ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಆಕಸ್ಮಿಕ ಮರಣ ಇಡೀ ಕರ್ನಾಟಕದ ಜನತೆಯನ್ನು ದಿಗ್ಬ್ರಾಂತಿಗೆ ಗುರಿಮಾಡಿತ್ತು ಅವರಿಗೆ ಹೃದಯಾಘಾತವಾಗಿತ್ತು ಎಂಬುದನ್ನು ನಂಬುವುದಕ್ಕೆ ಯಾರಿಂದಲೂ ಸಾಧ್ಯವಾಗಿರಲಿಲ್ಲ. ಈಗಲೂ ಸಹ ಅದನ್ನು ಜೀರ್ಣಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಇದು ನಿಜವಾ ಸುಳ್ಳಾ ಎನ್ನುವ ಗೊಂದಲದಲ್ಲಿಯೇ ಇದ್ದೇವೆ. ಆದರೆ ಅವರು ಸದಾ ನಮ್ಮ ಜೊತೆಯೇ ಇರುತ್ತಾರೆ ಯಾಕೆಂದರೆ ಕಲಾವಿದರಿಗೆ ಎಂದು ಸಾವಿಲ್ಲ. ಭಗವಂತ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಅವರು ಮತ್ತೆ ಕರ್ನಾಟಕದಲ್ಲಿ ಹುಟ್ಟಿ ಬರಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ.

ನಾವಿಂದು ಹೃದಯ ಹೇಗೆ ಕೆಲಸ ಮಾಡುತ್ತದೆ ಹೃದಯಾಘಾತ ಎಂದರೇನು ಕಾರ್ಡಿಯಾಕ್ ಅರೆಸ್ಟ್ ಹೇಗೆ ಆಗುತ್ತದೆ ಎರಡಕ್ಕೂ ಇರುವ ವ್ಯತ್ಯಾಸ ಏನು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ನಮ್ಮ ದೇಹದಲ್ಲಿರುವ ಎಲ್ಲ ಅಂಗಗಳಿಗೆ ಹೃದಯ ರಕ್ತನಾಳದ ಮೂಲಕ ರಕ್ತವನ್ನು ಪೂರೈಕೆ ಮಾಡುತ್ತದೆ ಅದೇ ರೀತಿ ನಮ್ಮ ದೇಹದ ಭಾಗಗಳಿಗೆ ಬೇಕಾದ ಪೋಷಕಾಂಶಗಳು ಹಾಗೂ ಆಮ್ಲಜನಕ ರಕ್ತದಿಂದಲೇ ಪೂರೈಕೆ ಆಗುತ್ತದೆ. ಅದೇ ರೀತಿ ದೇಹದ ಭಾಗಗಳಲ್ಲಿ ಕೆಟ್ಟ ರಕ್ತ ಇರಬಾರದು ಹೃದಯ ಒಳ್ಳೆಯ ರಕ್ತವನ್ನು ದೇಹದ ಭಾಗಗಳಿಗೆ ಕಳಿಸಿ ಆ ಭಾಗದಲ್ಲಿರುವ ಕೆಟ್ಟ ರಕ್ತವನ್ನು ತೆಗೆದುಕೊಳ್ಳುತ್ತದೆ

ನಮ್ಮ ಹೃದಯದಲ್ಲಿ ಒಟ್ಟು ನಾಲ್ಕು ಭಾಗಗಳು ಇರುತ್ತದೆ. ಅದು ಹೃತ್ಕರ್ಣ ಮತ್ತು ಹೃತ್ಕುಕ್ಷಿ ಮೇಲಿರುವ ಎರಡು ಕೋಣೆಗಳನ್ನು ಹೃತ್ಕರ್ಣ ಕೆಳಗಿರುವ ಎರಡು ಕೋಣೆಗಳನ್ನು ಹೃತ್ಕುಕ್ಷಿ ಎಂದು ಕರೆಯುತ್ತಾರೆ. ನಮ್ಮ ದೇಹದಲ್ಲಿರುವ ಕೆಟ್ಟ ರಕ್ತ ರಕ್ತನಾಳಗಳ ಮೂಲಕ ಪ್ರಯಾಣಿಸಿ ಹೃದಯದ ಬಲ ಹೃತ್ಕರ್ಣಕ್ಕೆ ಪ್ರವೇಶಿಸಿ ನಂತರ ಬಲ ಹೃತ್ಕುಕ್ಷಿಗೆ ಹೋಗುತ್ತದೆ. ಬಲ ಹೃತ್ಕುಕ್ಷಿ ನೇರವಾಗಿ ಲಂಗ್ಸ್ ಗೆ ಫಲ್ಮನರಿ ವಿಂಗ್ಸ್ ಗಳಿಂದ ಸಂಪರ್ಕ ಹೊಂದಿರುತ್ತದೆ ಈಗ ಬಲ ಹೃತ್ಕರ್ಣದಲ್ಲಿರುವ ಕೆಟ್ಟ ರಕ್ತ ಫಲ್ಮನರಿ ವಾಲ್ ಗಳ ಮೂಲಕ ಲಂಗ್ಸ್ ಗೆ ಪ್ರಯಾಣಿಸುತ್ತದೆ.

