Govt New rules For Own Property House Lands: ಪ್ರತಿ ವ್ಯಕ್ತಿ ಕೂಡ ತಮ್ಮದೇ ಆದ ಸ್ವಂತ ಮನೆ ಮಾಡಿಕೊಳ್ಳಬೇಕು ಎಂದು ಆಸೆ ಇರುತ್ತದೆ. ಅದಕ್ಕಾಗಿಯೇ ಕಷ್ಟ ಪಟ್ಟು ಕೆಲಸ ಮಾಡುತ್ತಾರೆ. ಆದರೆ ಆಸ್ತಿ, ಮನೆ, ಜಮೀನು ಖರೀದಿ ಮಾಡುವುದು ಅಷ್ಟು ಸುಲಭವಾದ ವಿಚಾರ ಅಲ್ಲ, ಇವುಗಳನ್ನು ಖರೀದಿ ಮಾಡುವುದಕ್ಕೆ ನೀವು ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಇದೀಗ ಸ್ವಂತ ಆಸ್ತಿ, ಮನೆ ಖರೀದಿ ಮಾಡುವವರಿಗೆ ಸರ್ಕಾರ ಈಗ ಹೊಸ ನಿಯಮ ತಂದಿದ್ದು, ಅದನ್ನು ಎಲ್ಲರೂ ಕೂಡ ಅನುಸರಿಸಬೇಕಿದೆ.

ನಮಗೆಲ್ಲ ಗೊತ್ತಿರುವ ಹಾಗೆ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟ ಹಾಗೆ, ಈಗಾಗಲೇ ಬೆಲೆ ಏರಿಕೆ ಇಂದ ಆಸ್ತಿಗಳ ಬೆಲೆ ಕೂಡ ಜಾಸ್ತಿ ಆಗಿದೆ ಎನ್ನುವ ವಿಚಾರ ಗೊತ್ತಿದೆ. ಈ ಬಗ್ಗೆ ಕೃಷ್ಣ ಭೈರೇಗೌಡ ಅವರು ಕೂಡ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಸಿಟಿಗಳಲ್ಲಿ ಆಸ್ತಿಯ ಬೆಲೆ ಹೆಚ್ಚಾಗಿದ್ದು, ಸ್ಥಿರಾಸ್ತಿಗಳ ಬೆಲೆಯಲ್ಲಿ ಸಹ ಏರಿಕೆ ಆಗಿದೆ, ಹಾಗಾಗಿ ಈ ವೇಳೆ ಎಲ್ಲಾ ವಿಚಾರಗಳನ್ನು ಜನರು ತಿಳಿದುಕೊಂಡರೆ ಅನುಕೂಲ ಆಗುತ್ತದೆ.

ಈ ವೇಳೆ ಆಸ್ತಿ ಮಾರಾಟ ಮಾಡಬೇಕು ಎಂದುಕೊಂಡಿರುವವರು ಮತ್ತು ಆಸ್ತಿ ಖರೀದಿ ಮಾಡಬೇಕು ಎಂದುಕೊಂಡಿರುವವರು ಇಬ್ಬರು ಕೂಡ ಈ ಹೊಸ ನಿಯಮಗಳನ್ನು ತಿಳಿದುಕೊಂಡು ಅದೆಲ್ಲವನ್ನು ಪಾಲಿಸುವುದು ಕಡ್ಡಾಯವಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಪ್ರಸ್ತುತ ಬೆಂಗಳೂರು ನಗರದಲ್ಲಿರುವ ಎಲೆಕ್ಟ್ರಾನಿಕ್ ಸಿಟಿ ಕಡೆ ಇರುವ ಸ್ಥಳದ ಬೆಲೆ ನೋಡಿದರೆ, ಸಿಕ್ಕಾಪಟ್ಟೆ ಜಾಸ್ತಿ ಆಗಿದೆ. ನ್ಯಾಷನಲ್ ಹೈವೇ ಗಳ ಹತ್ತಿರ ಇರುವ ಜಮೀನಿನ ಬೆಲೆ ನೋಡಿದರೆ, ಮೊದಲೆಲ್ಲಾ 1 ಎಕರೆಗೆ 5 ರಿಂದ 10 ಲಕ್ಷ ಇತ್ತು, ಆದರೆ ಈಗ ಇದರ ಮಾರ್ಕೆಟ್ ಬೆಲೆ 10ಕೋಟಿಗಿಂತ ಜಾಸ್ತಿ ಇದೆ.

Govt New rules For Own Property House Lands

ಇದನ್ನು ನೋಡಿದರೆ, ಸ್ಥಿರಾಸ್ತಿಗಳ ಬೆಲೆ 100 ಪಟ್ಟು ಜಾಸ್ತಿ ಆಗಿದೆ ಎನ್ನುವುದು ಗೊತ್ತಾಗುತ್ತಿದೆ. ಅಷ್ಟೇ ಅಲ್ಲದೆ ಮಾರ್ಗಸೂಚಿಯ ಬೆಲೆ ಕೂಡ ಈಗ 50% ಜಾಸ್ತಿಯಾಗಿದೆ. ಆಸ್ತಿಗಳ ಬೆಲೆ ಈಗ ಜಾಸ್ತಿ ಆಗುತ್ತಿರುವುದರಿಂದ, ಆಸ್ತಿ ಮಾರಾಟಕ್ಕೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳು ಸಹ ಕ್ಯಾಶ್ ರೂಪದಲ್ಲೇ ನಡೆಯುತ್ತಿದೆ. ಹಾಗಾಗಿ ದೊಡ್ಡ ಮುದ್ರಕಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ, ಮೋಸದ ಪ್ರಕರಣಗಳು ಕೂಡ ಜಾಸ್ತಿಯಾಗುತ್ತಿದೆ ಎಂದು ಮಾಹಿತಿ ಸಿಕ್ಕಿದೆ..

