Ultimate magazine theme for WordPress.

Health tips: ರಾತ್ರಿ ಸಮಯದಲ್ಲಿ ಅತಿ ಹೆಚ್ಚು ಸಿಹಿ ತಿಂದರೆ ಏನೇನಾಗುತ್ತೆ ಗೊತ್ತಾ? ನಿಮಗಿದು ಗೊತ್ತಿರಲಿ

0 101

Health tips Kannada: ನಿದ್ರೆಯ ಸಮಯದಲ್ಲಿ ಮಾತ್ರ ದೇಹವು ತನ್ನನ್ನು ತಾನೇ ರಿಪೇರಿ ಮಾಡಿ ಕೊಲ್ಲುತ್ತದೆ.
ರಾತ್ರಿ ಸಮಯದಲ್ಲಿ ಸಿಹಿ ತಿನಿಸುಗಳನ್ನು ತಿನ್ನುವುದರಿಂದ ದೇಹಕ್ಕೆ ತೊಂದರೆ ಉಂಟಾಗುತ್ತದೆ. ಏಕೆಂದರೆ ಅದು ನಿಮ್ಮ ನಿದ್ರೆಗೆ ಅಡ್ಡಿ ಮಾಡುತ್ತದೆ. ನಿಮ್ಮ ತೂಕವನ್ನು ದುಪ್ಪಟ್ಟು ಮಾಡುತ್ತದೆ ಮತ್ತು ಸಕ್ಕರೆ ಖಾಯಿಲೆ ಬರುವ ಸಾಧ್ಯತೆ ಇರುತ್ತದೆ.

(Health tips) ರಾತ್ರಿ ಸಿಹಿ ತಿಂಡಿ ತಿನಿಸುಗಳನ್ನು ತಿನ್ನುವುದು ತುಂಬಾ ಅಪಾಯಕಾರಿ. ರಾತ್ರಿಯ ಊಟವು ಆರೋಗ್ಯವಾಗಿರಲು ಪೌಷ್ಟಿಕಾಂಶ ಇರುವಂತ ಪದಾರ್ಥಗಳಿಂದ ಕೂಡಿರಬೇಕು. ರಾತ್ರಿ ಸಿಹಿ ತಿನ್ನುವುದರಿಂದ ದೇಹದಲ್ಲಿ ಇನ್ಸೂಲಿನ ಪ್ರತಿರೋಧವನ್ನು ಉಂಟು ಮಾಡುತ್ತದೆ ಇದರಿಂದ ದೇಹದಲ್ಲಿ ತೂಕ ಹೆಚ್ಚಾಗುತ್ತದೆ.ರಾತ್ರಿಯಲ್ಲಿ ಹಣ್ಣುಗಳು ತಿನ್ನುವುದು ಹಾನಿಕಾರಕ. ರಾತ್ರಿ ಹೊತ್ತು ಹಣ್ಣು ತಿಂದರೆ ಅವು ಸಿಹಿ ತಿಂಡಿಗೆ ಸಮವಾಗುತ್ತವೆ.

ಪ್ರತಿದಿನ ಒಂದೊಂದು ಏಲಕ್ಕಿ ತಿನ್ನುವುದರಿಂದ ದೇಹವು ತಂಪಿರುತ್ತದೆ ಮತ್ತು ಬಾಯಿಯ ದುರ್ವಾಸನೆ ತಡೆಯಲು ಸಹಾಯ ಮಾಡುತ್ತದೆ ಮತ್ತು ಚಯಾಪಚಯವನ್ನು ಸುಧಾರಿಸುವ ಮೂಲಕ ತೂಕ ಇಳಿಸಲು ಸಹಾಯ ಮಾಡುತ್ತದೆ. ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಬಿಟ್ರೂಟ್ ಜ್ಯೂಸ್ ಅನ್ನು ಕುಡಿಯಿರಿ. ಇದರಲ್ಲಿ ಫೈಬರ್ ಅಂಶ ಜಾಸ್ತಿ ಇದೆ ಹಾಗೆ ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ ಮತ್ತು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯವನ್ನ ಉತ್ತೇಜಸುತ್ತದೆ.

ಸಕ್ಕರೆಯ ಬದಲು ಬೆಲ್ಲವನ್ನು ಬಳಸಿದರೆ ತುಂಬಾ ಒಳ್ಳೆಯದು. ಬೆಲ್ಲದಲ್ಲಿ ನಿಮಗೆ ಮೆಗ್ನಿಸಿಯಂ ಮತ್ತು ಪೊಟ್ಯಾಶಿಯಂ ಸಿಗುತ್ತದೆ ಹಾಗೂ ಕಬ್ಬಿಣ ಅಂಶ ಕೂಡ ದೊರೆಯುತ್ತದೆ.ತಾಮ್ರದ ಪತ್ರೆಯಲ್ಲಿರುವ ನೀರನ್ನು ಸೇವಿಸುವುದು ತುಂಬಾ ಒಳ್ಳೆಯದು, ನೀರು ಶೇಖರಣೆಗೆ ಮತ್ತು ನೀರು ಕುಡಿಯಲು ತಾಮ್ರವನ್ನು ಉಪಯೋಗಿಸಿ ಇದರಿಂದ ಹೃದಯವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬಹುದು ಮತ್ತು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಮ್ಮಿ ಮಾಡುತ್ತದೆ. ಜೀರ್ಣ ಕ್ರಿಯೆ ಸರಿಯಾಗಿ ಆಗುತ್ತದೆ.

Leave A Reply

Your email address will not be published.