ಈ ವಸ್ತುಗಳನ್ನು ಮುಟ್ಟಿದ ತಕ್ಷಣ ಸೋಪಿನಿಂದ ಕೈ ತೊಳೆಯಲು ಮರೆಯದಿರಿ

0 0

ಕರೋನ ವೈರಸ್ ಈಗಾಗಲೇ ದೇಶದ ಎಲ್ಲಾ ಕಡೆ ವ್ಯಾಪಕವಾಗಿ ಹಬ್ಬಿ ಅಟ್ಟಹಾಸದಿ ಮೆರೆಯುತ್ತಿದ್ದು ಇದರ ಸಲುವಾಗಿ ದೇಶದೆಲ್ಲೆಡೆ ಲಾಕ್ ಡೌನ್ ಆಗಿದೆ. ಇಷ್ಟಾದರೂ ಜನ ಬುದ್ಧಿ ಕಲಿಯದೆ ಕೆಲವರು ಉದ್ದೇಶ ಪೂರ್ವಕವಾಗಿ ಮನೆಯಿಂದ ಆಚೆ ಹೋಗಿ ಸುತ್ತಾಡಿಕೊಂಡು ಬಂದು ಹೊರ ಜಗತ್ತಿನ ಬೇಡವಾದ ಸೋಂಕನ್ನು ಹತ್ತಿಸಿಕೊಂಡು ತಾವು ಒಂದೇ ಕರೋನ ಸೋಂಕಿಗೆ ತುತ್ತಾಗುವುದಲ್ಲದೆ ಮನೆಯ ಇತರ ಜನರಿಗೂ ಹಬ್ಬಿಸುತ್ತ ಇದ್ದಾರೆ. ಹಾಗಂತ ಹೊರಗೆ ಹೋದವರು ಮಾತ್ರ ಕರೋನ ಸೋಂಕಿಗೆ ತುತ್ತಾಗುತ್ತಾರೆ ಮನೆಯಲ್ಲಿ ಇದ್ದವರು ಸೋಂಕಿನಿಂದ ಪಾರಾಗುತ್ತಾರೆ ಎಂದೇನೂ ಇಲ್ಲ. ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸೋಂಕು ಆಗಿರುವುದರಿಂದ ಹೇಗೆ ಬೇಕಾದರೂ ಸಹ ಒಬ್ಬ ಆರೋಗ್ಯವಂತ ವ್ಯಕ್ತಿಯ ದೇಹವನ್ನು ಸೇರಬಹುದು. ಹಾಗಾದ್ರೆ ಈ ಕರೋನ ವೈರಸ್ ಯಾವ ಯಾವ ವಸ್ತುಗಳ ಮೇಲೆ ಯಾವ ಜಾಗದಲ್ಲಿ ಎಷ್ಟೆಷ್ಟು ಹೊತ್ತು ಇರತ್ತೆ ಅಂತ ಇವುಗಳ ಬಗ್ಗೆ ಸ್ವಲ್ಪ ಮಾಹಿತಿ ಕೊಡ್ತೀವಿ.

ಕರೋನ ವೈರಸ್ ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಸುಮಾರು ಆರು ಅಡಿಗಳಷ್ಟು ಗಾಳಿಯಲ್ಲಿ ಸಾಗುತ್ತದೆ. ಆರು ಅಡಿಗಿಂತ ಕಡಿಮೆ ಅಂತರದಲ್ಲಿ ನಾವು ಸೋಂಕಿತ ವ್ಯಕ್ತಿಯ ಜೊತೆ ನಿಂತು ಮಾತನಾಡುತ್ತಿರುವಾಗ ಸೋಂಕಿತ ವ್ಯಕ್ತಿಯ ಉಸಿರಿನಿಂದ ಹೊರ ಬಂದ ವೈರಸ್ ನಮ್ಮ ದೇಹವನ್ನು ಸೇರುತ್ತದೆ. ಇನ್ನೂ ಈ ವೈರಾಣು ರಟ್ಟಿನ ವಸ್ತುಗಳು ಅಥವಾ ಕಾರ್ಡ್ ಬೋರ್ಡ್ ಮೇಲೆ ಇಪ್ಪತ್ನಾಲ್ಕು ಗಂಟೆಗಳ ಕಾಲ ಇರತ್ತೆ. ಏನಾದ್ರೂ ಪಾರ್ಸೆಲ್ ತಗೊಂಡ್ರೆ ಅದಕ್ಕೆ ಬಂದಂತಹ ರಟ್ಟಿನ ಬಾಕ್ಸ್ ಏನಾದ್ರೂ ಇದ್ರೆ ಆದಷ್ಟು ಬೇಗ ಡಸ್ಟ್ ಬಿನ್ ಗೆ ಅಥವಾ ಕಸದ ಗಾಡಿಗೆ ಹಾಕಿ ತಕ್ಷಣ ಕೈ ತೊಳೆದುಕೊಳ್ಳಿ.

