Health: ಮೈದಾ, ಸಕ್ಕರೆ, ಉಪ್ಪು ಇವುಗಳನ್ನು ಊಟದಲ್ಲಿ ಹೆಚ್ಚಾಗಿ ಸೇವಿಸಿದ್ರೆ ಏನಾಗುತ್ತಾ? ಮೊದಲು ತಿಳಿದುಕೊಳ್ಳಿ

0 31

Health Tips In Kannada: ಮೈದಾ, ಸಕ್ಕರೆ, ಉಪ್ಪು ಇವು ಬಿಳಿ ವಿಷಗಳು. ಇವುಗಳನ್ನು ಸೇವಿಸದರೆ ನರಕಕ್ಕೆ ಒಂದು ಹೆಜ್ಜೆ ಮುಂದೆ. ಬಾಯಿಗೆ ತುಂಬಾ ರುಚಿ ನೀಡುವ ಮೃದುವಾಗಿರುವ ಹಾಗೂ ತಯಾರಿಕೆಗೆ ಸುಲಭವಾದ ಮೈದಾ ಎಂಬ ಬಿಳಿ ಹಿಟ್ಟು ಇಲ್ಲದೆ ಆಹಾರ ತಯಾರಿಕೆಯೇ ಅಪೂರ್ಣ ಎನ್ನುವಂತಿದೆ ಸದ್ಯದ ಸ್ತಿತಿ, ಮತ್ತು ಸಕ್ಕರೆ, ಉಪ್ಪು ಇಲ್ಲದೆ ದಿನ ನಿತ್ಯದ ಅಡುಗೆಯಲ್ಲಿ ರುಚಿಯೇ ಇಲ್ಲ ಅನ್ನುವಷ್ಟು ಎಲ್ಲರೂ ಅವಲಂಬಿತಾರಾಗಿದ್ದೇವೆ. ಸಕ್ಕರೆ ಉಪ್ಪು ಇಲ್ಲದೆ ನಮ್ಮ ಅಡುಗೆ ನೆಡೆಯುವುದೇ ಇಲ್ಲ ಆದರೆ ಯಾವುದನ್ನೂ ಹೆಚ್ಚಿಸುವುದು ಒಳ್ಳೆಯದಲ್ಲ ಈ ಮೈದಾ ಹಿಟ್ಟು, ಸಕ್ಕರೆ ಮತ್ತು ಉಪ್ಪು ನಮ್ಮ ದೇಹಕ್ಕೆ ಎಷ್ಟು ಮುಖ್ಯ ಮತ್ತು ಎಷ್ಟು ಹಾನಿಕರ ಎಂಬುದು ತಿಳಿಯೋಣ.

ಸಕ್ಕರೆ ಹಾಕಿ ಹಾಲು,ಟೀ, ಕಾಫಿ, ಸ್ವೀಟ್ ತಿನ್ನುವುದು ಎಲ್ಲರಿಗೂ ಬಹು ಇಷ್ಟ. ಆದರೆ ಸಿಹಿ ಅಂದರೆ ಸಕ್ಕರೆ ಇಷ್ಟವೆಂದು ಅತಿಯಾಗಿ ತಿಂದರೆ ಹೆಚ್ಚು ಸೇವನೆ ಮಾಡಿದರೆ ನಿಮ್ಮ ದೇಹದಲ್ಲಿನ ಪೋಷಕಾಂಶಗಳ ಕೊರತೆ ಕಾಡುವುದಲ್ಲದೆ ಮತ್ತು ಬೊಜ್ಜು ಬೆಳೆಯಬಹುದು, ಇದರಿಂದ ಮಧುಮೇಹವೊಂದೇ ಅಂದರೆ ಸಕ್ಕರೆ ಖಾಯಿಲೆ ಮಾತ್ರವಲ್ಲ ಬೇರೆ ಅಪಾಯಗಳು ಕೂಡ ಹೆಚ್ಚಾಗುತ್ತವೆ.

