ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಎಲ್ಲರಿಗೂ ಸರ್ವೇ ಸಾಮಾನ್ಯ. ಇದಕ್ಕೆ ಮುಖ್ಯವಾಗಿ ನಮ್ಮ ಈಗಿನ ಜೀವನ ಶೈಲಿ, ಆಹಾರ ವಿಹಾರಗಳೇ ಮುಖ್ಯ ಕಾರಣಗಳಾಗಿರುತ್ತವೆ. ಕೂದಲು ಉದುರಲು ಬೇರೆ ಇನ್ನೇನು ಕಾರಣಗಳು ಇವೆ ಹಾಗೂ ಅದಕ್ಕೆ ಪರಿಹಾರ ಏನು ಅನ್ನೋದನ್ನ ನೋಡೋಣ. ಆಯುರ್ವೇದದ ಪ್ರಕಾರ, ಮನುಷ್ಯನನ್ನು ಮಾಡಿರುವುದು ಏಳು ಧಾತುಗಳಿಂದ . ಆಯುರ್ವೇದದಲ್ಲಿ ಏನೇ ಮಾಡಿದರೂ ಸಹ ತ್ರಿದೋಷ ಸಿದ್ಧಾಂತ ಹಾಗೂ ಸಪ್ತ ಧಾತುಗಳ ಆಧಾರದ ಮೇಲೆಯೇ ಮಾಡುವುದು. ಹಾಗೆ ಕೊಯ್ದಳು ಉದುರುವುದಕ್ಕೂ ನಾವು ಆಯುರ್ವೇದ ಔಷಧಿ ಅಂದುಕೊಂಡು, ಬ್ರಾಹ್ಮಿ ತೈಲ, ಮೆಹೆಂದಿ ಅಥವಾ ನೆಲ್ಲಿಕಾಯಿ ಪೌಡರ್ ಗಳನ್ನು ಹಚ್ಚುತ್ತೇವೆ ಆದರೆ ಇದು ಯಾವುದೂ ಆಯುರ್ವೇದ ಅಲ್ಲ. ಇವೆಲ್ಲ ಕೇವಲ ಮನೆಮದ್ದುಗಳಾಗಿರುತ್ತವೆ ಹಾಗೂ ಇವೆಲ್ಲ ಕೆಲವು ಜನರಿಗೆ ಮಾತ್ರ ಪ್ರಯೋಜನಕಾರಿ ಆಗಬಹುದು ಇನ್ನು ಕೆಲವರಿಗೆ ಪ್ರಯೋಜನಕಾರಿ ಆಗದೆಯೂ ಇರಬಹುದು. ಆಯುರ್ವೇದ ಎಂದರೆ ದೋಷ ಧಾತು ಮಲ ಸಿದ್ಧಾಂತಗಳ ಮೇಲೆ ವಿವರಣೆ ನೀಡುವುದು ಮಾತ್ರ ಆಯುರ್ವೇದ ಆಗಿರುತ್ತದೆ. ಕೂದಲು ಉದುರುವುದಕ್ಕೂ ಮತ್ತು ಹೊಟ್ಟೆಗೂ ತೀರ ಹತ್ತಿರದ ಸಂಬಂಧ ಇರುತ್ತದೆ. ಅದು ಹೇಗೆ ಅನ್ನೋದನ್ನ ತಿಳಿದುಕೊಂಡರೆ ಮಾತ್ರ ನಮಹೇ ಪರಿಹಾರ ಸಿಗುತ್ತದೆ.

