ನಿಮ್ಮ ತಲೆಕೂದಲು ಕಾಂತಿಯುತವಾಗಿ ಉದ್ದ ಬೆಳೆಯಲು ಇದನ್ನು ಒಮ್ಮೆ ಹಚ್ಚಿ ಸಾಕು

0 9

ಸೌಂದರ್ಯವೆನ್ನುವುದು ಹಾಗೆ ಬರುವುದಿಲ್ಲ, ಅದಕ್ಕಾಗಿ ಸ್ವಲ್ಪ ಶ್ರಮ ವಹಿಸುವುದು ಕೂಡ ಅಗತ್ಯ. ಸೌಂದರ್ಯದ ಒಂದು ಭಾಗವೆಂದು ಪರಿಗಣಿಸಲಾಗಿರುವಂತಹ ಕೂದಲು ಕಾಂತಿಯುತವಾಗಿ ರೇಷ್ಮೆಯಂತೆ ಹೊಳೆಯಬೇಕಾದರೆ ಅದರ ಆರೈಕೆಯು ಅಗತ್ಯ ಹಾಗೆಯೇ ಕೂದಲಿನ ಸಮಸ್ಯೆ ಬಂದರೆ ಅದನ್ನು ನಿರ್ಲಕ್ಷಿಸದೆ ಅದರ ಸಂರಕ್ಷಣೆಯು ಅಗತ್ಯ ಅದಕ್ಕಾಗಿ ಕೆಲವು ಮನೆ ಮದ್ದುಗಳು ಹಲವಾರಿವೆ ಅದನ್ನು ಈ ಬರಹದಲ್ಲಿ ತಿಳಿದುಕೊಳ್ಳೋಣ.

ಕೂದಲಿನ ಸಮಸ್ಯೆಗಳು ಕಾಣಿಸಿಕೊಂಡರೆ ಅದರ ಬೆಳವಣಿಗೆ ಕೂಡ ಕುಂಠಿತವಾಗುವುದು. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವಂತಹ ಶಾಂಪೂ, ಕಂಡೀಷನರ್ ಬಳಸಿಕೊಂಡರೆ ಆಗದು. ನೈಸರ್ಗಿಕವಾಗಿ ಕೂದಲಿಗೆ ಕಾಂತಿ ನೀಡಲು ಪ್ರಯತ್ನಿಸಿದರೆ ಅದು ಖಂಡಿತವಾಗಿಯೂ ದೀರ್ಘಕಾಲ ಬಾಳಿಕೆ ಬರುವುದು.

ಎಷ್ಟೇ ಪ್ರಯತ್ನ ಮಾಡಿದರು ಕೂದಲು ಬೆಳೆಯುತ್ತಿಲ್ಲ, ಉದುರುವ ಸಮಸ್ಯೆ ಅತಿ ಹೆಚ್ಚಾಗಿದೆ ಎನ್ನುವುದಕ್ಕೆ ಮನೆ ಮದ್ದುಗಳು ಮೆಂತ್ಯ ಕಾಳುಗಳಲ್ಲಿ ಹೇರಳವಾದ ವಿಟಮಿನ್, ಮಿನರಲ್ಸ್ ಇರುತ್ತದೆ ಈ ಕಾಳುಗಳನ್ನು ರಾತ್ರಿ ಇಡಿ ನೆನೆಸಿ ಇಟ್ಟು ಮುಂಜಾನೆ ಅದನ್ನು ೫ನಿಮಿಷಗಳ ಕಾಲ ಕಾಯಿಸಿ ನಂತರ ಸೋಸಿ ನೀರನ್ನು ಕಾಳಿನಿಂದ ಬೇರ್ಪಡಿಸಬೇಕು, ಆ ನೀರನ್ನು ತಣ್ಣಗಾಗಿಸಿ ಕೂದಲಿಗೆ ಹಚ್ಚುವುದರಿಂದ ಸಮಸ್ಯೆ ನಿವಾರಣೆ ಆಗುತ್ತದೆ.

ಇದರ ಜೊತೆಗೆ ಆಹಾರ ಕ್ರಮದಲ್ಲಿಯೂ ಸಹ ಹೆಚ್ಚು ಹೆಚ್ಚು ಪೋಷಕಾಂಶಯುಕ್ತ ಆಹಾರ ಹಾಗೂ ವಿಟಮಿನ್ಸ್ ಇರುವ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ. ಕೂದಲಿಗೆ ಎಣ್ಣೆಯ ಮಸಾಜ್ ಮಾಡಿದರೆ, ಅದರಿಂದ ಕೂದಲು ಸೊಂಪಾಗಿ, ದಷ್ಟಪುಷ್ಟವಾಗಿ ಬೆಳೆಯಲು ಸಹಕಾರಿ. ಎಣ್ಣೆಯ ಮಸಾಜ್ ಮಾಡಿದರೆ ಅದು ಕೂದಲಿನ ಬುಡವನ್ನು ಬಲಪಡಿಸುವುದು.

ತಲೆಗೆ ಸರಿಯಾಗಿ ಎಣ್ಣೆ ಹಾಕಿಕೊಂಡು ಮಸಾಜ್ ಮಾಡಿದರೆ, ಅದರಿಂದ ಒತ್ತಡ ಕಡಿಮೆ ಆಗುವುದು ಮಾತ್ರವಲ್ಲದೆ, ಕೂದಲು ಉದುರುವಿಕೆ ಕೂಡ ತಪ್ಪುವುದು.ಪ್ರತಿನಿತ್ಯವೂ ಮಲಗುವ ಮೊದಲು ಕೂದಲನ್ನು ಬಾಚಿಕೊಂಡರೆ ಆಗ ಕೂದಲಿಗೆ ಸರಿಯಾದ ರೀತಿಯಲ್ಲಿ ನೈಸರ್ಗಿಕ ಎಣ್ಣೆಯು ಸಿಗಲು ಸಾಧ್ಯವಾಗುವುದು. ತಲೆಬುರುಡೆಯಲ್ಲಿ ಸರಿಯಾದ ರೀತಿಯಲ್ಲಿ ರಕ್ತಸಂಚಾರವಾಗುತ್ತದೆ.

Leave A Reply

Your email address will not be published.