Govt Loan Scheme: ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲಾ ರೈತರಿಗೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಒಂದು ಗುಡ್ ನ್ಯೂಸ್ ನೀಡಿದ್ದಾರೆ. ರೈತರು ಈಗಾಗಲೇ ಬ್ಯಾಂಕುಗಳಲ್ಲಿ ಸಾಕಷ್ಟು ಸಾಲಗಳನ್ನು ಪಡೆದಿದ್ದರೂ ಸಹ ಅವರಿಗೂ ಕೂಡ ಮತ್ತೊಮ್ಮೆ ಯಾವುದೇ ಬಡ್ಡಿ ಇಲ್ಲದೆ 3 ಲಕ್ಷ ರೂಪಾಯಿಗಳಿಂದ 5 ಲಕ್ಷದ ವರೆಗೆ ಶೂನ್ಯ ಬಡ್ಡಿ ದರದಲ್ಲಿ ಹೊಸ ಸಾಲ ನೀಡಲು ಹೊಸ ಯೋಜನೆ ಜಾರಿಗೊಳಿಸಿದ್ದಾರೆ.

ನೀವು ಸಹ ಈ ಹಿಂದೆ ಸಾಲವನ್ನು ಪಡೆದಿದ್ದು ಆ ಸಾಲವನ್ನು ನಿಮ್ಮಿಂದ ಹಿಂತಿರುಗಿಸಲು ಆಗದೆ ಇದ್ದರೂ ಕೂಡ ನೀವು ಹೊಸ ಸಾಲವನ್ನು ಪಡೆಯಬಹುದು. ಆದರೆ ಈ ಹೊಸ ಸಾಲಕ್ಕೆ ಮಾತ್ರ ಯಾವುದೇ ರೀತಿಯ ಬಡ್ಡಿ ಇರುವುದಿಲ್ಲ. ರೈತರು ಹಳೆಯ ಸಾಲವನ್ನು ಆದಷ್ಟು ಬೇಗ ಮರುಪಾವತಿಸಲು ರೈತರಲ್ಲಿ ಮನವಿಯನ್ನು ಸಹ ಮಾಡಿದ್ದಾರೆ. ಈಗಾಗಲೇ ನಿಮ್ಮ ಬ್ಯಾಂಕ್ ಗಳಲ್ಲಿ ನಿಮ್ಮ ಜಮೀನುಗಳ ಮೇಲೆ ಬೆಳೆ ಸಾಲ, ಕೃಷಿ ಸಾಲ, ಬಾವಿ ಸಾಲ ಹೀಗೆ ಯಾವುದೇ ಸಾಲ ಇದ್ದರೂ ಕೂಡ ಈ ಹೊಸ ಸಾಲವನ್ನು ಪಡೆಯಬಹುದು.

ಈ ಬಗ್ಗೆ ರಾಜ್ಯದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲ ರೈತರಿಗೆ ಭಾರಿ ದೊಡ್ಡ ಗುಡ್ ನ್ಯೂಸ್ ನೀಡಿದ್ದಾರೆ. ರಾಜ್ಯದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡುವ ಸಣ್ಣ ಸಾಲದ ಪಟ್ಟಿಯನ್ನು ರೂಪಾಯಿ ಮೂರು ಲಕ್ಷದಿಂದ ರೂಪಾಯಿ 5 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.

Govt Loan Scheme

ವಿಧಾನಸಭೆಯಲ್ಲಿ 2023-2024 ನೇ ಸಾಲಿನ ಬಜೆಟ್ ಮಂಡನೆಯನ್ನು ಮಾಡಿದ್ದಾರೆ. ಮಧ್ಯಮ ಮತ್ತು ದೀರ್ಘ ಅವಧಿಯ ಸಾಲದ ಮಿತಿಯನ್ನು ಶೇಕಡ ಮೂರರ ಬಡ್ಡಿ ದರದಲ್ಲಿ 10 ಲಕ್ಷದಿಂದ 15 ಲಕ್ಷಕ್ಕೆ ಹೆಚ್ಚಿಸಲಾಗುವುದು. ಪ್ರಸಕ್ತ ವರ್ಷ 35 ಲಕ್ಷಕ್ಕೂ ಹೆಚ್ಚು ರೈತರಿಗೆ 25,000 ಕೋಟಿ ಸಾಲ ವಿತರಿಸಲಾಗುವುದು. ಶೇಕಡ 3ರ ಬಡ್ಡಿ ದರದಲ್ಲಿ ನೀಡುವ ಮಧ್ಯಮ ಮತ್ತು ದೀರ್ಘಾವಧಿ ಸಾಲದ ಮಿತಿಯನ್ನ 10 ಲಕ್ಷ ರೂಪಾಯಿಗಳಿಂದ 15 ಲಕ್ಷ ರೂಪಾಯಿವರೆಗೆ ಹೆಚ್ಚಿಸುವ ಯೋಜನೆಯನ್ನು ಅನುಸರಿಸಿ ರೈತರಿಗೆ 35 ಲಕ್ಷಕ್ಕಿಂತ ಹೆಚ್ಚಿನ ಸಾಲ ವಿತರಣೆ ಮಾಡುವ ಗುರಿಯನ್ನು ಹೊಂದಿದೆ.

ಈ ಗುರಿಯನ್ನು ಪೂರೈಸುವ ಬಳಕೆದಾರರಿಗೆ 25,000 ಕೋಟಿ ರೂಪಾಯಿಗಳ ಸಾಲ ವಿತರಣೆ ಮಾಡಲಾಗುತ್ತದೆ. ರೈತರು ತಮ್ಮ ಮತ್ತು ಸಮೀಪದ ರೈತರ ಉತ್ಪನ್ನವನ್ನು ಸಂಗ್ರಹಿಸಲು ಸುಗಮವಾಗುವಂತೆ ಗೋದಾಮು ನಿರ್ಮಿಸಲು ಬ್ಯಾಂಕ್ ಗಳು ನೀಡುವ 20 ಲಕ್ಷ ರೂಪಾಯಿಗಳ ಕಾಲಕ್ಕೆ ರಾಜ್ಯ ಸರ್ಕಾರವು 7%ಬಡ್ಡಿಯಲ್ಲಿ ಸಹಾಯವನ್ನು ನೀಡುತ್ತಿದೆ. ಇದನ್ನೂ ಓದಿ House Constraction: ಕಡಿಮೆ ಬಜೆಟ್ ನಲ್ಲಿ ಸುಂದರವಾದ ಮನೆ ಕಟ್ಟಿಸಿಕೊಳ್ಳಬೇಕು ಅನ್ನೋರಿಗಾಗಿ ಈ ಮಾಹಿತಿ

By AS Naik

Leave a Reply

Your email address will not be published. Required fields are marked *