ಸ್ವಂತ ಮನೆ ಜಾಗ ಇಲ್ಲದವರಿಗೆ ಕೇಂದ್ರ ಸರ್ಕಾರದಿಂದ ಮನೆ ಬಿಡುಗಡೆ

0 185

ದೇಶದಲ್ಲಿ ಪ್ರತಿಯೊಬ್ಬರು ತಮ್ಮದೆ ಸ್ವಂತ ಮನೆಯಲ್ಲಿ ವಾಸಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರ ಕನಸು. 2015ರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಬಗ್ಗೆ ಹಾಗೂ ಸರ್ಕಾರ ರೇಷನ್ ಕಾರ್ಡ್ ರದ್ದತಿಯ ನಿರ್ಧಾರ ಮಾಡಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಪ್ರಧಾನ ಮಂತ್ರಿ ಯೋಜನೆಯಡಿ ಈಗಾಗಲೆ ಏಳು ಕೋಟಿ ಮನೆ ನಿರ್ಮಾಣವಾಗಿದೆ. ಫೆಬ್ರುವರಿಯಲ್ಲಿ 2024 ಮಧ್ಯಂತರ ಬಜೆಟ್ ಘೋಷಿಸಿರುವ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಪ್ರಧಾನಮಂತ್ರಿ ಆವಾಸ್ ಯೋಜನೆಯ ಬಗ್ಗೆ ಮಾತನಾಡುತ್ತಾ ಐದು ವರ್ಷಗಳಲ್ಲಿ ಎರಡು ಕೋಟಿ ಮನೆ ನಿರ್ಮಾಣ ಮಾಡುವ ನಿರ್ಧಾರವನ್ನು ಸರ್ಕಾರ ಮಾಡಿದೆ ಎಂದು ಹೇಳಿದರು. ಸರ್ಕಾರದಿಂದ ಸಬ್ಸಿಡಿ ಹಣ 2,67,000 ಜಮಾ ಆಗುತ್ತದೆ ಹೋಂ ಲೋನ್ ಯಾವ ಬ್ಯಾಂಕ್ ನಲ್ಲಿ ತೆಗೆದುಕೊಳ್ಳುತ್ತಾರೊ ಅದೇ ಬ್ಯಾಂಕಿಗೆ ಹಣ ಜಮಾ ಮಾಡಲಾಗುತ್ತದೆ.

ಗೃಹ ಸಾಲ ಪಡೆಯುವ ಸಮಯದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅಪ್ಲೈ ಮಾಡಿರಬೇಕು. ಗೃಹ ಸಾಲ ಪಡೆದ ಎರಡು ವರ್ಷದ ನಂತರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬರುವುದಿಲ್ಲ. ಬ್ಯಾಂಕ್ ನಲ್ಲಿ ಹೋಂ ಲೋನ್ ಮರುಪಾವತಿ ಮಾಡುವ ಅವಧಿ 20 ವರ್ಷ ಇದನ್ನು ಹೋಂ ಲೋನ್ ಯಾವ ವಯಸ್ಸಿನಲ್ಲಿ ತೆಗೆದುಕೊಳ್ಳುತ್ತಾರೆ ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ.

ಬ್ಯಾಂಕ್ ಹತ್ತು ಪರ್ಸೆಂಟ್ ಬಡ್ಡಿ ದರದಲ್ಲಿ ಹೋಂ ಲೋನ್ ಮಂಜೂರಿ ಮಾಡಿದರೆ ಪ್ರಧಾನ್ ಮಂತ್ರಿ ಆವಾಸ್ ಯೋಜನೆ ದೊರೆತರೆ ಇಎಂಐ ಕಡಿಮೆಯಾಗುತ್ತದೆ. ಇಡಬ್ಲ್ಯೂಎಸ್ 6.7 ಪರ್ಸೆಂಟ್, ಎಲ್ ಎಲ್ ಜಿ 6.7 ಪರ್ಸೆಂಟ್, ಎಂಐಜಿಐ ಎಂಐಜಿ 3% ಬಡ್ಡಿದರ ಇರುತ್ತದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಆಧಾರ್ ಕಾರ್ಡ್, ಪಾನ್ ಕಾರ್ಡ್ ಆದಾಯ ಪುರಾವೆ, ವಿಳಾಸ ಪುರಾವೆ, ಉದ್ಯೋಗ ಮಾಡುವವರಾಗಿದ್ದರೆ ಆರು ತಿಂಗಳ ಬ್ಯಾಂಕ್ ಸ್ಟೇಟ್ ಮೆಂಟ್ ಉದ್ಯೋಗ ಮಾಡುವುದಾಗಿದ್ದರೆ ಐಟಿಆರ್ ಫೈಲಿಂಗ್ ಮಾಹಿತಿ ಬೇಕಾಗುತ್ತದೆ.

