PUC ಪಾಸ್ ಆದವರಿಗೆ ಗ್ರಾಮ ಪಂಚಾಯ್ತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಕರೆಯಲಾಗಿದೆ, ಆಸಕ್ತರು ಕೂಡಲೇ ಅರ್ಜಿಹಾಕಿ

0 5,806

ಕರ್ನಾಟಕ ರಾಜ್ಯ ಸರ್ಕಾರ ಉದ್ಯೋಗ ಅವಕಾಶಗಳನ್ನು ಕಲ್ಪಿಸುತ್ತಿದೆ ಅವರ ವಿದ್ಯಾ ಅರ್ಹತೆಗೆ ತಕ್ಕಂತೆ ಅವರಿಗೆ ಉದ್ಯೋಗ ಲಭ್ಯ ಇರುತ್ತದೆ. ಯಾವುದು ಆ ಉದ್ಯೋಗ ಅವಕಾಶ ಎಂದು ನೋಡೋಣ ಬನ್ನಿ.

2024ರ ಶಿವಮೊಗ್ಗ ಗ್ರಾಮ ಪಂಚಾಯಿತಿ ನೇಮಕಾತಿ ಶಿವಮೊಗ್ಗ ಗ್ರಾಮ ಪಂಚಾಯಿತಿಯಲ್ಲಿ ಪ್ರಸ್ತುತ ಖಾಲಿ ಇರುವ ಬೇರೆ ಬೇರೆ ಹುದ್ದೆಗಳಿಗೆ ಅಪ್ಲಿಕೇಶನ್’ಗಳನ್ನು ಸ್ವೀಕಾರ ಮಾಡಲಾಗುತ್ತಿದೆ. ಅರ್ಹತೆ ಇರುವ ಅಭ್ಯರ್ಥಿಗಳಿಗೆ ಅಪ್ಲಿಕೇಶನ್ ಸಲ್ಲಿಕೆ ಮಾಡಲು  ಪ್ರೋತ್ಸಾಹ ಸಹ ನೀಡಲಾಗುತ್ತದೆ. ಪ್ರಸ್ತುತ 14 ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳು ಖಾಲಿ ಇವೆ. ಆಸಕ್ತಿ ಮತ್ತು ಅರ್ಹತೆ ಇರುವವರು, ಈ ಹುದ್ದೆಗಳಿಗೆ ಅಪ್ಲಿಕೇಶನ್ ಸಲ್ಲಿಕೆ ಮಾಡಬಹುದು. ಅಪ್ಲಿಕೇಶನ್ ಸಲ್ಲಿಕೆ ಮಾಡಲು ಕೊನೆ ದಿನಾಂಕ 23/02/2024

ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್’ಗಳನ್ನು ಇ-ಮೇಲ್ ಮುಖಾಂತರ ಸಲ್ಲಿಕೆ ಮಾಡಲು ಕೋರಿಕೊಳ್ಳಲಾಗಿದೆ. ಪಿಯುಸಿ ಉತ್ತೀರ್ಣವಾದ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶ. ಅರ್ಹತೆ ಉಳ್ಳವರು ಇದನ್ನು, ಸದುಪಯೋಗ ಪಡಿಸಿಕೊಳ್ಳಬಹುದು. ರಾಜ್ಯ ಸರ್ಕಾರಿ ಉದ್ಯೋಗಗಳನ್ನು ಅಪೇಕ್ಷಿಸುವ ಅರ್ಜಿದಾರರಿಗೆ ಈ ಅವಕಾಶವು ಉತ್ತಮವಾಗಿದೆ. ಅಪ್ಲಿಕೇಶನ್ ಸಲ್ಲಿಕೆ ಮಾಡುವ ಮುನ್ನ ಹುದ್ದೆಗೆ ತಕ್ಕ ವಿದ್ಯ ಅರ್ಹತೆ, ಸಂಬಳ, ವಯಸ್ಸು, ಅಪ್ಲಿಕೇಶನ್ ಫೀಸ್ ಮತ್ತು ಆಯ್ಕೆ ಪ್ರಕ್ರಿಯೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.

