Dr Shivarajkumar Meet Vinod raj: ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವ ರಾಜ್ ಕುಮಾರ್ ಅವರು ಈಗ ಘೋಸ್ಟ್ ಸಿನಿಮಾ ಸಕ್ಸಸ್ ಎಂಜಾಯ್ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಈಗ ಎಲ್ಲೆಡೆ ಘೋಸ್ಟ್ ಸಿನಿಮಾದೇ ಹವಾ ಎಂದರೆ ತಪ್ಪಲ್ಲ. ಶಿವಣ್ಣ ಅವರು ಬಿಗ್ ಡ್ಯಾಡಿ ಆಗಿ, ಜನರು ಫಿದಾ ಆಗುಫಾ ಹಾಗೆ ಮಾಡಿದ್ದಾರೆ. ಇನ್ನು ನಮ್ಮ ಕನ್ನಡ ಚಿತ್ರರಂಗದ ಮತ್ತೊಬ್ಬ ಖ್ಯಾತ ನಟ ವಿನೋದ್ ರಾಜ್ ಅವರು ಶಿವಣ್ಣ ಅವರನ್ನು ಭೇಟಿ ಮಾಡಿದ್ದು, ಮಾತಾಡಿದ ವಿಷಯ ಏನು ಗೊತ್ತಾ

ಶಿವಣ್ಣ ಅವರ ಘೋಸ್ಟ್ ಸಿನಿಮಾ ಆಕ್ಟೊಬರ್ 19ರಂದು ಕರ್ನಾಟಕ, ಮುಂಬೈ, ತಮಿಳುನಾಡು, ಕೇರಳ ಎಲ್ಲಾ ಕಡೆ ಬಿಡುಗಡೆ ಆಗಿದೆ. ಶಿವಣ್ಣ ಅವರನ್ನು ಹಿಂದೆಂದೂ ನೋಡಿರದ ಒರಿಜಿನಲ್ ಗ್ಯಾಂಗ್ಸ್ಟರ್ ಲುಕ್ ನಲ್ಲಿ ಅದ್ಭುತವಾಗಿ ನಟಿಸಿ, ಹೊಸ ಕ್ರೇಜ್ ಸೃಷ್ಟಿಸಿದ್ದಾರೆ. ಶಿವಣ್ಣ ಅವರದ್ದು ಈ ಸಿನಿಮಾದಲ್ಲಿ ಕಣ್ಣಲ್ಲೇ ಮಾತನಾಡುವ ಪಾತ್ರ, ಹೆಚ್ಚು ಡೈಲಾಗ್ಸ್ ಇಲ್ಲ, ಅವರ ಫೈಟ್ಸ್ ಕಣ್ಣುಗಳು ಎಲ್ಲಾ ಅಭಿಮಾನಿಗಳನ್ನು ಆಕರ್ಷಿಸಿದೆ.

ಘೋಸ್ಟ್ ಸಿನಿಮಾ ಪ್ರೊಮೋಟ್ ಮಾಡುವ ಸಲುವಾಗಿ ಶಿವಣ್ಣ ಅವರು ಮೈಸೂರಿನ ಯುವದಾಸರಾ ಕಾರ್ಯಕ್ರಮಕ್ಕೆ ಬಂದಿದ್ದರು. ಯುವದಸರಾ ಕಾರ್ಯಕ್ರಮದ ಉದ್ಘಾಟನೆಗೆ ಬಂದ ಶಿವಣ್ಣ ಘೋಸ್ಟ್ ಸಿನಿಮಾ ಬಗ್ಗೆ ಮಾತನಾಡಿ, ವೇದಿಕೆ ಮೇಲೆ ಭರ್ಜರಿಯಾಗಿ ಡ್ಯಾನ್ಸ್ ಕೂಡ ಮಾಡಿದ್ದರು. ಅದೇ ದಿನ ಯುವದಸರಾ ಕಾರ್ಯಕ್ರಮಕ್ಕೆ ವಿನೋದ್ ರಾಜ್ ಅವರು ಕೂಡ ಬಂದಿದ್ದರು.

Dr Shivarajkumar Meet Vinod raj

ಆ ವೇಳೆ ಶಿವಣ್ಣ ಅವರು ಮತ್ತು ವಿನೋದ್ ರಾಜ್ ಅವರು ಇಬ್ಬರು ಕೂಡ ಜೊತೆಯಾಗಿ ಮಾತನಾಡಿ, ನಕ್ಕು ಎಂಜಾಯ್ ಮಾಡಿದ್ದಾರೆ. ವಿನೋದ್ ರಾಜ್ ಅವರು ಶಿವಣ್ಣ ಅವರನ್ನು ಅಣ್ಣಾ ಎಂದು ಕರೆದು ಮಾತನಾಡಿಸಿದ್ದಾರೆ. ಇವರಿಬ್ಬರನ್ನು ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಹಿಂದಿನಿಂದಲೂ ಶಿವಣ್ಣ ಅವರು ವಿನೋದ್ ರಾಜ್ ಅವರೊಡನೆ ಲೀಲಾವತಿ ಅವರೊಡನೆ ಉತ್ತಮ ಬಾಂಧವ್ಯವನ್ನೇ ಹೊಂದಿದ್ದಾರೆ. ಇಂದಿಗೂ ಸಹ ಅದೇ ಸ್ನೇಹ ಮುಂದುವರೆದಿದೆ.

By AS Naik

Leave a Reply

Your email address will not be published. Required fields are marked *