ಹೂವೊಂದು ಬೇಕು ಬಳ್ಳಿಗೆ ಮಗುವೊಂದು ಬೇಕು ಹೆಣ್ಣಿಗೆ. ಕಂದನ ಸಂತೋಷವೆ ತಾಯಿಯ ಸೌಭಾಗ್ಯವು ಬಾಳಿನ ಆನಂದವು. ಕಂದನ ತೊದಲು ನುಡಿ ಜೇನಿನ ಹನಿಗಳಂತೆ ಕೋಪದಿ ಅಳುವಾಗ ಜೋಗುಳ ಹಾಡಿದಂತೆ. ಸರಸವೆ ದಿನ ಅನುದಿನ ಹೊಸತನ. ಹೂವೊಂದು ಬೇಕು ಬಳ್ಳಿಗೆ ಮಗುವೊಂದು ಬೇಕು ಹೆಣ್ಣಿಗೆ. ಎಷ್ಟೊಂದು ಅರ್ಥಪೂರ್ಣವಾದ ಸಾಲುಗಳು ಇವು. ಇಂದು ಹೆಣ್ಣಿನ ಜನ್ಮ ಪರಿಪೂರ್ಣ ಆಗುವುದು ಆಕೆ ತಾಯಿ ಆದಾಗಲೇ. ಪ್ರತಿಯೊಂದು ಹೆಣ್ಣಿಗೂ ಇರುವ ಹೆಬ್ಬಯಕೆ ಅದೊಂದೇ ತಾನು ತಾಯಿ ಆಗಬೇಕು ಎನ್ನುವುದು.

ಆದರೆ ಈಗಿನ ಕಾಲದಲ್ಲಿ ಹಿಂದಿನ ಕಾಲದ ಹಾಗೇ ಒಂದು ಹೆಣ್ಣು ತಾಯಿ ಆಗುವುದು ಅಷ್ಟು ಸುಲಭದ ಮಾತಾಗಿಲ್ಲ. ವಯಸ್ಸಿನ ಅನಂತರವೋ, ಮಾನಸಿಕ, ದೈಹಿಕ ಸಮಸ್ಯೆಯೋ ಏನೋ ಒಂದು ಸಮಸ್ಯೆಯಿಂದ ಈಗಿನ ಹೆಣ್ಣುಮಕ್ಕಳಲ್ಲಿ ಸಂತಾನೋತ್ಪತ್ತಿ ಬಹಳಷ್ಟು ತಡವಾಗಿ ಹಾಗೂ ವಿರಳವಾಗಿ ಆಗುತ್ತಿದೆ. ಮಗುವನ್ನು ಪಡೆಯಲು ಅದೆಷ್ಟೇ ಪ್ರಯತ್ನ ಪಟ್ಟರೂ ಸಹ ಕೆಲವರಿಗೆ ಆಗುವುದೇ ಇಲ್ಲ. ಆದರೆ ಈ ಒಂದು ಪವಿತ್ರವಾದ ಹಾಗೂ ಶಕ್ತಿಯುತವಾದ ಸ್ಥಳಕ್ಕೆ ಹೋದರೆ ಮಕ್ಕಳು ಆಗದವರಿಗೆ ಬೇಗ ಮಕ್ಕಳು ಆಗುತ್ತದೆ ಎಂದು ಹೇಳುತ್ತಾರೆ. ಆ ಪ್ರಸಿದ್ಧವಾದ ಸ್ಥಳ ಯಾವುದು? ಎಲ್ಲಿದೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಹೆಣ್ಣು ಎಂದರೆ ಶಕ್ತಿ. ಜಗತ್ತಿನ ಎಲ್ಲಾ ಶಕ್ತಿಯನ್ನು ತನ್ನೊಳಗೆ ಬಚ್ಚಿಟ್ಟುಕೊಂಡು ಸದಾ ಕಾಲ ಎಲ್ಲರನ್ನೂ ಪ್ರೀತಿಯಲ್ಲಿ ಪೊರೆಯುವವಳು ಈ ಹೆಣ್ಣು. ಆಕೆ ಮಮತಾಮಯಿ, ಕರುಣಾಮಯಿ, ಕ್ಷಮಯಾಧರಿತ್ರಿ. ಅದಕ್ಕೆ ಹೆಣ್ಣು ಅಂದ್ರೆ ವರ್ಣಿಸಲಾಗದ ಶಕ್ತಿಯಾಗಿ ಕಾಣುವುದು. ಹೆಣ್ಣು ಪ್ರೀತಿ ವಿಶ್ವಾಸದ ಪ್ರತೀಕ, ಮನೆಯನ್ನು ಬೆಳಗುವ ಬೆಳಕು. ಹೆಣ್ಣೆಂದರೆ ಪ್ರಕೃತಿ. ಹೀಗೆ ನಾನಾ ರೂಪದಲ್ಲಿ ಅವತರಿಸುವವಳೆ ಸ್ತ್ರೀ ಶಕ್ತಿ. ನಮ್ಮ ಭರತ ಭೂಮಿಯಲ್ಲಿ ಹೆಣ್ಣನ್ನು ಆದಿಶಕ್ತಿ ಪರಾಶಕ್ತಿ ಗೆ ಹೋಲಿಸುತ್ತಾರೆ. ಇನ್ನು ಕ್ಷಮಯಾಧರಿತ್ರಿ ಆಗಿರುವ ಈ ಹೆಣ್ಣು ತಾಳ್ಮೆಗೆ ಹೆಸರುವಾಸಿಯಾಗಿದ್ದಾಳೆ ಅಷ್ಟೇ ಅಲ್ಲ ನಮ್ಮ ಭೂಮಿಯಲ್ಲಿ ಹೆಣ್ಣನ್ನು ದೇವತೆಗೆ ಸಮಾನವಾಗಿ ಪೂಜಿಸಲಾಗುತ್ತದೆ.

