ಹೆಣ್ಮಕ್ಕಳು ಕೈಗಳಿಗೆ ಬಳೆ ಹಾಕುವುದೇಕೆ? ಇದರ ಹಿಂದಿರುವ ಕಾರಣವೇನು ಓದಿ.

0 0

ಕೆಲವು ಸಂಪ್ರದಾಯಗಳನ್ನು ನಮ್ಮ ಪೂರ್ವಿಕರು ಮಾಡುತ್ತಿದ್ದರು ನಮಗೂ ಅದನ್ನು ಹೇಳಿಕೊಟ್ಟಿದ್ದಾರೆ ಆದರೆ ಅದು ಕೇವಲ ಸಂಪ್ರದಾಯವಲ್ಲ, ಅದರ ಹಿಂದೆ ನಮಗೆ ಉಪಯೋಗವಾಗುವ ರೀತಿಯಲ್ಲಿ ವೈಜ್ಞಾನಿಕ ಕಾರಣಗಳಿವೆ. ಯಾವ ಸಂಪ್ರದಾಯದ ಹಿಂದೆ ಏನು ವೈಜ್ಞಾನಿಕ ಕಾರಣಗಳಿವೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಭಾರತೀಯ ಮಹಿಳೆಯರು ಕೈಗಳಿಗೆ ಬಳೆ, ಕಾಲಿಗೆ ಚೈನ್ ಹಾಕಿಕೊಂಡು ಸುಂದರವಾಗಿ ಕಾಣಿಸುತ್ತಾರೆ ಇವುಗಳನ್ನು ಧರಿಸಲು ಹಿಂದಿರುವ ವೈಜ್ಞಾನಿಕ ಕಾರಣವೇನೆಂದರೆ ಮೊದಲಿನ ಕಾಲದಲ್ಲಿ ಪುರುಷರು ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರು ಇದರಿಂದ ಅವರಲ್ಲಿ ರಕ್ತಸಂಚಲನೆ ಸರಿಯಾಗಿ ಆಗುತ್ತದೆ ಆದರೆ ಮಹಿಳೆಯರು ಮನೆಯಲ್ಲೇ ಇದ್ದು ಕೆಲಸ ಮಾಡುವುದರಿಂದ ಅವರಿಗೆ ರಕ್ತ ಸಂಚಾರದ ಸಮಸ್ಯೆ ಕಾಣಿಸಿಕೊಂಡಿತು. ಕೈಕಾಲುಗಳಿಗೆ ಬಳೆ,ಸರ ಧರಿಸಿದಾಗ ರಕ್ತಸಂಚಲನೆ ಸರಿಯಾಗುತ್ತದೆ. ಸಾಮಾನ್ಯವಾಗಿ ಗುಡಿಗಳಲ್ಲಿ ಗರ್ಭಗುಡಿಗೆ ಹೋಗುವ ಮೊದಲು ಗಂಟೆಯನ್ನು ಹೊಡೆಯುತ್ತಾರೆ. ಗಂಟೆ ಶಬ್ಧದಿಂದ ನಮ್ಮ ಮನಸ್ಸಿನಲ್ಲಿರುವ ಇತರೆ ವಿಷಯಗಳು ದೂರವಾಗಿ ಮನಸ್ಸು ನಿರ್ಮಲವಾಗಿರುತ್ತದೆ ದೇವರ ಕಡೆ ಗಮನ ಕೊಡುತ್ತಾರೆ. ಈ ಕಾರಣದಿಂದ ದೇವಸ್ಥಾನಗಳಲ್ಲಿ ಗಂಟೆ ಇಡುತ್ತಾರೆ. ಮನೆಗೆ ಬಂದವರಿಗೆ ಎರಡು ಕೈಗಳನ್ನು ಸೇರಿಸಿ ನಮಸ್ಕಾರ ಮಾಡುತ್ತೇವೆ ಏಕೆಂದರೆ ಎರಡು ಕೈಗಳನ್ನು ಕೂಡಿಸಿದಾಗ ಬೆರಳುಗಳು ಟಚ್ ಆಗಿ ಒತ್ತಡ ಉಂಟಾಗಿ ಬೆರಳುಗಳ ನರಗಳಿಗೆ ತಾಕುತ್ತದೆ. ಆಗ ಬೆರಳು ಸಿಗ್ನಲ್ ಅನ್ನು ಕಣ್ಣುಗಳಿಗೆ, ಮೆದುಳಿಗೆ ಕಳುಹಿಸುತ್ತದೆ. ಇದರಿಂದ ಆ ವ್ಯಕ್ತಿ ನೆನಪಿನಲ್ಲಿ ಉಳಿಯುತ್ತಾನೆ ಇದರಿಂದ ಯಾವುದೇ ರೀತಿಯ ಪಿಸಿಕಲ್ ಕೊಂಟಾಕ್ಟ್ ಇರುವುದಿಲ್ಲ ಇದರಿಂದ ಒಬ್ಬರಿಂದ ಒಬ್ಬರಿಗೆ ಸೂಕ್ಷ್ಮ ಜೀವಿಗಳು ಅಂಟುವುದಿಲ್ಲ.

