ಗಂಡ ಆದವನು ಹೆಂಡ್ತಿ ಮಕ್ಕಳ ಮುಂದೆ ಇಂತಹ ಇಂತಹ ಕೆಲಸ ಮಾಡಲೇಬಾರದು ಅಂತಾರೆ ಚಾಣಿಕ್ಯ

0 1

ಆಚಾರ್ಯ ಚಾಣಕ್ಯರ ಮಾತುಗಳು ಬದುಕಿನ ಔನ್ನತ್ಯಕ್ಕೆ ದಾರಿ ಆಗಬಲ್ಲದು. ಅರ್ಥಶಾಸ್ತ್ರ, ರಾಜಕಾರಣ, ತರ್ಕಶಾಸ್ತ್ರ, ತತ್ವಜ್ಞಾನ ವಿಚಾರಗಳಲ್ಲಿ ಮಹಾಜ್ಞಾನಿಯಾಗಿದ್ದ ಚಾಣಕ್ಯ ಮಹಿಳೆಯರು, ಪುರುಷರು ಹಾಗೂ ಮಕ್ಕಳ ಬಗ್ಗೆ ಹೇಳಿದ ನೀತಿಬೋಧೆಗಳು ಎಲ್ಲರೂ ಪಾಲಿಸುವಂಥದ್ದು. ಚಾಣಕ್ಯ ನೀತಿಯಲ್ಲಿ ಸರ್ವರೀತಿಯ ನೀತಿಪಾಠಗಳನ್ನು ಚಾಣಕ್ಯ ತಿಳಿಸಿದ್ದಾರೆ. ಜೀವನ ಹೇಗೆ ನಡೆಸಬೇಕು ಎಂದು ದಾರಿದೀಪ ನೀಡಿದ್ದಾರೆ. ಒಬ್ಬನಿಗೆ ಇರಬೇಕಾದ ಉತ್ತಮ ಮತ್ತು ಇರಬಾರದ ಕೆಟ್ಟ ಗುಣಗಳ ಬಗ್ಗೆಯೂ ಅವರು ತಿಳಿಹೇಳಿದ್ದಾರೆ. ಅದೇ ರೀತಿ ಹೆಂಡತಿ, ಮಕ್ಕಳ ಮುಂದೆ ಇಂತಹ ಮಾತು ಆಡಲೇಬಾರದೂ ಎಂದೂ ಕೂಡಾ ಆಚಾರ್ಯ ಚಾಣಕ್ಯ ಅವರು ತಿಳಿಸಿದ್ದಾರೆ.

ಭಾರತೀಯ ಪರಂಪರೆಯಲ್ಲಿ ಆಚಾರ್ಯ ಚಾಣಕ್ಯರಿಗೆ ವಿಶೇಷ ಸ್ಥಾನಮಾನ ನೀಡಿ ಗೌರವಿಸಲಾಗುತ್ತದೆ. ಅವರನ್ನು ದೇಶದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ತಮ್ಮ ಬುದ್ಧಿವಂತಿಕೆ, ತೀಕ್ಷ್ಣವಾದ ಆಲೋಚನಾ ಕ್ರಮ ಮತ್ತು ಸಾಮರ್ಥ್ಯಗಳಿಂದ ಭಾರತೀಯ ಇತಿಹಾಸದ ಹಾದಿಯನ್ನು ಬದಲಾಯಿಸಿದ ಅವರು ಕೆಲ ಹೊಸ ದಾಖಲೆಗಳಿಗೂ ಕಾರಣರಾದವರು. ಇಂದಿಗೂ ಸಹ, ಆಚಾರ್ಯರ ಮಾತುಗಳು ಪ್ರಸ್ತುತವಾಗಿದ್ದು ಉತ್ತಮ ಬದುಕನ್ನು ಕಂಡುಕೊಳ್ಳಲ್ಲಿ ಅವುಗಳನ್ನು ಅನುಸರಿಸುವುದು ಸೂಕ್ತವೆಂದೆನಿಸಿಕೊಂಡಿವೆ.

