ದೇಹದ ಅರೋಗ್ಯ ವೃದ್ಧಿಗೆ ಹಲವು ಆರೋಗ್ಯಕಾರಿ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕಾಗುತ್ತದೆ, ಅಷ್ಟೇ ಅಲ್ಲದೆ ಯಾವ ರೀತಿಯ ಆಹಾರ ಕ್ರಮಗಳನ್ನು ಅನುಸರಿಸುವುದರಿಂದ ದೇಹಕ್ಕೆ ಉತ್ತಮ ಅರೋಗ್ಯ ಸಿಗುತ್ತದೆ ಅನ್ನೋದಾದರೆ ಬಗೆ ಸ್ವಲ್ಪ ಆದ್ರೂ ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ದೇಹಕ್ಕೆ ರಕ್ತ ಕಣಗಳು ತುಂಬಾನೇ ಅವಶ್ಯಕವಾಗಿದೆ ಕೆಂಪು ರಕ್ತಕಣಗಳನ್ನು ವೃದ್ಧಿಸಿಕೊಳ್ಳಲು ಹಸಿ ತರಕಾರಿ ಹಣ್ಣುಗಳು ಹೆಚ್ಚು ಪೂರಕವಾಗಿ ಬೇಕಾಗುತ್ತದೆ.

ನೇರವಾಗಿ ವಿಷ್ಯಕ್ಕೆ ಬರೋಣ ದೇಹಕ್ಕೆ ಕೆಂಪು ರಕ್ತಕಣಗಳನ್ನು ಹೆಚ್ಚಿಸುವ ಜೊತೆಗೆ ರಕ್ತಹೀನತೆ ಮುಂತಾದ ಸಮಸ್ಯೆಗಳನ್ನು ನಿಯಂತ್ರಿಸುವಂತ ಹಣ್ಣುಗಳು ಯಾವುವು ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ, ಹಸಿ ತರಕಾರಿಗಳು ಹಣ್ಣುಗಳು ಹಾಗೂ ಡ್ರೈ ಪ್ರುಟ್ಸ್ ಅಂದರೆ ಒಣ ಹಣ್ಣುಗಳು ಅಗತ್ಯವಾಗಿ ಬೇಕಾಗುತ್ತದೆ. ಮೊದಲನೆಯದಾಗಿ ಹಸಿ ತರಕಾರಿಗಳಲ್ಲಿ ಬಿಟ್ರೋಟ್ ಸೇವನೆ ಅಗತ್ಯವಾಗಿದೆ ಹೌದು ಇದರ ಸೇವನೆ ದೇಹಕ್ಕೆ ಹೆಚ್ಚು ಪೋಷಕಾಂಶಗಳನ್ನು ನೀಡುತ್ತದೆ, ಹಾಗೂ ಇದರಲ್ಲಿರುವ ವಿಟಮಿನ್ ಅಂಶಗಳು ರಕ್ತ ವೃದ್ಧಿಗೆ ಸಹಕಾರಿ ಬಿಟ್ರೋಟ್ ಅನ್ನು ಜ್ಯುಸ್ ಮಾಡಿ ಸೇವನೆ ಮಾಡಿ ಅಥವಾ ಅಡುಗೆಗಳಲ್ಲಿ ಬಳಸಿ ಸೇವನೆ ಮಾಡುವುದರಿಂದ ಅರೋಗ್ಯ ವೃದ್ಧಿಯಾಗುವದು.

ಇನ್ನು ತರಕಾರಿಗಳಲ್ಲಿ ಎಲೆಕೋಸ್ ಹೂವು ಕೋಸು ಗೆಣಸು ಮೂಲಂಗಿ ಮುಂತಾದ ಹಲವು ಹಸಿ ತರಕಾರಿಗಳನ್ನು ಸೇವನೆ ಮಾಡುವುದರಿಂದ ಅರೋಗ್ಯ ಹೆಚ್ಚು ವೃದ್ಧಿಯಾಗುವುದು ಮತ್ತು ದೇಹದಲ್ಲಿ ರಕ್ತಕಣಗಳು ಹೆಚ್ಚಾಗುತ್ತವೆ, ಮನುಷ್ಯನ ದೇಹಕ್ಕೆ ಎನರ್ಜಿಯನ್ನು ನೀಡುವಂತ ಈ ತರಕಾರಿಗಳು ರೋಗ ನಿರೋಧಕ ಶಕ್ತಿಯನ್ನು ನೀಡುವುದರ ಜೊತೆಗೆ ಕಾಯಿಲೆ ರೋಗಗಳಿಂದ ರಕ್ಷಿಸಲ್ಪಡುತ್ತದೆ.

ದೇಹಕ್ಕೆ ಬಲವನ್ನು ನೀಡುವಂತ ಒಣ ಹಣ್ಣುಗಳು ಆಂಗ್ಲ ಭಾಷೆಯಲ್ಲಿ ಡ್ರೈ ಪ್ರುಟ್ಸ್ ಎಂಬುದಾಗಿ ಕರೆಯಲಾಗುತ್ತದೆ, ಬಾದಾಮಿ ಪಿಸ್ತಾ ಗೋಡಂಬಿ ಅಂಜೂರ ಒಣ ದ್ರಾಕ್ಷಿ ಮುಂತಾದ ಡ್ರೈ ಪೊಟ್ಸ್ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು ಅಷ್ಟೇ ಅಲ್ಲದೆ ಹಣ್ಣುಗಳ ಸೇವನೆಯಿಂದ ದೇಹದ ಬೆಳವಣಿಗೆ ಮತ್ತು ಅರೋಗ್ಯ ವೃದ್ಧಿಯಾಗಲು ಸಹಕಾರಿ ಕಲ್ಲಂಗಡಿ ಸೇಬು ಮಾವು ಸಪೋಟ ಕಿತ್ತಳೆಹಣ್ಣು ಮುಂತಾದ ಹಣ್ಣುಗಳು ಆರೋಗ್ಯದ ನಿಧಿಯನ್ನು ಹೊಂದಿದೆ. ವೈದ್ಯರೇ ಹೇಳುವ ಹಾಗೆ ಇಂತಹ ತರಕಾರಿ ಹಣ್ಣುಗಳನ್ನು ಸೇವನೆ ಮಾಡಿ ದೇಹಕ್ಕೆ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದಾಗಿದೆ.

By

Leave a Reply

Your email address will not be published. Required fields are marked *