ಮೇಘನಾ ರಾಜ್ ಮನೆಯಲ್ಲಿ ಕ್ರಿಸ್‌ಮಸ್ ಸಂಭ್ರಮ ಹೇಗಿತ್ತು ನೋಡಿ

0 0

ಮೇಘನಾ ರಾಜ್ ಮನೆಯಲ್ಲಿ ಸದಾ ಮಡುಗಟ್ಟಿರುತ್ತದ್ದ ಮೌನದ ಜಾಗದಲ್ಲಿ ಈಗ ಸದಾ ಸಂಭ್ರಮ ಮನೆ ಮಾಡಿರುತ್ತದೆ. ಪುಟ್ಟ ರಾಯನ್ ಮುಖ ನೋಡಿ ತಮ್ಮ ದುಃಖ ಮರೆಯುವ ತಾಯಿ, ಮೊಮ್ಮಗನ ನಗುವಿನಲ್ಲಿ ಎಲ್ಲವನ್ನು ಮರೆತು ಮಕ್ಕಳಾಗುವ ಅಜ್ಜ ಅಜ್ಜಿ ಹೀಗೆ ಎಲ್ಲವೂ ಈಗ ರಾಯನ್ ಮಯ. ಈಗ ಅಂತಹುದೇ ಸಂಭ್ರಮದ ಕ್ಷಣವೊಂದನ್ನು ಮೇಘನಾ ರಾಜ್ ಹಂಚಿಕೊಂಡಿದ್ದಾರೆ. ಮೇಘನಾ ರಾಜ್ ಮನೆಯಲ್ಲಿ ಸಂಭ್ರಮವೂಂದು ನಿಧಾನಕ್ಕೆ ರಂಗೇರುತ್ತಿದೆ. ಮನೆಯನ್ನು ಚೆಂದದ ದೀಪಗಳಿಂದ ಅಲಂಕಾರಗೊಳ್ಳುತ್ತಿರುವ ಮನೆಯನ್ನು ನಟಿ ಮೇಘನಾ ರಾಜ್ ತಮ್ಮ ಪುತ್ರ ರಾಯನ್ ರಾಜ್ ಸರ್ಜಾ ಜೊತೆ ನಿಂತು ವೀಕ್ಷಿಸುತ್ತಿರುವ ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಇಷ್ಟಕ್ಕೂ ಮನೆ ಹೀಗೆ ಅಲಂಕಾರಗೊಂಡಿದ್ಯಾಕೆ ಗೊತ್ತಾ?  ಕ್ರಿಸ್‌ಮಸ್ ಹಬ್ಬ ಅದ್ದೂರಿಯಾಗಿ ಆಚರಿಸೋಕೆ ಮೇಘನಾ ಮನೆಯಲ್ಲಿ ದೀಪದ ಅಲಂಕಾರ, ಕ್ರಿಸ್‌ಮಸ್ ಟ್ರೀ ಎಲ್ಲವೂ ಸಿದ್ಧವಾಗಿತ್ತು. ಕಳೆದ ವರ್ಷದ ಕ್ರಿಸ್‌ಮಸ್ ವೇಳೆ ರಾಯನ್ ರಾಜ್ ಸರ್ಜಾ ಚಿಕ್ಕ ಮಗುವಾಗಿದಾದ. ಈಗ ಒಂದೂವರೆ ವರ್ಷ ಸಮೀಪಿಸುತ್ತಿದ್ದು ರಾಯನ್ ಬೆಳಕು, ಸಂಭ್ರಮ ಎಲ್ಲವೂ ಅರ್ಥವಾಗುತ್ತಿದೆ. ಹೀಗಾಗಿ ಈ ಭಾರಿ ಕ್ರಿಸ್‌ಮಸ್ ಸಂಭ್ರಮವನ್ನು ಕುಟುಂಬ  ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದರು.

ಎಲ್ಲರಿಗೂ ಗೊತ್ತಿರುವಂತೆ ಮೇಘನಾ ತಾಯಿ ಪ್ರಮೀಳಾ ಜೋಷಾಯ್ ಕ್ರಿಸ್‌ಮಸ್ ಧರ್ಮಕ್ಕೆ ಸೇರಿದವರು. ಮೇಘನಾ ತಂದೆ ಹಿಂದೂ ಧರ್ಮದದವರು. ಹೀಗಾಗಿ ಮೇಘನಾ ಮನೆಯಲ್ಲಿ ಎರಡು ಧರ್ಮಕ್ಕೆ ಸಂಬಂಧಿಸಿದ ಹಬ್ಬ ಹರಿದಿನಗಳು ಆರಿಸಲ್ಪಡುತ್ತದೆ. ಹೀಗಾಗಿ ಕ್ರಿಸ್‌ಮಸ್ ಆಚರಿಸಿದ್ದ ಫೋಟೋವನ್ನು ಮೇಘನಾ ಶೇರ್ ಮಾಡಿದ್ದು, ಜೊತೆಗೆ ಇದರಲ್ಲಿ ಚಳಿಗೆ ಫುಲ್ ಸ್ವೆಟರ್, ಮಂಕಿ ಕ್ಯಾಪ್, ಸಾಕ್ಸ್ ಧರಿಸಿದ ರಾಯನ್ ಸರ್ಜಾ ತಾಯಿ ಜೊತೆ ಸ್ಟಾರ್ ಮತ್ತು ಲೈಟ್ಸಗಳನ್ನು ನೋಡುತ್ತಿದ್ದಾರೆ.

ಇದಕ್ಕೆ ಮೇಘನಾ ರಾಜ್, ಲವ್ ಲೈಫ್ ಮತ್ತು ಅಧ್ಭುತವಾದ ಡಿಸೆಂಬರ್ ತಿಂಗಳು ಎಂದು ಕ್ಯಾಪ್ಶನ್ ನೀಡಿದ್ದಾರೆ. ಇದಕ್ಕೆ ಮೇಘನಾ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ, ಹಬ್ಬಕ್ಕೆ ಹಾಗೂ ರಾಯನ್ ಸರ್ಜಾಗೆ ಶುಭ ಹಾರೈಸಿದ್ದಾರೆ.

Leave A Reply

Your email address will not be published.