ಆಸ್ತಿ ಧಾತುವಿನ ಉಪಧಾತು ಕೇಶ /ಕೂದಲು. ರಸ, ರಕ್ತ, ಮಾಂಸ , ಮೇಧ , ಅಸ್ತಿ , ಮಜ್ಜ , ಶುಖ ಈ ಸಪ್ತ ಧಾತುಗಳಿಂದ ಮನುಷ್ಯನ ದೇಹ ರಚಿಸಲ್ಪಟ್ಟಿದೆ. ಈ ಸಪ್ತ ಧಾತುಗಳಿಗೆ ಮತ್ತೆ ಉಪ ಧಾತುಗಳಿವೆ. ಹಾಗೆ ಈ ಅಸ್ತಿ ಧಾತುವಿನ ಉಪಧಾತುವೆ ಕೇಶ. ಹಾಗಾಗಿ ಮೂಳೆ ಮಜ್ಜಗಳ ಉತ್ಪಾದನೆಯಲ್ಲಿ ಏನಾದರೂ ಸಮಸ್ಯೆ ಇದ್ದಾಗ ಅದರ ಪರಿಣಾಮ ಕೂದಲಿನ ಮೇಲೆ ಆಗುತ್ತದೆ. ಹೊಟ್ಟೆಗೂ, ಮೂಳೆಗೂ, ಅಸ್ತಿ ಧಾತುವಿಗೂ ಹಾಗೂ ಕೂದಲಿಗೂ ಏನು ಸಬಂಧ? ಎಂದು ನೋಡುವುದಾದರೆ,, ಅಸ್ತಿಧಾತು ಉತ್ಪಾದನೆ ಆಗುವುದು ಸಣ್ಣ ಕರುಳು ಮತ್ತು ದೊಡ್ಡ ಕರುಳು ಎರಡೂ ಕೂಡುವ ಜಾಗದಲ್ಲಿ. ಸಂಸ್ಕೃತದಲ್ಲಿ ಅಸ್ತಿಧರಕಲಾ ಎಂದು ಹೇಳುತ್ತಾರೆ. ಸಣ್ಣ ಕರುಳು ಮತ್ತು ದೊಡ್ಡ ಕರುಳು ಎರಡೂ ಕೂಡುವ ಜಾಗ ಇರುವುದು ನಮ್ಮ ಹೊಟ್ಟೆಯಲ್ಲಿ. ಹೊಟ್ಟೆಯಲ್ಲಿ ಕರುಳುಗಳಿಗೆ ಸಂಬಂಧಿಸಿ ಏನೇ ತೊಂದರೆ ಆದರೂ ಸಹ ಅದರ ಪರಿಣಾಮ ಮೂಳೆ ಮತ್ತು ಮಜ್ಜಗಳ ಮೇಲೆ ಉಂಟಾಗುತ್ತದೆ. ಇದರಿಂದಾಗಿ ಮೂಳೆ ಮತ್ತು ಮಜ್ಜಗಳ ಮೇಲೆ ವೀಕ್ನೆಸ್ ಆಗಿ ಅದರ ಪ್ರಭಾವ ಕೂದಲಿನ ಮೇಲೆ ಉಂಟಾಗುತ್ತದೆ.

ನಾವು ಗಮನಿಸಿರುವ ಹಾಗೆ ಯಾರಿಗಾದರೂ ಟೈಫಾಯ್ಡ್, ವಿಷಮಶೀತ ಜ್ವರ ಹೀಗೆ ಹೊಟ್ಟೆಗೆ ಸಂನ್ಯಾಧಿಸಿದ ಕಾಯಿಲೆಗಳು ಏನಾದರೂ ಬಂದಿದ್ದರೆ ಅದಕ್ಕೆ ತೆಗೆದುಕೊಳ್ಳುವ ಟ್ರೆಟ್ಮೆಂಟ್ ಹಾಗೂ ಮಾತ್ರೆಗಳ ಪ್ರಭಾವದಿಂದ ಜ್ವರ ಕಡಿಮೆ ಆದಮೇಲೆ ಕೂದಲು ಉದುರಲು ಆರಂಭ ಆಗುತ್ತದೆ. ಹಾಗಾಗಿ ಮೂಳೆಗಳು ಮತ್ತು ಮಜ್ಜಗಳ ಮೇಲೆ ಏನೇ ಸಮಸ್ಯೆ ಉಂಟಾದರೂ ಸಹ ಅದರ ಉಪಧಾತು ಆಗಿರುವ ಕೇಶಗಳ ಮೇಲೆ ಪರಿಣಾಮವನ್ನು ಬೀರುತ್ತವೆ. ಇವುಗಳ ಕುರಿತಾಗಿ ಯಾವ ಯಾವ ಧಾತುಗಳು ನಮ್ಮ ದೇಹದಲ್ಲಿ ಎಲ್ಲೆಲ್ಲಿ ಉತ್ಪಾದನೆ ಆಗುತ್ತವೆ ಎಂದು ಸಾವರಾರು ವರ್ಷಗಳ ಹಿಂದೆಯೇ ನಮ್ಮ ಋಷಿ ಮುನಿಗಳು ತಿಳಿಸಿದ್ದಾರೆ. ಇವಷ್ಟು ಕೂದಲು ಉದುರೋಕೆ ಕಾರಣಗಳು. ಇನ್ನು ಇದಕ್ಕೆ ಮನೆಮದ್ದನ್ನು ತಿಳಿದುಕೊಳ್ಳಬೇಕು