ಊಟ ಮಾಡಿದ ತಕ್ಷಣ ವ್ಯಾಯಾಮ ಮಾಡಿದ್ರೆ ಏನಾಗುತ್ತೆ ಗೊತ್ತೇ

0 0

ನಮ್ಮ ಸುತ್ತಮುತ್ತ ಕೆಲವು ಇಂಟ್ರೆಸ್ಟಿಂಗ್ ವಿಷಯಗಳು ನಡೆಯುತ್ತದೆ, ಅವುಗಳ ಬಗ್ಗೆ ತಿಳಿದಾಗ ಆಶ್ಚರ್ಯವಾಗುತ್ತದೆ. ಉದಾಹರಣೆಗೆ ಊಟ ಮಾಡಿದ ತಕ್ಷಣ ವ್ಯಾಯಾಮ ಮಾಡಬಹುದೆ, ವೇಸ್ಟಾದ ಮಾಸ್ಕ್, ಪಿಪಿಇ ಕಿಟ್ ಗಳನ್ನು ರಿಸೈಕಲ್ ಮಾಡಬಹುದೆ ಹೀಗೆ ಇನ್ನಿತರ ಹಲವು ವಿಷಯಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಕೆಲವರು ಊಟಾದ ತಕ್ಷಣ ವ್ಯಾಯಾಮ ಮಾಡಿದರೆ ತಿಂದಿದ್ದು ಸರಿಯಾಗಿ ಜೀರ್ಣವಾಗುತ್ತದೆ ಎಂದು ಹೇಳುತ್ತಾರೆ ಆದರೆ ತಿಂದ ತಕ್ಷಣ ವ್ಯಾಯಾಮ ಮಾಡುವುದರಿಂದ ಸರಿಯಾಗಿ ಫಲಿತಾಂಶ ಸಿಗುವುದಿಲ್ಲ ಎಂದು ಸಂಶೋಧನೆಯ ಮೂಲಕ ತಿಳಿದುಬಂದಿದೆ. ತಿಂದ ತಕ್ಷಣ ವ್ಯಾಯಾಮ ಮಾಡಬಾರದು, ಊಟದ ನಂತರ ಒಂದರಿಂದ ಒಂದುವರೆ ಗಂಟೆಯ ವಿರಾಮದ ನಂತರ ವ್ಯಾಯಾಮ ಮಾಡಬಹುದು. ತಿಂದ ತಕ್ಷಣ ನಮ್ಮ ದೇಹದಲ್ಲಿ ರಕ್ತಸಂಚಾರ ಹೊಟ್ಟೆಯ ಕಡೆ ಇರುತ್ತದೆ, ವ್ಯಾಯಾಮ ಮಾಡುವಾಗ ನಾವು ಯಾವ ಭಾಗದಲ್ಲಿ ವ್ಯಾಯಾಮ ಮಾಡುತ್ತೇವೆ ಅದರ ಕಡೆ ರಕ್ತಸಂಚಾರ ಹೆಚ್ಚಾಗುತ್ತದೆ. ಆದ್ದರಿಂದ ತಿಂದ ತಕ್ಷಣ ವ್ಯಾಯಾಮ ಮಾಡಿದರೆ ಸರಿಯಾಗಿ ಜೀರ್ಣವಾಗುವುದಿಲ್ಲ. ರೋಗವನ್ನು ಪತ್ತೆ ಹಚ್ಚಬೇಕಾದರೆ ಮನುಷ್ಯನ ದೇಹದ ಅಂಗಗಳು ಹೇಗೆ ಹುಟ್ಟಿಕೊಳ್ಳುತ್ತವೆ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು.

