Gold Loan In Bank: ಸಮಯ ಸಂದರ್ಭ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಇದ್ದಕ್ಕಿದ್ದ ಹಾಗೆ ಕಷ್ಟಬಂದು, ಹಣದ ಅವಶ್ಯಕತೆ ಇದ್ದಾಗ, ತಕ್ಷಣಕ್ಕೆ ಬ್ಯಾಂಕ್ ಇಂದ ನಿಮಗೆ ಸಾಲ ಅಥವಾ ಲೋನ್ ಕೊಡುವುದಿಲ್ಲ. ಆಗ ಸಾಮಾನ್ಯವಾಗಿ ಜನರು ತಮ್ಮ ಬಳಿ ಇರುವ ಚಿನ್ನದ ಆಭರಣಗಳನ್ನು ಅಡವಿಟ್ಟು, ಸಾಲ ಪಡೆಯುತ್ತಾರೆ. ಈ ರೀತಿ ಸಿಗುವ ಸಾಲಕ್ಕೆ ಬಡ್ಡಿದರ ಕೂಡ ಕಡಿಮೆ ಇರುತ್ತದೆ, ಜೊತೆಗೆ ಸಾಲ ಸುಲಭವಾಗಿ ಸಿಗುತ್ತದೆ.

ಈ ರೀತಿ ಚಿನ್ನವನ್ನು ಅಡವಿಟ್ಟು ಸಾಲ ಪಡೆದಿರುವವರಿಗೆ ನಮ್ಮ ದೇಶದ ಅತಿದೊಡ್ಡ ಬ್ಯಾಂಕ್ ಗಳಲ್ಲಿ ಒಂದು ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಂದು ಗುಡ್ ನ್ಯೂಸ್ ನೀಡಿದೆ. ಎಸ್.ಬಿ.ಐ ಈಗ ಗೋಲ್ಡ್ ಮೇಲೆ ಸಾಲ ಪಡೆಯುವ ಗ್ರಾಹಕರಿಗೆ ಸಂಸ್ಕರಣಾ ಶುಲ್ಕ ಅಂದರೆ ಪ್ರೊಸೆಸಿಂಗ್ ಫೀಸ್ ಅನ್ನು ಕಟ್ ಮಾಡಿದೆ. ಹಾಗೆಯೇ ಚಿನ್ನದ ಸಾಲದ ಮೇಲಿನ ಬಡ್ಡಿದರವನ್ನು ಕೂಡ ಕಡಿಮೆ ಮಾಡಿದೆ.

ಈ ಹಿಂದೆ ನೀವು ಎಸ್.ಬಿ.ಐ ನಲ್ಲಿ ಗೋಲ್ಡ್ ಲೋನ್ ತೆಗೆದುಕೊಂಡರೆ, 7.75% ಬಡ್ಡಿದರ ಇತ್ತು, ಆದರೆ ಈಗ ಬಡ್ಡಿದರ ಇಳಿಕೆ ಮಾಡಿ, 7.50% ಬಡ್ಡಿದರ ನಿಗದಿ ಮಾಡಲಾಗಿದೆ..ಹಾಗೆಯೇ ಸಂಸ್ಕರಣಾ ಶುಲ್ಕ ಕೂಡ ಕಡಿಮೆ ಮಾಡಲಾಗಿದ್ದು, 0.25% ಸಂಸ್ಕರಣಾ ಶುಲ್ಕ ಹಾಗೆಯೇ GST ಇಡಲಾಗಿದೆ. YONO SBI ಆಪ್ ಇಂದ ಗೋಲ್ಡ್ ಲೋನ್ ತೆಗೆದುಕೊಂಡರೆ, ಸಂಸ್ಕರಣಾ ಶುಲ್ಕ ಪಾವತಿ ಮಾಡಬೇಕಿಲ್ಲ.

Gold Loan In Bank

ಹಾಗೆಯೇ ಈಗ ನಿಮಗೆ ಚಿನ್ನದ ಮೇಲೆ ಪಡೆಯುವ ಸಾಲದ ಮೊತ್ತವನ್ನು ಕೂಡ ಜಾಸ್ತಿ ಮಾಡಲಾಗಿದೆ, ಈಗ ನೀವು ಚಿನ್ನದ ಮೇಲೆ 90%ವರೆಗು ಸಾಲ ಪಡೆಯಬಹುದು. SBI ಬ್ಯಾಂಕ್ ಈ ಕೆಲವು ಹೊಸ ನಿಯಮಗಳನ್ನು 2023ರ ಆಗಸ್ಟ್ 23ರಿಂದ ಜಾರಿಗೆ ತಂದಿದೆ. ಸಂಸ್ಕರಣಾ ಶುಲ್ಕ ಕಡಿಮೆ ಆಗುವುದರ ಜೊತೆಗೆ ಸಾಲ ಕೂಡ ಜಾಸ್ತಿ ಪಡೆಯಬಹುದು. SBI ನಲ್ಲಿ ಚಿನ್ನದ ಸಾಲವನ್ನು 20 ಸಾವಿರದಿಂದ 50ಸಾವಿರದ ವರೆಗು ಪಡೆಯಬಹುದು..

SbI ನಲ್ಲಿ ಚಿನ್ನದ ಮೇಲೆ ಪಡೆಯುವ ಸಾಲವನ್ನು ಮರುಪಾವತಿ ಮಾಡಲು 36 ತಿಂಗಳುಗಳ ಸಮಯ ನೀಡಲಾಗುತ್ತದೆ. ಈ ರೀತಿಯಾಗಿ ಗೋಲ್ಡ್ ಲೋನ್ ಮೇಲೆ ಇಷ್ಟು ಬದಲಾವಣೆಗಳನ್ನು ತರಲಾಗಿದ್ದು, ಜನರಿಗೆ ಇದು ಒಳ್ಳೆಯ ಸುದ್ದಿಯಾಗಿದ್ದು, ಹೆಚ್ಚಿನ ಅನುಕೂಲವನ್ನೇ ನೀಡಲಿದೆ.

By AS Naik

Leave a Reply

Your email address will not be published. Required fields are marked *