ಉಪ್ಪು- ಆರೋಗ್ಯ (Health) ಜೀವನ ನೆಡೆಸಬೇಕೆಂದರೆ ಮನುಷ್ಯನ ದೇಹದಲ್ಲಿ ದಿನಕ್ಕೆ ಸ್ವಲ್ಪ ಅಂಶವಾದರೂ ಉಪ್ಪು ಬೇಕೇ ಬೇಕು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಸೇವಿಸದರೆ ಆರೋಗ್ಯದಲ್ಲಿ ಏರುಪೇರಾಗಬಹುದು ಅಲ್ಲದೆ ಕಿಡ್ನಿ ಸಮಸ್ಯೆ, ಹೃದಯ ಸಂಭಂದಿ ಖಾಯಿಲೆ ಇನ್ನೂ ಮುಂತಾದ ಸಮಸ್ಯೆಗಳು ಕಾಣಬಹುದು.         
   
ಉಪ್ಪು, ಸಕ್ಕರೆ, ಮೈದಾ ನೋಡಲು ಬಿಳಿಯಾಗಿದ್ದರೂ ಬಳಸಲು ವಿಷವಿದ್ದಂತೆ. ಮೈದಾ ಮತ್ತು ಸಕ್ಕರೆ ಅತಿಯಾಗಿ ಹೆಚ್ಚಾಗಿ ಬೇಕರಿಯಲ್ಲಿ ಬಳುಸತ್ತಾರೇ, ಮಕ್ಕಳು ಕೂಡ ಬಹು ಬೇಗ ಬೇಕರಿ ತಿಂಡಿಯನ್ನು ಇಷ್ಟ ಪಟ್ಟು ತಿನ್ನುತ್ತಾರೆ ಇದರಿಂದ ಮಕ್ಕಳಲ್ಲಿ ತೂಕ ಹೆಚ್ಚಾಗುತ್ತದೆ ಹಾಗೂ ಬಿಳಿ ಕೂದಲು ಕಾಣಸಿಗುತ್ತವೆ, ಕಿಡ್ನಿ ಸಮಸ್ಯೆ, ಮಾನಸಿಕ ಸಮಸ್ಯೆ, ಬಿಪಿ ಸಮಸ್ಯೆ, ಕಣ್ಣಿನ ಸಮಸ್ಯೆ ಹೆಚ್ಚಾಗುತ್ತವೆ. 
             
ಅಡುಗೆಯಲ್ಲಿ  ಸಕ್ಕರೆ ಬದಲು ಬೆಲ್ಲ ಬಳಸಿ, ಮೈದಾ ಹಿಟ್ಟಿನ ಬದಲು ಗೋಧಿ ಹಿಟ್ಟು ಬಳಸಿ ಹಾಗೂ ಉಪ್ಪಿನ ಬದಲು ಸೈಂದವ ಲವಣ ಬಳಸಿ. ಉಪ್ಪು ಸಕ್ಕರೆ ಮೈದಾ ಹಾಕಿ ಮಾಡಿರುವಂತಹ ಹೋಟೆಲ್ ಅಥವಾ ಬೇಕರಿ ಫುಡ್ಗಳನ್ನು ಸೇವನೆ ಮಾಡುವುದನ್ನು ಬಿಡಿ. ಈ ಮೂರು ಪದಾರ್ಥಗಳನ್ನು ಅಡುಗೆಯಲ್ಲಿ ಸೇವಿಸುವುದರಿಂದ ನಮ್ಮ ಜೀರ್ಣಂಗ ಸಮಸ್ಯೆಯಾಗುತ್ತದೆ. ಇದನ್ನೂ ಓದಿ..Health Tips: ರಾತ್ರಿ ಸಮಯದಲ್ಲಿ ಅತಿ ಹೆಚ್ಚು ಸಿಹಿ ತಿಂದರೆ ಏನೇನಾಗುತ್ತೆ ಗೊತ್ತಾ? ನಿಮಗಿದು ಗೊತ್ತಿರಲಿ

Leave A Reply

Your email address will not be published.