ಕುಟುಂಬದ ವಾರ್ಷಿಕ ಆದಾಯ 18 ಲಕ್ಷ ಮೀರದಂತಿರಬೇಕು. ಈ ಯೋಜನೆಗೆ ಅರ್ಜಿ ಸಲ್ಲಿಸಲು ಹತ್ತಿರದ ಬ್ಯಾಂಕ್ ಅಥವಾ ಕಂಪ್ಯೂಟರ್ ಸೈಬರ್ ಗೆ ಭೇಟಿ ಕೊಡಿ. ರೇಷನ್ ಕಾರ್ಡ್ ಪಡೆಯಲು ಅನರ್ಹ ಕುಟುಂಬಗಳ ರೇಷನ್ ಕಾರ್ಡನ್ನು ಸರ್ಕಾರ ರದ್ದು ಮಾಡುವ ನಿರ್ಧಾರವನ್ನು ಕೈಗೊಂಡಿದೆ. ರೇಷನ್ ಕಾರ್ಡ್ ದಾಖಲಾತಿಯನ್ನು ಕೊಡುವ ಮೂಲಕ ಮಹಿಳೆಯರು ಸರ್ಕಾರದಿಂದ ಎರಡುವರೆ ಸಾವಿರ ರೂಪಾಯಿ ಹಣವನ್ನು ಉಚಿತವಾಗಿ ಪಡೆಯುತ್ತಿದ್ದಾರೆ.

ಕೆಲವು ಮಹಿಳೆಯರು ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದರು ಕೂಡ ಅವರ ಖಾತೆಗೆ ಹಣ ಜಮಾ ಆಗಲಿಲ್ಲ. ಈಕೆವೈಸಿ ಆಗದೆ ಇದ್ದರೆ ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಲಿಂಕ್ ಆಗದಿದ್ದರೆ ಹಾಗೂ ಎನ್‌ಪಿಸಿಐ ಮ್ಯಾಪಿಂಗ್ ಆಗದೆ ಇದ್ದರೆ ರೇಷನ್ ಕಾರ್ಡ್ ಸಕ್ರೀಯವಾಗದೆ ಇರುವುದು, ಬ್ಯಾಂಕ್ ಖಾತೆ ಆಕ್ಟೀವ್ ಆಗದೆ ಇರುವುದು, ಯಜಮಾನನ ಹೆಸರು ಬ್ಯಾಂಕ್ ಖಾತೆ ಆಧಾರ್ ಕಾರ್ಡ್ ನಲ್ಲಿ ಮ್ಯಾಚ್ ಆಗದೆ ಇದ್ದರೆ ಇನ್ನು ಎಲ್ಲವೂ ಸರಿಯಿದ್ದು ಸರ್ವರ್ ಸಮಸ್ಯೆಯಿಂದಾಗಿಯೂ ಮಹಿಳೆಯರ ಖಾತೆಗೆ ಹಣ ಜಮಾ ಆಗದೆ ಇರಬಹುದು. ಮಹಿಳೆಯರ ಖಾತೆಗೆ ಹಣ ಜಮಾ ಆಗಲೇಬೇಕೆಂದು ಗ್ರಾಮ ಪಂಚಾಯತ್ ಕ್ಯಾಂಪ್ ಹಾಗೂ ಅದಾಲತ್ ಕೂಡ ನಡೆಸಲಾಗಿದೆ ಇದರಿಂದ ಲಕ್ಷಾಂತರ ಮಹಿಳೆಯರಿಗೆ ಹಣ ಜಮಾ ಆಯಿತು ಆದರೂ ಹಣ ಬಂದಿಲ್ಲವಾದರೆ ರೇಷನ್ ಕಾರ್ಡ್ ರದ್ದಾಗುತ್ತದೆ ಎಂದು ಅರ್ಥ.