ಅದೇ ರೀತಿ ಈ ವೈರಸ್ ಕರೆನ್ಸಿ ಹಾಗೂ ನೋಟುಗಳ ಮೇಲೆ ಸಹ ಇಪ್ಪತ್ನಾಲ್ಕು ಗಂಟೆಗಳ ಕಾಲ ಇರತ್ತೆ ಹಾಗಾಗಿ ಸರ್ಕಾರ ಆದಷ್ಟು ಡಿಜಿಟಲ್ ಪೇಮೆಂಟ್ ಮಾಡೋಕೆ ಹೇಳ್ತಾ ಇದೆ ಅಂದರೆ ಕರೆನ್ಸಿ ನೋಟುಗಳನ್ನು ಸಹ ಜನ ಒಬ್ಬರಿಂದ ಇನ್ನೊಬ್ಬರಿಗೆ ವಿನಿಮಯ ಮಾಡಿಕೊಳ್ಳುತ್ತಾರೆ ಈ ಸಂದರ್ಭದಲ್ಲಿ ಸಹ ಸೋಂಕು ತಗುಲುವ ಸಾಧ್ಯತೆ ಇರುತ್ತದೆ ಎಂದು ಡಿಜಿಟಲ್ ಪೇಮೆಂಟ್ ಜಾರಿಗೆ ತರಲಾಗಿದೆ. ಸ್ಟೈನ್ ಲೆಸ್ ಸ್ಟೀಲ್ ಗಳ ಮೇಲೆ ಹಾಗೂ ಪ್ಲಾಸ್ಟಿಕ್ ವಸ್ತುಗಳ ಮೇಲೆ ಸುಮಾರು ಎಪ್ಪತ್ತರಡು ಗಂಟೆಗಳ ಕಾಲ ಈ ಕರೋನ ವೈರಸ್ ಜೀವಂತವಾಗಿ ಇರತ್ತೆ. ನಾವು ದಿನ ನಿತ್ಯ ಬಳಸುವಂತಹ ಹಾಲಿನ ಪ್ಯಾಕೆಟ್, ಮಜ್ಜಿಗೆ ಪ್ಯಾಕ್ಕೆಟ್, ದಿನಸಿ ವಸ್ತುಗಳ ಪಾಕ್ಕೆಟ್ ಮುಂತಾದ ಬಹುತೇಕ ವಸ್ತುಗಳು ಪ್ಲಾಸ್ಟಿಕ್ ಆಗಿರುತ್ತೆ ಇವುಗಳ ಮೇಲೆ ಈ ಕರೋನ ವೈರಸ್ ಎರಡರಿಂದ ಮೂರು ದಿನಗಳ ಕಾಲ ಇರತ್ತೆ ಅಂದ್ರೆ ನಾವು ತುಂಬಾ ಜಾಗರೂಕರಾಗಿ ಇರಬೇಕು. ಯಾವುದೇ ವಸ್ತುಗಳನ್ನ ಅಂಗಡಿಯಿಂದ ತಂಡಿಕೊಡಲೆ ಚೆನ್ನಾಗಿ ತೊಳೆದು ನಂತರ ಬಳಸಿ.

ಹಾಗೆ ಸಾರಿಗೆ ವಾಹನಗಳು ಮತ್ತು ಸ್ವಂತ ವಾಹನಗಳು ಇವುಗಳನ್ನು ಬಳಸುವಾಗ ಕೂಡಾ, ವಾಹನಗಳ ಹ್ಯಾಂಡಲ್ ಮೇಲೆ, ಕೀ ಗಳ ಮೇಲೆ, ಬೈಕ್, ಸೈಕಲ್, ಆಸ್ಪತ್ರೆಯಲ್ಲಿ ಬಳಸುವ ಸಲಕರಣೆಗಳು, ಬಾಗಿಲಿನ ಲಾಕ್, ಲಿಫ್ಟ್ ಬಟ್ಟನ್ ಮೇಲೆ ಸ್ವಿಚ್ ಮೇಲೆ ಹಾಗೂ ನಾವು ದಿನನಿತ್ಯ ಬಳಸುವ ನಮ್ಮ ಮೊಬೈಲ್ ಗಳ ಮೇಲೆ, ಬಾಟಲಿಗಳು, ಯಾವುದೇ ಪ್ಲಾಸ್ಟಿಕ್ ವಸ್ತುಗಳು ಎಲ್ಲಾ ಕಡೆಯೂ ಈ ಕರೋನ ವೈರಾಣು ಎರಡರಿಂದ ಮೂರು ದಿನಗಳ ಕಾಲ ಇರತ್ತೆ. ಇಂತಹ ವಸ್ತುಗಳನ್ನ ಮುಟ್ಟಿದಾಗ ಪದೇ ಪದೇ ಕೈಗಳನ್ನ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಹಾಗೆ ಗ್ಲಾಸ್ ವಸ್ತುಗಳ ಮೇಲೆ ಈ ವೈರಾಣು ತೊಂಬತ್ತಾರು ಗಂಟೆ, ಅಂದ್ರೆ ಮೂರರಿಂದ ನಾಲ್ಕು ಗಂಟೆ ಇರತ್ತೆ. ಅದೇ ತಾಮ್ರದ ವಸ್ತುಗಳ ಮೇಲೆ ಕೇವಲ ನಾಲ್ಕು ಗಂಟೆ ಮಾತ್ರ ಇದು ಜೀವಂತವಾಗಿ ಇರತ್ತೆ. ಹಾಗಾಗಿ ಹೆಚ್ಚು ಹೆಚ್ಚು ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರು ಮತ್ತು ಪದಾರ್ಥಗಳನ್ನೇ ಬಳಸಿ.

