ದೇವರ ಮುಂದೆ ಹೊಡೆದ ತೆಂಗಿನ ಕಾಯಿ ಕೆಟ್ಟರೆ ಏನರ್ಥ ಗೊತ್ತೇ

0 178

ಸಾಮಾನ್ಯವಾಗಿ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ದೇವರ ಪೂಜೆಗೆ ತೆಂಗಿನ ಕಾಯಿಯನ್ನು ಹೊಡೆಯುವುದು ಸಹಜವಾಗಿದೆ, ಯಾಕಂದ್ರೆ ತೆಂಗಿನ ಕಾಯಿಗೆ ತನ್ನದೇ ಆದ ಮಹತ್ವವಿದೆ ತೆಂಗಿನ ಕಾಯಿಯು ನಮ್ಮ ಹಿಂದೂ ಧರ್ಮ ಶಾಸ್ತ್ರದ ಪ್ರಾಕಾರ ಒಂದು ಪೊರ್ಣ ಫಲ ಅಲ್ಲದೇ ತೆಂಗಿನ ಮರವು ಬೇಡಿದ್ದನ್ನು ಎಲ್ಲಾ ನೀಡುವ ಒಂದು ಕಲ್ಪವೃಕ್ಷ ಹಾಗಾಗಿ ತೆಂಗಿನ ಕಾಯಿಗೆ ಎಲ್ಲಿಲ್ಲದ ಮಹತ್ವ ದೇವರ ಪೂಜೆಯ ಸಮಯದಲ್ಲಿ ತೆಂಗಿನ ಕಾಯಿಯನ್ನು ಹೊಡೆದು ಎರಡು ಹೋಳು ಮಾಡಿ ದೇವರ ಮುಂದೆ ಇಟ್ಟು ಪೂಜೆ ಮಾಡುತ್ತೇವೆ. ಅಲ್ಲದೇ ತೆಂಗಿನ ಕಾಯಿಯ ಒಳಗಿರುವ ನೀರನ್ನು ನಾವುಗಳು ತೀರ್ಥವಾಗಿ ಸೇವನೆ ಮಾಡುತ್ತೇವೆ, ಇನ್ನೂ ಹೆಚ್ಚಿನದಾಗಿ ಹೇಳಬೇಕೆಂದರೆ ತೆಂಗಿನ ಕಾಯಿಯು ಮನುಷ್ಯನ ತಲೆಯ ಸಂಕೇತ ಮತ್ತು ತೆಂಗಿನ ಕಾಯಿಯ ಮೇಲಿರುವ ಜುಟ್ಟು ಮನುಷ್ಯನ ತಲೆಯ ಕೂದಲಿನ ಸಂಕೇತ ಎಲ್ಲಕ್ಕಿಂತ ಹೆಚ್ಚಾಗಿ ಕೊಬ್ಬರಿಯು ಮನುಷ್ಯನ ಮನಸ್ಸಿನ ಕಾರಕವಾದುದು.

ಹೀಗೆ ಪೂಜೆ ಮಾಡುವ ಸಮಯದಲ್ಲಿ ತೆಂಗಿನ ಕಾಯಿಯನ್ನು ಒಡೆದಾಗ ಕೆಲವೊಮ್ಮೆ ಅದು ಕೆಟ್ಟು ಹೋಗಿರುವುದನ್ನು ನಾವು ಕಾಣುತ್ತೇವೆ ಹಾಗಾದ್ರೆ ಈ ರೀತಿ ಕೆಟ್ಟೋ ಹೋಗಿರುವ ತೆಂಗಿನ ಕಾಯಿಯು ಏನನ್ನು ಸೂಚಿಸುತ್ತದೆ, ಹೀಗೆ ಒಡೆದ ತೆಂಗಿನ ಕಾಯಿ ಕೆಟ್ಟಿರುವುದು ಶುಭ ಸೂಚಕವೋ ಅಥವಾ ಅಶುಭದ ಸೂಚಕವೋ ಎಂಬುದರ ಬಗ್ಗೆ ನಾವು ಒಂದಷ್ಟು ಮಾಹಿತಿಯನ್ನು ನಿಮಗೆ ನೀಡುತ್ತೇವೆ ಬನ್ನಿ. ಅದಕ್ಕಿಂತ ಮೊದಲು ನೀವು ತೆಂಗಿನ ಕಾಯಿ ಹೊಡೆಯುವಾಗ ಅದು ಸರಿಯಾಗಿ ಮಧ್ಯ ಭಾಗಕ್ಕೆ ಹೊಡೆದರೆ ಅದು ನೀವು ಮನಸ್ಸಿನಲ್ಲಿ ಅಂದುಕೊಂಡ ಬೇಡಿಕೆ ಅತೀ ಶೀಘ್ರದಲ್ಲಿ ಈಡೇರುವ ಶುಭ ಸೂಚಕವಾಗಿರುತ್ತದೆ ಮತ್ತು ಕೆಲವೊಮ್ಮೆ ದೇವರ ಮುಂದೆ ಹೊಡೆದ ತೆಂಗಿನ ಕಾಯಿಯಲ್ಲಿ ಹೂ ಬಂದಿರುವುದನ್ನು ನಾವು ನೋಡಿರುತ್ತೇವೆ ಅದಕ್ಕೆ ಗಾಬರಿಯಾಗುವ ಅಗತ್ಯವಿಲ್ಲ ಹೀಗೆ ತೆಂಗಿನ ಕಾಯಿಯನ್ನು ಹೊಡೆಯುವಾಗ ಹೂ ಬಂದರೆ ಅದೂ ಕೂಡ ಶುಭ ಸೂಚಕವೇ.

