ಪ್ರತಿದಿನ ನೀವು ಅಡುಗೆಗೆ ಬಳಸುವಂತ ಈ ಪದಾರ್ಥಗಳು ಕಲಬೆರಕೆಯಾಗುತ್ತಿವೆ ಎಚ್ಚರವಹಿಸಿ

0 8

ಪ್ರತಿಯೊಂದು ಸಾಂಬಾರು ಪದಾರ್ಥದಲ್ಲಿ ಕೂಡ ಕಲಬೆರಕೆ ಕಂಡು ಬರುತ್ತದೆ ಹಾಗೂ ಲಾಭದ ಉದ್ದೇಶಕ್ಕಾಗಿ ಕಲಬೆರಕೆ ಹೆಚ್ಚಾಗಿ ಕಂಡು ಬರುತ್ತದೆ ಎಲ್ಲದಕ್ಕಿಂತಲೂ ಆರೋಗ್ಯ ಬಹಳ ಮುಖ್ಯ ಆದರೆ ನಾವು ಅಂಗಡಿಯಿಂದ ಖರೀದಿಸಿದ ಆಹಾರವು ಶುದ್ದವಾಗಿದೆಯೇ ಎಂದು ಯೋಚಿಸಲು ಆರಂಭಿಸಿದ್ದೇವೆ ಯಾಕೆಂದರೆ ಭಾರತದಲ್ಲಿ ಜನಸಂಖ್ಯೆ ಹೆಚ್ಚಳದಿಂದಾಗಿ ಆಹಾರದ ಬೇಡಿಕೆ ಹೆಚ್ಚಾಗಿದೆ ಮತ್ತು ವ್ಯಾಪಾರಿಗಳು ಆಹಾರದಲ್ಲಿ ಕಡಿಮೆಗುಣಮಟ್ಟದ ಪದಾರ್ಥಗಳನ್ನು ಬೆರೆಸಲು ಪ್ರಾರಂಭಿಸಿದ್ದಾರೆ

ಆಹಾರದೊಂದಿಗೆ ಸೇರಿಸುವ ಕಡಿಮೆ ಗುಣಮಟ್ಟದ ಅನಪೇಕ್ಷಿತ ಪದಾರ್ಥಗಳನ್ನು ಕಲಬೆರಕೆಗಳು ಎಂದು ಕರೆಯುವರು ಕಲಬೆರಕೆ ಆಹಾರ ಸಾಮಾನ್ಯವಾಗಿ ಅಶುದ್ದ ಅಪೂರ್ಣವಾದ ಆಹಾರವಾಗಿದೆ ಆಹಾರಕಲಬೆರಕೆಯು ಆಕಸ್ಮಿಕವಾಗಿ ಅಥವಾ ಉದ್ದೇಶಪೂರ್ವಕವಾಗಿಯಾದರೂ ಆಗಬಹುದು ವ್ಯಾಪಾರಿಯ ತ್ವರಿತವಾಗಿ ಹಣಗಳಿಸಲು ಉದ್ದೇಶಪೂರ್ವಕವಾಗಿ ಕಲಬೆರಕೆ ಮಾಡುತ್ತಾರೆ ನಿಯಮ ಅಥವಾ ಕಾಯ್ದೆಗಳ ಅರಿವಿಲ್ಲದೆ ಆಹಾರೋತ್ಪಾದನಾ ಸಮಯದಲ್ಲಿ ಆಕಸ್ಮಿಕ ಕಲಬೆರಕೆ ಆಗಬಹುದು ನಾವು ಈ ಲೇಖನದ ಮೂಲಕ ಆಹಾರ ಪದಾರ್ಥಗಳ ಕಲಬೆರಕೆ ಬಗ್ಗೆ ತಿಳಿದುಕೊಳ್ಳೋಣ.

