ಅತಿ ಸುಲಭವಾಗಿ ಮನೆಯಲ್ಲಿಯೇ ಬೇಕರಿ ತರದ ಬನ್ ಅನ್ನು ಮನೆಯಲ್ಲಿಯೇ ಓವನ್ ಹಾಗೂ ಮೊಟ್ಟೆ ಇಲ್ಲದೆಯೇ ಇಡ್ಲಿ ಪಾತ್ರೆಯಲ್ಲಿ ಗ್ಯಾಸ್ ಮೇಲೆ ಹೇಗೆ ಮಾಡೋದು ಅಂತ ತಿಳಿಸಿಕೊಡ್ತೀವಿ. ನಾವು ತಿಳಿಸುವ ಕೆಲವು ಟಿಪ್ಸ್ ಗಳನ್ನ ಅನುಸರಿಸಿದರೆ ಈ ಬನ್ ತುಂಬಾ ಚೆನ್ನಾಗಿ ಬರತ್ತೆ. ಬನ್ ಮಾಡೋಕೆ ಇದರ ಹಿಟ್ಟು ಕಳಸಿಕೊಳ್ಳುವುದು ತುಂಬಾ ಮುಖ್ಯ ಆಗಿರುತ್ತದೆ.

ಮೊದಲು ಒಂದ್ ಸಣ್ಣ ಬೌಲ್ ಅಲ್ಲಿ ಅರ್ಧ ಕಪ್ ಉಗುರು ಬೆಚ್ಚಗಿನ ಹಾಲು ತೆಗೆದುಕೊಂಡು ಅದಕ್ಕೆ ಒಂದು ಟಿ ಸ್ಪೂನ್ ಸಕ್ಕರೆ ಹಾಗೂ ಒಂದು ಟಿ ಸ್ಪೂನ್ ಯೀಸ್ಟ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಹಾಲು ತುಂಬಾ ಬಿಸಿ ಇದ್ದರೆ ಯೀಸ್ಟ್ ಆಕ್ಟಿವೆಟ್ ಆಗಲ್ಲ ಹಾಗಾಗಿ ಉಗುರು ಬೆಚ್ಚನೆಯ ಹಾಲನ್ನು ತೆಗೆದುಕೊಳ್ಳಬೇಕು. ಯೀಸ್ಟ್ ಇದು ಮೂವತ್ತು ರೂಪಾಯಿಗೆ ಪ್ಯಾಕ್ಕೆಟ್ ದೊರೆಯುತ್ತದೆ ಇದು ಒಂದು ಸಲ ತಂದಿಟ್ಟುಕೊಂಡರೆ ಹತ್ತು ಬಾರಿ ಬಳಸಬಹುದು. ಯೀಸ್ಟ್ ಹಾಲಿನ ಜೊತೆ ಮಿಕ್ಸ್ ಮಾಡಿ ಹತ್ತು ನಿಮಿಷದ ಕಾಲ ಬೆಚ್ಚಗಿನ ಜಾಗದಲ್ಲಿ ಇಡಬೇಕು ನಂತರ ಯೀಸ್ಟ್ ಆಕ್ಟಿವೇಟ್ ಆಗತ್ತೆ.

ನಂತರ ಒಂದು ಮಿಕ್ಸಿಂಗ್ ಬೌಲ್ ಗೆ ಒಂದು ಕಪ್ ಮೈದಾ ಹಿಟ್ಟನ್ನು ಹಾಕಿಕೊಂಡು, ಕಾಲು ಟಿ ಸ್ಪೂನ್ ಉಪ್ಪು ಹಾಗೂ ಇಂದು ಸ್ಪೂನ್ ಬೆಣ್ಣೆ ಹಾಕಿ. ಬೆಣ್ಣೆ ಹಾಕೊದರಿಂದ ಬನ್ ಮೆತ್ತಗೆ ಇರತ್ತೆ. ನಂತರ ಹಾಲಿನಲ್ಲಿ ಮಿಕ್ಸ್ ಮಾಡುಟ್ಟ ಯೀಸ್ಟ್ ಹಾಕಿ ಚೆನ್ನಾಗಿ ಹಿಟ್ಟನ್ನು ಕಲಸಿ. ಹಿಟ್ಟು ಕಲಸಿದ್ದು ತೆಳುವಾಗಿ ಸರಿಯಾಗಿ ಹದ ಬರದೆ ಇದ್ದರೆ ಅದಕ್ಕೆ ಸ್ವಲ್ಪ ಮೈದಾ ಹಿಟ್ಟನ್ನು ಸೇರಿಸಿ ಸರಿ ಮಾಡಿಕೊಳ್ಳಬೇಕು. ಒಟ್ಟಿನಲ್ಲಿ ಹಿಟ್ಟಿನ ಹದ ತೀರಾ ತೆಳುವಾಗಿ ಇರದೆ ಗಟ್ಟಿಯಾಗಿಯೂ ಇರದೆ ಸಾಫ್ಟ್ ಆಗಿರಬೇಕು. ನಂತರ ಸ್ವಲ್ಪ ಒಣ ಹಿಟ್ಟನ್ನು ಹಾಕಿ ನಮ್ಮ ಅಂಗೈ ಸಹಾಯದಿಂದ ಹತ್ತು ನಿಮಿಷ ನಾದಿಕೊಳ್ಳಬೇಕು. ಹೀಗೆ ಮಾಡುವುದರಿಂದ ಬನ್ ತುಂಬಾ ಚೆನ್ನಾಗಿ ಸಾಫ್ಟ್ ಆಗಿ ಬರತ್ತೆ.

ಹತ್ತು ನಿಮಿಷ ನಾದಿ ನಂತರ ಹಿಟ್ಟು ಕಲಸಿದ ಬೌಲ್ ಗೆ ನಂತರ ಹಿಟ್ಟು ಹಿಡಿಯದಂತೆ ಸ್ವಲ್ಪ ಎಣ್ಣೆ ಅಥವಾ ಬೆಣ್ಣೆ ಸವರಿ ಕಲಸಿ ನಾದಿದ ಹಿಟ್ಟನ್ನು ಅದರಲ್ಲಿ ಹಾಕಿಟ್ಟು ಒಂದರಿಂದ ಎರಡು ಗಂಟೆಗಳ ಕಾಲ ಒಂದು ಮುಚ್ಚಳ ಮುಚ್ಚಿ ಬಿಡಬೇಕು. ಒಂದರಿಂದ ಎರಡು ಗಂಟೆಗಳ ನಂತರ ಹಿಟ್ಟು ಡಬ್ಬಲ್ ಸೈಜ್ ಆಗಿರುತ್ತೆ ಅದನ್ನ ಮತ್ತೆ ಚೆನ್ನಾಗಿ ಒಣ ಹಿಟ್ಟನ್ನು ಹಾಕಿ ಎರಡು ನಿಮಿಷ ನಾದಿಕೊಳ್ಳಬೇಕು. ಚೆನ್ನಾಗಿ ನಾದಿದಷ್ಟು ಬನ್ ಚೆನ್ನಾಗಿ ಬರತ್ತೆ. ನಂತರ ಹಿಟ್ಟನ್ನು ಇಡ್ಲಿ ತಟ್ಟೆಯ ಸೈಜ್ ಗೆ ತಕ್ಕಂತೆ ಚಿಕ್ಕ ಪೀಸ್ ಮಾಡಿಕೊಂಡ ನಂತರ ಅದನ್ನ ಎಲ್ಲವನ್ನೂ ಚೆನ್ನಾಗಿ ರೌಂಡ್ ಶೇಪ್ ಅಲ್ಲಿ ಉಂಡೆ ಕಟ್ಟಿ. ನಂತರ ಇಡ್ಲಿ ತಟ್ಟೆ ತೆಗೆದುಕೊಂಡು ಅದಕ್ಕೆ ಸುತ್ಣಲೂ ಎಣ್ಣೆ ಅಥವಾ ಬೆಣ್ಣೆ ಸವರಿ ಮಧ್ಯದಲ್ಲಿ ರೆಡಿ ಮಾಡಿಟ್ಟುಕೊಂಡ ಉಂಡೆಯನ್ನು ಇಟ್ಟು ಉಂಡೆಯ ಮೇಲೆ ಸ್ವಲ್ಪ ಹಾಲನ್ನು ಸವರಿ ಅದಕ್ಕೆ ಒಂದು ಮುಚ್ಚಳ ಮುಚ್ಚಿ ಹತ್ತು ನಿಮಿಶ ಬಿಡಬೇಕು.

ನಂತರ ಗ್ಯಾಸ್ ಮೇಲೆ ಒಂದು ಕಡಾಯಿಯಲ್ಲಿ ಒಂದು ಸಣ್ಣ ಸ್ಟ್ಯಾಂಡ್ ಇಟ್ಟು ಸಣ್ಣ ಉರಿಯಲ್ಲಿ ಮುಚ್ಚಳ ಮುಚ್ಚಿ ಹತ್ತು ನಿಮಿಷ ಕಡಾಯಿಯನ್ನು ಕಾಯಿಸಿಕೊಳ್ಳಬೇಕು. ಹತ್ತು ನಿಮಿಷದ ನಂತರ ಇಡ್ಲಿ ತಟ್ಟೆಯನ್ನ ಕಾಯಿಸಿಟ್ಟ ಪಾತ್ರೆಯ ಸ್ಟ್ಯಾಂಡ್ ಮೇಲೆ ಇಟ್ಟು ಮುಚ್ಚಳ ಮುಚ್ಚಿ ಇಪ್ಪತ್ತೈದರಿಂದ ಮೂವತ್ತು ನಿಮಿಷ ಮಧ್ಯ ಮಧ್ಯ ಮುಚ್ಚಳ ತೆಗೆಯದೇ ಸಣ್ಣ ಉರಿಯಲ್ಲಿ ಬೇಯಿಸಿ. ಮೂವತ್ತು ನಿಮಿಷದ ನಂತರ, ಗ್ಯಾಸ್ ಬಂದ್ ಮಾಡಿ ಅರ್ಧ ಕರಗಿಸಿದ ಬೆಣ್ಣೆಯನ್ನು ಬನ್ ಗೆ ಸ್ವಲ್ಪ ಸವರಿ ಇದರಿಂದ ಬನ್ ಸಾಫ್ಟ್ ಆಗಿರತ್ತೆ. ನಂತರ ಒಂದು ಕಾಟನ್ ಬಟ್ಟೆಯನ್ವ ಒದ್ದೆ ಮಾಡಿ ಬನ್ ಮೇಲೆ ಎರಡು ನಿಮಿಷ ಹಾಕಿಡಬೇಕು. ತಣ್ಣಗಾದ ಮೇಲೆ ಬೇಕರಿ ರೀತಿಯ ಸ್ಪಂಜ್ ತರಹದ ಮನೆಯಲ್ಲಿಯೇ ಮಾಡಿದ ಬನ್ ರೆಡಿ

By

Leave a Reply

Your email address will not be published. Required fields are marked *