ಮನುಷ್ಯನಿಗೆ ಸಮಸ್ಯೆಗಳು ಬರದೇ ಮರಗಳಿಗೆ ಬರುವುದಿಲ್ಲ. ಸಮಸ್ಯೆ ಬಂದಾಗ ಕೆಲವರು ಮಾನಸಿಕವಾಗಿ ಬೇಗ ಕುಗ್ಗಿ ಹೋಗುತ್ತಾರೆ. ವಿಶೇಷವಾಗಿ ಹೆಂಗಸರು ಗಂಡ, ಅತ್ತೆ, ಮಾವ, ಮತ್ತು ಮಕ್ಕಳು ಎಲ್ಲರ ಬಗ್ಗೆ ಜವಾಬ್ದಾರಿ ಹೊಂದಿ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಮಹಿಳೆಯರು ತಮಗೆ ತಿಳಿಯದೇ ಮಾನಸಿಕ ಒತ್ತಡ ಹೆಚ್ಚಿಸಿಕೊಳ್ಳುತ್ತಾರೆ.

ಒತ್ತಡ ಬರುವ ಸಮಸ್ಯೆಗಳು ಒತ್ತಡ ಉಂಟು ಮಾಡುತ್ತದೆ.
ಒತ್ತಡದಲ್ಲಿ ಎರಡು ವಿಧಗಳಿವೆ. ಒಂದು ಬೇಕಾಗುವ ಒತ್ತಡ ಇನ್ನೊಂದು ಬೇಡದ ಒತ್ತಡ. ಬೇಕಾಗುವ ಒತ್ತಡಕ್ಕೆ ಉದಾಹರಣೆ ಎಂದರೆ ಒಬ್ಬ ವ್ಯಕ್ತಿ ಶೂಟಿಂಗ್ ಗೆ ಹೋಗುವಾಗ ತಯಾರಿ ಆಗುವುದು. ಬೇಡವಾದ ಒತ್ತಡಕ್ಕೆ ಉದಾಹರಣೆ ಎಂದರೆ ನಿದ್ದೆ ಬರದೇ ಇರುವುದು.

ಮನೆಗೆ ಕೆಲಸ ಮುಗಿಸಿ ಬಂದಾಗ ಸುಸ್ತಾಗಿರುತ್ತದೆ. ಅಡಿಗೆ ಮನೆಯಲ್ಲಿ ಎದುರಿಗೆ ಚಿಪ್ಸ್ ಅಥವಾ ಯಾವುದೇ ಜಂಕ್ ಫುಡ್ಸ್ ಗಳನ್ನು ತಿನ್ನುತ್ತಾರೆ. ಏಕೆಂದರೆ ಹಸಿವಾದಾಗ ಆರೋಗ್ಯ ನೋಡುವುದಿಲ್ಲ. ಹೊಟ್ಟೆ ತುಂಬುವುದು ಅಥವಾ ಹಸಿವು ನೀಗುವುದು ಮುಖ್ಯವಾಗಿರುತ್ತದೆ. ತಿಳಿಯದೆ ಒಂದು ಎರಡು ಪ್ಯಾಕೇಟ್ ತಿಂದು ಬಿಡುತ್ತಾರೆ. ಕೆಲವರು ಮಾನಸಿಕ ಒತ್ತಡ ಉಂಟಾದಾಗ ಮದ್ಯಪಾನ, ಧೂಮಪಾನದ ಹಿಂದೆ ಬೀಳುತ್ತಾರೆ.

ಮಾನಸಿಕ ಒತ್ತಡ ಹೆಚ್ಚಾದಾಗ ಮಹಿಳೆಯರು ಹೆಚ್ಚು ತಿನ್ನುತ್ತಾರೆ. ಇದರಿಂದ ಬೊಜ್ಜು ಬರುತ್ತದೆ. ಮಂಡಿನೋವು ಶುರುವಾಗುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತದೆ. ಹೃದಯ ರೋಗಗಳು ಬರುತ್ತದೆ. ಮುಟ್ಟಿನ ಸಮಸ್ಯೆಗಳು ಹೆಚ್ಚಾಗುತ್ತವೆ. ಪಿಸಿಓಡಿ ಬರುತ್ತದೆ.