ಆಚಾರ್ಯ ಚಾಣಕ್ಯ ಜೀವನದ ಪ್ರತಿಯೊಂದು ಆಯಾಮಗಳನ್ನು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಸಾವಿರಾರು ವಿಚಾರಗಳನ್ನು ತಿಳಿಸುವ ಚಾಣಕ್ಯ ನೀತಿಯಲ್ಲಿ ಒಬ್ಬ ವ್ಯಕ್ತಿ ತಾನಾಡುವ ಮಾತುಗಳ ನಿಜವಾದ ಅರ್ಥವನ್ನು ತಿಳಿದುಕೊಂಡರೆ, ಅವುಗಳಿಗೆ ಜೀವ ತುಂಬಿದರೆ, ಆತ ಎಲ್ಲಾ ಸವಾಲುಗಳನ್ನು ಸುಲಭವಾಗಿ ಜಯಿಸಬಹುದು ಎಂಬ ಒಂದು ಸಲಹೆಯನ್ನೂ ನೀಡಲಾಗಿದೆ. ಚಾಣಕ್ಯರ ಮಾತುಗಳು ಕೇಳಲು ಅಥವಾ ಓದಲು ಕಟು ಎನಿಸಬಹುದು. ಆದರೆ ವಾಸ್ತವದಲ್ಲಿ ಅವು ಜೀವನದ ಎಷ್ಟೋ ವಿಚಾರಗಳನ್ನು ನೇರವಾಗಿ ತೆರೆದಿಡುತ್ತವೆ.

ಸಾವಿರಾರು ವಿಚಾರಗಳನ್ನು ತಿಳಿಸುವ ಚಾಣಕ್ಯ ನೀತಿಯಲ್ಲಿ ಒಬ್ಬ ವ್ಯಕ್ತಿ ತಾನಾಡುವ ಮಾತುಗಳ ನಿಜವಾದ ಅರ್ಥವನ್ನು ತಿಳಿದುಕೊಂಡರೆ, ಅವುಗಳಿಗೆ ಜೀವ ತುಂಬಿದರೆ, ಆತ ಎಲ್ಲಾ ಸವಾಲುಗಳನ್ನು ಸುಲಭವಾಗಿ ಜಯಿಸಬಹುದು ಎಂಬ ಒಂದು ಸಲಹೆಯನ್ನೂ ನೀಡಲಾಗಿದೆ. ಆಚಾರ್ಯ ಚಾಣಕ್ಯರು ಹೇಳಿದ ಆ ವಿಷಯವನ್ನು ನಾವಿಲ್ಲಿ ನೋಡೋಣ.

ಚಾಣಕ್ಯ ನೀತಿಯ ಪ್ರಕಾರ, ಮಾತನಾಡುವಾಗ ಪದಗಳನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು. ಆಡಿತ ಪದಗಳು ಕೆಲವೊಮ್ಮೆ ತುಂಬಾ ಆಳವಾಗಿ ನೋವುಂಟುಮಾಡುತ್ತದೆ. ಆದ್ದರಿಂದ, ಸಂಭಾಷಣೆಯ ಸಮಯದಲ್ಲಿ ಯಾವ ಪದಗಳನ್ನು ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಗಮನ ಹರಿಸಬೇಕು. ಹೆಂಡತಿ ಮತ್ತು ಮಕ್ಕಳ ಮುಂದೆ ಅಂತು ಎಚ್ಚರಿಕೆಯ ಮಾತು ಬಳಸಿದರೆ ಕುಟುಂಬದ ಶಾಂತಿ ಮೂಡುತ್ತದೆ. ಕೆಲವು ಪದಗಳನ್ನು ಬಳಕೆ ಮಾಡುವ ಮೂಲಕ ವ್ಯಕ್ತಿ ತನ್ನ ಗೌರವಕ್ಕೆ ಧಕ್ಕೆ ತಂದುಕೊಳ್ಳುತ್ತಾನೆ.

ಆತನ ಮಾತುಗಳು ತಪ್ಪು ಸಂದೇಶವನ್ನು ರವಾನಿಸದಂತೆ ಎಚ್ಚರಿಕೆ ವಹಿಸಬೇಕು. ಪೋಷಕರ ಮಾತು, ಭಾಷೆ ಮತ್ತು ಅಭ್ಯಾಸಗಳಿಂದ ಮಕ್ಕಳು ಹೆಚ್ಚು ಪ್ರಭಾವಿತರಾಗುತ್ತಾರೆ ಎಂದು ಚಾಣಕ್ಯ ನೀತಿ ಹೇಳುತ್ತಾರೆ. ಆದ್ದರಿಂದ ಪೋಷಕರು ವಿಶೇಷ ಕಾಳಜಿ ವಹಿಸಬೇಕು. ಮಕ್ಕಳ ಮುಂದೆ ಎಂದಿಗೂ ತಪ್ಪು ಮತ್ತು ಅನುಚಿತ ಭಾಷೆ ಇತ್ಯಾದಿಗಳನ್ನು ಬಳಸಬೇಡಿ. ಇದು ಮಕ್ಕಳ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ.

ಹೆಂಡತಿಯೊಂದಿಗೆ ಎಂದಿಗೂ ಹೃದಯಕ್ಕೆ ನೋವುಂಟು ಮಾಡುವ ಮಾತನಾಡಬಾರದು ಎಂದು ಚಾಣಕ್ಯ ನೀತಿ ಹೇಳುತ್ತಾನೆ. ನಿಮ್ಮ ಹೆಂಡತಿಯ ಉತ್ಸಾಹವನ್ನು ಹೆಚ್ಚಿಸಿ, ಕಟುವಾದ ಮಾತನಾಡುವುದರಿಂದ ಅವರ ಆತ್ಮ ವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಹೆಂಡತಿಗೆ ಹೀಯಾಳಿಸುವ ಮಾತು ಆಡಬಾರದು. ಇದರಿಂದ ವೈಮನಸ್ಸು ಮತ್ತು ಉದ್ವೇಗವೂ ಹೆಚ್ಚುತ್ತದೆ. ಜೀವನದಲ್ಲಿ ಅಪಶ್ರುತಿ ಮತ್ತು ಒತ್ತಡದಿಂದಾಗಿ, ಯಶಸ್ಸಿನ ವೇಗವು ನಿಧಾನಗೊಳ್ಳುತ್ತದೆ. ಆದ್ದರಿಂದ ಈ ಬಗ್ಗೆ ಕಾಳಜಿ ವಹಿಸಬೇಕು. ಚಾಣಕ್ಯ ನೀತಿ ಪ್ರಕಾರ, ಮನೆಯ ಪರಿಸರವನ್ನು ಸದಾ ಉತ್ತಮವಾಗಿಡಲು ಪ್ರಯತ್ನಿಸಬೇಕು. ಇದರಿಂದ ಮನೆಯಲ್ಲಿ ಹೆಚ್ಚು ಧನಾತ್ಮಕ ಶಕ್ತಿ ಇರುತ್ತದೆ. ಮನೆಯಲ್ಲಿ ಶಿಸ್ತು ಮತ್ತು ಸಜ್ಜನಿಕೆ ಮಾತುಗಳು ಆಡಳಬೇಕು. ಕೋಪ ಮತ್ತು ಅಹಂಕಾರದಿಂದ ದೂರವಿದ್ದು, ಸ್ವಭಾವದಲ್ಲಿ ವಿನಯ ಮತ್ತು ಭಾಷೆಯಲ್ಲಿ ಮಾಧುರ್ಯ ಇರಬೇಕು.

Leave A Reply

Your email address will not be published.