ನಾವೆಲ್ಲರೂ ಸೀಲಿಂಗ್ ಫ್ಯಾನ್ ಗಳನ್ನ ನಮ್ಮೆಲ್ಲರ ಮನೆಯಲ್ಲೂ ಬಳಸುತ್ತಾ ಇದ್ದೇವೆ. ಸೀಲಿಂಗ್ ಫ್ಯಾನ್ ಗಳಿಗೆ ಯಾಕೆ ಮೂರು ರೆಕ್ಕೆಗಳನ್ನು ಇಟ್ಟಿದ್ದಾರೆ ಅನ್ನೋ ಒಂದು ಯೋಚನೆ ನಮಗೆ ಬಂದಿರತ್ತೆ ಆದ್ರೆ ಯಾಕೆ ಅಂತ ಗೊತ್ತಿರಲ್ಲ. ಈ ಲೇಖನದಲ್ಲಿ ಸೀಲಿಂಗ್ ಫ್ಯಾನ್ ಗಳಿಗೆ ಈ ಮೂರು ರೆಕ್ಕೆ ಯಾಕೆ ಇರತ್ತೆ ಅನ್ನೋದರ ಬಗ್ಗೆ ಮಾಹಿತಿ ತಿಳಿಸಿಕೊಡ್ತೀವಿ.

ನಮ್ಮ ಭಾರತ ದೇಶದಲ್ಲಿ ಸಾಮಾನ್ಯವಾಗಿ ಮೂರು ರೆಕ್ಕೆಗಳು ಇರುವ ಸೀಲಿಂಗ್ ಫ್ಯಾನ್ ಗಳನ್ನೇ ಹೆಚ್ಚು ಹೆಚ್ಚಾಗಿ ಬಳಸುತ್ತಾರೆ. ಆದ್ರೆ ವಿದೇಶಗಳಲ್ಲಿ ನಾಲ್ಕು ರೆಕ್ಕೆ ಇರುವ ಸೀಲಿಂಗ್ ಫ್ಯಾನ್ ಗಳನ್ನು ಬಳಸುತ್ತಾರೆ. ಇದಕ್ಕೆ ಕಾರಣ ಏನೂ ಅಂದರೆ ಇತ್ತಿಚೀನ ದಿನಗಳಲ್ಲಿ ನಾವು ಗಾಳಿಗಾಗಿ ಅತಿ ಹೆಚ್ಚು ಫ್ಯಾನ್ ಗಳನ್ನೇ ಅವಲಂಭಿಸುತ್ತ ಇದ್ದೇವೆ. ಆದರೆ ವಿದೇಶಗಳಲ್ಲಿ ಅವರು ಗಾಳಿಗೋಸ್ಕರ AC ಮೇಲೆ ಅತಿ ಹೆಚ್ಚು ಅವಲಂಭಿತರಾಗಿ ಇದ್ದಾರೆ. ಹಾಗಾಗಿ ಅವರು ಆ AC ಇಂದ ಬರುವ ಗಾಳಿಯನ್ನೇ ಮನೆಯ ತುಂಬೆಲ್ಲ ಹರಡಿಸಲು ಇಚ್ಛಿಸುತ್ತಾರೆ ಹಾಗಾಗಿ ನಾಲ್ಕು ಅಥವಾ ಐದು ರೆಕ್ಕೆಯ ಫ್ಯಾನ್ ಗಳನ್ನು ವಿದೇಶಗಳಲ್ಲಿ ಹೆಚ್ಚು ಬಳಕೆ ಮಾಡಲಾಗುತ್ತದೆ.

ಆದರೆ ನಮ್ಮ ದೇಶದಲ್ಲಿ AC ಬಳಕೆ ಮಾಡುವ ಜನರು ತುಂಬಾನೇ ಕಡಿಮೆ. ಅದೂ ಅಲ್ಲದೆ ಮೂರು ರೆಕ್ಕೆಯ ಫ್ಯಾನ್ ಗಳಲ್ಲಿಯೇ ಗಾಳಿ ತುಂಬಾ ಚೆನ್ನಾಗಿ ಬರತ್ತೆ. ನಾಲ್ಕು ಅಥವಾ ಐದು ರೆಕ್ಕೆ ಇರುವ ಫ್ಯಾನ್ ಗಳಲ್ಲಿ ಗಾಳಿ ತುಂಬಾ ಕಡಿಮೆ ಬರತ್ತೆ ಹಾಗಾಗಿ ನಮ್ಮ ದೇಶದಲ್ಲಿ ಮೂರು ರೆಕ್ಕೆಗಳು ಇರುವ ಫ್ಯಾನ್ ಅನ್ನೇ ಹೆಚ್ಚಾಗಿ ಬಳಸುತ್ತಾರೆ.

Leave a Reply

Your email address will not be published. Required fields are marked *