ಗರ್ಭಧರಿಸಲು ಪ್ರಯತ್ನಿಸುವಾಗ ತಿನ್ನಬೇಕಾದ ಆಹಾರಗಳಿವು

Health & fitness
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಇತ್ತೀಚಿನ ದಿನಗಳಲ್ಲಿ ಹಲವಾರು ಕಾರಣಗಳಿಂದ ಮಹಿಳೆಯರು ಹೆಲ್ದಿ ಪ್ರಗ್ನೆನ್ಸಿ ಹೊಂದುವಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳನ್ನು ನಿವಾರಿಸಲು ಪ್ರಗ್ನೆನ್ಸಿ ಫಾರ್ಮ್ ಆಗುವ ಮೊದಲು ಕೆಲವು ಆಹಾರ ಕ್ರಮಗಳನ್ನು ಅನುಸರಿಸಬೇಕು. ಹೆಲ್ದಿ ಪ್ರೆಗ್ನನ್ಸಿ ಫಾರ್ಮಾಗಲು ಯಾವ ಯಾವ ಆಹಾರವನ್ನು ಸೇವಿಸಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಪ್ರಗ್ನೆನ್ಸಿ ಫಾರ್ಮ್ ಆಗಲು ಮಹಿಳೆ ಮತ್ತು ಪುರುಷರಿಬ್ಬರೂ ಹೆಲ್ದಿ ಫುಡ್ ಸೇವಿಸಬೇಕು. ಗರ್ಭ ಧರಿಸುವವರು ಅತಿಯಾದ ಸ್ವೀಟ್, ಆಯಿಲ್ ಫುಡ್ ತಿನ್ನಬಾರದು ಹಾಗೂ ಕೊಲ್ಡ್ರಿಂಕ್ಸ್ ಈ ರೀತಿಯ ಪಾನೀಯಗಳನ್ನು ಕುಡಿಯಬಾರದು. ಹಣ್ಣುಗಳನ್ನು ಹೆಚ್ಚು ಸೇವಿಸಬೇಕು ಅದರಲ್ಲೂ ಬಾಳೇಹಣ್ಣು, ದಾಳಿಂಬೆ ಇದರಲ್ಲಿ ಐಯನ್ ಅಂಶ ಇರುವುದರಿಂದ ದೇಹಕ್ಕೆ ಒಳ್ಳೆಯದು, ವಿಟಮಿನ್ ಸಿ ಹೆಚ್ಚಿರುವ ಹಣ್ಣುಗಳಾದ ಕಿವಿ ಹಣ್ಣು, ಕಿತ್ತಳೆ, ಪೈನಾಪಲ್ ಹಣ್ಣುಗಳನ್ನು ಹೆಚ್ಚು ತಿನ್ನಬೇಕು, ಈ ಹಣ್ಣುಗಳು ದೇಹದಲ್ಲಿ ಇನ್ಫೆಕ್ಷನ್ ಆಗಿದ್ದರೆ ನಿವಾರಿಸುತ್ತದೆ. ಈ ಹಣ್ಣುಗಳು ಕನ್ಸಿವ್ ಆಗಲು ಸಹಾಯಕಾರಿ. ಪುರುಷರಾಗಲಿ, ಮಹಿಳೆಯರಾಗಲಿ ಸಿಗರೇಟ್, ಆಲ್ಕೋಹಾಲ್ ಸೇವನೆ ಮಾಡಬಾರದು ಇದರಿಂದ ಕನ್ಸಿವ್ ಆಗುವುದಿಲ್ಲ. ಎಲ್ಲಾ ರೀತಿಯ ಬೀನ್ಸ್ ಸೇವಿಸಬೇಕು ಅದರಲ್ಲಿ ಐಯನ್ ಅಂಶ ಪೋಲೆಟ್, ಪ್ರೊಟೀನ್ ಅಂಶ ಇರುವುದರಿಂದ ದೇಹಕ್ಕೆ ಒಳ್ಳೆಯದು ಹಾಗೂ ಕನ್ಸಿವ್ ಆಗಲು ಸಹಾಯಕಾರಿ. ಪ್ರತಿದಿನ ಆಹಾರದಲ್ಲಿ ಬೀನ್ಸ್ ಇರಬೇಕು. ತರಕಾರಿಗಳನ್ನು ಹೆಚ್ಚು ಸೇವಿಸಬೇಕು ಅದರಲ್ಲೂ ಕ್ಯಾಬೇಜ್, ಹೂಕೋಸು, ಎಲೆಕೋಸು ಈ ತರಕಾರಿಗಳನ್ನು ಸೇವಿಸಬೇಕು ಇದು ಪ್ರೆಗ್ನೆನ್ಸಿ ಫಾರ್ಮ್ ಆಗಲು