Ultimate magazine theme for WordPress.

ಸರ್ಕಾರದಿಂದ ವಸತಿ ಸೌಲಭ್ಯವನ್ನು ಪಡೆಯಲು ಅರ್ಜಿ ಹಾಕಿದ್ದರೆ ನಿಮ್ಮ ಮನೆ ಬಂದಿದೆಯೋ ಇಲ್ಲವೋ ಅನ್ನೋದನ್ನ ಈ ಮೂಲಕ ತಿಳಿಯಿರಿ

0 5

ವಸತಿ ಸೌಲಭವ್ಯವನ್ನು ಒದಗಿಸಲು ರಾಜ್ಯಸರ್ಕಾರ ಹಾಗೂ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ, ಅಂತಹ ಯೋಜನೆಗಳ ಮೂಲಕ ಬಡವರಿಗೆ ಹಾಗೂ ಮನೆ ಇಲ್ಲದೆ ಇರುವಂತವರಿಗೆ ವಸತಿ ಸೌಲಭ್ಯವನ್ನು ಒದಗಿಸುವ ಕೆಲಸ ನಡೆಯುತ್ತದೆ. ಹಾಗಾಗಿ ನೀವು ಕೂಡ ನಿಮ್ಮ ಮನೆಯನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಳ್ಳಲು ಮುಂದಾಗಿದ್ದಾರೆ ಅಥವಾ ನಿಮಗೆ ಈಗಾಗಲೇ ಮನೆ ಬಂದಿದೆ, ಆದ್ರೆ ಅದರ ಹಣ ಬಂದಿದ್ಯೋ ಅಥವಾ ಇಲ್ಲವೋ ಕಾಮಗಾರಿ ಯಾವ ಹಂತದಲ್ಲಿದೆ ಅನ್ನೋದನ್ನ ಹೇಗೆ ತಿಳಿದುಕೊಳ್ಳಬೇಕು ಅನ್ನೋ ಕುತೂಹಲ ನಿಮಗೆ ಇದ್ರೆ, ಈ ಮಾಹಿತಿಯನ್ನು ನೋಡಿ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಮೊದಲನೆಯದಾಗಿ ಸರ್ಕಾರದಿಂದ ಮನೆಗಳು ವಿವಿಧ ಯೋಜನೆಗಳ ಮೂಲಕ ಫಲಾನುಭವಿಗಳಿಗೆ ಸೌಲಭ್ಯವನ್ನು ಒದಗಿಸಿಕೊಡುತ್ತದೆ, ಅದನ್ನು ನಿಮ್ಮ ಮೊಬೈಲ್ ನಲ್ಲೆ ವಿಷಯವನ್ನು ತಿಳಿದುಕೊಳ್ಳಬಹದು. ಹೌದು ಮನೆಯ ಚಿಕ್ಕ ಪುಟ್ಟ ವಿಷಯಗಳಿಗೆ ಅಥವಾ ಮಾಹಿತಿಗಾಗಿ ಗ್ರಾಮಪಂಚಾಯಿತಿಗೆ ಅಲೆದಾಡುವ ಬದಲು ನಿಮ್ಮ ಅಂಗೈಯಲ್ಲೇ ಇರುವಂತ ಸ್ಮಾರ್ಟ್ ಫೋನ್ ಗಳ ಮೂಲಕ ವಿಷಗಳನ್ನು ತಿಳಿದುಕೊಳ್ಳಬಹುದಾಗಿದೆ.

ವಿಷಯಕ್ಕೆ ಬರೋಣ ಸರ್ಕಾರದಿಂದ ನಿಮ್ಮ ಮನೆ ಮಂಜೂರು ಆಗಿದೆಯೋ ಇಲ್ಲವೋ ಅನ್ನೋದನ್ನ ನೋಡಲು ಮೊದಲು ಮೊಬೈಲ್ ಇಂಟರ್ನೆಟ್ ಆನ್ ಮಾಡಿಕೊಂಡು ನಂತರ ಗೂಗಲ್ ಬ್ರೌಸರ್ ಗೆ ಹೋಗಿ ಅಲ್ಲಿ ಗೂಗಲ್ನಲ್ಲಿ ಈ ರೀತಿಯಾಗಿ ಟೈಪ್ ಮಾಡಬೇಕು ashraya.karnataka.gov. ಅನ್ನೋದನ್ನ ಸರ್ಚ್ ಮಾಡಬೇಕು ಅಥವಾ RGRHCL ಟೈಪ್ ಮಾಡಿದರೆ ವೆಬ್ ಪೇಜ್ ಓಪನ್ ಆಗುವದು. ಅಲ್ಲಿ ಯಾವ ಜಿಲ್ಲೆ ಗ್ರಾಮ ಪಂಚಾಯಿತಿ ಹೆಸರು ಕೇಳುತ್ತದೆ, ಅದನ್ನು ನಮೂದಿಸಬೇಕು ನಂತರ ಫಲಾನುಭವಿಗಳ ಪಟ್ಟಿ ಸಿಗುತ್ತದೆ ಅದರಲ್ಲಿ ನಿಮ್ಮ ಮನೆ ಬಂದಿದಿಯೋ ಇಲ್ಲವೋ ಅನ್ನೋದನ್ನ ತಿಳಿದುಕೊಳ್ಳಬಹುದು.

ಇನ್ನು ಎರಡನೆಯದಾಗಿ ನಿಮ್ಮ ಮನೆ ಮಂಜೂರು ಆಗಿದ್ದು ವರ್ಕ್ ಆರ್ಡರ್ ನಂಬರ್ ಬಂದಿದ್ದರೆ, ಗ್ರಾಮಪಂಚಾಯಿತಿ ಹಾಗೂ ಜಿಲ್ಲೆಯನ್ನು ನಮೂದಿಸಿದ ನಂತರ ಅಲ್ಲಿ ನಿಮ್ಮ ವರ್ಕ್ ಆರ್ಡರ್ ನಂಬರ್ ಕೇಳುತ್ತದೆ ಅದನ್ನು ನಮೂದಿಸಬೇಕು, ಅಲ್ಲಿ ನಿಮ್ಮ ಮನೆಯ ಭಾವಚಿತ್ರ ಅಥವಾ ನಿಮ್ಮ ಮನೆಯ ಕಾಮಗಾರಿ ಯಾವ ಹಂತದಲ್ಲಿದೆ ನಿಮಗೆ ಎಷ್ಟು ಬಿಲ್ ಬಂದಿದೆ ಹಾಗೂ ಯಾವ ಬಿಲ್ ಅಡಿಯಲ್ಲಿ ನಿಮಗೆ ಎಷ್ಟು ಹಣ ಬರಬೇಕು ಎಲ್ಲದನ್ನು ಕೂಡ ಅಲ್ಲಿ ತಿಳಿದುಕೊಳ್ಳಬಹುದಾಗಿದೆ. ಒಂದು ವೇಳೆ ನಿಮಗೆ ಮೊಬೈಲ್ ನಲ್ಲಿ ನೋಡಲು ಬರದಿದ್ದರೆ ನಿಮ್ಮ ಗ್ರಾಮಪಂಚಾಯಿತಿಗೆ ಹೋಗಿ ನಿಮ್ಮ ಮನೆಯ ಅಥವಾ ವಸತಿ ಸೌಲಭ್ಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ನಿಮಗೆ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಕೂಡ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.

Leave A Reply

Your email address will not be published.