ಕಾರ್ ಇದ್ದವರಿಗೆ ರೇಷನ್ ಕಾರ್ಡ್ ರದ್ದಾಗುತ್ತಾ? ಇಲ್ಲಿದೆ ಮಾಹಿತಿ

0 1,389

Ration card New Rules in Karnataka ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳು ಬಂಡ ಮೇಲೆ ಹಲವು ಬದಲಾವಣೆಗಳು ಆಗುತ್ತಿವೆ ಅಷ್ಟೇ ಅಲ್ಲದೆ ರೇಷನ್ ಕಾರ್ಡ್ (Ration card) ಮಾಡಿಸುವವರ ಸಂಖ್ಯೆ ಇನ್ನು ಹೆಚ್ಚಾಗುತ್ತಲೇ ಇದೆ. ರೇಷನ್ ಕಾರ್ಡ್ ಮೂಲಕ ಉಚಿತ ಅಕ್ಕಿ ಪಡೆಯಲು ಹಾಗು ಗೃಹಲಕ್ಷ್ಮಿ ಯೋಜನೆಯಡಿ ಉಚಿತ 2000 ರೂಪಾಯಿ ಪಡೆಯಲು ರೇಷನ್ ಕಾರ್ಡ್ ಅಗತ್ಯವಾಗಿ ಬೇಕಾಗಿದೆ.

ಈಗಿರುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಬದಲಾವಣೆಯನ್ನು ತರಲು ಮುಂದಾಗಿದೆ. ಹೌದು ವಿಧಾನಸೌಧದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ ಅವರು ಮಹತ್ವದ ಘೋಷಣೆಯೊಂದನ್ನು ಕೂಡ ಮಾಡಿದ್ದಾರೆ. ಅನ್ನಭಾಗ್ಯ ಯೋಜನೆಯ ಬಗ್ಗೆಯೂ ಕೂಡ ಮಾತನಾಡಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬದ ಸದಸ್ಯನಿಗೆ 10Kg ಪಡಿತರ ನೀಡುವುದಾಗಿ ಹೇಳಿದ್ದು ಸೆಪ್ಟೆಂಬರ್ ತಿಂಗಳಿನಿಂದ ಅಕ್ಕಿ ವಿತರಣೆ ಮಾಡುತ್ತೇವೆ ಅಲ್ಲಿಯವರೆಗೂ ಕೂಡ ಹೆಚ್ಚುವರಿ ಅಕ್ಕಿ ಬದಲಾಗಿ ಹಣ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿ ಇರುತ್ತದೆ.

ಈಗಾಗಲೇ ಜುಲೈ ತಿಂಗಳಿನಲ್ಲಿ ಒಂದು ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಸರ್ಕಾರ DBT ಮೂಲಕ ಹಣ ವರ್ಗಾವಣೆ ಮಾಡಿದೆ ಎನ್ನುವ ವಿಷಯವನ್ನು ಹಂಚಿಕೊಂಡರು. ಹಾಗೆಯೇ ಸ್ವಂತ ಕಾರು ಹೊಂದಿರುವವರಿಗೆ BPL ಕಾರ್ಡ್ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ವೈಟ್ ಬೋರ್ಡ್ ಹೊಂದಿರುವ ಕಾರುಗಳನ್ನು ಸ್ವಂತ ಕಾರುಗಳು ಎಂದು ನಿರ್ಧರಿಸುತ್ತೇವೆ ಎಂಬುದನ್ನು ತಿಳಿಸಿದ್ದಾರೆ.

ಇನ್ನೂ ಸರ್ಕಾರದ ಕೆಲವು ಮೂಲಗಳ ಪ್ರಕಾರ ಇಂತವರಿಗೆ ರೇಷನ್ ಕಾರ್ಡ್ ರದ್ದಾಗಲಿದೆ ಹಾಗೂ ಗೃಹ ಲಕ್ಷ್ಮಿ ಯೋಜನೆಯ ಹಣ ಸಿಗೋದಿಲ್ಲ ಎಂಬುದಾಗಿ ಹೇಳಲಾಗುತ್ತಿದೆ. ಹಾಗಾದ್ರೆ ಅವರು ಯಾರು ಅನ್ನೋದನ್ನ ಇಲ್ಲಿ ನೋಡಿ.

ಆದಾಯ ತೆರಿಗೆ ತುಂಬುವ ಕುಟುಂಬಗಳು
ಕಾರು ಅಥವಾ ಟ್ರಾಕ್ಟರ್ ಹೊಂದಿರುವ ಕುಟುಂಬ
AC ಅಳವಡಿಸರುವ ಮನೆ
5 ಅಧಿಕ ಜನರೇಟರ್ ಹೊಂದಿರುವ ಮನೆ
5 ಎಕರೆ ಗಿಂತ ಹೆಚ್ಚಿನ ಭೂಮಿ ಇರುವವರಿಗೆ
ಶಸ್ತ್ರ ಲೈಸನ್ಸ್ ಇದ್ದವರಿಗೆ
ಸರ್ಕಾರದ ಪೆನ್ಶನ್ ಪಡೆಯುವ ಕುಟುಂಬಗಳಿಗೆ
ನಗರ ಪ್ರದೇಶದಲ್ಲಿ ವಾಸಿಸಿಕೊಂಡು ವರ್ಷಕ್ಕೆ 3 ಲಕ್ಷಕ್ಕಿಂತ ಹೆಚ್ಚಿನ ಆದಾಯ ಇರುವ ಕುಟುಂಬಕ್ಕೆ.

ಇದನ್ನೂ ಓದಿ Govt Scheme: ಜಮೀನು ಇದ್ದವರಿಗೆ ಗುಡ್ ನ್ಯೂಸ್, 3 ರಿಂದ 5 ಲಕ್ಷದವರೆಗೆ ಶೂನ್ಯ ಬಡ್ಡಿ ಸಾಲ ಸಿಗಲಿದೆ

Leave A Reply

Your email address will not be published.