ಸಹಾಯವಾಗುತ್ತದೆ. ಅವಕಾಡೊ ಅಥವಾ ಬಟರ್ ಫ್ರೂಟ್ ಸೇವಿಸಬೇಕು, ಇದರಲ್ಲಿ ಹೆಲ್ದಿ ಫ್ಯಾಟ್ ಅಂಶ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಮತ್ತು ಪ್ರೆಗ್ನೆಂಟ್ ಆದ ನಂತರ ಮಗುವಿನ ಆರೋಗ್ಯಕ್ಕೂ ಒಳ್ಳೆಯದು. ಈ ಹಣ್ಣನ್ನು ಹಾಗೆಯೇ ತಿನ್ನಬಹುದು ಅಥವಾ ಸ್ಮೂಥಿ ಮಾಡಿಕೊಂಡು ಕುಡಿಯಬಹುದು. ಸ್ಟ್ರಾಬೆರಿ, ಬ್ಲೂಬೆರಿ ಈ ಹಣ್ಣುಗಳನ್ನು ಹೆಚ್ಚು ಸೇವಿಸುವುದು ಒಳ್ಳೆಯದು. ಈ ಹಣ್ಣು ಹೃದಯ ಖಾಯಿಲೆಗೆ ಸಹಾಯಕ, ದೇಹದಲ್ಲಿ ಆಂಟಿ ಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ. ಎಗ್ಗ್ ತಿನ್ನುವವರು ಎಗ್ಗ್ ನಲ್ಲಿ ಪ್ರೊಟೀನ್ ಇರುವುದರಿಂದ ಅದನ್ನು ಸೇವಿಸಬೇಕು ಎಗ್ ನ ಯೋಕ್ ಸೇವಿಸಬಾರದು ಎಂದು ಹೇಳುತ್ತಾರೆ ಸ್ಟಡಿ ಪ್ರಕಾರ ಎಗ್ ನ ಯೋಕ್ ಸೇವಿಸಬಹುದು.

ಎಲ್ಲ ಹಸಿರು ಸೊಪ್ಪುಗಳನ್ನು ಸೇವಿಸಬೇಕು ಇದರಿಂದ ಹೆಲ್ದಿ ಪ್ರಗ್ನೆನ್ಸಿ ಹೊಂದಬಹುದು. ಹಸಿರು ಸೊಪ್ಪುಗಳಲ್ಲಿ ಪೋಲೆಟ್ ಅಂಶ ಇರುವುದರಿಂದ ಸೇವಿಸಬೇಕು. ಪಂಪಕಿನ್ ಸೀಡ್ಸ್ ಸೇವಿಸಬೇಕು ಇದರಿಂದ ದೇಹದಲ್ಲಿ ಪ್ರಗ್ನೆನ್ಸಿ ಫಾರ್ಮ್ ಆಗಲು ಹೆಲ್ದಿ ಎನ್ವಿರಾನ್ಮೆಂಟ್ ಇರುತ್ತದೆ. ದಿನದಲ್ಲಿ ಸ್ವಲ್ಪ ಆಲಿವ ಆಯಿಲ್ ಸೇವಿಸಬೇಕು. ವಾಲನಟ್ಸ್ ಮತ್ತು ಬಾದಾಮಿಯನ್ನು ಪ್ರತಿದಿನ ಸೇವಿಸಬೇಕು. ಮಗುವಿನ ಆರೋಗ್ಯಕ್ಕೆ ಈ ನಟ್ಸ್ ಉತ್ತಮ. ನಮ್ಮ ಆಹಾರದಲ್ಲಿ ಬೇಳೆಯನ್ನು ಹೆಚ್ಚು ಸೇರಿಸಬೇಕು ಇದು ಕನ್ಸಿವ್ ಆಗಲು ಸಹಾಯ ಮಾಡುತ್ತದೆ. ಬೇಳೆಗಳಲ್ಲಿ ವಿಟಮಿನ್ಸ್, ಪ್ರೊಟೀನ್ ಸಿಗುತ್ತದೆ. ನಂತರ ಪ್ರತಿದಿನ ವ್ಯಾಯಾಮ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ವಾಕಿಂಗ್, ಸ್ವಿಮ್ಮಿಂಗ್ ಮಾಡಬಹುದು. ಹೆಚ್ಚು ನೀರನ್ನು ಕುಡಿಯಬೇಕು. ಈ ಆಹಾರಕ್ರಮವನ್ನು ಪ್ರಗ್ನೆಂಟ್ ಆಗಬೇಕು ಎನ್ನುವವರು ಅಷ್ಟೇ ಅಲ್ಲದೆ ಎಲ್ಲರೂ ಅನುಸರಿಸಬಹುದು.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *