ಪ್ರತಿದಿನ ಅನ್ನ ಬೇಯಿಸದ ಮನೆ ಇಲ್ಲ. ದಿನ ಕಳೆದಂತೆ ದಿನಸಿ ಸಾಮಗ್ರಿಗಳ ಬೆಲೆ ಹೆಚ್ಚಾಗುತ್ತಿದೆ. ಅಕ್ಕಿ ದಿನ ಬಳಕೆ ಮಾಡುವ ಧಾನ್ಯ ಆಗಿರುವ ಕಾರಣ ಜನಸಾಮಾನ್ಯರು ಬದುಕು ನಡೆಸುವುದೇ ಕಷ್ಟವಾಗಿದೆ. ಒಂದು ಕೆ.ಜಿ ಅಕ್ಕಿಯ ಬೆಲೆ ಸರಾಸರಿ 45 ರೂಪಾಯಿ. ಆದರೆ ಇದು ಮಧ್ಯಮ ವರ್ಗ ಹಾಗೂ ಬಡ ವರ್ಗದ ಜನರಿಗೆ ಹೆಚ್ಚು ಹೊರೆಯಾಗುತ್ತಿದೆ. ಈ ವಿಷಯ ಕೇಂದ್ರ ಸರ್ಕಾರದ ಗಮನಕ್ಕೆ ಬಂದ ಕಾರಣ ಸರ್ಕಾರ ಭಾರತ್ ಬ್ರಾಂಡ್ ಅಕ್ಕಿಯನ್ನು ಪರಿಚಯ ಮಾಡುತ್ತಿದೆ.

ಪ್ರಸ್ತುತ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಭಾರತ್ ಬ್ರಾಂಡ್ ಅಕ್ಕಿ ಲಭ್ಯವಿದ್ದು. ಮುಂದೆ ಬರುವ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಭಾರತ್ ಬ್ರಾಂಡ್ ಅಕ್ಕಿ ದೊರಕುತ್ತದೆ. ಇವಾಗಿನ ಕಾಲಮಾನದಲ್ಲಿ ಜನರು ಎಲ್ಲ ರೀತಿಯ ದಿನಸಿ, ತರಕಾರಿ ಮತ್ತು ಹಣ್ಣುಗಳನ್ನು ಆನ್ಲೈನ್ ಮೂಲಕ ಖರೀದಿ ಮಾಡುವುದು ಅತಿ ಸಾಮಾನ್ಯವಾಗಿದೆ. ಆನ್ಲೈನ್ ಮೂಲಕ ಈ ಭಾರತ್ ಬ್ರಾಂಡ್ ಅಕ್ಕಿಯನ್ನು ಖರೀದಿ ಮಾಡಬಹುದು.

ಫ್ಲಿಪ್ಕಾರ್ಟ್ ( Flipkart ), ಅಮೆಜಾನ್ ( amazon ), ಬಿಗ್ ಬಾಸ್ಕೆಟ್ ( big basket ) ಅಪ್ಲಿಕೇಷನ್ ಮೂಲಕ ಅಕ್ಕಿಯನ್ನು ಖರೀದಿ ಮಾಡಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಬೇರೆ ಬ್ರಾಂಡ್ ಅಕ್ಕಿ’ಗಳಿಗಿಂತ ತುಂಬ ಕಡಿಮೆ ಬೆಲೆಯಲ್ಲಿ ದೊರಕುವುದು ಭಾರತ್ ಬ್ರಾಂಡ್ ಅಕ್ಕಿ. ಈ ಅಕ್ಕಿಯ ಬೆಲೆ ಕೇವಲ ₹29 ರೂಪಾಯಿ.

ಸಧ್ಯಕ್ಕೆ ಬೆಂಗಳೂರಿನ 50 ಬೇರೆ ಬೇರೆ ನಗರಗಳಲ್ಲಿ ಭಾರತ್ ಬ್ರಾಂಡ್ ಅಕ್ಕಿ ದೊರಕುತ್ತಿದೆ. ಬಸವೇಶ್ವರ ನಗರ, ದೀಪಾಂಜಲಿ ನಗರ, ಮಹಾಕ್ಷ್ಮಿ ಲೇಔಟ್, ಗಾಯತ್ರಿ ನಗರ, ನಾಗಸಂದ್ರ, ಅಬ್ಬಿಗೆರೆ, ಚಿಕ್ಕಬಾಣಾವರ, ಥಣಿಸಂದ್ರ, ಹೆಸರಘಟ್ಟ, ಯಲಹಂಕ, ಮಾಗಡಿ ರೋಡ್, ಕೊಡಿಗೆಹಳ್ಳಿ, ಶೇಷಾದ್ರಿಪುರಂ, ಸಂಜಯ್ ನಗರ, ಜಕ್ಕೂರು, ಬನಶಂಕರಿ, ಕುಮಾರಸ್ವಾಮಿ ಲೇಔಟ್, ಜೆ.ಸಿ. ನಗರ, ಡೈರಿ ಸರ್ಕಲ್, ಕೊಡಿಗೆಹಳ್ಳಿ ಮತ್ತು ಇತರೆ ಜಾಗಗಳಲ್ಲಿ ಅಕ್ಕಿ ಲಭ್ಯವಿದೆ.

ಪ್ರಸ್ತುತ ಭಾರತ್ ಅಟ್ಟಾ ( ಗೋಧಿ ಹಿಟ್ಟು ) ಮತ್ತು ಭಾರತ್ ದಾಲ್ ಹೆಚ್ಚು ಬೇಡಿಕೆಯಲ್ಲಿ ಇದೆ. ಭಾರತ್ ಅಟ್ಟಾ ( ಗೋಧಿ ಹಿಟ್ಟು ) ಒಂದು ಕೆ.ಜಿ ಯ ಬೆಲೆ ₹27.50 ರೂಪಾಯಿ , ಅದೇ ರೀತಿ ಒಂದು ಕೆ.ಜಿ ಭಾರತ್ ದಾಲ್ ಬೆಲೆ ₹60 ರೂಪಾಯಿ.

ಭಾರತ್ ಅಟ್ಟಾ ( ಗೋಧಿ ಹಿಟ್ಟು ) ಮತ್ತು ಭಾರತ್ ದಾಲ್ ಬೆಂಗಳೂರಿನಲ್ಲಿ 2,81,572 ಕೆ.ಜಿ. ಭಾರತ್ ಬ್ರಾಂಡ್ ಅಟ್ಟಾ ( ಗೋಧಿ ಹಿಟ್ಟು ) 1,22,190 ಕೆ.ಜಿ ಮಾರಾಟವಾಗುತ್ತಿದೆ. ಭಾರತ್ ದಾಲ್ ಮತ್ತು ಭಾರತ್ ಅಟ್ಟಾ ( ಗೋಧಿ ಹಿಟ್ಟು) ಕೂಡ ಫ್ಲಿಪ್ಕಾರ್ಟ್ ( Flipkart ) ಹಾಗೂ ಅಮೆಜಾನ್ ( Amazon ) ಆ್ಯಪ್’ಗಳಲ್ಲಿ ಲಭ್ಯವಿದೆ.

ಭಾರತ್ ದಾಲ್ ಮತ್ತು ಭಾರತ್ ಅಟ್ಟಾ ( ಗೋಧಿ ಹಿಟ್ಟು ) ದಿ ನ್ಯಾಷನಲ್ ಅಗ್ರಿಕಲ್ಚರಲ್ ಕೋ-ಆಪರೇಟಿವ್ ಫೆಡರೇಶನ್ ಆಫ್ ಇಂಡಿಯಾ (NAFED), ನ್ಯಾಷನಲ್ ಕನ್ಸ್ಯೂಮರ್ಸ್ ಕೋ-ಆಪರೇಟಿವ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NCCF), ಕೇಂದ್ರೀಯ ಭಂಡಾರ್ ಮತ್ತು ಸಫಲ್ಹಾಗೂ ಎನ್ನುವ ಬೇರೆ ಬೇರೆ ರೀತಿಯ ಕಿರಾಣಿ ಅಂಗಡಿಗಳಲ್ಲೂ ಕೂಡ ಲಭ್ಯವಿದೆ.

ಭಾರತ್ ಬ್ರಾಂಡ್’ನಲ್ಲಿ ಇನ್ನು ಯಾವ ಬೇರೆ ರೀತಿಯ ಸಾಮಗ್ರಿಗಳು ಸಿಗುತ್ತದೆ ಎಂದು ತಿಳಿಯೋಣ. ಭಾರತ್ ಬ್ರಾಂಡ್ ಮಳಿಗೆಯಲ್ಲಿ ತಂಪು ಪಾನೀಯಗಳು, ದಿನಸಿ ಸಾಮಗ್ರಿಗಳು, ದೇವರ ಪೂಜೆ ಮಾಡಲು ಬಳಸುವ ಸಾಮಗ್ರಿಗಳು, ಔಷಧಿಗಳು ಕೂಡ ಸಿಗುತ್ತದೆ. ದಿನ ನಿತ್ಯ ಬಳಕೆ ಮಾಡುವ ಕೆಲವು ಸಾಮಗ್ರಿಗಳ ಬೆಲೆ ನೋಡೋಣ.

  • ಬ್ಲ್ಯಾಕ್ ಸಾಲ್ಟ್ :- ₹15 ರೂಪಾಯಿ ಇಂದ ಪ್ರಾರಂಭವಾಗುತ್ತದೆ
  • ಒಂದು ಪ್ಯಾಕ್ ಕಲ್ಲುಪ್ಪು :- ₹15 ರೂಪಾಯಿ
  • ಪ್ಲಾಕ್ಸ್ ಸಿಡ್ :- ₹35 ರೂಪಾಯಿ
  • ಲಿನ್ಸೆಡ್ ಎಣ್ಣೆ :- ₹150 ರೂಪಾಯಿ
  • ಬೆಲ್ಲದ ಪುಡಿ :- ₹95 ರೂಪಾಯಿ
  • ನಾಲ್ಕು ಗ್ರಾಂ ಬೆಲ್ಲದ ಕ್ಯೂಬ್ :- ₹120 ರೂಪಾಯಿ
  • ಆಯುರ್ವೇದಿಕ್ ಟೀ ಪುಡಿ :- ₹250 ರೂಪಾಯಿ
  • ತುಳಸಿ ಗ್ರೀನ್ ಟೀ ಪುಡಿ :- ₹ 360 ರೂಪಾಯಿ
  • ಲೆಮನ್ ಮಸಾಲಾ ಚಾಯ್ :- ₹150 ರೂಪಾಯಿ
  • ಆ್ಯಪಲ್ ಸೈಡರ್ ವಿನೆಗರ್ :- ₹350 ರೂಪಾಯಿ.

ಸರ್ಕಾರ ಜನರಿಗೆ ಉಪಯೋಗ ಮಾಡುವಂತೆ ಭಾರತ್ ಬ್ರಾಂಡ್ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಬಿಡುಗಡೆ ಮಾಡಿದೆ. ಅದು ಆನ್ಲೈನ್ ಮೂಲಕ ಕೂಡ ಸಿಗುವ ಕಾರಣ ಜನರಿಗೆ ಹೆಚ್ಚು ಅನುಕೂಲ ಆಗುತ್ತದೆ.

Leave a Reply

Your email address will not be published. Required fields are marked *