ಆಸ್ತಿ ಮಾರಾಟ ಮಾಡುವ ವೇಳೆ ಕಡಿಮೆ ಬೆಲೆಯನ್ನು ತೋರಿಸಿ, ಜಾಸ್ತಿ ಬೆಲೆಗೆ ಮಾರಾಟ ಮಾಡಿರುತ್ತಾರೆ. ಈ ರೀತಿಯಲ್ಲಿ ಕಪ್ಪು ಹಣ ಸಂಗ್ರಹಣೆ ಆಗುತ್ತಿದೆ. ಇಂಥ ಪ್ರಕರಣಗಳು ಮೋಸಗಳು ಇದೆಲ್ಲವನ್ನು ಸಹ ನಿಲ್ಲಿಸುವ ಸಲುವಾಗಿ ಆದಷ್ಟು ಬೇಗ ಆಸ್ತಿ ಮಾರಾಟ ಮತ್ತು ಖರೀದಿಯ ವ್ಯವಸ್ಥೆಯನ್ನು ಸುಧಾರಣೆ ಮಾಡಲಾಗುತ್ತದೆ ಎಂದು ಸಚಿವರಾದ ಕೃಷ್ಣ ಭೈರೇಗೌಡ ಅವರು ಮಾಹಿತಿ ನೀಡಿದ್ದಾರೆ.

ಆಸ್ತಿ ಮಾರಾಟ ಮತ್ತು ಖರೀದಿ ಈ ಎರಡು ವಿಚಾರದಲ್ಲಿ, ರಿಜಿಸ್ಟರ್ ಮಾಡಿಸುವ ಕೆಲಸ ಇದೆಲ್ಲವನ್ನು ಸರ್ಕಾರದ ಗಮನಕ್ಕೆ ತರದ ಹಾಗೆ. ಮಾಡಿದರೆ, ಅದು ಅಪರಾಧ ಆಗುತ್ತದೆ. ಹಾಗಾಗಿ ಸರ್ಕಾರಕ್ಕೆ ಜನರು ಕಟ್ಟಬೇಕಾದ ಮೊತ್ತ ಕೂಡ ವ್ಯತ್ಯಾಸ ಆಗಿ, ಈ ರೀತಿಯಲ್ಲಿ ಸರ್ಕಾರಕ್ಕೆ ಮೋಸ ಮಾಡಲಾಗುತ್ತಿದೆ. ಈ ರೀತಿಯಲ್ಲಿ ಆಸ್ತಿ ಮಾರಾಟ ಮಾಡುವವರು ಸರ್ಕಾರಕ್ಕೆ ಮೋಸ ಮಾಡುವ ಪ್ರಕ್ರಿಯೆಗಳು ಜಾಸ್ತಿ ಆಗುತ್ತಿದೆ.

ಸ್ಥಿರಾಸ್ತಿಗಳ ವಿಚಾರದಲ್ಲಿ ಈ ಎಲ್ಲಾ ಈಗ ಇರುವ ದರವನ್ನು ಕೂಡ ಪರಿಶೀಲಿಸಿ ಬದಲಾವಣೆ ಮಾಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಪ್ರಸ್ತುತ ಮುದ್ರಾಂಕದ ಶುಲ್ಕ 30% ಜಾಸ್ತಿ ಆಗಿದೆ. ಈ ಶುಲ್ಕ ಇನ್ನು ಜಾಸ್ತಿ ಆಗುವ ಸಾಧ್ಯತೆ ಸಹ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಶೀಘ್ರದಲ್ಲೇ ಮುದ್ರಾಂಕ ಶುಲ್ಕ ಜಾಸ್ತಿ ಆಗುತ್ತದೆ ಎನ್ನುವ ಕಾರಣಕ್ಕೆ, ಜನರು ಕೂಡ ಆತುರವಾಗಿ ತಮ್ಮ ಆಸ್ತಿಗಳನ್ನು ರಿಜಿಸ್ಟರ್ ಮಾಡಿಸಿಕೊಳ್ಳುತ್ತಿದ್ದಾರೆ. ಲಕ್ಷಾಂತರ ಆಸ್ತಿ ರಿಜಿಸ್ಟರ್ ಆಗಿರುವ ಪ್ರಕರಣ ಹೆಚ್ಚಾಗಿದೆ.

ಆಸ್ತಿ ಮಾರಾಟ ಮತ್ತು ಖರೀದಿ ಮಾಡುವ ವಿಚಾರದಲ್ಲಿ ಜನರು ಮತ್ತು ಸರ್ಕಾರದ ನಡುವೆ ಯಾವುದೇ ಮುಚ್ಚುಮರೆ ಇರಬಾರದು, ಎಲ್ಲವೂ ಪಾರದರ್ಶಕ ರೀತಿಯಲ್ಲಿ ಇರಬೇಕು ಎನ್ನುವುದು ಸರ್ಕಾರದ ಉದ್ದೇಶ ಆಗಿದೆ. ಸ್ವಂತ ಆಸ್ತಿ ಇರುವವರು ಮಾರಾಟದಿಂದ ಜಾಸ್ತಿ ಲಾಭ ಪಡೆಯುತ್ತಿದ್ದಾರೆ. ಇದೆಲ್ಲದರ ನಡುವೆ ಈಗ ಸರ್ಕಾರವು ಆಸ್ತಿ ಮಾರಾಟಕ್ಕೆ ಸಂಬಂಧಿಸಿದ ಹಾಗೆ ಬೆಲೆಯ ಪರಿಷ್ಕರಣೆ ನಡೆಸುತ್ತಿದೆ.

Leave a Reply

Your email address will not be published. Required fields are marked *