ಪ್ರತಿ ದೇವಾಲಯಲಗಳು ಒಂದೊಂದು ವಿಶೇಷತೆ ಹಾಗೂ ತನ್ನದೆಯಾದ ಮಹತ್ವವನ್ನು ಹೊಂದಿದೆ, ನಮ್ಮ ರಾಜ್ಯ ಹಾಗೂ ದೇಶ ವಿದೇಶಗಳಲ್ಲಿ ಇರುವಂತ ಪ್ರತಿ ಹಿಂದೂ ದೇವಾಲಯಗಳು ತನ್ನದೆಯಾದ ವಿಶೇಷೇತ ಹಾಗೂ ಪವಾಡವನ್ನು ಹೊಂದಿರುತ್ತವೆ, ಅದೇ ನಿಟ್ಟಿನಲ್ಲಿ ಕರ್ನಾಟದಲ್ಲಿರುವಂತ ಈ ಹಿಂದೂ ದೇವಾಲಯ ಕೂಡ ಹಲವು ವಿಶೇಷತೆಯನ್ನು ಹೊಂದಿದ್ದು, ಇಲ್ಲಿ ಭಕ್ತರು ಬಂದು ತಮ್ಮ ಚರ್ಮ ರೋಗಗಳನ್ನು ವಾಸಿ ಮಾಡಲು ಕೇಳಿಕೊಂಡರೆ ಸಕಲ ಚರ್ಮ ವ್ಯಾದಿಗಳು ನಿವಾರಣೆಯಾಗುತ್ತವೆ ಅನ್ನೋ ನಂಬಿಕೆ ಹಿಂದಿನಿಂದಲೂ ಇದೆ.

ಅಷ್ಟಕ್ಕೂ ಈ ದೇವಾಯ ಎಲ್ಲಿದೆ ಇದರ ವಿಶೇಷತೆ ಏನು ಅನ್ನೋದನ್ನ ಇನ್ನೊಂದಷ್ಟು ತಿಳಿಯುವುದಾದರೆ ಈ ದೇವಾಲಯಕ್ಕೆ ನೆಲ್ಲಿ ತೀರ್ಥಸೋಮೇಶ್ವರ ಎಂಬುದಾಗಿ ಕರೆಯಲಾಗುತ್ತದೆ, ಈ ದೇವಾಲಯ ಇರೋದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬಳಿಯಲ್ಲಿದೆ. ಈ ದೇವಾಲಯವು ಒಂದು ಗುಹಾಂತರ ದೇವಾಲಯವಾಗಿದೆ, ಅಷ್ಟೇ ಅಲ್ದೆ ಈ ದೇವಾಲಯಲು ಪುರಾತನ ಕಾಲದ ದೇವಾಲಯವಾಗಿದ್ದು ಪ್ರಕೃತಿಯ ಮಡಿಲಲ್ಲಿ ಈ ದೇವಾಲಯ ನೆಲೆಸಿದೆ.

ಈ ದೇವಾಲಯಕ್ಕೆ ನೆಲ್ಲಿ ತೀರ್ಥ ಎಂಬುದಾಗಿ ಹೆಸರು ಬರಲು ಕಾರಣವೇನು ಅನ್ನೋದನ್ನ ತಿಳಿಯುವುದಾದರೆ ಇಲ್ಲಿ ಒಂದು ಗುಹೆ ಇದ್ದು ಅದರಲ್ಲಿ ನೆಲ್ಲಿ ಗಾತ್ರದಲ್ಲಿ ನೀರು ಬರುತ್ತಿರುತ್ತದೆ. ಹಾಗಾಗಿಯೇ ಇಲ್ಲಿ ಸದಾ ನೆಲ್ಲಿ ಗಾತ್ರದಲ್ಲಿ ನೀರು ಬರುವುದರಿಂದ ಇದನ್ನು ನೆಲ್ಲಿ ತೀರ್ಥ ಸೋಮೇಶ್ವರ ಎಂಬುದಾಗಿ ಕರೆಯಲಾಗುತ್ತದೆ. ಇನ್ನುಇಲ್ಲಿನ ಗುಹೆಯೊಳಗೆ ಹೋಗುವುದು ಒಂದು ವಿಶೇಷವಾಗಿದೆ ಗುಹೆ ಒಳಗೆ ಹೋಗಲು ನೀರಿನಲ್ಲಿ ಹೋಗಬೇಕಾಗುತ್ತದೆ ಹಾಗೂ ಗುಹೆಯೊಳಗಿನ ಮಣ್ಣನ್ನು ಮೈಗೆ ಹಚ್ಚಿಕೊಂಡು ಸ್ನಾನ ಮಾಡಿದರೆ ಸಕಲ ಚರ್ಮ ವ್ಯಾದಿಗಳು ನಿವಾರಣೆಯಾಗುತ್ತವೆ ಅನ್ನೋ ಪ್ರತೀತಿ ಇದೆ. ಇನ್ನು ಗುಹೆಯೊಳಗಿಂದ ಹೊರಗಡೆ ಬಂದಂತ ಸಂದರ್ಭದಲ್ಲಿ ಹೊರಗಡೆ ಇರುವಂತ ಶಿವಲಿಂಗಕ್ಕೆ ಪೂಜೆ ಸಲ್ಲಿಸಿ ಬರಬೇಕಾಗುತ್ತದೆ.

ಮಳೆಗಾಲದಲ್ಲಿ ಇಲ್ಲಿ ಭೇಟಿ ನೀಡುವುದನ್ನು ನಿಷೇದ ಮಾಡಲಾಗಿದೆ, ಬಹಳಷ್ಟು ಭಕ್ತಾದಿಗಳು ಇಲ್ಲಿ ಬಂದು ತಮ್ಮ ಕೋರಿಕೆಯನ್ನು ಕಷ್ಟಗಳನ್ನು ಬೇಡಿಕೊಂಡು ಸ್ವಾಮಿ ಸೋಮೇಶ್ವರನ ಸನ್ನಿದಿಯಲ್ಲಿ ದರ್ಶನ ಭಾಗ್ಯವನ್ನು ಪಡೆದುಕೊಳ್ಳುತ್ತಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!