ಸಂಬಳ ಜಾಸ್ತಿ ಮಾಡುವ ನಿರೀಕ್ಷೆಯಲ್ಲಿದ್ದ ಸರ್ಕಾರಿ ಕೆಲಸಗಾರರಿಗೆ ಗುಡ್ ನ್ಯೂಸ್

0 11,892

7th pay commission Karnataka: ಸರ್ಕಾರಿ ಕೆಲಸದಲ್ಲಿದ್ದು ಸಂಬಳ ಕಡಿಮೆ ಇದೆ, ಸಾಕಾಗುತ್ತಿಲ್ಲ ಎಂದು ಚಿಂತೆ ಮಾಡುತ್ತಿರುವವರಿಗೆ ಈಗ ಒಂದು ಗುಡ್ ನ್ಯೂಸ್ ಸಿಕ್ಕಿದೆ. ರಾಜ್ಯ ಸರ್ಕಾರದಲ್ಲಿ ಕೆಲಸ ಮಾಡುತ್ತಿರುವವರು 7ನೇ ವೇತನ ಆಯೋಗ ಯಾವಾಗ ಜಾರಿಗೆ ಬರುತ್ತದೆ ಎಂದು ಕಾಯುತ್ತಿದ್ದರು, ಇದಕ್ಕಾಗಿ ನಿರೀಕ್ಷೆಯನ್ನು ಕೂಡ ಇಟ್ಟುಕೊಂಡಿದ್ದರು. ಇದೀಗ ಆ ಎಲ್ಲಾ ಸರ್ಕಾರಿ ನೌಕರರಿಗೆ ಕೂಡ ಒಂದು ಗುಡ್ ನ್ಯೂಸ್ ಸಿಕ್ಕಿದೆ.

ಇನ್ನು ಕೆಲವೇ ದಿನಗಳಲ್ಲಿ 7ನೇ ವೇತನ ಆಯೋಗದ ಬಗ್ಗೆ ವರದಿ ಸಲ್ಲಿಕೆ ಆಗುತ್ತದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಕ್ಷರಿ ಅವರು ತಿಳಿಸಿದ್ದಾರೆ. ಇದೇ ವಿಚಾರದ ಬಗ್ಗೆ ಮಾಧ್ಯಮದವರ ಜೊತೆಗೆ ಮಾತನಾಡಿ, ಪೂರ್ತಿ ಕ್ಲಾರಿಟಿ ನೀಡಿದ್ದಾರೆ. 7ನೇ ವೇತನ ಆಯೋಗದ ವರದಿಗೆ ಈಗಾಗಲೇ ಸಿದ್ಧತೆಗಳು ಶುರುವಾಗಿದ್ದು, ಈಗ ಕೊನೆಯ ಹಂತದ ಕೆಲಸಗಳು ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ವಿಚಾರದ ಬಗ್ಗೆ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಕೂಡ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. 7ನೇ ವೇತನ ಆಯೋಗಕ್ಕೆ ನವೆಂಬರ್ 17ರವರೆಗು ಸಮಯವಿದೆ, ಅಷ್ಟು ದಿನಗಳ ಒಳಗೆ ವರದಿ ಸಲ್ಲಿಕೆ ಆಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದ್ದಾರೆ. ಇದು ಎಲ್ಲಾ ಸರ್ಕಾರಿ ನೌಕರರಿಗೆ ಅನುಕೂಲ ಆಗುವಂಥ ವಿಷಯ ಆಗಿದೆ.

ಮತ್ತೊಂದು ವಿಚಾರ ಏನು ಎಂದರೆ 2022ರಲ್ಲಿ ರಾಜ್ಯಸರ್ಕಾರದ ಬೈಲಾ ಕೂಡ ಬದಲಾವಣೆ ಆಗಿದೆ. ಉಪ ವಿಧಿಗಳ ವಿಚಾರದಲ್ಲಿ ಕೆಲವು ತೊಂದರೆ ಇದ್ದ ಕಾರಣ, ಅವುಗಳನ್ನು ತಿದ್ದುಪಡಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಎಲ್ಲವೂ ಸರಿ ಹೋದರೆ, 7ನೇ ವೇತನ ಆಯೋಗದ ವರದಿ ನವೆಂಬರ್ ತಿಂಗಳಿನಲ್ಲಿ ನಡೆಯಲಿದೆ

ಇದನ್ನೂ ಓದಿ ಸ್ವಂತ ಮನೆ ಆಸ್ತಿ ಹೊಂದಿರುವವರಿಗೆ ಸರ್ಕಾರದಿಂದ ಹೊಸ ನಿಯಮ

Leave A Reply

Your email address will not be published.