ಆದ್ದರಿಂದಲೇ ಹೆಣ್ಣನ್ನು ಗೌರವಿಸಬೇಕು ಎಂದು ನಮ್ಮ ಸಂಸ್ಕೃತಿಯಲ್ಲಿ ಹಿರಿಯರು ನಮಗೆ ಇವತ್ತಿಗೂ ಕೂಡ ಪಾಠ ಕಲಿಸಿ ಕೊಡುವುದು. ಯಾಕೆ ಹೆಣ್ಣನ್ನು ಅಷ್ಟೊಂದು ಗೌರವಿಸುತ್ತಾರೆ ಮತ್ತು ಯಾಕೆ ಹೆಣ್ಣನ ಪೂಜಿಸುತ್ತಿದ್ದರು ಎಂಬುದಕ್ಕೆ ಕಾರಣವನ್ನು ಹೇಳುವುದಾದರೆ ಆಕೆ ಕ್ಷಮಯಾಧರಿತ್ರಿ ಆದಿಶಕ್ತಿ ಪರಾಶಕ್ತಿ ಅಂತೆಲ್ಲಾ ಕರೆಯುತ್ತಾರೆ. ಹೆಣ್ಣು ಮಗುವೊಂದು ಹುಟ್ಟಿದಾಗ ಲಕ್ಷ್ಮೀ ಹುಟ್ಟಿದಳು ಅಂತ ಕುಣಿದಾಡುವ ಪೋಷಕರು ಇದ್ದಾರೆ. ಹಾಗೇ ಈ ದರಿದ್ರ ಲಕ್ಷ್ಮಿ ಯಾಕಾದರೂ ನಮ್ಮ ಮನೆಯಲ್ಲಿ ಹುಟ್ಟಿದಳೋ ಅಂತ ಜರಿಯುವ ಪೋಷಕರು ಇದ್ದಾರೆ. ಆದರೆ ಹೆಣ್ಣಿಗೆ ಮತ್ತೊಂದು ಜೀವಕ್ಕೆ ಜೀವ ಕೊಡುವ ಶಕ್ತಿ ಇದೆ ಆದ್ದರಿಂದಲೇ ಆಕೆಯನ್ನು ಬಹಳ ಗೌರವಿಸಲಾಗುತ್ತದೆ ಬಹಳ ಪೂಜಿಸಲಾಗುತ್ತದೆ ಎನ್ನುವುದು ಅದೆಷ್ಟೋ ಜನರಿಗೆ ತಿಳಿದೇ ಇಲ್ಲ. ಮಕ್ಕಳಾಗದವರು ಇಲ್ಲಿ ಒಂದು ರಾತ್ರಿ ಉಳಿದ್ರೆ ಮಕ್ಕಳಾಗುತ್ತೆ.

ಹೆಣ್ಣಿಗೂ ಕೂಡ ಆಕೆಯ ಜೀವನ ಪರಿಪೂರ್ಣ ಆಗುವುದು ಆಕೆ ಒಂದು ಮಗುವಿಗೆ ಜನ್ಮ ನೀಡಿದಾಗ. ಆಕೆ ಯಾವಾಗ ಮಗುವಿಗೆ ಜನ್ಮ ನೀಡುವುದಿಲ್ಲ, ಆಕೆಯನ್ನೂ ಈ ಸಮಾಜದಲ್ಲಿ ಬಹಳ ಕೀಳಾಗಿ ಕಾಣುತ್ತಾರೆ, ಬಂಜೆ ಎಂದು ಕರೆಯುತ್ತಾರೆ. ಇನ್ನು ಇವತ್ತಿನ ದಿವಸಗಳಲ್ಲಿ ಮಕ್ಕಳಾಗದೇ ಇರುವವರು ಹಲವು ವಿಧದ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು ಕೆಲವರು ಮಕ್ಕಳಾಗದೆ ಇರುವಾಗ ಅದಕ್ಕೆ ವೈಜ್ಞಾನಿಕವಾದ ಹಾದಿಯನ್ನು ಹಿಡಿದರೆ, ಇನ್ನೂ ಕೆಲವರು ದೇವರ ಮೊರೆ ಹೋಗುತ್ತಾರೆ. ಅದೇ ರೀತಿ ಮಕ್ಕಳಾಗದೆ ಇರುವವರು ಈ ಸ್ಥಳಕ್ಕೆ ಹೋಗಿ ಒಂದು ರಾತ್ರಿ ಈ ಸ್ಥಳದಲ್ಲಿಯೇ ಇದ್ದು ಬಂದರೆ ಅವರಿಗೆ ಸಂತಾನ ಪ್ರಾಪ್ತಿಯಾಗುತ್ತದೆಯಂತೆ.

ಇದನ್ನು ವಿಜ್ಞಾನ ಒಪ್ಪುವುದಿಲ್ಲ ಆದರೆ ಎಷ್ಟೋ ಜನರು ಈ ಸ್ಥಳಕ್ಕೆ ಹೋಗಿ ಮಕ್ಕಳನ್ನು ಪಡೆದುಕೊಂಡಿರುವ ಉದಾಹರಣೆ ಕೂಡ ಉಂಟು. ಈ ಸ್ಥಳದ ವಿಶೇಷತೆ ಬಗ್ಗೆ ಹೇಳಬೇಕೆಂದರೆ ಹೆಣ್ಣುಮಕ್ಕಳು ರಾತ್ರಿ ಇಲ್ಲಿಯ ತಂಗಬೇಕು ರಾತ್ರಿ ಮಲಗಿದಾಗ ಕನಸಿನಲ್ಲಿ ಸೀಬೆಹಣ್ಣು ಬಂದರೆ ಅವರಿಗೆ  ಗಂಡು ಮಗು ಪ್ರಾಪ್ತಿಯಾಗುತ್ತದೆ ಎಂದರ್ಥ, ಇನ್ನು ಬೆಂಡೆಕಾಯಿ ಕನಸಿನಲ್ಲಿ ಬಂದರೆ ಅವರಿಗೆ ಹೆಣ್ಣು ಮಗು ಪ್ರಾಪ್ತಿಯಾಗುತ್ತದೆ ಎಂದು ಸೂಚನೆ ಇದೆಯಂತೆ.

ಹಾಗಾದರೆ ಈ ರೀತಿ ಮಕ್ಕಳು ಆಗದೇ ಇರುವವರಿಗೆ ಮಕ್ಕಳಾಗುವ ವರವನ್ನು ಕರುಣಿಸುವ ಆ ಪ್ರದೇಶ ಇರುವುದಾದರೂ ಎಲ್ಲಿ? ಇದರ ಬಗ್ಗೆ ತಿಳಿಯುವುದಾದರೆ, ಈ ಪ್ರದೇಶ ಇರುವುದು ಇದು ನಮ್ಮ ಭಾರತ ದೇಶದಲ್ಲಿ ಹಿಮಾಚಲ ಪ್ರದೇಶಕ್ಕೆ ಸೇರಿರುವ ಮಂಡಿ ಎಂಬ ಜಿಲ್ಲೆಯ ಒಂದು ಪ್ರದೇಶಕ್ಕೆ ಸೇರಿರುವ ಸ್ಥಳ. ಆ ಸ್ಥಳಕ್ಕೆ ಹೋಗಿ ಹೆಣ್ಣು ಮಕ್ಕಳು ಅದರಲ್ಲಿಯೂ ಮಕ್ಕಳಾಗದೆ ಇರುವವರು ಒಂದು ರಾತ್ರಿ ತಂಗಿ ಬರಬೇಕು ಇದರಿಂದ ಅವರು ಅಂದುಕೊಂಡಂತೆ ಅವರಿಗೆ ಸಂತಾನ ಪ್ರಾಪ್ತಿ ಆಗುತ್ತದೆ ಎಂಬ ನಂಬಿಕೆ ಇವತ್ತಿಗೂ ಕೂಡ ಇಲ್ಲಿ ನಡೆಯುತ್ತಲೇ ಇದೆ. ಅಚ್ಚರಿ ಅನ್ನಿಸಬಹುದು ಆದರೆ ಇದು ಸತ್ಯ.

Leave a Reply

Your email address will not be published. Required fields are marked *