ಗ್ರಾಮಪಂಚಾಯ್ತಿಯಲ್ಲಿ ನರೇಗಾ ಜಾಬ್ ಕಾರ್ಡ್ ಮಾಡಿಸಿದ್ರೆ ಏನ್ ಲಾಭ ಸಂಪೂರ್ಣ ಮಾಹಿತಿ

0 13

ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿ ಮೂಲಕ 100 ದಿನಗಳ ಉದ್ಯೋಗ ಅವಕಾಶ ಪಡೆಯಲು ಉದ್ಯೋಗ ಖಾತರಿ ಯೋಜನೆಯಡಿ ಜಾಬ್ ಕಾರ್ಡ್ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹಾಗಾದರೆ ಆನ್ಲೈನ್ ನಲ್ಲಿ ಉದ್ಯೋಗ ಖಾತರಿ ಕಾರ್ಡ್ ಅಥವಾ ನರೇಗಾ ಜಾಬ್ ಕಾರ್ಡ್ ಪಡೆಯಲು ಅರ್ಜಿ ಹೇಗೆ ಸಲ್ಲಿಸುವುದು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ..

ನರೇಗಾ ಜಾಬ್ ಕಾರ್ಡ್ ಅಥವಾ ಉದ್ಯೋಗ ಖಾತರಿ ಕಾರ್ಡ್ ಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ನರೇಗಾ ಜಾಬ್ ಕಾರ್ಡ್ ಅಥವಾ ಉದ್ಯೋಗ ಖಾತರಿ ಕಾರ್ಡ್ ಪಡೆದಿರುವವರಿಗೆ ಗ್ರಾಮ ಪಂಚಾಯಿತಿ ಮೂಲಕ ಕೂಲಿ ಕೆಲಸ ನೀಡಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ನರೇಗಾ ಕಾರ್ಡ್ ಅಥವಾ ಉದ್ಯೋಗ ಖಾತರಿ ಕಾರ್ಡ್ ಅನ್ನು ಹೆಚ್ಚು ಮಾಡಿಸುತ್ತಾರೆ. ಹೊಲಗದ್ದೆಗಳಲ್ಲಿ ಬದು ನಿರ್ಮಾಣ ಮಾಡುವುದು, ರಸ್ತೆ ಕಾಮಗಾರಿಗಳಲ್ಲಿ ಕೆಲಸ, ಕೆರೆ ನಿರ್ಮಾಣ ಮಾಡುವುದು, ಪಾರ್ಕ ಕ್ಲೀನ್ ಮಾಡುವುದು ಇಂತಹ ಕೆಲಸಗಳನ್ನು ಗ್ರಾಮ ಪಂಚಾಯಿತಿ ಮೂಲಕ ನರೇಗಾ ಜಾಬ್ ಕಾರ್ಡ್ ಹೊಂದಿರುವವರಿಗೆ ನೀಡಲಾಗುತ್ತದೆ.

ನರೇಗಾ ಜಾಬ್ ಕಾರ್ಡ್ ಹೊಂದಿರುವವರಿಗೆ ಒಂದು ದಿನಕ್ಕೆ 280 ರೂಪಾಯಿ ಕೂಲಿ ಕೊಡಲಾಗುತ್ತದೆ. ಇತ್ತೀಚಿಗೆ ರಾಜ್ಯ ಸರ್ಕಾರದಿಂದ ಉದ್ಯೋಗ ಖಾತರಿ ಯೋಜನೆಯಡಿ ಎರೆಹುಳು ತೊಟ್ಟಿ ನಿರ್ಮಾಣ ಮಾಡಲು ಅರ್ಜಿ ಆಹ್ವಾನಿಸಲಾಗಿತ್ತು. ಉದ್ಯೋಗ ಖಾತರಿ ಹೊಂದಿರುವವರಿಗೆ ನೂರು ದಿನಗಳ ಕಾಲ ಉದ್ಯೋಗ ನೀಡಲಾಗುತ್ತದೆ.

ನರೇಗಾ ಜಾಬ್ ಕಾರ್ಡ್ ಅಥವಾ ಉದ್ಯೋಗ ಖಾತರಿ ಕಾರ್ಡ್ ಪಡೆಯಲು ಕಂಪ್ಯೂಟರ್ ನಲ್ಲಿ ಸೇವಾ ಸಿಂಧು ಸರ್ವಿಸ್ ಪ್ಲಸ್ ಪೋರ್ಟಲ್ ಅನ್ನು ಓಪನ್ ಮಾಡಿ ನಂತರ ಎಡಗಡೆ ಎರಡನೆ ಆಪ್ಷನ್ ಅಪ್ಲೈ ಫಾರ್ ಸರ್ವಿಸ್ ಎಂದು ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿದ ನಂತರ ಅವೈಲೇಬಲ್ ಆಲ್ ಸರ್ವಿಸ್ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು. ನಂತರ ಸರ್ಚ್ ಬಾಕ್ಸ್ ನಲ್ಲಿ ಲೇಬರ್ ಎಂದು ಟೈಪ್ ಮಾಡಬೇಕು. ಸರ್ವಿಸ್ ನೇಮ್ ಕಾಲಮ್ ನಲ್ಲಿ ಕೆಳಗಡೆ ಇಶ್ಯೂ ಆಫ್ ಜಾಬ್ ಕಾರ್ಡ್ ಟು ಅನ್ ಸ್ಕಿಲ್ಡ್ ಲೇಬರ್ ಅಂಡರ್ ಎಂಜಿ ನರೇಗಾಸ್ ಎಂದು ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು.