ಸಾಮಾನ್ಯವಾಗಿ ಇಂತಹ ಪ್ರಯೋಗಗಳನ್ನು ಪ್ರಾಣಿಗಳ ಮೇಲೆ ಮಾಡಲಾಗುತ್ತದೆ ಆದರೆ ಇದು ಒಮ್ಮೊಮ್ಮೆ ಸರಿಯಾಗಿ ಫಲಿತಾಂಶ ಕೊಡುವುದಿಲ್ಲ. ಝೀಬ್ರಾ ಫಿಷ್ ಎಂಬ ಮೀನು ಮನುಷ್ಯನ ದೇಹದಲ್ಲಿ ಇರುವಂತಹ ಭಾಗಗಳನ್ನು ಹೊಂದಿದೆ. ಈ ಮೀನಿನ ಮೇಲೆ ಸಂಶೋಧನೆ ನಡೆಸಿದಾಗ ಮೀನಿಗೆ ರೋಗ ಬಂದರೆ ಯಾವ ರೀತಿಯ ಬದಲಾವಣೆ ಆಗುತ್ತದೆ ಎಂದು ತಿಳಿಯುತ್ತದೆ. ಈ ಮೀನಿಗೆ ಮೂಡ್ ಕೂಡ ಇದೆ, ಇದರ ಮೂಡ್ ಚೆನ್ನಾಗಿಲ್ಲ ಅಂದರೆ ಅದು ಒಂದೆ ಕಡೆ ಇರುತ್ತದೆ. ಈ ಮೀನು ಬುದ್ಧಿವಂತ ಮೀನಾಗಿದೆ, ಗಂಡು-ಹೆಣ್ಣು ಮೀನು ಪಕ್ಕದಲ್ಲಿದ್ದು ಮೊಟ್ಟೆ ಇಡುತ್ತದೆ. ಗಂಡು ಮೀನಿನಲ್ಲಿ ಬದಲಾವಣೆ ಕಂಡುಬಂದರೆ ಹೆಣ್ಣು ಮೀನು ಅದಕ್ಕೆ ರೋಗವಿದೆ ಎಂದು ಪತ್ತೆ ಹಚ್ಚಿ ಮೊಟ್ಟೆ ಇಡಲು ಅದು ಸರಿಯಾದ ಮೀನು ಅಲ್ಲ ಎಂದು ಹೆಣ್ಣು ಮೀನು ನಿರ್ಧರಿಸುತ್ತದೆ. ಹೆಣ್ಣು ಮೀನಿಗೆ ಗಂಡು ಮೀನಿನ ಮೇಲೆ ಅನುಮಾನವಿದ್ದರೆ ಅದನ್ನು ಹತ್ತಿರ ಕೂಡ ಸೇರಿಸುವುದಿಲ್ಲ.

ಕೊರೋನ ವೈರಸ್ ಬಂದಾಗಿನಿಂದ ನಾವು ಬಳಸಿದ ಮಾಸ್ಕ್, ಪಿಪಿಇ ಕಿಟ್ ಗಳನ್ನು ಟನ್ ಗಟ್ಟಲೆ ಬಿಸಾಡಲಾಗಿದೆ. ಅದನ್ನು ಸರಿಯಾದ ರೀತಿಯಲ್ಲಿ ಹ್ಯಾಂಡಲ್ ಮಾಡದಿದ್ದರೆ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಈ ಸಮಸ್ಯೆಗೆ ದಿನೇಶ್ ದೇಸಾಯಿ ಅವರು ಉತ್ತಮ ಪರಿಹಾರವನ್ನು ಕಂಡಿಹಿಡಿದಿದ್ದಾರೆ. ವೇಸ್ಟ್ ಮಾಸ್ಕ್, ಪಿಪಿಇ ಕಿಟ್ ಹೀಗೆ 57 ರೀತಿಯ ವೆಸ್ಟ್ ಗಳನ್ನು ಶೇಖರಿಸಿ ಅವುಗಳಿಂದ ಇಟ್ಟಿಗೆ, 150 ರೀತಿಯ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಇವರನ್ನು ದ ರಿಸೈಕಲ್ ಮ್ಯಾನ್ ಆಫ್ ದಿ ಇಂಡಿಯಾ ಎಂದು ಕರೆಯುತ್ತಾರೆ. ನಾವು ಹೈಸ್ಪೀಡ್ ಇಂಟರ್ನೆಟ್ ಬಳಸಲು ಕಾರಣ ಫೈಬರ್ ಆಪ್ಟಿಕಲ್ ಕೇಬಲ್. ಗೂಗಲ್ ನಲ್ಲಿ ಈ ಕೇಬಲ್ ಅನ್ನು ಕಂಡುಹಿಡಿದವರು ಯಾರು ಎಂದು ಸರ್ಚ್ ಮಾಡಿದರೆ ಚೀನಾದ ಸೈಂಟಿಸ್ಟ್ ಒಬ್ಬರ ಹೆಸರು ಬರುತ್ತದೆ, ಬಹಳಷ್ಟು ಜನರು ಇವರೆ ಕಂಡುಹಿಡಿದಿದ್ದು ಎಂದು ಅಂದುಕೊಳ್ಳುತ್ತಾರೆ ಆದರೆ ಕೆಳಗಡೆ ನರೇಂದ್ರ ಸಿಂಗ್ ಕಪಾನಿ ಎಂಬ ಹೆಸರು ಕಾಣಿಸುತ್ತದೆ.

ಇವರು ನಮ್ಮ ದೇಶದವರು ಇವರು 1956 ರಲ್ಲಿ ಫೈಬರ್ ಆಪ್ಟಿಕಲ್ ಕೇಬಲ್ ಅನ್ನು ಕಂಡುಹಿಡಿದರು. ಮೊದಲು ಇದನ್ನು ಆಸ್ಪತ್ರೆಗಳಲ್ಲಿ ಮಾತ್ರ ಬಳಸುತ್ತಿದ್ದರು. ನಂತರ ಚೀನಾದ ಕಾವ್ ಎಂಬ ಸೈಂಟಿಸ್ಟ್ ಇದನ್ನು ಇಂಟರ್ನೆಟ್ ಗಳಲ್ಲಿ ಬಳಸಬಹುದು ಎಂದು ಹೇಳುತ್ತಾರೆ ಅದಕ್ಕಾಗಿ ಅವರಿಗೆ ನೊಬೆಲ್ ಪ್ರಶಸ್ತಿ ಲಭಿಸುತ್ತದೆ ಆದರೆ ಇದನ್ನು ಕಂಡುಹಿಡಿದವರು ನಮ್ಮ ದೇಶದವರು. ಇತ್ತೀಚಿಗೆ ನಮ್ಮ ಸರ್ಕಾರ ಇವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ. ಮಲೇರಿಯಾ ರೋಗದಿಂದ ಬಹಳಷ್ಟು ಜನರು ಸಾವಿಗೀಡಾಗಿದ್ದಾರೆ ಇದಕ್ಕೆ ರೋನಾಲ್ಡ್ ರೋಸ್ ಎಂಬುವವರು ಔಷಧಿಯನ್ನು ಕಂಡು ಹಿಡಿದರು. ನಂತರ ಇವರಿಗೆ ನೊಬೆಲ್ ಪುರಸ್ಕಾರ ದೊರೆಯಿತು. ನಂತರ ಕಾಲಾ ಅಜಾರ್ ಎಂಬ ಎರಡನೇ ಅತಿ ದೊಡ್ಡ ಖಾಯಿಲೆ ಎದುರಾಯಿತು.