ಲಂಗ್ಸ್ ನಲ್ಲಿ ರಕ್ತದಲ್ಲಿರುವ ಕಾರ್ಬನ್ ಡೈಯಾಕ್ಸೈಡ್ ಶುದ್ಧವಾಗಿ ಅದರ ಜಾಗದಲ್ಲಿ ಆಮ್ಲಜನಕ ಸೇರಿಕೊಳ್ಳುತ್ತದೆ. ಅದು ಒಳ್ಳೆಯ ರಕ್ತವಾಗಿ ಬದಲಾಗುತ್ತದೆ ಈಗ ಈ ರಕ್ತ ಫಲ್ಮನರಿ ವಾಲ್ಸ್ ಗಳ ಮೂಲಕ ಹೃದಯದ ಎಡ ಹೃತ್ಕರ್ಣಕ್ಕೆ ಹೋಗಿ ನಂತರ ಎಡ ಹೃತ್ಕುಕ್ಷಿಗೆ ಹೋಗುತ್ತದೆ ಅಲ್ಲಿರುವ ರಕ್ತ ದೇಹದ ಎಲ್ಲಾ ಭಾಗಗಳಿಗೆ ಹೋಗುತ್ತದೆ. ಈ ವಿಧವಾಗಿ ಹೃದಯ ರಕ್ತವನ್ನು ಶುದ್ಧ ಮಾಡಿ ದೇಹದ ಎಲ್ಲಾ ಭಾಗಗಳಿಗೆ ಪೂರೈಕೆ ಮಾಡುತ್ತದೆ.

ಆದರೆ ಹೃದಯ ಎಷ್ಟು ವೇಗವಾಗಿ ರಕ್ತವನ್ನು ಪೂರೈಕೆ ಮಾಡಬೇಕು ಎಷ್ಟು ವೇಗವಾಗಿ ಬಡಿದುಕೊಳ್ಳಬೇಕು ಎಂದು ಹೃದಯದ ಎಲೆಕ್ಟ್ರಿಕ್ ಸಿಸ್ಟಮ್ ನಿರ್ಧಾರ ಮಾಡಿರುತ್ತದೆ ಹೃದಯದ ಎಲೆಕ್ಟ್ರಿಕ್ ಸಿಸ್ಟಮ್ ನಲ್ಲಿ ವ್ಯತ್ಯಾಸವಾದಾಗ ಹೃದಯ ವೇಗವಾಗಿ ಅಥವಾ ನಿಧಾನವಾಗಿ ಬಡಿದುಕೊಳ್ಳುವುದಕ್ಕೆ ಪ್ರಾರಂಭಿಸುತ್ತದೆ. ಈಗ ಹೃದಯಾಘಾತ ಹೇಗೆ ಬರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಹೃದಯ ದೇಹದ ಎಲ್ಲಾ ಭಾಗಗಳಿಗೆ ಒಳ್ಳೆಯ ರಕ್ತವನ್ನು ಪೂರೈಕೆ ಮಾಡುತ್ತದೆ ಅದೇ ರೀತಿ ಹೃದಯ ಆರೋಗ್ಯವಾಗಿ ಸಕ್ರಮವಾಗಿ ಕೆಲಸ ಮಾಡಬೇಕು ಎಂದರೆ ಹೃದಯಕ್ಕೂ ಕೂಡ ಒಳ್ಳೆಯ ರಕ್ತಬೇಕು.

ಆದ್ದರಿಂದ ಹೃದಯ ದೇಹದ ಎಲ್ಲ ಭಾಗಗಳ ಜೊತೆಗೆ ತನಗೂ ಕೂಡ ರಕ್ತವನ್ನು ಪೂರೈಕೆ ಮಾಡಿಕೊಳ್ಳುತ್ತದೆ. ಈ ರೀತಿಯ ಒಳ್ಳೆಯ ರಕ್ತವನ್ನು ಆರ್ಟರಿ ಪೂರೈಕೆ ಮಾಡುತ್ತದೆ ಯಾವಾಗ ಹೃದಯದ ಆರ್ಟರಿಯಲ್ಲಿ ಬ್ಲಾಕೆಜ್ ಆಗುತ್ತದೆ ಆಗ ರಕ್ತ ಸಂಚಾರ ಕಡಿಮೆಯಾಗುತ್ತದೆ ಈ ಬ್ಲಾಕೇಜ್ ಗೆ ಕಾರಣ ಕೊಲೆಸ್ಟ್ರಾಲ್. ಆರ್ಟರಿ ಬ್ಲಾಕ್ ಅದಾಗ ಹೃದಯಕ್ಕೆ ಆಮ್ಲಜನಕ ಇರುವ ರಕ್ತ ಸಿಗುವುದಿಲ್ಲ. ಆಗ ಹಾರ್ಟ್ ಮಜಲ್ಸ್ ಡ್ಯಾಮೇಜ್ ಆಗೋದಕ್ಕೆ ಪ್ರಾರಂಭಿಸುತ್ತದೆ.

ಇದನ್ನೇ ಹೃದಯಾಘಾತ ಎಂದು ಕರೆಯುತ್ತಾರೆ. ಹೃದಯಾಘಾತ ಪ್ರಾರಂಭವಾದಾಗ ಹೃದಯ ಸಕ್ರಮವಾಗಿ ರಕ್ತವನ್ನು ಪೂರೈಕೆ ಮಾಡುವುದಿಲ್ಲ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದಿದ್ದಾಗ ಹೃದಯ ಸಂಪೂರ್ಣವಾಗಿ ಸತ್ತು ಹೋಗುತ್ತದೆ.

ಹೃದಯಾಘಾತ ಆಗುವವರಿಗೆ ಸಾಮಾನ್ಯ ಲಕ್ಷಣ ಎದೆ ನೋವು ಉಸಿರಾಡುವುದಕ್ಕೆ ಸ್ವಲ್ಪ ಕಷ್ಟವಾಗುತ್ತದೆ ಅದೇ ರೀತಿ ಸುಸ್ತಾಗುವುದು ಬೆವರುವುದು ಭುಜದ ನೋವು ಈ ರೀತಿಯಾದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಕೆಲವರಲ್ಲಿ ಇಂತಹ ಲಕ್ಷಣಗಳು ಕಾಣಿಸದೇ ಇರಬಹುದು ನೇರವಾಗಿ ಹೃದಯಾಘಾತ ವಾಗಬಹುದು. ಇಂತಹ ಲಕ್ಷಣಗಳು ಕಾಣಿಸಿಕೊಂಡಾಗ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ.

ಅನೇಕ ಜನರು ಹೃದಯಾಘಾತ ಮತ್ತು ಕಾರ್ಡಿಯಾಕ್ ಅರೆಸ್ಟ್ ಒಂದೇ ಎಂದು ತಿಳಿದುಕೊಂಡಿರುತ್ತಾರೆ ಆದರೆ ಕಾರ್ಡಿಯಾಕ್ ಅರೆಸ್ಟ್ ಎನ್ನುವುದು ಬೇರೆ. ನಾವು ಈಗಾಗಲೇ ಹೃದಯ ಬಡಿತವನ್ನು ನಿಯಂತ್ರಿಸುವುದು ಹೃದಯದ ಎಲೆಕ್ಟ್ರಿಕ್ ಎಂದು ತಿಳಿದುಕೊಂಡಿದ್ದೇವೆ. ಈ ಎಲೆಕ್ಟ್ರಿಕ್ ಸಿಸ್ಟಮ್ ಸರಿಯಾಗಿ ಕೆಲಸ ಮಾಡದಿದ್ದಾಗ ಕಾರ್ಡಿಯಾಕ್ ಅರೆಸ್ಟ್ ಕಾಣಿಸಿಕೊಳ್ಳುತ್ತದೆ.

ಆಗ ಹೃದಯ ಸರಿಯಾಗಿ ಬಡಿದುಕೊಳ್ಳದೆ ಇರುವ ಕಾರಣ ದೇಹಕ್ಕೆ ರಕ್ತದ ಪೂರೈಕೆ ಕೂಡ ಕಡಿಮೆಯಾಗುತ್ತದೆ. ಇದರಿಂದ ಮೆದುಳು ಲಂಗ್ಸ್ ಲಿವರ್ ಮತ್ತು ಇತರೆ ಭಾಗಗಳಿಗೆ ರಕ್ತಪೂರೈಕೆ ಸರಿಯಾಗಿ ಆಗುವುದಿಲ್ಲ ಇದರಿಂದ ಜ್ಞಾನ ತಪ್ಪಿ ಬೀಳುವುದು ಉಸಿರಾಡುವುದಕ್ಕೆ ಕಷ್ಟವಾಗುವುದು ಪಲ್ಸ್ ನಿಂತುಹೋಗುವುದು ನಡೆಯುತ್ತದೆ. ಈ ರೀತಿ ಕಾರ್ಡಿಯಾಕ್ ಅರೆಸ್ಟ್ ಆದಾಗ ಕೆಲವು ನಿಮಿಷಗಳಲ್ಲಿ ಚಿಕಿತ್ಸೆ ಮಾಡದಿದ್ದರೆ ಆ ವ್ಯಕ್ತಿ ಸತ್ತು ಹೋಗುವ ಸಾಧ್ಯತೆ ಇರುತ್ತದೆ.