ನಂತರ ಅರ್ಜಿ ಫಾರ್ಮ್ ಓಪನ್ ಆಗುತ್ತದೆ ಅರ್ಜಿ ಫಾರ್ಮ್ ನಲ್ಲಿ ಅರ್ಜಿದಾರನ ಹೆಸರು, ತಂದೆಯ ಹೆಸರು, ಅಡ್ರೆಸ್, ಮೊಬೈಲ್ ನಂಬರ್, ಇಮೇಲ್ ಐಡಿ ಹಾಕಿದ ನಂತರ ಜಿಲ್ಲೆಯನ್ನು, ತಾಲೂಕನ್ನು, ಗ್ರಾಮ ಪಂಚಾಯತ್ ಅನ್ನು ಸೆಲೆಕ್ಟ್ ಮಾಡಬೇಕು. ನಂತರ ಹುಟ್ಟಿದ ದಿನಾಂಕ, ಮದುವೆಯಾಗಿದ್ದರೆ ಮ್ಯಾರೀಡ್ ಮದುವೆಯಾಗದಿದ್ದರೆ ಅನ್ ಮ್ಯಾರೀಡ್ ಎಂಬ ಆಪ್ಶನ್ ಸೆಲೆಕ್ಟ್ ಮಾಡಬೇಕು, ವಿಕಲಚೇತನರಾಗಿದ್ದರೆ ಎಸ್ ಎಂದು ವಿಕಲಚೇತನರಲ್ಲದೆ ಇದ್ದರೆ ನೋ ಎಂದು ಸೆಲೆಕ್ಟ್ ಮಾಡಬೇಕು.

ಮದುವೆಯಾಗಿ ವಿಧವೆ ಆಗಿದ್ದರೆ ಎಸ್ ಎಂದು, ಕ್ರೀಡಾಪಟು ಆಗಿದ್ದರೆ ಎಸ್ ಎಂದು ಸೆಲೆಕ್ಟ್ ಮಾಡಬೇಕು. ಕುಟುಂಬದ ಸದಸ್ಯರ ಸಂಖ್ಯೆ, ಪ್ರಸ್ತುತ ಯಾವ ಕೆಲಸವನ್ನು ಮಾಡುತ್ತಿರುತ್ತೇವೆ ಅದನ್ನು ಸೆಲೆಕ್ಟ್ ಮಾಡಬೇಕು. ಜಾತಿ ಧರ್ಮ, ರೇಷನ್ ಕಾರ್ಡ್ ಯಾವುದು ಎಂಬ ಮಾಹಿತಿಯನ್ನು ಹಾಕಬೇಕು. ನಂತರ ರೇಷನ್ ಕಾರ್ಡ್ ನಂಬರ್ ಹಾಕಬೇಕು, ಶೌಚಾಲಯ ಇದೆಯೆ ಇಲ್ಲವೆ ಎಂಬ ಪ್ರಶ್ನೆ ಇರುತ್ತದೆ ಎಸ್ ಅಥವಾ ನೋ ಸೆಲೆಕ್ಟ್ ಮಾಡಬೇಕು, ಆರ್ ಆರ್ ನಂಬರ್ ಇದೆಯೆ ಇಲ್ಲವೆ ಎಂಬ ಪ್ರಶ್ನೆಗೆ ಎಸ್ ಅಥವಾ ನೋ ಸೆಲೆಕ್ಟ್ ಮಾಡಬೇಕು.

ನಂತರ ಕ್ಯಾಪ್ಚರ್ ಕೋಡ್ ಎಂಟ್ರಿ ಮಾಡಿ ಸಬ್ಮಿಟ್ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು. ಹಾಕಿರುವ ಮಾಹಿತಿ ತಪ್ಪಾಗಿದ್ದಲ್ಲಿ ಒಮ್ಮೆ ಸರಿಯಾಗಿ ನೋಡಿ ಕೆಳಗಡೆ ಎಡಿಟ್ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ ಸರಿಯಾಗಿ ಹಾಕಿದ ನಂತರ ಅಟ್ಯಾಚ್ ಎನೆಕ್ಸರ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಕೆಲವು ಡಾಕ್ಯೂಮೆಂಟ್ಸ್ ಅಪ್ಲೋಡ್ ಮಾಡಬೇಕಾಗುತ್ತದೆ, ಡಾಕ್ಯುಮೆಂಟ್ಸ್ ಪಿಡಿಎಫ್ ಫಾರ್ಮೆಟ್ ನಲಿ ಇರಬೇಕು.