ಸಾಸಿವೆ ಕಾಳು ಎಂದರೆ ಪ್ರತಿಯೊಂದು ಪದಾರ್ಥಕ್ಕು ಬಳಸಲಾಗುತ್ತದೆ ಪ್ರತಿಯೊಬ್ಬರ ಮನೆಯಲ್ಲಿ ಸಾಸಿವೆಯನ್ನು ಬಳಸಲಾಗುತ್ತದೆ ಆರೋಗ್ಯಕ್ಕೆ ಪೂರಕವಾಗಿ ಇರುವುದರಿಂದ ಸಾಸಿವೆಯನ್ನು ಅಡಿಗೆಯಲ್ಲಿ ಬಳಸಲಾಗುತ್ತದೆ ಸಾಸಿವೆ ಕಾಳಲ್ಲು ಕಲಬೆರಕೆ ಮಾಡುತ್ತಾರೆ ಸಾಸಿವೆ ಕಾಳಿಗೆ ಧತ್ತುರಿ ಬೀಜ ವನ್ನು ಮಿಶ್ರಣ ಮಾಡುತ್ತಾರೆ ಧತ್ತುರಿ ಗಿಡ ಹೊಲಗದ್ದೆಗಳಲ್ಲಿ ಹುಟ್ಟುವ ಕಳೆ ವಿಧವಾಗಿದೆ ಧತ್ತುರಿ ಕಾಳು ನೋಡಲು ಸಾಸಿವೆ ತರ ಕಾಣಿಸುತ್ತದೆ

ಅದು ನೋಡಲು ಕಪ್ಪಗೆ ಕಾಣಿಸುತ್ತದೆ ಸ್ವಲ್ಪ ಗುಂಡಗೆ ಕಾಣಿಸುತ್ತದೆ ಈ ಕಾಳನ್ನು ಸಾಸಿವೆ ಕಾಳಿನ ಜೊತೆಗೆ ಮಿಕ್ಸ್ ಮಾಡುತ್ತಾರೆ ಇದು ನಮ್ಮ ದೇಹಕ್ಕೆ ಬಾರಿ ಹಾನಿಕಾರಕವಾಗಿದೆ ಧತ್ತುರಿ ಗಿಡವನ್ನು ಆಯುರ್ವೇದ ದಲ್ಲಿ ಬಳಸಲಾಗುತ್ತದೆ ಆದರೆ ನಿತ್ಯ ಬಳಸಿದರೆ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ ಆದರೂ ಸಹ ಲಾಭಕ್ಕಾಗಿ ಸಾಸಿವೆಯಲ್ಲಿ ಮಿಕ್ಸ್ ಮಾಡುತ್ತಾರೆ ಭೂತ ಕನ್ನಡಿ ಮೂಲಕ ಮಿಕ್ಸ್ ಆಗಿರುವುದನ್ನು ಕಾಣಬಹುದು ಅದರಲ್ಲಿ ಧತ್ತುರಿ ಕಾಳು ಒರಟಾಗಿ ಕಾಣಿಸುತ್ತದೆ ಕಲಬೆರಕೆಯ ಮೂಲಕ ಸಣ್ಣ ವಯಸ್ಸಿಗೆ ಜನರು ಸಾಯುತ್ತಿದ್ದಾರೆ .

ನಮ್ಮ ಆರೋಗ್ಯ ಹಾಳು ಮಾಡುವ ಕಣ ಕಲಬೆರಕೆ ವಸ್ತುಗಳಲ್ಲಿ ಇರುತ್ತದೆ ಜೀರಿಗೆಯಲ್ಲಿ ಕಲಬೆರಕೆ ಮಾಡುತ್ತಾರೆ ಜೀರಿಗೆ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ದೇಹದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ನಾವು ಜೀರಿಗೆಯನ್ನು ಸೇವಿಸುವ ಹವ್ಯಾಸ ರೂಢಿಯಲ್ಲಿ ಇದೆ ಹೊಟ್ಟೆ ನೋವು ಉಷ್ಣ ಹಾಗೂ ಗ್ಯಾಸ್ಟ್ರಿಕ್ ಬಾಯಲ್ಲಿ ಹುಣ್ಣು ಆದರೂ ಸಹ ಜೀರಿಗೆ ಸೇವಿಸುತ್ತೇವೆ ಪ್ರತಿಯೊಬ್ಬರ ಮನೆಯಲ್ಲೂ ಸಹ ಇರುತ್ತದೆ ಜೀರಿಗೆಗೆ ಹುಲ್ಲಿನ ಕಾಳನ್ನು ಸೇರಿಸಲಾಗುತ್ತದೆ

ನೋಡಲು ಸ್ವಲ್ಪ ಜಿರಿಗೆಗಿಂತ ಬೆಳ್ಳಗೆ ಇರುತ್ತದೆ ಆದ್ದರಿಂದ ಕಲಬೇರಕೆದಾರರು ಮಸಿಯನ್ನು ಬಳಿದು ಸ್ವಲ್ಪ ಬಣ್ಣ ಬರುವ ಹಾಗೆ ಮಾಡುತ್ತಾರೆ ಹೀಗೆ ಕಲಬೆರಕೆ ಮಾಡಿದ ಜೀರಿಗೆಯನ್ನು ತಿನ್ನುದರಿಂದ ಆರೋಗ್ಯಕ್ಕೆ ಪರಿಣಾಮ ಬೀರುತ್ತದೆ ಜೀರಿಗೆಯ ನ್ನು ಮನೆಯಲ್ಲಿ ತಂದಾಗ ಸ್ವಲ್ಪ ಜೀರಿಗೆಯನ್ನು ಕೈ ಯಿಂದ ತಿಕ್ಕಬೇಕು ಇದರಿಂದ ಸ್ವಲ್ಪ ಕೈ ಕಪ್ಪಗಾಗಿರುವುದನ್ನು ಕಂಡರೆ ಅದು ಕಲಬೆರಕೆ ಆಗಿದೆ ಎಂದು ತಿಳಿಯಬೇಕು ಹಾಗೆಯೇ ಅಂಗಡಿಯವನ ಮೇಲೆ ದೂರು ದಾಖಲಿಸಬೇಕು ಇದರಿಂದ ಆಹಾರ ಸುರಕ್ಷತಾ ನಿಗಮ ಮುಂದಿನ ಕ್ರಮವನ್ನು ತೆಗೆದುಕೊಳ್ಳುತ್ತದೆ .

ಕಾಳುಮೆಣಸಿನಲ್ಲಿಯು ಕಲಬೆರಕೆಯುಂಟಾಗುತ್ತದೆ ನಮ್ಮ ದೇಶದಲ್ಲಿ ಹೆಚ್ಚು ಬಳಸಲಾಗುತ್ತದೆ ಆಹಾರ ಪದಾರ್ಥ ಹಾಗೂ ಆಯುರ್ವೇದ ಔಷಧ ಗಳಲ್ಲಿ ಬಳಸಲಾಗುತ್ತದೆ ಅತಿ ಹೆಚ್ಚು ಕಲಬೆರಕೆ ಆಗುವ ಪದಾರ್ಥ ಹಾಗೂ ತುಂಬಾ ದುಬಾರಿಯ ಪದಾರ್ಥವಾಗಿದೆ .ನೈಸರ್ಗಿಕವಾಗಿ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ ಕೋರೋನ ಬಂದ ಮೇಲೆ ಕಾಳುಮೆಣಸಿನ ಸಾಕಷ್ಟು ಬೇಡಿಕೆ ಬಂದಿದೆ ಕಫ ಶೀತ ವನ್ನು ಹೋಗಲಾಡಿಸುವ ಗುಣ ಕಾಳುಮೆಣಸಿನ ಇರುತ್ತದೆ ಆಯುರ್ವೇದದಲ್ಲಿ ಉತ್ಕೃಷ್ಟ ಸ್ಥಾನವನ್ನು ನೀಡಲಾಗುತ್ತದೆ

ಕಾಳು ಮೆಣಸಿಗೆ ಪಪ್ಪಾಯ ಬೀಜವನ್ನು ಮಿಶ್ರಣ ಮಾಡುತ್ತಾರೆ ಒಂದು ಕೇಜಿ ಗೆ ಆರುನೂರು ರೂಪಾಯಿಯಷ್ಟು ಬೆಲೆ ಇರುತ್ತದೆ ಅತಿಯಾದರೆ ಅಮೃತ ಕೂಡ ವಿಷವಾಗಿತ್ತದೆ ಹೀಗಿರುವಾಗ ಎಲ್ಲ ಪದಾರ್ಥಗಳಿಗೆ ಕಲಬೆರಕೆ ಮಾಡುತ್ತಾರೆ ಪಪ್ಪಾಯ ಬೀಜವನ್ನು ಮಿಶ್ರಣ ಮಾಡಿರುವ ಕಾಳುಮೆಣಸನ್ನು ತಿಂದರೆ ಅಪಾಯ ತಪಿದಲ್ಲ ಪ್ಯಾರಾಸಿನ ಆಯ್ಲ ಲೇಪನ ಮಾಡುತ್ತಾರೆ ಇದರಿಂದ ಕಾಳುಮೆಣಸಿಗೆ ಯಾವುದೇ ರೀತಿಯ ಹುಳಗಳು ಬರುವುದಿಲ್ಲ ಪ್ಯಾರಾಸಿನ್ ಆಯ್ಲ್ ನಮ್ಮ ದೇಹಕ್ಕೆ ಹಾನಿಕಾರಕ ಭೂತ ಕನ್ನಡಿ ಮೂಲಕ ಪಪ್ಪಾಯ ಬೀಜ ಮಿಶ್ರಣ ಮಾಡಿದ್ದರೆ ಕಾಳುಮೆಣಸಿಗಿಂತ ಸ್ವಲ್ಪ ಒರಟಾಗಿ ಇರುತ್ತದೆ ಹಾಗೆಯೇ ಒಂದು ಗ್ಲಾಸ್ ಗೆ ನೀರನ್ನು ಸೇರಿಸಿ ಅದಕ್ಕೆ ಕಾಳುಮೆಣನ್ನು ಸೇರಿಸಬೇಕು ಇದರಿಂದ ಕಾಳುಮೆಣಸು ಕೆಳಗೆ ಹೋಗುತ್ತದೆ ಹಾಗೂ ಪಪ್ಪಾಯ ಬೀಜ ಮೇಲೆ ತೇಲುತ್ತದೆ

ಇಂಗು ನಮ್ಮ ಅಡುಗೆ ಯಲ್ಲಿ ಬಳಸಲಾಗುತ್ತದೆ ಅದರಲ್ಲಿ ಹೊಟ್ಟೆ ಉಬ್ಬರ ಮತ್ತು ಗ್ಲಾಸ್ ಸಮಸ್ಯೆಗೆ ಪರಿಹಾರ ನೀಡುತ್ತದೆ ಗ್ಲಾಸ್ ಜಾಸ್ತಿಯಾದಾಗ ಸಣ್ಣ ಇಂಗನ್ನು ಹಾಕಿ ಮಜ್ಜಿಗೆ ಮತ್ತು ನೀರಿನೊಂದಿಗೆ ಹಾಕಿ ಕುಡಿದರೆ ಗ್ಲಾಸ್ ನಿವಾರಣೆಯಾಗುತ್ತದೆ ಇಂಗು ಎರಡು ರೀತಿಯಲ್ಲಿ ಸಿಗುತ್ತದೆ ಒಂದು ಗಮ್ ತರ ಇರುತ್ತದೆ ಇನ್ನೊಂದು ಪೌಡರ್ ತರ ಇರುತ್ತದೆ ಪೌಡರ್ ತರ ಇರುವ ಇಂಗಿನಲ್ಲಿ ಹೆಚ್ಚು ಕಲಬೆರಕೆಯುಂತಾಗುತ್ತದೆ ಜಿಪ್ಸಮ್ ಹಾಗೂ ಸ್ಯಾಂಡ್ ಪೌಡರ್ ಅನ್ನು ಮಿಕ್ಸ್ ಮಾಡುತ್ತಾರೆ ಹಾಗೆಯೇ ಕಲ್ಲಿನ ಪೌಡರ್ ಸಹ ಮಿಕ್ಸ್ ಮಾಡುತ್ತಾರೆ

ಸುಮಾರು ದುಬಾರಿಯಾದ ಪದಾರ್ಥವಾಗಿದೆ ಇದರಿಂದ ನಮ್ಮ ದೇಹಕ್ಕೆ ತುಂಬಾ ಅಪಾಯಕಾರಿಯಾಗಿದೆ ನಿರಂತರವಾಗಿ ಸೇವಿಸುತ್ತ ಹೋದರೆ ಬೇರೆ ಬೇರೆ ರೀತಿಯಲ್ಲಿ ದುಷ್ಪರಿಣಾಮ ಬೀರುತ್ತದೆ ಕಿಡ್ನಿ ಯ ಮೇಲೆ ತೊಂದರೆ ಬೀಳುತ್ತದೆ ನಾವು ಗೊತ್ತಿಲ್ಲದೆ ವಿಷ ಸೇವನೆ ಮಾಡುತ್ತೇವೆ ಆಯೋಡಿನ ದ್ರಾವಣವನ್ನು ಇಂಗಿನೊಂದಿಗೆ ಸೇರಿಸಿಬೇಕು ಆ ದ್ರಾವಣವು ಬಣ್ಣ ಬಿಡಲಿಲ್ಲ ಎಂದರೆ ಇಂಗು ಸರಿಯಿದೆ ಒಂದು ವೇಳೆ ನೀಲಿ ಬಣ್ಣಕ್ಕೆ ತಿರುಗಿದರೆ ಇಂಗು ಕಲಬೇರೆಗೆ ಆಗಿದೆ ಎಂದು ತಿಳಿಯಬಹುದು .

