ಸೀಬೆ ಹಣ್ಣು ಅಥವಾ ಪೇರಳೆ ಹಣ್ಣು ಅಂತ ಕರೆಯುವ ವರ್ಷದ ಬಹುತೇಕ ದಿನಗಳಲ್ಲಿ ದೊರೆಯುವ ಈ ಹಣ್ಣಿನ ಲಾಭಗಳು ಬಹಳಷ್ಟಿವೆ. ಆದರೆ ಈ ಹಣ್ಣಿನ ಗಿಡದ ಎಲೆಗಳ ಬಗ್ಗೆ ಅಷ್ಟೊಂದು ಯಾರಿಗೂ ಪರಿಚಯವಿಲ್ಲ. ಅರಳಿ ಗಿಡದ ಎಲೆಗಳ ಔಷಧೀಯ ಗುಣಗಳ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಆಯುರ್ವೇದದಲ್ಲಿ ಈ ಗಿಡದ ಎಲೆಗಳ ಅದ್ಭುತ ಗುಣಗಳ ಬಗ್ಗೆ ಉಲ್ಲೇಖವಿದೆ. ಎಲೆಗಳನ್ನು ಅರೆದು ಮಾಡಿದ ಮಿಶ್ರಣದಲ್ಲಿ ಹಲವಾರು ಆಂಟಿ- ಆಕ್ಸಿಡೆಂಟ್ಗಳು, ಬ್ಯಾಕ್ಟಿರಿಯಾ ನಿವಾರಕಗಳು, ಹಾಗೂ ಮುಂತಾದ ಪೋಷಕಾಂಶಗಳು ಇವೆ. ಮುಖ್ಯವಾಗಿ ಇದರಲ್ಲಿ ಅಧಿಕವಾಗಿರುವ ಟ್ಯಾನಿನ್ ಎಂಬ ಅಂಶ ನೈಸರ್ವಿಕವಾಗಿ ನೋವು ನಿವಾರಕವಾಗಿದೆ. ಅಲ್ಲದೆ ಪೋರಪಿನೈಲ್ ಕ್ಯಾರೋನೈಡ್ ಎಂಬ ಉತ್ತಮ ಪೋಷಕಾಂಶಗಳು ಹಲವು ರೋಗಗಳ ಚಿಕಿತ್ಸೆಗೆ ನೆರವಾಗುತ್ತದೆ. ಹಾಗಾದ್ರೆ ಈ ಎಲೆಗಳಲ್ಲಿ ಯಾವ ರೀತಿಯ ಆರೋಗ್ಯಕರ ಅಂಶಗಳು ಇವೆ ಅನ್ನೋದನ್ನು ನೋಡೋಣ. ಕೆಲವು ಸಂಶೋಧನೆಗಳ ಮೂಲಕ ತಿಳಿದು ಬಂದಿರುವ ವಿಷಯ ಏನೆಂದರೆ ಪೇರಲೆ ಗಿಡದ ಎಲೆಗಳನ್ನು ನೀರಿನಲ್ಲಿ ಕುದಿಸಿ ಒಂದು ತಿಂಗಳ ಸತತವಾಗಿ ಕುಡಿಯುವುದರಿಂದ ನಮ್ಮ ದೇಹದಲ್ಲಿ ಇರುವಂತ ವಿಷದ ಅಂಶಗಳನ್ನು ಹಾಗೂ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ತೆಗೆದುಹಾಕುತ್ತದೆ ಹಾಗೆ ರಕ್ತದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣವನ್ನು ಸಹ ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ ನಮ್ಮ ಯಕೃತ್ತಿನ ಬೆಳವಣಿಗೆಗೆ ಕೂಡ ಒಂದು ಒಳ್ಳೆಯ ಟಾನಿಕ್ ರೀತಿಯಲ್ಲಿ ಸಹಾಯ ಮಾಡುತ್ತದೆ.

ಅತಿಸಾರದ ಸಮಸ್ಯೆ: ಮಕ್ಕಳಲ್ಲಿ ಮತ್ತು ಹಿರಿಯರನ್ನು ಅತಿಸಾರ ಮತ್ತು ಆಮಶಂಕೆಯ ಸಮಸ್ಯೆಯನ್ನು ನಿವಾರಿಸಲು ಉತ್ತಮ ಆಯುರ್ವೇದಿಕ್ ಔಷಧಿ ಎಂದು ಹೇಳಬಹುದು. ಸುಮಾರು ಎರಡು ಲೋಟ ನೀರಿಗೆ 30 ಗ್ರಾಂ ಪೇರಳೇ ಎಲೆಗಳನ್ನು ಹಾಕಿ ಒಂದು ಮುಷ್ಟಿ ಅಕ್ಕಿ ಹಿಟ್ಟಿನ ಜೊತೆಗೆ ಸುಮಾರು ಹದಿನೈದು ನಿಮಿಷ ಬೇಯಿಸಬೇಕು. ಈ ನೀರನ್ನು ತಣ್ಣಗಾದ ಬಳಿಕ ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ಆಮಶಂಕೆ ರೋಗ ಕಡಿಮೆಯಾಗುವುದು. ಅಧಿಕಾರ ಮತ್ತು ರಕ್ತಬೇದಿ ನಿವಾರಣೆಗಾಗಿ ಎಲೆಗಳನ್ನು ಮತ್ತು ಬೇರನ್ನು ನೀರಿನಲ್ಲಿ ಅರೆದು ನೀರಿನಲ್ಲಿ ಬೆರೆಸಿ ಅದನ್ನು ಚೆನ್ನಾಗಿ ಕುದಿಸಿ ಅದನ್ನು ತಣ್ಣಗಾಗಲು ಬಿಡಬೇಕು ತಣ್ಣಗಾದ ನಂತರ ಸ್ವಲ್ಪ ಸ್ವಲ್ಪವಾಗಿ ಕುಡಿಯುವುದರಿಂದ ಶೀಘ್ರವೇ ರಕ್ತಬೇದಿ ನಿವಾರಣೆಯಾಗುವುದು.

ಜೀರ್ಣಶಕ್ತಿಯನ್ನು ಹೆಚ್ಚಿಸಲು ನೆರವಾಗುವುದು: ಪೇರಳೆಕಾಯಿ ಎಲೆಯಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸಲು ಸಹಾಯಕಾರಿ ಆಗುವಂತಹ ಹಲವು ಪೋಷಕಾಂಶಗಳು ಇವೆಯಂತೆ. ಕೆಲವೊಂದು ಬ್ಯಾಕ್ಟೀರಿಯಾಗಳನ್ನು ಜಠರದಲ್ಲಿ ಜೀರ್ಣವಾಗದಂತೆ ಕಳುಹಿಸಲಾಗುವುದು ಇಂತಹ ಸಮಸ್ಯೆಗಳಿಗೆ ಪೇರಲೆ ಎಲೆಗಳು ಸೂಕ್ತವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಇದಕ್ಕಾಗಿ ನಾವು ಮಾಡಬೇಕಾಗಿರುವುದು ಇಷ್ಟೇ ಒಂದು ಲೀಟರ್ ನೀರಿನಲ್ಲಿ ಪೇರಳೆ ಎಲೆಗಳನ್ನು ಜಜ್ಜಿ ಕುದಿಸಬೇಕು. ಐದು ನಿಮಿಷ ಕುದಿಸಿ ತಣ್ಣಗಾದ ನಂತರ ದಿನಕ್ಕೆ ಮೂರು ಬಾರಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಉತ್ತಮ ಪರಿಣಾಮವನ್ನು ಕಾಣಬಹುದು.

ಮುಖದ ಮೇಲಿನ ಮೊಡವೆಗಳಿಗೆ ಉತ್ತಮ ಪರಿಹಾರ. ಮುಖದ ಮೇಲೆ ಮೊಡವೆಗಳು ಆಗಿದ್ದರೆ ಬೇರೆಲ್ಲ ಎಲೆಗಳನ್ನು ಚೆನ್ನಾಗಿ ಪೇಸ್ಟ್ ಮಾಡಿ ಅದನ್ನು ಮುಖಕ್ಕೆ ಹಚ್ಚಿ ಒಣಗಲು ಬಿಟ್ಟು ನಂತರ ಉಗುರುಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಈ ರೀತಿಯಾಗಿ ದಿನಕ್ಕೆ ಎರಡರಿಂದ ಮೂರು ಬಾರಿ ಮಾಡುವುದರಿಂದ ಆದಷ್ಟು ಬೇಗನೆ ಮುಖದ ಮೇಲೆ ಮೊಡವೆಗಳು ಮತ್ತು ಕಲೆಗಳು ನಿವಾರಣೆಯಾಗುತ್ತವೆ.

ಉರಿಯೂತ ನಿವಾರಣೆಗೆ ಸಹಾಯಕಾರಿ: ಪೇರಳೆ ಎಲೆಯಲ್ಲಿ ಇಲ್ಲಿರುವಂತಹ ಪೋಷಕಾಂಶ ಉತ್ತಮವಾದ ಉರಿಯೂತ ನಿವಾರಕ ಗುಣವನ್ನು ಹೊಂದಿರುತ್ತದೆ. ಇದು ವಿವಿಧ ರೀತಿಯ ಆರೋಗ್ಯಕ್ಕೆ ಉತ್ತಮವಾಗಿದೆ. ಪ್ರಮುಖವಾಗಿ ಸಂಧಿವಾತವನ್ನು ಕಡಿಮೆಮಾಡುತ್ತದೆ ಹಾಗೆಯೇ ಇನ್ನೊಂದು ಮುಖ್ಯವಾದ ವಿಷಯ ಎಂದರೆ ಜೀವಕೋಶಗಳ ಮೇಲೆ ಆಮ್ಲಜನಕದ ವಿಪರೀತ ಪರಿಣಾಮದಿಂದ ವೃದ್ಧಾಪ್ಯದ ಕುರುಹುಗಳು ಬರದಂತೆ ತಾರುಣ್ಯವನ್ನು ಬಹುಕಾಲ ಕಾಪಾಡುತ್ತದೆ.

ಯಾವುದೇ ಗಾಯಕ್ಕೂ ಪೇರಳೇ ರಾಮಬಾಣ ಎನ್ನಬಹುದು. ಯಾವುದೇ ಗಾಯದ ಮೇಲೆ ತೆರಳಿ ಎಲೆಗಳನ್ನು ಜಜ್ಜಿ ಪೇಸ್ಟ್ ಮಾಡಿ ಹಚ್ಚುವುದರಿಂದ ಅಥವಾ ಎಲೆಗಳನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಕುಡಿಯುವುದರಿಂದ ಗಾಯಗಳು ಬೇಗ ಕಡಿಮೆಯಾಗುತ್ತದೆ ಹಾಗೂ ಯಾವುದೇ ರೀತಿಯ ನಂಜು ಉಂಟಾಗದಂತೆ ತಡೆಯುತ್ತದೆ. ಬಾಣಂತಿಯರಲ್ಲಿ ಗರ್ಭಕೋಶದ ಊತವನ್ನು ಕಡಿಮೆ ಮಾಡುತ್ತದೆ‌.

ಅಲರ್ಜಿಯನ್ನು ಕಡಿಮೆ ಮಾಡಲು ಪೇರಳೆ ಎಲೆ ಸಹಾಯಕಾರಿ. ಕೆಲವೊಂದು ವಸ್ತುಗಳು ನಮಗೆ ಅಲರ್ಜಿಯನ್ನು ಉಂಟು ಮಾಡುತ್ತದೆ. ಪೇರಳೇ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ನೀರು ತಣಿದ ನಂತರ ಕುಡಿಯುವುದರಿಂದ ಅಲರ್ಜಿ ಸಮಸ್ಯೆಯಿಂದ ಹೊರಬರಬಹುದು. ಅಷ್ಟೇ ಅಲ್ಲದೆ ಜ್ವರವನ್ನು ನಿವಾರಣೆ ಮಾಡಿ ಬಾಯಿಯ ಆರೋಗ್ಯವನ್ನು ಸಹ ಸರಿದೂಗಿಸುತ್ತದೆ. ಇವಿಷ್ಟು ಪೇರಳೆ ಎಲೆಗಳಿಂದ ನಮ್ಮ ದೇಹಕ್ಕೆ ಸಿಗುವಂತಹ ಆರೋಗ್ಯಕರ ಲಾಭಗಳು.

By

Leave a Reply

Your email address will not be published. Required fields are marked *