ಮನುಷ್ಯ ತಾನು ಸ್ವಲ್ಪ ಹಣಕಾಸಿನಲ್ಲಿ ಬೆಳೆದು ಬಿಟ್ರೆ ಅಕ್ಕ ಪಕ್ಕದೋರು ಕಾಣೋದೇ ಇಲ್ಲ ಅನ್ನೋ ರೀತಿಯಲ್ಲಿ ವರ್ತಿಸುತ್ತಾರೆ ಹಾಗೂ ತಾನು ಶ್ರೀಮಂತ ಅನ್ನೋ ಅಹಂಕಾರ ಕೂಡ ಜೊತೆಗೆ ಬಂದು ಬಿಡುತ್ತದೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ದೇಶದ ಅತಿ ದೊಡ್ಡ ಕಣ್ಣಿನ ವೈದ್ಯ ಅನ್ನೋ ಪ್ರಖ್ಯಾತಿ ಪಡೆದುಕೊಂಡಿದ್ದರು ಸಹ ಯಾವುದೇ ಅಹಂಕಾರ ಸ್ವಾರ್ಥ ಇಲ್ಲದೆ ಬಡವರಿಗಾಗಿ ಕಣ್ಣಿನ ಆಸ್ಪತ್ರೆ ಕಟ್ಟಿಸಿ ಬಹಳಷ್ಟು ಜನರ ಪಾಲಿಗೆ ನೇತ್ರದಾನಿ ಎನಿಸಿಕೊಂಡಿದ್ದಾರೆ.

ಅಷ್ಟಕ್ಕೂ ಈ ಮಹಾನ್ ವ್ಯಕ್ತಿ ಯಾರು ಇವರು ಬೆಳೆದು ಬಂದ ರೀತಿ ಹೇಗಿತ್ತು? ಬಡವರಿಗಾಗಿ ಇವರ ಸೇವೆ ಹೇಗಿದೆ ಅನ್ನೋದನ್ನ ಈ ಮೂಲಕ ತಿಳಿಯೋಣ. ಹೆಸರು ಡಾ. ಸುರೇಶ್ ಕೆ. ಪಾಂಡೆ, ಇವರು ಮೂಲತಃ ರಾಜಸ್ಥಾನದವರು. ಎಂಬಿಬಿಎಸ್ ಓದುವಾಗ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ವ್ಯಕ್ತಿ. ಇಂದು ದೇಶದ ಅತಿದೊಡ್ಡ ನೇತ್ರ ತಜ್ಞರೆಂದು ಪ್ರಖ್ಯಾತಿಯಾಗಿದ್ದಾರೆ.

ಈ ಮಹಾನ್ ವ್ಯಕ್ತಿ ಬಡವರ ಪಾಲಿಗೆ ನೇತ್ರದಾನಿ ಎನಿಸಿಕೊಂಡಿದ್ದಾರೆ, ಬಡವರಿಗಾಗಿ ರಾಜಸ್ಥಾನದ ಕೋಟಾದಲ್ಲಿ ತಲ್ಪಾಂಡಿ ಕಣ್ಣಿನ ಆಸ್ಪತ್ರೆ ಕಟ್ಟಿಸಿದ್ದಾರೆ. ಇನ್ನು ಈ ವೈದ್ಯರು ಸಮಾಜ ಸೇವೆ ಮಾಡಲು ಇವರಿಗೆ ತಮ್ಮ ಅಜ್ಜ ಕಾಮ್ತಾ ಪ್ರಸಾದ್ ಪಾಂಡೆ ಸ್ಪೂರ್ತಿಯಂತೆ. ಅಂದಿನ ಕಾಲದಲ್ಲಿಯೇ ಅಂದರೆ ಬ್ರಿಟಿಷರ ಕಾಲದಲ್ಲೇ ಇವರ ಅಜ್ಜ ಕಣ್ಣಿನ ಶಿಬಿರಕ್ಕೆ ತಮ್ಮ ಜಾಗವನ್ನು ದೇಣಿಗೆ ನೀಡಿದ್ರಂತೆ ಆಗೇ ಇದ್ದವರ ಮೊಮ್ಮಗ ತಾನು ವೈದ್ಯಕೀಯ ಶಿಕ್ಷಣ ಮುಗಿಸುವಾಗ ಹಲವಾರು ಕಷ್ಟಗಳನ್ನು ಪಟ್ಟಿದ್ದಾರೆ ತಮ್ಮ ಮನೆಯವರು ತಿಂಗಳಿಯೋಗೆ ೬೦೦ ರಿಂದ ೮೦೦ ರೂ.ಗಳು ಸಾಕಾಗುತ್ತಿರಲಿಲ್ಲ ಅಂತಹ ಸಂದರ್ಭದಲ್ಲಿ ಒಂದೊತ್ತಿನ ಊಟಕ್ಕೂ ಇಲ್ಲದೆ ಕಷ್ಟ ಪಟ್ಟಿದ್ದಾರೆ.

ಡಾ. ಸುರೇಶ್ ಕೆ. ಪಾಂಡೆ ಬಾಲ್ಯದಲ್ಲಿ ಬೂಟು ಅಥವಾ ಚಪ್ಪಲಿ ಇಲ್ಲದೆ ಪ್ರತಿನಿತ್ಯ ಒಂದೂವರೆ ಮೈಲಿ ನಡೆದು ಸ್ಕೂಲ್ ಗೆ ಹೋಗಿಬರುತ್ತಿದ್ದ ಸ್ಥಿತಿ ಇತ್ತು, ಆದ್ರೆ ಅವುಗಳೆನ್ನ ಮೆಟ್ಟಿ ನಿಂತು ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ಕಣ್ಣಿನ ಆಸ್ಪತ್ರೆ ಕಟ್ಟಿಸಿ ಬಡವರಿಗಾಗಿ ಸೇವೆ ಮಾಡುತ್ತಿದ್ದಾರೆ ಇವರ ಆಸ್ಪತ್ರೆಯಲ್ಲಿ ೪೦ ಕ್ಕೂ ಹೆಚ್ಚು ಜನ ಸಿಬ್ಬಂದಿಗಳು ಇದ್ದಾರೆ. ಅದೇನೇ ಇರಲಿ ಇವರ ಈ ಕಾರ್ಯ ವೈಖರಿಗೆ ನಿಜಕ್ಕೂ ಮೆಚ್ಚಲೇ ಬೇಕು. ಹೀಗೆ ಬಡವರಿಗಾಗಿ ಸೇವೆ ಮಾಡುವ ಜನಗಳು ಮುಂದೆ ಬರಲಿ ಅನ್ನೋದೇ ನಮ್ಮ ಆಶಯ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!