ಹಣೆಯ ಮೇಲೆ ಕುಂಕುಮ ಇಡಲು ಕಾರಣವೇನೆಂದರೆ ಅದರಲ್ಲಿರುವ ಕೆಮಿಕಲ್ ನಮ್ಮ ಮೆದುಳನ್ನು ಕಂಟ್ರೋಲ್ ಮಾಡಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಮನೆಯ ಮುಂದೆ ಸಗಣಿ ನೀರನ್ನು ಹಾಕುವುದು ಪದ್ಧತಿಯಾಗಿದೆ ಸಗಣಿಯಲ್ಲಿ ಮಿಥೇನ್ ಇರುತ್ತದೆ ಇದಕ್ಕೆ ಸನ್ ಲೈಟ್ ಹಾಗೂ ಗಾಳಿ ಸೇರಿದಾಗ ಬ್ಯಾಕ್ಟೀರಿಯಾಗಳನ್ನು ಸಾಯಿಸುತ್ತದೆ ಇದರಿಂದ ಮನೆಯ ಹೊರಗಿನ ಬ್ಯಾಕ್ಟೀರಿಯಾ ಮನೆಯೊಳಗೆ ಬರುವುದಿಲ್ಲ. ಮನೆಯ ಮುಂದೆ ತುಳಸಿ ಗಿಡ ನೆಟ್ಟು ಪೂಜಿಸುತ್ತಾರೆ ತುಳಸಿ ಎಲೆಯಲ್ಲಿ ಔಷಧಿ ಗುಣಗಳು ಇವೆ. ತುಳಸಿ ಎಲೆಯಿಂದ ಬರುವ ಸುವಾಸನೆಯಿಂದ ಸೊಳ್ಳೆಗಳು, ಹುಳಗಳು ಮನೆಯ ಒಳಗೆ ಬರುವುದಿಲ್ಲ. ಮನೆಯ ಬಾಗಿಲಿಗೆ ಮಾವಿನ ತೋರಣಗಳನ್ನು ಕಟ್ಟುತ್ತಾರೆ. ಹಸಿರು ಮಾವಿನ ಎಲೆಗಳು ಗಾಳಿಯಲ್ಲಿರುವ ಕೆಮಿಕಲ್ಸ್ ಗಳನ್ನು ಫಿಲ್ಟರ್ ಮಾಡುತ್ತವೆ. ಮನೆಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದಾಗ ಬಹಳಷ್ಟು ಜನರು ಸೇರಿರುತ್ತಾರೆ ಆಗ ಬಾಗಿಲಿಗೆ ಮಾವಿನ ತೋರಣ ಇದ್ದರೆ ಸುತ್ತಮುತ್ತಲ ಗಾಳಿಯನ್ನು ಎಲೆಗಳು ಶುದ್ಧೀಕರಿಸುತ್ತದೆ. ಆಲದ ಮರವನ್ನು ಪೂಜಿಸುವುದು ಆಲದಮರ ರಾತ್ರಿಯು ಕೂಡ ಆಕ್ಸಿಜನ್ ಕೊಡುತ್ತದೆ ಆದ್ದರಿಂದ ನಮ್ಮ ಪೂರ್ವಿಕರು ಆಲದಮರವನ್ನು ಕಾಪಾಡಿಕೊಳ್ಳಲು ಅದನ್ನು ಪೂಜಿಸುತ್ತಾರೆ. ವಾರದಲ್ಲಿ ಒಂದು ದಿನ ಉಪವಾಸ ಇರುವುದು ನಾವು ದಿನನಿತ್ಯ ಆಹಾರ ಸೇವಿಸುವುದರಿಂದ ನಮ್ಮ ದೇಹದಲ್ಲಿ ಟಾಕ್ಸಿಕ್ ಉತ್ಪತ್ತಿಯಾಗುತ್ತದೆ. ಒಂದು ದಿನ ಉಪವಾಸ ಇರುವುದರಿಂದ ಟಾಕ್ಸಿಕ್ ಮಟೀರಿಯಲ್ಸ್ ಜೀರ್ಣವಾಗುತ್ತದೆ. ಮದುವೆಯ ಸಮಯದಲ್ಲಿ ಮೆಹಂದಿ ಹಚ್ಚಿಕೊಳ್ಳುತ್ತಾರೆ ಏಕೆಂದರೆ ಆ ಸಮಯದಲ್ಲಿ ವಧುವರರಿಗೆ ಟೆನ್ಶನ್ ಇರುತ್ತದೆ ಅದರಿಂದ ಆರೋಗ್ಯದ ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ ಮೆಹಂದಿ ದೇಹವನ್ನು ಮತ್ತು ನರಗಳನ್ನು ತಂಪಾಗಿಸುತ್ತದೆ‌. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಹಾಗೂ ಸಂಪ್ರದಾಯದ ಹಿಂದಿರುವ ಉಪಯೋಗವನ್ನು ಅರಿತು ಅವುಗಳನ್ನು ಪಾಲಿಸಿ.

Leave A Reply

Your email address will not be published.