಯಣವನ್ನ ಮಾಡಬೇಕು. ಆಗದೆ ಇದ್ದಲ್ಲಿ ಸುಂದರಕಾಂಡ ಪಾರಾಯಣ ಪುಸ್ತಕವನ್ನು ದಾನವಾಗಿ ನೀಡಬೇಕು. ಇದರಿಂದ ಶತ್ರುಗಳ ಕಾಟದಿಂದಉಕ್ತಿ ಪಡೆಯಬಹುದು.

ಇನ್ನು ಐದನೆಯ ಹಾಗೂ ಕೊನೆಯದಾಗಿ ನಿಮ್ಮ ಕನಸಲ್ಲಿ ಶನಿ ದೇವರು ಏನಾದರೂ ಬಂದರೆ, ಮುಖ್ಯವಾಗಿ ಜೀವನದಲ್ಲಿ ದೊಡ್ಡ ದೊಡ್ಡ ಸಂಕಟಗಳು ಸಮಸ್ಯೆಗಳು ಎದುರಾಗುತ್ತವೆ ಎಂಬ ಸೂಚನೆಯನ್ನ ಈ ಕನಸು ತಿಳಿಸತ್ತೆ. ಇದರಿಂದ ದೂರ ಆಗಲು ಸಂಕಷ್ಟಗಳು ಬರದೆ ಇರಲು ಏಳು ಶನಿವಾರ ನೀವು ಶನಿ ದೇವರ ದರ್ಶನವನ್ನು ಪಡೆಯಬೇಕು. ನಿಮ್ಮ ಮನೆಯ ಬಳಿ ಇರುವ ಶನಿ ದೇವರ ಗುಡಿಗೆ ತೆರಳಿ, ಅಲ್ಲಿ ಮಮ್ಮಣ್ಣ ಮುಂದೆ ಬರುವ ಕಷ್ಟಗಳಿಂದ ಕಾಪಾಡು ಎಲ್ಲಾ ಕಷ್ಟಗಳನ್ನು ದೂರ ಮಾಡು ಎಂದು ಭಕ್ತಿಯಿಂದ ಬೇಡಿಕೊಳ್ಳಬೇಕು. ಈ ಐದು ರೀತಿಯ ದೇವರುಗಳು ಕನಸಲ್ಲಿ ಬಂದರೆ ಯಾವ ರೀತಿಯ ಸೂಚನೆ ಸಿಗತ್ತೆ ಅನ್ನೋದನ್ನ ತಿಳಿದುಕೊಳ್ಳಿ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *