ದೇಹದ ಬೊಜ್ಜು ಕಡಿಮೆಮಾಡಲು ಅಡುಗೆ ಮನೆಯಲ್ಲಿದೆ ಬೆಸ್ಟ್ ಮನೆ ಮದ್ದು

0 2

ಆಹಾರ ಪದ್ಧತಿಗಳಲ್ಲಿನ ಬದಲಾವಣೆಯಿಂದ ಜೀವನ ಪ್ರಕ್ರಿಯೆಯಲ್ಲಿ ಬದಲಾವಣೆಯಾಗಿ ಅದರಿಂದ ಮಾನವ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ವಿವಿಧ ರೋಗಗಳು ಬರುತ್ತವೆ. ಈ ವ್ಯಾಧಿಗಳ ಪೈಕಿ ಕೊಲೆಸ್ಟ್ರಾಲ್ ಒಂದು ನಾವು ಸೇವಿಸುವ ಆಹಾರದಿಂದ ಲಿವರ್‌ನಲ್ಲಿ ಕೊಲೆಸ್ಟ್ರಾಲ್ ತಯಾರಾಗುತ್ತದೆ. ಕೊಲೆಸ್ಟ್ರಾಲ್ ಹೆಚ್ಚಾದರೂ ಕಡಿಮೆಯಾದರೂ ಸಮಸ್ಯೆ ಪ್ರಾರಂಭವಾಗುತ್ತದೆ

ರಕ್ತದಲ್ಲಿರುವ ಕೊಬ್ಬಿನ ಪದಾರ್ಥಗಳೇ ಕೊಲೆಸ್ಟ್ರಾಲ್ ಸಹಜವಾಗಿ ಯಕೃತ್ ಶರೀರದಲ್ಲಿನ ಇತರ ಕಣಗಳು ಶೇಎಪ್ಪತ್ತೈದರಷ್ಟು ಕೊಲೆಸ್ಟ್ರಾಲ್ ಉತ್ಟಾದನೆ ಮಾಡುತ್ತದೆn ನಮ್ಮ ಶರೀರದಲ್ಲಿರುವ ಪ್ರತಿ ಕಣಗಳಿಗೆ ಕೊಲೆಸ್ಟ್ರಾಲ್ ಬೇಕು ನಾವು ಈ ಲೇಖನದ ಮೂಲಕ ಕೊಲೆಸ್ಟ್ರಾಲ್ ಹೇಗೆ ಕಡಿಮೆ ಮಾಡಿಕೊಳ್ಳುವುದು ಎಂಬುದನ್ನು ತಿಳಿದುಕೊಳ್ಳೋಣ.

ಮನೆಯಲ್ಲಿ ಬಳಸುವ ಪದಾರ್ಥ ಗಳಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಬಹುದು ಅಸಮರ್ಪಕ ಜೀವನ ಅನಾರೋಗ್ಯಕರವಾದ ಆಹಾರ ಪದ್ಧತಿ ದೈಹಿಕ ಚಟುವಟಿಕೆಗಳ ಕೊರತೆ ಬೇಕಾಬಿಟ್ಟಿ ಜೀವನ ಶೈಲಿ ಇವೆಲ್ಲಾ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಲು ಕಾರಣ ಕರಿಬೇವಿನ ಸೊಪ್ಪನ್ನು ಒಗ್ಗರಣೆಗೆ ಎಲ್ಲರ ಮನೆಯಲ್ಲಿ ಬಳಸುತ್ತಾರೆ ನಾಲ್ಕೈದು ಕರಿಬೇವಿನ ಸೊಪ್ಪ ಮತ್ತುಅರ್ಧ ಚಮಚ ಜೇನು ತುಪ್ಪವನ್ನು ಸೇರಿಸಿ ಜಜ್ಜಿ ಅದನ್ನು ದಿನ ತಿನ್ನುತ್ತಾ ಬಂದರೆ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

ಅಧಿಕವಾದ ಕೊಲೆಸ್ಟ್ರಾಲ್ ಹಾರ್ಟ್ ಅಟ್ಟ್ಯಾಕ್ ಗೆ ಕಾರಣವಾಗುತ್ತದೆ .ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು ಕೊಲೆಸ್ಟ್ರಾಲ್ ಕಡಿಮೆ ಮಾಡುವ ಜೊತೆಗೆ ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ ಆಹಾರ ಸೇವನೆಗೆ ಸಹಾಯವಾಗುತ್ತದೆ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಕ್ಯಾಲ್ಸಿಯಂ ವಿಟಮಿನ್ಎ ಮತ್ತು ವಿಟಮಿನ್ ಸಿ ಇರುತ್ತದೆ . ಹೀಗೆ ಜೇನುತುಪ್ಪ ಮತ್ತು ಕರಿಬೇವಿನ ಸೊಪ್ಪು ತುಂಬಾ ಪ್ರಯೋಜನವನ್ನು ಹೊಂದಿದೆ.

ಭಾರತೀಯ ಅಡುಗೆ ಮನೆಗಳಲ್ಲಿ ಬೆಳ್ಳುಳ್ಳಿಯ ಹೊರತಾಗಿ ಯಾವ ಖಾದ್ಯವು ಕೂಡ ತಯಾರಾಗುವುದಿಲ್ಲ ಬೆಳ್ಳುಳ್ಳಿ ಅತ್ಯುತ್ತಮವಾದ ಆರೋಗ್ಯ ಸಮಸ್ಯೆಗಳಿಂದ ಪಾರು ಮಾಡುತ್ತದೆ ಬೆಳ್ಳುಳ್ಳಿಯು ಕೊಲೆಸ್ಟ್ರಾಲ್ ಮಟ್ಟವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆಯಲ್ಲದೇ ರಕ್ತದೊತ್ತಡ ಮತ್ತು ರಕ್ತದ ಉತ್ಕರ್ಷಣ ನಿರೋಧಕ ಸಾಮರ್ಥ್ಯದ ಮೇಲೆ ಸಾಕಾರಾತ್ಮಕ ಪರಿಣಾಮವನ್ನು ಬೀರುತ್ತದೆ

ಹೆಚ್ಚು ಕೊಬ್ಬಿನ ಅಂಶ ಇರುವ ಆಹಾರಗಳಿಂದ ದೂರವಿರಬೇಕು ಚೀಸ್ ಸಂಸ್ಕರಿಸಿದ ಆಹಾರಗಳು ಮೊಸರು ಕೆನೆ ಭರಿತ ಹಾಲು ತಂಪು ಪಾನೀಯಗಳು ಸಾಧ್ಯವಾದಷ್ಟು ಸಿಹಿ ತಿಂಡಿಗಳನ್ನು ತಿನ್ನುವುದನ್ನು ಬಿಡುವ ಮೂಲಕ ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಬಹುದು.ಆಯುರ್ವೇದ ಪದ್ಧತಿಯಲ್ಲಿ ದೇಹದ ಬೊಜ್ಜಿನ ಅಂಶವನ್ನು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಿಕೊಳ್ಳುವ ಅದ್ಭುತ ತಂತ್ರಗಾರಿಕೆ ಅಡಗಿದೆ ಬಹಳ ಹಿಂದಿನ ಕಾಲದಿಂದಲೂ ಜನ ಮೆಚ್ಚುಗೆ ಪಡೆದ ಔಷಧೀಯ ಪದ್ಧತಿ ಎಂದರೆ ಅದು ಆಯುರ್ವೇದವಾಗಿದೆ ಕಡಿಮೆ ಅಡ್ಡ ಪರಿಣಾಮಗಳಿಂದ ಜನರಿಗೆ ಸಹಾಯಕವಾಗಿದೆ .

Leave A Reply

Your email address will not be published.