ಏಜ್ ಪ್ರೂಫ್, ಬ್ಯಾಂಕ್ ಪಾಸ್ ಬುಕ್, ಜಾತಿ ಪ್ರಮಾಣ ಪತ್ರ, ಫ್ಯಾಮಿಲಿ ಫೋಟೋ, ಆಧಾರ್ ಕಾರ್ಡ್, ಪಾಸ್ ಪೋರ್ಟ್ ಸೈಜ್ ಫೋಟೋ, ರೇಷನ್ ಕಾರ್ಡ್, ಟ್ಯಾಕ್ಸ್ ರಿಸಿಪ್ಟ್, ಚೆಕ್ ಬಂದಿಗಳನ್ನು ಅಪ್ಲೋಡ್ ಮಾಡಬೇಕು ನಂತರ ಸೇವ್ ಎನೆಕ್ಸರ್ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಮತ್ತೊಮ್ಮೆ ಹಾಕಿದ ಡಾಕ್ಯೂಮೆಂಟ್ಸ್ ಸರಿಯಾಗಿದೆಯೆ ಇಲ್ಲವೆ ಎಂದು ನೋಡಿಕೊಂಡು ಕೆಳಗಡೆ ಇಸೈನ್ ಎಂಡ್ ಸಬ್ಮಿಟ್ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು.

ನಂತರ ಕನ್ಸೆಂಟ್ ಅಥೆಂಟಿಕೇಷನ್ ಫಾರ್ಮ್ ಬರುತ್ತದೆ ಕೆಳಗೆ ಐ ಅಗ್ರಿ ಎಂಬ ಆಪ್ಷನ್ ಸೆಲೆಕ್ಟ್ ಮಾಡಿದ ನಂತರ ಓಟಿಪಿ ಆಪ್ಷನ್ ಮೇಲೆ ಕ್ಲಿಕ್ ಮಾಡಿದಾಗ ಆಧಾರ್ ಬೇಸ್ಡ್ ಅಥೆಂಟಿಕೇಷನ್ ಎಂದು ಇರುತ್ತದೆ. ಆಧಾರ್ ಕಾರ್ಡ್ ನಂಬರ್ ಹಾಕಿ ಗೆಟ್ ಓಟಿಪಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದಾಗ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಅದನ್ನು ಹಾಕಿ ವೆರಿಫೈ ಓಟಿಪಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.

ನಂತರ ಉದ್ಯೋಗ ಖಾತರಿ ಕಾರ್ಡ್ ಪಡೆಯಲು ಫೀಸ್ ತುಂಬಬೇಕು ಆನ್ಲೈನ್ ಮೂಲಕ ಪೇ ಮಾಡಿದ ನಂತರ ರಿಸಿಪ್ಟ್ ಜನರೇಟ್ ಆಗುತ್ತದೆ ಅದನ್ನು ಪ್ರಿಂಟೌಟ್ ತೆಗೆದಿಟ್ಟುಕೊಳ್ಳಬೇಕು. ಅದರಲ್ಲಿರುವ ರೆಫರೆನ್ಸ್ ನಂಬರ್ ಮೂಲಕ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು. ಸೇವಾ ಸಿಂಧು ಸರ್ವಿಸ್ ಪ್ಲಸ್ ಪೋರ್ಟಲ್ ಓಪನ್ ಮಾಡಿದಾಗ ವ್ಯೂ ಸ್ಟೇಟಸ್ ಆಫ್ ಅಪ್ಲಿಕೇಷನ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ರೆಫರೆನ್ಸ್ ನಂಬರ್ ಹಾಕಿ ಅಪ್ಲಿಕೇಷನ್ ಹಾಕಿದ ದಿನಾಂಕವನ್ನು ಹಾಕಿ ಗೆಟ್ ಡಾಟಾ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ಜಾಬ್ ಕಾರ್ಡ್ ಗೆ ಸಲ್ಲಿಸಿರುವ ಅರ್ಜಿಯ ಸ್ಟೇಟಸ್ ತಿಳಿದುಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಗ್ರಾಮೀಣ ಭಾಗದಲ್ಲಿ 100 ದಿನಗಳ ಉದ್ಯೋಗ ಅವಕಾಶ ಪಡೆಯಿರಿ.

ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.