ಇದಕ್ಕೆ ಅನೇಕ ಪರಿಹಾರಗಳಿವೆ ಅವು ಎಂದರೆ.
1.ಸಮಯಕ್ಕೆ ಸರಿಯಾಗಿ ಊಟ ತಿಂಡಿ ಎಷ್ಟು ಬೇಕೋ ಅಷ್ಟು ಮಾಡುವುದು.

  1. ಇಷ್ಟ ಆಗುವ ಹಾಡನ್ನು ಹಚ್ಚಿಕೊಂಡು ಕೇಳುವುದು.
  2. ದೂರದ ಪ್ರಯಾಣ ಇಷ್ಟವಿದ್ದಲ್ಲಿ ಪ್ರಯಾಣಿಸುವುದು.
  3. ಹತ್ತಿರದ ಸ್ನೇಹಿತರೊಂದಿಗೆ ಸಮಸ್ಯೆ ಹಂಚಿಕೊಳ್ಳುವುದು.

ಹಾಗೆಯೇ ಕೆಲವೊಂದು ಹಣ್ಣುಗಳನ್ನು ಬಳಸುವುದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಬಹುದು.

1.ಆಸ್ಪರಾಗಸ್ ಇದು ಇತ್ತೀಚಿನ ದಿನಗಳಲ್ಲಿ ಭಾರತಕ್ಕೆ ಬಂದಿದೆ. ಇದನ್ನು ತಿನ್ನುವುದರಿಂದ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ. ಸಲಾಡ್ನಲ್ಲಿ ಬಳಸಬಹುದು.

  1. ಬಟರ್ ಫ್ರೂಟ್ ಇದು ತಿನ್ನಲು ರುಚಿಕರವಾಗಿರುತ್ತದೆ. ಇದನ್ನು ಸಲಾಡ್ ಮಾಡಬಹುದು. ಜ್ಯೂಸ್ ಮಾಡಬಹುದು. ಇದರಲ್ಲಿ ವಿಟಮಿನ್, ಮಿನರಲ್ ಗಳು ಇರುತ್ತವೆ. ಇದು ಆರೋಗ್ಯವನ್ನು ಹೆಚ್ಚಿಸುತ್ತದೆ.
  2. ಗೋಡಂಬಿ ಇದನ್ನು ತಿನ್ನಬೇಕು. ನಿಯಮಿತವಾಗಿ ತಿನ್ನಬೇಕು.
  3. ಡಾರ್ಕ್ ಚಾಕೋಲೇಟ್ ಹೆಚ್ಚಿನ ಕೋಕೋ ಅಂಶ ಇರುವಂತಹುದನ್ನು ಆರಿಸಿಕೊಳ್ಳಬೇಕು.
  4. ಶುಂಠಿ ಹಾಗೂ ಬೆಳ್ಳುಳ್ಳಿ ಇದು ಕೂಡ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.
    ಕೊನೆಯದಾಗಿ ಹೇಳುವುದಾದರೆ ಆಹಾರವನ್ನು ಸರಿಯಾಗಿ ಉಪಯೋಗಿಸಿದ್ದರೆ ಆರೋಗ್ಯ ಮರಳಿ ಬರುತ್ತದೆ. ವ್ಯಾಯಾಮವನ್ನು ಸರಿಯಾದ ಸಂದರ್ಭದಲ್ಲಿ ಸರಿಯಾಗಿ ಮಾಡುವುದರಿಂದ ಕೂಡ ಆರೋಗ್ಯ ಮರಳಿ ಬರುತ್ತದೆ. ಪ್ರತಿಯೊಂದನ್ನು ತಿನ್ನುವಾಗ ನಿಯಮಿತವಾಗಿ ತಿಂದು ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ.

Leave a Reply

Your email address will not be published. Required fields are marked *