ಮೆಣಸಿನಕಾಯಿ ಬೆಳೆಯುವ ರೈತರಿಗೆ ಉಪಯುಕ್ತ ಮಾಹಿತಿ ಬೇರೆಯವರಿಗೂ ತಿಳಿಸಿ

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಪ್ರಮುಖ ತರಕಾರಿ ಬೆಳೆಗಳಲ್ಲಿ ಒಂದಾದ ಮೆಣಸಿನಕಾಯಿ ಪ್ರಸ್ತುತ ಪ್ರಪಂಚದಾದ್ಯಂತ ವ್ಯಾಪಕವಾಗಿ ಬೆಳೆಯಲಾಗುತ್ತದೆ ಮಾರುಕಟ್ಟೆಯಲ್ಲಿ ಇದರ ಹಸಿರು ಹಾಗೂ ಕೆಂಪು ಹಣ್ಣುಗಳು ಎರಡಕ್ಕೂ ಅತ್ಯಂತ ಒಳ್ಳೆಯ ಬೆಡಿಕೆ ಇರುತ್ತದೆ ರೈತರಿಗೆ ಇದೊಂದು ವಾಣಿಜ್ಯಿಕ ಬೆಳೆಯಾಗಿ ಹೊರಹೊಮ್ಮಿದೆಹಸಿ ಮೆಣಸಿನಕಾಯಿ ಗಾಢ ಹಸಿರು ಬಣ್ಣ ಹಾಗೂ ರುಚಿಯಲ್ಲಿ ಖಾರದಿಂದ ಕೂಡಿರುತ್ತದೆ ಆಹಾರ ಪದಾರ್ಥಗಳ ರುಚಿಯು ಖಾರದಿಂದ ಕೂಡಿರುತ್ತದೆ.

ಖಾರದ ರುಚಿಗಾಗಿ ಬಳಸುವುದನ್ನು ಬಿಟ್ಟರೆ ಯಾವುದೇ ಪ್ರಮುಖ ಖಾದ್ಯವನ್ನಾಗಿ ತಯಾರಿಸುವುದಿಲ್ಲ. ಪ್ರಮುಖ ವಾಣಿಜ್ಯ ಬೆಳೆಗಳಲ್ಲೊಂದಾದ ಮೆಣಸಿನಕಾಯಿ ಮುಖ್ಯವಾದ ತರಕಾರಿ ಹಾಗೂ ಸಾಂಬಾರ ಪದಾರ್ಥದ ಬೆಳೆಯಾಗಿ ಪ್ರಸಿದ್ದಿ ಹೊಂದಿದೆ ರುಚಿಯಲ್ಲಿ ಖಾರವಾಗಿದ್ದರೂ ಸಮೃದ್ಧವಾದ ಜೀವಸತ್ವಗಳನ್ನು ಹಾಗೂ ಪೋಷಕಾಂಶಗಳನ್ನು ಒಳಗೊಂಡಿದೆ.ನಾವು ಈ ಲೇಖನದ ಮೂಲಕ ಮೆಣಸಿನ ಕಾಯಿ ಬೆಳೆಯ ಬಗ್ಗೆ ತಿಳಿದುಕೊಳ್ಳೋಣ.