ಏನೇನು ಅನ್ನೋದನ್ನ. ಅಸ್ತಿಧಾತುವನ್ನು ಪೋಷಣೆ ಮಾಡಲು ಷಡ್ ರಸಗಳಿವೆ. ಅವುಗಳು ಎಂದರೆ, ಮಧುರ (ಸಿಹಿ), ಆಮ್ಲ(ಹುಳಿ) , ಲವಣ(ಉಪ್ಪು), ಕಟು(ಖಾರ) , ತಿಕ್ತ(ಕಹಿ) , ಕಷಾಯ(ಒಗರು) . ಒಂದೊಂದು ರುಚಿಗೆ ಒಂದೊಂದು ಧಾತುವನ್ನು ಪೋಷಣೆ ಮಾಡುವ ಶಕ್ತಿ ಇದೆ. ಹಾಗಾಗಿ ಈ ಷಡ್ ರಸಗಳಿರುವ ಆಹಾರವನ್ನು ನಾವು ಸೇವಿಸಬೇಕು. ಯಾವಾಗ ನಾವು ನಮ್ಮ ಆಹಾರದಲ್ಲಿ ಈ ಆರು ಬಗೆಯ ರಸಧಾತುಗಳನ್ನು ಸೇರಿಸಿ ಸೇವಿಸುತ್ತೇವೆಯೋ ಆಗ ನಮ್ಮ ಆರೋಗ್ಯ ಸರಿಯಾಗಿ ಇರುತ್ತದೆ. ಹಾಗಾಗಿ ನಮ್ಮ ಕೂದಲು ಉದುರುವ ಸಮಸ್ಯೆಗೆ ಮೇಲಾಗಿ ಬೇಕಾಗಿರುವುದು ಅಸ್ತಿಧಾತುವಿನ ಪೋಷಣೆಗೆ ಬೇಕಾದ ಆಹಾರ.

ಆಸ್ತಿ ಧಾತುವನ್ನು ಪೋಷಣೆ ಮಾಡುವ ರಸ ತಿಕ್ತರಸ ಅಂದರೆ, ಕಹಿ. ಕಹಿ ಇರುವಂತಹ ಪದಾರ್ಥಗಳನ್ನು ನಮ್ಮ ಆಹಾರದಲ್ಲಿ ಜಾಸ್ತಿ ಸೇವನೆ ಮಾಡಿದಲ್ಲಿ ಅಸ್ತಿದರಕಲ ಇವುಗಳಲ್ಲಿ ವ್ಯತ್ಯಾಸ ಉಂಟಾಗಿದ್ದರೆ ತಾನಾಗಿಯೇ ಸರಿ ಹೋಗುತ್ತವೆ. ಅಂದರೆ ಸಣ್ಣ ಕರುಳು ಮತ್ತು ದೊಡ್ಡ ಕರುಳು ಇವೆರಡು ಕೂಡುವ ಜಾಗದಲ್ಕಿ ಏನಾದರೂ ಸಮಸ್ಯೆ ಆಗಿದ್ದರೆ ಕಹಿಯನ್ನು ಸೇವಿಸುವುದರಿಂದ ಹಾಗಲಕಾಯಿ , ಬಿಲ್ವ ಪತ್ರೆ , ಕಹಿಬೇವು ಇವುಗಳನ್ನು ಸೇವಿಸಿದಲ್ಲಿ ಸರಿ ಆಗುತ್ತವೆ. ಆಗ ಅಸ್ತಿಧಾತುವಿನ ಪೋಷಣೆ ಆಗಿ ಆಸ್ತಿ ಧಾತು ಬಲಿಷ್ಠಗೊಳ್ಳುತ್ತದೆ. ಅಸ್ತಿ ಧಾತುವಿನ ಪೋಷಣೆ ಆದರೆ ಆಗ ತಾನಾಗಿಯೇ ಅದರ ಉಪಧಾತುವಾದ ಕೇಶಕ್ಕೂ ಸಹ ಪೋಷಣೆಯನ್ನು ನೀಡುತ್ತದೆ. ಎಲ್ಲಿಯವರೆಗೆ ನಾವು ನಮ್ಮ ಆಸ್ತಿ ಧಾತುವನ್ನು ಸರಿಯಾಗಿ ಪೋಷಣೆ ಮಾಡುವುದಿಲ್ಲವೋ ಅಲ್ಲಿಯವರೆಗೂ ಯಾವುದೇ ಕಾರಣಕ್ಕೂ ಕೂದಲು ಉದರುವ ಸಮಸ್ಯೆ ನಿಲ್ಲದು. ಹಾಗಾಗಿ ಇದಕ್ಕೆ ಸುಲಭವಾದ ಮನೆಮದ್ದು ಕಹಿ ಇರುವಂತಹ ಆಹಾರವನ್ನು ಸೇವನೆ ಮಾಡುವುದು. ಇದರಿಂದ ಕೂದಲು ಉದುರುವುದೂ ಇಲ್ಲ ಚೆನ್ನಾಗಿ ಬೆಳೆಯಲೂ ಸಹ ನೆರವಾಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!