ಉಪೇಂದ್ರ ನಾಥ್ ಬ್ರಹ್ಮಚಾರಿ ಎಂಬ ಡಾಕ್ಟರ್ ಹಾಗೂ ಸೈಂಟಿಸ್ಟ್ ಅವರು ಔಷಧಿಯನ್ನು ಕಂಡು ಹಿಡಿಯುತ್ತಾರೆ. ಇವರ ಸಾಧನೆಗೆ ಎರಡು ಬಾರಿ ನೊಬೆಲ್ ಪ್ರಶಸ್ತಿಗೆ ನಾಮಿನೇಟ್ ಆಗುತ್ತಾರೆ ಆದರೆ ಪ್ರಶಸ್ತಿ ಸಿಗುವುದಿಲ್ಲ. ಮಲೇರಿಯಾ ರೋಗಕ್ಕೆ ಔಷಧಿ ಕಂಡುಹಿಡಿದ ರೋನಾಲ್ಡ್ ರೋಸ್ ಅವರು ಇಡಿ ಪ್ರಪಂಚಕ್ಕೆ ಗೊತ್ತಾಗುತ್ತಾರೆ. ಆದರೆ ಕಾಲಾ ಅಜಾರ್ ಎಂಬ ರೋಗಕ್ಕೆ ಔಷಧಿ ಕಂಡುಹಿಡಿದವರು ನಮ್ಮ ದೇಶದ ಉಪೇಂದ್ರ ನಾಥ್, ಅವರ ಬಗ್ಗೆ ನಮ್ಮ ದೇಶದವರಿಗೆ ಗೊತ್ತಿಲ್ಲ. ಪೂಮಾ ಎಂಬ ಕಂಪನಿಯ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿದೆ. ಈ ಕಂಪನಿ ತನ್ನ ಬ್ರಾಂಡ್ ಪ್ರಮೋಟ್ ಮಾಡಲು ಫುಟ್ಬಾಲ್ ವರ್ಲ್ಡ್ ಕಪ್ ಫೈನಲ್ ಮ್ಯಾಚ್ ನಡೆಯುವ ಮೊದಲು ಬ್ರೆಜಿಲ್ ಗೆ ಸೇರಿದ ಫೇಮಸ್ ಫುಟ್ಬಾಲ್ ಪ್ಲೇಯರ್ ಪೀಲೆ ಅವರಿಗೆ ಹಣ ನೀಡಿ, ಆಟದ ಮಧ್ಯ ತನ್ನ ಶೂಸ್ ಲೇಸನ್ನು ಕಟ್ಟಿಕೊಳ್ಳುವಂತೆ ಹೇಳುತ್ತಾರೆ. ಇದರಿಂದ ಅವರ ಶೂಸ್ ಮೇಲೆ ಕ್ಯಾಮೆರಾ ಕಣ್ಣು ಬೀಳುವುದರಿಂದ ಅವರು ಪೂಮಾ ಶೂಸ್ ಹಾಕಿಕೊಂಡಿದ್ದಾರೆ ಎಂದು ಇಡಿ ಪ್ರಪಂಚಕ್ಕೆ ತಿಳಿಯುತ್ತದೆ ಎಂದು ಪ್ಲಾನ್ ಮಾಡುತ್ತಾರೆ. ಅದರಂತೆ ಪೀಲೆ ಅವರು ಅನುಮತಿ ಕೇಳಿ ಆಟ ಶುರುವಾಗುವುದಕ್ಕೂ ಮೊದಲು ತಮ್ಮ ಶೂಸ್ ಲೇಸನ್ನು ಕಟ್ಟಿಕೊಳ್ಳುತ್ತಾರೆ ಇದರಿಂದ ಕ್ಯಾಮೆರಾ ಕಣ್ಣು ಅವರ ಶೂಸ್ ಮೇಲೆ ಬಿದ್ದಿತು ಅಲ್ಲದೆ ಫೈನಲ್ ಮ್ಯಾಚ್ ನಲ್ಲಿ ಬ್ರೆಜಿಲ್ ಗೆಲುವು ಪಡೆಯಿತು ಇದರಿಂದ ಪೂಮಾ ಉತ್ತಮ ಪ್ರಮೋಷನ್ ಪಡೆಯಿತು

Leave A Reply

Your email address will not be published.