ಬಟ್ಟೆಗಳ ಮೇಲೆ ಈ ರೋಗಾಣು ಒಂಭತ್ತು ಗಂಟೆಗಳ ಕಾಲ ಇರತ್ತೆ ಹಾಗಾಗಿ ಎಲ್ಲಿಯೇ ಹೊರಗೆ ಹೋಗಿ ಬಂದರು ಮೊದಲು ಬಟ್ಟೆಗಳನ್ನ ಚೆನ್ನಾಗಿ ಡಿಟರ್ಜೆಂಟ್ ಅಥವಾ ಸೋಪ್ ಬಳಸಿ ಸ್ವಚ್ಛವಾಗಿ ತೊಳೆದು ಬಿಸಿಲಲ್ಲಿ ಒಣಗಿಸಿ. ಬಿಸಿಲಿನಲ್ಲಿ ಬಿಸಿಲಿನ ಶಾಖಕ್ಕೆ ಈ ವೈರಾಣು ಕೇವಲ ಎರಡು ಗಂಟೆ ಮಾತ್ರ ಬದುಕಿರತ್ತೆ. ಹೊರಗಿಂದ ಯಾವುದೇ ವಸ್ತುಗಳು, ಸಾನಾನು ತಂದರು ಚೆನ್ನಾಗಿ ತೊಳೆದು ಬಳಸಿ ನಂತರ ಕೈಗಳನ್ನು ಸಹ ಸ್ವಚ್ಛವಾಗಿ ತೊಳೆಯಿರಿ ಹಾಗೂ ನಿಮ್ಮ ಮನೆಯ ಪರಿಸರವನ್ನು ಸಹ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.

ಕೆಮ್ಮುವಾಗ ಕೈ ತೋಳನ್ನು ಅಡ್ಡ ಇತ್ತು ಕೆಮ್ಮಬೇಕು ಅಥವಾ ಟಿಶ್ಯೂ ಪೇಪರ್ ಬಳಸಿ. ನಂತರ ಬಳಸಿದ ಪೇಪರ್ ಅನ್ನು ಮುಚ್ಚಳ ಇರುವ ಡಸ್ಟ್ ಬಿನ್ ಗೆ ಹಾಕಿ. ಯಾರಿಗೂ ಕೈ ಕುಲುಕುವುಡು ಮಾಡಬೇಡಿ ಅದರ ಬದಲು ನಮ್ಮ ಭಾರತೀಯ ಸಂಸ್ಕೃತಿಯನ್ನು ಅನುಸರಿಸಿ ನಮಸ್ತೆ ಮಾಡಿ. ಆಗಾಗ ಕೈಗಳನ್ನ ಸೋಪ್ ಅಥವಾ ಹ್ಯಾಂಡ್ ವಾಶ್ ಗಳಿಂದ ತೊಳೆಯುತ್ತಾ ಇರಿ.

ಕೈ ತೊಳೆಯದೆ ಮುಖವನ್ನ ಮುಟ್ಟಬೇಡಿ ಅದರಲ್ಲೂ ಕಣ್ಣು ಕಿವಿ ಮೂಗುಗಳನ್ನು ಮೊದಲು ಮುಟ್ಟಬೇಡಿ. ಯಾಕೆಂದ್ರೆ ಇವುಗಳ ಮೂಲಕ ಕರೋನ ವೈರಾಣು ನೇರವಾಗಿ ನಮ್ಮ ದೇಹವನ್ನು ಸೇರುವ ಸಾಧ್ಯತೆ ಇರತ್ತೆ. ಆದಷ್ಟು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರ ಸೇವಿಸಿ ಬಿಸಿ ನೀರು ಬಿಸಿ ಆಹಾರಗಳನ್ನು ಸೇವಿಸಿ. ಜನ ದಟ್ಟಣೆ ಇರುವ ಪ್ರದೇಶಗಳಿಂದ ಆದಷ್ಟು ದೂರವಿರಿ. ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರಬೇಡಿ. ಕೊನೆ ಪಕ್ಷ ಆರು ಅಡಿಗಳಷ್ಟು ಆದರೂ ಸಾಮಾಜಿಕ ಅಂತರ ಕಾಪಾಡಿ. ಮನೆಯಲ್ಲಿಯೇ ಕುಟುಂಬದ ಜೊತೆ ಆನಂದವಾಗಿ ಇರಿ

Leave A Reply

Your email address will not be published.