ಶಿಕ್ಷಣ ಅರ್ಹತೆಗಳು :-ಶಿವಮೊಗ್ಗ ಗ್ರಾಮ ಪಂಚಾಯಿತಿ ನೇಮಕಾತಿ ಅಧಿಸೂಚನೆಯ ಪ್ರಕಾರ, ಅರ್ಜಿದಾರರು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಮಂಡಳಿಯಿಂದ ಪಿಯುಸಿ ಮತ್ತು ಗ್ರಂಥಾಲಯ ವಿಜ್ಞಾನದಲ್ಲಿ ಪ್ರಮಾಣೀಕರಣ ಕೋರ್ಸ್ ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ :-ಶಿವಮೊಗ್ಗ ಗ್ರಾಮ ಪಂಚಾಯಿತಿ ನೇಮಕಾತಿ ಅಧಿಸೂಚನೆಯ ಪ್ರಕಾರ, ಅರ್ಜಿದಾರರು 23/02/2024 ರಂತೆ 18 ರಿಂದ 40 ವರ್ಷದ ವಯಸ್ಸಿನವರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ವಯೋಮಿತಿ ಸಡಿಲಿಕೆ :-03 ವರ್ಷಗಳ ಅನುಭವ ಹೊಂದಿರುವ ವರ್ಗ 2A, 2B, 3A, ಮತ್ತು 3B ಅಭ್ಯರ್ಥಿಗಳು ಹಾಗೂ SC/ST/Cat-I ಅರ್ಜಿದಾರರಿಗೆ 05 ವರ್ಷಗಳ ಸಡಿಲಿಕೆ ಲಭ್ಯವಿದೆ. ಮತ್ತು ವಿಧವೆ ಅರ್ಜಿದಾರರು ಮರು ಮದುವೆ ಆಗುವುದಿಲ್ಲ ಎಂದು ಖಚಿತ ಪಡಿಸಿದರೆ 10 ವರ್ಷಗಳ ಸಡಿಲಿಕೆ ಲಭ್ಯವಿದೆ .

ತಿಂಗಳ ವೇತನ :-  ₹ 15,196.72 ಕೊಡಲಾಗುವುದು.
ಉದ್ಯೋಗ ಸ್ಥಳ :- ಶಿವಮೊಗ್ಗ. ಅರ್ಜಿದಾರರ ಆಯ್ಕೆ ಪ್ರಕ್ರಿಯೆ ಮೆರಿಟ್ ಲಿಸ್ಟ್  ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ.

ಅಪ್ಲಿಕೇಶನ್ ಸಲ್ಲಿಕೆ ಮಾಡುವ ವಿಧಾನ :-ಭರ್ತಿ ಮಾಡಿದ  ಅಪ್ಲಿಕೇಶನ್ ನಮೂನೆ ಮತ್ತು ಅಗತ್ಯ ಇರುವರ ಡಾಕ್ಯುಮೆಂಟ್ಸ್’ಗಳನ್ನು ನೀಡಿರುವ ವಿಳಾಸಕ್ಕೆ ಕಳುಹಿಸಬೇಕು.

ವಿಳಾಸ :-ಕರ್ನಾಟಕ ರಾಜ್ಯದ ಶಿವಮೊಗ್ಗದಲ್ಲಿ ಸಂಬಂಧಿಸಿದ ಗ್ರಾಮ ಪಂಚಾಯಿತಿಯ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶಿವಮೊಗ್ಗ ಕರ್ನಾಟಕ.

ಪ್ರಮುಖ ದಿನಾಂಕಗಳು :-
ಅಪ್ಲಿಕೇಶನ್ ಪ್ರಾರಂಭದ ದಿನಾಂಕ :- 05/02/2024
ಅಪ್ಲಿಕೇಶನ್ ಸಲ್ಲಿಸುವ ಕೊನೆ ದಿನ :- 23/02/2024

ಅಧಿಸೂಚನೆ PDF ಡೌನ್ ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ :-
https://cdn.s3waas.gov.in/s3d4c2e4a3297fe25a71d030b67eb83bfc/uploads/2024/02/2024020398.pdf

ಅಪ್ಲಿಕೇಶನ್ ಅರ್ಜಿ ಡೌನ್ ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ :-
https://cdn.s3waas.gov.in/s3d4c2e4a3297fe25a71d030b67eb83bfc/uploads/2024/02/2024020319-1.pdf

Leave A Reply

Your email address will not be published.