ಯಾಕಂದ್ರೆ ಹೀಗೆ ತೆಂಗಿನ ಕಾಯಿಯನ್ನು ಹೊಡೆದಾಗ ಹೂ ಬಂದರೆ ಅದು ವಂಶದಲ್ಲಿ ಯಾರಿಗಾದರೂ ಸಂತಾನ ಫಲವನ್ನು ದೇವರು ಕರುಣಿಸುವ ಶುಭ ಸೂಚಕವೇ ಸರಿ ಮತ್ತು ತೆಂಗಿನ ಕಾಯಿಯನ್ನು ಒಡೆಯುವಾಗ ಅದು ಸರಿಯಾಗಿ ಅರ್ಧಕ್ಕೆ ಹೋಳಾಗದೆ ಉದ್ದುದ್ದ ರೀತಿಯಲ್ಲಿ ಸೀಳಿಕೊಂಡರೆ ಅದೂ ಸಹ ಕುಟುಬದಲ್ಲಿ ಸಂತಾನವನ್ನು ದೇವರು ಕರುಣಿಸಲಿದ್ದಾನೆ ಎಂದರ್ಥ

ಈಗ ನಾವು ಮುಖ್ಯ ವಿಷಯಕ್ಕೆ ಬರೋಣ ಏನಂದ್ರೆ ನಾವು ಕೆಲವೊಮ್ಮೆ ದೇವರ ಮುಂದೆ ತೆಂಗಿನ ಕಾಯಿಯನ್ನು ಹೊಡೆದಾಗ ಕಾಯಿಯು ಕೆಟ್ಟಿರುತ್ತದೆ, ಹೀಗೆ ಹೊಡೆದ ಕಾಯಿಯು ಕೆಟ್ಟಿದ್ದರೆ ಅದೂ ಶುಭ ಸೂಚಕವೋ ಅಥವಾ ಅಶುಭ ಸೂಚಕವೋ ಎಂಬುದು ಹೌದು ನಾವು ಕೆಲವೊಮ್ಮೆ ದೇವರ ಮುಂದೆ ತೆಂಗಿನ ಕಾಯಿಯನ್ನು ಹೊಡೆದಾಗ ಅದೂ ಕೆಟ್ಟಿದ್ದರೆ ಅದರಿಂದ ನಿಮಗೆ ಯಾವ ದೋಷವೂ ಇರುವುದಿಲ್ಲ. ಹೀಗೆ ಕೆಟ್ಟಾಗ ನೀವು ಆ ತೆಂಗಿನ ಕಾಯಿಯನ್ನು ಬಿಟ್ಟು ಮತ್ತೆ ಮಡಿಯಾಗಿ ಮತ್ತೊಂದು ತೆಂಗಿನ ಕಾಯಿಯನ್ನು ಹೊಡೆಯಲು ಮುಂದಾಗಬೇಕು. ಆಗಲೂ ಸಹ ತೆಂಗಿನ ಕಾಯಿ ಕೆಟ್ಟಿದ್ದರೆ ಅದೂ ಕೂಡ ನಿಮಗೆ ಯಾವ ದೋಷವಿಲ್ಲ ಅದು ತೆಂಗಿನ ಕಾಯಿಯ ದೋಷ ಹೀಗೆ ಕಾಯಿ ಕೆಟ್ಟಿದ್ದರೆ ನಿಮ್ಮ ಮೇಲಿರುವ ಕೆಟ್ಟ ದೃಷ್ಟಿ ದೋಷ ನಿವಾರಣೆಯಾಗಿದೆ ಎಂದು ತಿಳಿದುಕೊಳ್ಳಬೇಕು. ಅಷ್ಟೇ ಬಿಟ್ಟರೆ ಇದರಿಂದ ನಿಮಗೆ ಯಾವುದೇ ದೋಷವಾಗಲಿ ಸಮಸ್ಯೆಯಾಗಲಿ ಸಂಭವಿಸೋದಿಲ್ಲ.

Leave A Reply

Your email address will not be published.