ಕಾರ್ಡಿಯಾಕ್ ಅರೆಸ್ಟ್ ಯಾವುದೇ ವಾರ್ನಿಂಗ್ ಇಲ್ಲದೆ ಕ್ಷಣಮಾತ್ರದಲ್ಲಿ ಬರುತ್ತದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೂ ಕೂಡ ಕಾರ್ಡಿಯಾಕ್ ಅರೆಸ್ಟ್ ಆಗಿರುವುದು ಎಂದು ನಾವು ಮಾಧ್ಯಮಗಳಲ್ಲಿ ಮತ್ತು ಅವರಿಗೆ ಚಿಕಿತ್ಸೆ ನೀಡಿರುವ ವೈದ್ಯರ ಬಾಯಿಂದ ಕೇಳಿದ್ದೇವೆ. ಪುನೀತ್ ರಾಜಕುಮಾರ್ ಅವರ ಆಕಸ್ಮಿಕ ಮರಣಕ್ಕೆ ಸಡನ್ ಕಾರ್ಡಿಯಾಕ್ ಅರೆಸ್ಟ್ ಕಾರಣ ಎಂದು ಗೊತ್ತಾಗುತ್ತದೆ.

ಹೃದಯಾಘಾತ ಮತ್ತು ಕಾರ್ಡಿಯಾಕ್ ಅರೆಸ್ಟ್ ನಡುವೆ ಒಂದು ಲಿಂಕ್ ಇದೆ. ಹೃದಯಾಘಾತ ಆಗಿರುವವರಿಗೆ ಸ್ವಲ್ಪ ಸಮಯದ ನಂತರ ಕಾರ್ಡಿಯಾಕ್ ಅರೆಸ್ಟ್ ಆಗುವ ಸಂಭವ ಇರುತ್ತದೆ. ಹಾಗಾಗಿ ಹೃದಯಾಘಾತ ಆಗಿರುವವರು ತುಂಬಾ ಜಾಗ್ರತೆಯಿಂದ ಇರಬೇಕು ಮದ್ಯಪಾನ ಮಾಡುವವರು ಧೂಮಪಾನ ಮಾಡುವವರು ಅಧಿಕ ರಕ್ತದ ಒತ್ತಡ ಇರುವವರು ಹೆಚ್ಚಿನ ಒತ್ತಡಕ್ಕೆ ಒಳಗಾಗುವವರು ಇವುಗಳಿಂದ ಅಥವಾ ವಂಶಪಾರಂಪರ್ಯವಾಗಿ ಬರುವುದು

ಹಾಗೂ ಹುಟ್ಟಿದಾಗಿನಿಂದ ಹೃದಯ ನಿರ್ಮಾಣ ಸರಿಯಾಗಿ ಇಲ್ಲದಿರುವುದು ಇಂತಹ ಕಾರಣಗಳಿಂದ ಕಾರ್ಡಿಯಾಕ್ ಅರೆಸ್ಟ್ ಬರುವ ಸಾಧ್ಯತೆ ಇರುತ್ತದೆ. ಸರಿಯಾದ ಜೀವನ ವಿಧಾನವನ್ನು ಅನುಸರಿಸುವುದರಿಂದ ಇವುಗಳಿಂದ ದೂರವಿರಬಹುದು ಅದಕ್ಕಾಗಿ ವ್ಯಾಯಾಮಗಳನ್ನು ಮಾಡಬೇಕು ಆರೋಗ್ಯಕರವಾದ ಅಂತಹ ಆಹಾರ ಪದಾರ್ಥಗಳನ್ನು ಸೇವಿಸಬೇಕು ಯೋಗ ಧ್ಯಾನಗಳನ್ನು ಮಾಡಬೇಕು. ಆದರೆ ಪುನೀತ್ ರಾಜಕುಮಾರ್ ಅವರು ಫಿಟ್ಟಾಗಿದ್ದರು ಅಚಾನಕ್ ಆಗಿ ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿರುವುದು ವಿಪರ್ಯಾಸ.

Leave a Reply

Your email address will not be published. Required fields are marked *