ಬಿಪಿಎಲ್ ರೇಷನ್ ಕಾರ್ಡ್ ಅರ್ಹತಾ ಲೀಸ್ಟ್ ಗೆ ಸೇರದ ರೇಷನ್ ಕಾರ್ಡನ್ನು ರದ್ದು ಮಾಡಲಾಗುತ್ತದೆ. ಅನರ್ಹರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಪಟ್ಟಿಯಲ್ಲಿರುವ ಹೆಸರಿನ ಬ್ಯಾಂಕ್ ಖಾತೆಗೆ ಇನ್ನುಮುಂದೆ ಗೃಹಲಕ್ಷ್ಮಿ ಹಣ ಬರುವುದಿಲ್ಲ. ರೇಷನ್ ಕಾರ್ಡ್ ಸಕ್ರಿಯವಾಗಿದೆಯೆ ಎಂದು ತಿಳಿದುಕೊಳ್ಳಲು ಆಹಾರ ಡಾಟ್ ಕಾಮ್ ವೆಬ್ಸೈಟ್ ಗೆ ಹೋಗಿ ಈ ಸೇವೆ ಎಂಬ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ ಎಡ ಭಾಗದಲ್ಲಿ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿದರೆ ಈ ಸ್ಥಿತಿ ಎಂಬ ಆಪ್ಷನ್ ಕ್ಲಿಕ್ ಮಾಡಿದರೆ ರದ್ದುಗೊಳಿಸಲು ಅಥವಾ ತಡೆಹಿಡಿಯಲು ಪಟ್ಟಿ ಕಾಣಿಸುತ್ತದೆ ಆಗ ಜಿಲ್ಲೆ, ತಾಲೂಕು, ಹೋಬಳಿಯನ್ನು ಆಯ್ಕೆ ಮಾಡಿ 2024 ಎಂದು ಆಯ್ಕೆ ಮಾಡಿ ಗೋ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ ಒಂದು ಲೀಸ್ಟ್ ಕಾಣಿಸುತ್ತದೆ ಲೀಸ್ಟ್ ನಲ್ಲಿ ಹೆಸರಿದ್ದರೆ ಅವರ ರೇಷನ್ ಕಾರ್ಡ್ ರದ್ದಾಗಿದೆ ಎಂದು ಅರ್ಥ. ಒಂದು ವೇಳೆ ರೇಷನ್ ಕಾರ್ಡ್ ಪಡೆಯಲು ಕಾರಣ ಇದ್ದರೆ ಸೂಕ್ತ ಕಾರಣ ಹೇಳಿ ದಾಖಲಾತಿಗಳನ್ನು ಆಹಾರ ಇಲಾಖೆಗೆ ಕೊಟ್ಟರೆ ರೇಷನ್ ಕಾರ್ಡ್ ಸಕ್ರಿಯ ಮಾಡಿಕೊಳ್ಳಬಹುದು.

ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಜಂಟಿಯಾಗಿ ದೇಶದ ರೈತರಿಗೆ ಯೋಜನೆಗಳನ್ನು ಜಾರಿಗೊಳಿಸಿತು ಯೋಜನೆಗಳ ಪ್ರಯೋಜನ ಪಡೆದು ರೈತರು ತೊಂದರೆ ಇಲ್ಲದೆ ಕೃಷಿ ಚಟುವಟಿಕೆಗಳನ್ನು ಮಾಡಬಹುದು. ಇದೀಗ ಸ್ವಂತ ಜಮೀನು ಇರುವವರು 25000 ರೂಪಾಯಿ ಪಡೆಯಬಹುದು. ಝಾರ್ಖಂಡ್ ರಾಜ್ಯ ಸರ್ಕಾರ ರಾಜ್ಯದ ರೈತರಿಗೆ ಈ ಸೌಲಭ್ಯ ಕೊಡಲು ಮುಂದಾಗಿದೆ. ಕಿಸಾನ್ ಆಶೀರ್ವಾದ ಯೋಜನೆ ಮೂಲಕ 5 ಎಕರೆ ಜಮೀನು ಇರುವವರಿಗೆ 25000 ರೂಪಾಯಿ, 4 ಎಕರೆ ಜಮೀನು ಇರುವವರಿಗೆ 20000 ರೂಪಾಯಿ 2 ಎಕರೆ ಜಮೀನು ಇರುವವರಿಗೆ 5 ರಿಂದ 10000 ರೂಪಾಯಿ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಕಿಸಾನ್ ಆಶೀರ್ವಾದ ಯೋಜನೆ ಜಾರಿಗೆ ಬರಬಹುದು ಕಾದು ನೋಡೋಣ.

Leave A Reply

Your email address will not be published.