ಒಂದು ಚಿಟಿಕೆ ಇಂಗನ್ನು ಚಮಚಕ್ಕೆ ಹಾಕಬೇಕು ನಂತರ ಬೆಂಕಿ ಹಚ್ಚಬೇಕು ಆ ಬೆಂಕಿ ಕರ್ಪೂರದ ರೀತಿ ಬಂದರೆ ಸರಿಯಾದ ಇಂದು ಎಂದು ತಿಳಿಯಬಹುದು ಕಲಬೆರಕೆ ಆದರೆ ಕರ್ಪೂರದ ಹಾಗೆ ಉರಿಯುದಿಲ್ಲ ಹಾಗೆಯೇ ಚಕ್ಕೆಯಲ್ಲು ಕಲಬೆರಕೆ ಆಗುತ್ತದೆ ಚಕ್ಕೆಯನ್ನು ಗರಂ ಮಸಾಲೆಗೆ ಬಳಸುವ ಸಾಂಬಾರು ಪದಾರ್ಥ ಲಾಭದ ಉದ್ದೇಶದಿಂದ ಪ್ರತಿಯೊಂದು ವಸ್ತುವಿನಲ್ಲಿ ಕಲಬೆರಕೆ ಮಾಡುತ್ತಾರೆ ಅಸಲಿ ಚಕ್ಕೆಯಲ್ಲಿ ಒಂದು ಥರದ ಸುಗಂಧ ಇರುತ್ತದೆ ನಕಲಿ ಚಕ್ಕೇಯಲ್ಲಿ ದಪ್ಪ ಇರುತ್ತದೆ ಪದರಗಳು ಕಡಿಮೆ ಇರುತ್ತದೆ ಇದರಿಂದ ನಮ್ಮ ಲಿವರ್ ಗೆ ತುಂಬಾ ತೊಂದರೆಯಾಗುತ್ತದೆ ಹಳದಿ ಪುಡಿಯಲ್ಲಿ ಕೂಡ ಕಲಬೆರಕೆ ಇರುತ್ತದೆ

ನಾವು ಹಳದಿ ಪುಡಿಯಲ್ಲಿ ಗಾಯಕ್ಕೆ ಮತ್ತು ದಿನ ಸಾಂಬಾರಿಗೆ ಹಾಕುತ್ತಾರೆ ಕಳೆ ಗಿಡಗಳ ಬೇರಿಗೆ ಹಳದಿ ಪೌಡರ್ ಅನ್ನು ಹಚ್ಚಿ ಕಳಬೇರಿಕೆಯನ್ನು ಮಾಡುತ್ತಾರೆ ಒಂದು ಗ್ಲಾಸಿಗೆ ನೀರನ್ನು ಹಾಕಿ ಅರಿಶಿಣ ಕೊಂಬನ್ನು ಹಾಕಬೇಕು ಹಾಗೆಯೇ ಹೈಡ್ರೋಕ್ಲೋರಿಕ್ ಆಸಿಡ್ಅನ್ನು ಹಾಕಿದಾಗ ಒಂದು ಪಿಂಕ್ ಕಲರ್ ಗೆ ತಿರುಗಿದರೆ ಅದು ಕಲಬೆರಕೆ ಅರಿಶಿಣ ಪುಡಿ ಎಂದು ತಿಳಿಯಬಹುದು ಹೀಗೆ ಪ್ರತಿಯೊಂದು ಪದಾರ್ಥದಲ್ಲಿ ಕಲಬೆರಕೆ ಕಂಡು ಬರುತ್ತದೆ ಹೀಗೆ ಕಲಬೆರಕೆ ಮಾಡುವುದರಿಂದ ದಿನ ದಿನ ವಿಷ ಸೇವನೆ ಮಾಡಿದಂತಾಗಿದೆ.

Leave A Reply

Your email address will not be published.