ದೇಶದಲ್ಲಿ ಈಗಾಗಲೇ ಕೊರೋನಾ ಅನ್ನು ಮಹಾಮಾರಿ ವೈರಸ್ ವಕ್ಕರಿಸಿದ್ದು ದಿನ ದಿಂದ ದಿನಕ್ಕೆ ಇದರ ಪರಿಣಾಮ ಜಾಸ್ತಿನೇ ಆಗುತ್ತಿದೆ ಈಗಿರುವಾಗ ಇದಕ್ಕೆ ಔಷಧಿ ಕಂಡುಹಿಡಿಯಲು ಸಂಶೋದನೆಗಳು ನಡೆಯುತ್ತಲೇ ಇದೆ ಆದ್ರೆ ಇಲ್ಲೆವರೆಗೂ ಮಾರುಕಟ್ಟೆಗೆ ಕೊರೋನಾ ಔಷಧಿ ಲಭ್ಯವಿಲ್ಲ. ಆದ್ದರಿಂದ ನಾವುಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಹಾಗೂ ಮನೆಯಲ್ಲಿಯೇಆಯುರ್ವೇದಿಕ್ ಕಷಾಯವನ್ನು ಮಾಡಿ ಶರೀರಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತ ಮನೆಮದ್ದು ಮಾಡಿಕೊಳ್ಳಬೇಕು.

ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದರೆ ಯಾವುದೇ ರೋಗಗಳು ಬೇಗನೆ ಅಂಟೋದಿಲ್ಲ ಅಷ್ಟೇ ಅಲ್ಲದೆ ರೋಗಗಳಿಂದ ಬೇಗನೆ ಗುಣಮುಖರಾಗಬಹುದು. ಆದ್ದರಿಂದ ಆಯುಷ ಇಲಾಖೆ ತಿಳಿಸಿರುವಂತ ಈ ಕಷಾಯ ಮಾಡಿ ಬೇರೆಯವರಿಗೂ ತಿಳಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ. ಬನ್ನಿ ಕಷಾಯ ಹೇಗೆ ಮಾಡೋದು ಅನ್ನೋದನ್ನ ನೋಡೋಣ.

ಕಷಾಯ ತಯಾರಿಸಲು ಬೇಕಾಗುವ ಸಾಮಗ್ರಿಗಳು: 4 ಭಾಗದಷ್ಟು ಒಣಗಿದ ತುಳಸಿ ಎಲೆ, 2 ಭಾಗ ದಾಲ್ಚಿನ್ನಿ (ಚಕ್ಕೆ), 2 ಭಾಗದಷ್ಟು ಒಣಗಿದ ಶುಂಠಿ ಹಾಗೂ 1 ಭಾಗದಷ್ಟು ಕಾಳುಮೆಣಸು ತೆಗೆದುಕೊಂಡು ಪುಡಿ ಮಾಡಿ ಗಾಜಿನ ಬಾಟಲಿಯಲ್ಲಿ ಶೇಖರಿಸಿಟ್ಟುಕೊಳ್ಳಬೇಕು. 1/4 ಚಮಚದಷ್ಟು ಈ ಕಷಾಯದ ಪುಡಿಯನ್ನು 150 ಮಿಲಿ ನೀರಿನಲ್ಲಿ 5 ರಿಂದ 10 ನಿಮಿ| ಕುದಿಸಿ ಸೋಸಿ ದಿನಕ್ಕೆ 1 ಬಾರಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅಗತ್ಯ ಎನಿಸಿದರೆ, ಇದರ ಜೊತೆಗೆ ಬೆಲ್ಲ, ನಿಂಬೆರಸ ಅಥವಾ ಒಣದ್ರಾಕ್ಷಿ ಬೆರೆಸಿಕೊಳ್ಳಬಹುದಾಗಿದೆ. ಶೇರ್ ಮಾಡಿ ಬೇರೆಯವರಿಗೂ ಉಪಯೋಗವಾಗಲಿ ಧನ್ಯವಾದಗಳು..

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!