ಮೆಣಸಿನ ಬೆಳೆಯಲ್ಲಿ ಚೆನ್ನಾಗಿ ಇಳುವರಿ ಪಡೆಯಲು ಜೀವಾಮೃತ ಹಾಕಬೇಕು ಹಾಗೆಯೇ ಆಕಳ ಗಿ ಮೂತ್ರವನ್ನು ಹಾಕಬೇಕು ತಿಂಗಳಲ್ಲಿಮೂರರಿಂದ ನಾಲ್ಕು ಸಹ ಮೆಣಸಿನ ಸಸಿಗೆ ಗೋ ಮೂತ್ರವನ್ನು ಹಾಕಬೇಕು ಮೆಣಸಿನ ಬೆಳೆ ಬೆಳೆಯುವ ಪೂರ್ವದಲ್ಲಿ ಬದುವಿನಲ್ಲಿ ಮೆಕ್ಕೆ ಜೋಳ ಬೆಳೆಯಬೇಕು ಏಕೆಂದರೆ ಹೊರಕಡೆಯಿಂದ ಮೆಣಸಿನ ಗಿಡಕ್ಕೆ ಬರುವ ಕೀಟಗಳು ಬರುವುದಿಲ್ಲ. ಬದುವಿನಲ್ಲಿ ಮೆಕ್ಕೆ ಜೋಳ ಬೇಳೆಯುದರಿಂದ ಮೆಣಸಿನ ಗಿಡಕ್ಕೆ ರಕ್ಷಣೆ ಸಿಗುತ್ತದೆ ರೋಗ ಕಡಿಮೆ ಮಾಡಲು ಬದುವಿನಲ್ಲಿ ಮೆಕ್ಕೆ ಜೋಳ ಬೆಳೆಯುವುದು ಉತ್ತಮ ಬೀಜ ಹಾಕುವಾಗ ಎರಡು ಮೂರು ಬೀಜವನ್ನು ಹಾಕಿ ಬಿತ್ತುವುದರಿಂದ ಮೆಣಸಿನ ಗಿಡ ಸದೃಢವಾಗಿ ಇರುತ್ತದೆ ಸಸಿಗಳನ್ನು ಕಿತ್ತು ಬೇರೆ ಕಡೆಯಲ್ಲಿ ನೆಟ್ಟರೆ ಗಿಡಗಳು ಸದೃಢವಾಗಿ ಇರುವುದಿಲ್ಲ ಹಾಗೆಯೇ ಸಸಿಗಳ ಬೆಳವಣಿಗೆ ಕುಂಠಿತವಾಗುತ್ತದೆ ಸಸಿಗಳನ್ನು ಕಿತ್ತು ನೆಟ್ಟರೆ ಇಳುವರಿ ಕಡಿಮೆ ಆಗುತ್ತದೆ.

ಜೀವಾಮೃತ ವನ್ನು ಜಾಸ್ತಿ ಹಾಕಬೇಕು ಹಸುವಿದ್ದರೆ ರೈತರಿಗೆ ವರದಾನವಿದ್ದಂತೆ ಪ್ರತಿ ಹತ್ತು ಸಾಲಿಗೆ ಚೆಂಡು ಹೂವನ್ನು ನೆಡಬೇಕು ಚೆಂಡು ಹೂವಿನ ಗಿಡದಲ್ಲಿ ರೋಗ ನಿರೋಧಕ ಶಕ್ತಿ ಇರುತ್ತದೆ ಹಾಗಾಗಿ ಚೆಂಡು ಹೂವಿನ ಗಿಡವನ್ನು ನೆಡಬೇಕು ಕೀಟಗಳಿಂದ ಮೆಣಸಿನ ಗಿಡಕ್ಕೆ ರಕ್ಷಣೆ ನೀಡುತ್ತದೆ ಕೀಟಗಳು ಚೆಂಡು ಹೂವಿನ ಗಿಡಗಳಿಗೆ ಬರುತ್ತದೆ ಆದರೆ ಮೆಣಸಿನ ಗಿಡಕ್ಕೆ ಬರುವುದಿಲ್ಲ ಮೆಕ್ಕೆ ಜೋಳದ ಪಕ್ಕದಲ್ಲಿ ಹೂವಿನ ಗಿಡವನ್ನು ಬೆಳೆಯಬಹುದು ಪ್ರಮುಖ ವಾಣಿಜ್ಯ ಬೆಳೆಗಳಲ್ಲೊಂದಾದ ಮೆಣಸಿನಕಾಯಿ ಮುಖ್ಯವಾದ ತರಕಾರಿ ಹಾಗೂ ಸಾಂಬಾರ ಪದಾರ್ಥದ ಬೆಳೆಯಾಗಿ ಪ್ರಸಿದ್ದಿ ಹೊಂದಿದೆ.

ಇದನ್ನು ನೀರಾವರಿ ಮತ್ತು ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ರಾಜ್ಯದಲ್ಲಿ ಮುಖ್ಯವಾಗಿ ಈ ಬೆಳೆಯನ್ನು ಬೆಳಗಾವಿ ಧಾರವಾಡ ಕಲಬುರಗಿ ಶಿವಮೊಗ್ಗ ಕೋಲಾರ, ಮೈಸೂರು ಚಿತ್ರದುರ್ಗ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ ಮೆಣಸಿನ ಕಾಯಿಯನ್ನು ಬೆಳೆಯುವ ಮೂಲಕ ಹೆಚ್ಚಿನ ಆದಾಯವನ್ನು ಗಳಿಸಬಹುದು.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *