jafrabadi buffalo Farming: ನಮ್ಮ ದೇಶದಲ್ಲಿ ಕೃಷಿ ಮತ್ತು ಪಶು ಸಂಗೋಪನೆ ಈ ಎರಡಕ್ಕೂ ತನ್ನದೇ ಆದ ಮಹತ್ವವಿದೆ. ರೈತರಿಗೆ ಕೃಷಿ ಜೊತೆಗೆ ಪಶು ಸಂಗೋಪನೆ ಕೂಡ ಒಳ್ಳೆಯ ಲಾಭ ತಂದುಕೊಡುವಂಥ ಉದ್ಯೋಗ ಆಗಿದೆ. ಪಶು ಸಂಗೋಪನೆ ಮಾಡುವುದು ಉತ್ತಮ ಗೊಬ್ಬರಕ್ಕಾಗಿ, ಇದರಲ್ಲಿ ನೀವು ವಾರ್ಷಿಕವಾಗಿ ಮಾತ್ರವಲ್ಲ ತಿಂಗಳಿಗೆ ಒಳ್ಳೆಯ ಆದಾಯ ಗಳಿಸಬಹುದು. ಪಶು ಸಂಗೋಪನೆ ಇಂದ ಲಕ್ಷಗಟ್ಟಲೇ ಆದಾಯ ಗಳಿಸಬಹುದು ಎನ್ನುವ ವಿಷಯ ನಿಮಗೆ ಗೊತ್ತಿರಬೇಕು.

ಒಳ್ಳೆಯ ಆದಾಯ ಬರಬೇಕು ಎಂದರೆ ನೀವು ಯಾವ ತಳಿ ಹಸು ಅಥವಾ ಎಮ್ಮೆಯ ಸಂಗೋಪನೆ ಮಾಡುತ್ತೀರಿ ಎನ್ನುವುದು ಮುಖ್ಯವಾಗುತ್ತದೆ. ಪ್ರಸ್ತುತ ಎಮ್ಮೆ ಹಾಲಿಗೆ ಹೆಚ್ಚು ಬೇಡಿಕೆ ಇದೆ, ಅದಕ್ಕೆ ಕಾರಣ ಹಸುವಿನ ಹಾಲಿಗಿಂತ ಎಮ್ಮೆಯ ಹಾಲು ಗಟ್ಟಿ ಇರುತ್ತದೆ, ಜೊತೆಗೆ ಪೋಷಕಾಂಶ ಕೂಡ ಜಾಸ್ತಿ ಇರುತ್ತದೆ. ಹಾಗಾಗಿ ಇವುಗಳ ಸಂಗೋಪನೆ ಇಂದ ಲಾಭ ಪಡೆಯಬಹುದು, ಈಗ ನಮ್ಮ ದೇಶದಲ್ಲಿ ಹೆಚ್ಚು ಲಾಭ ನೀಡುವ ಎಮ್ಮೆಯ ತಳಿಗಳು ಎರಡು, ಒಂದು ಜಾಫ್ರಬಾದಿ ಮತ್ತೊಂದು ಮುರ್ರಾ ಆಗಿದೆ.

ಜಾಫ್ರಬಾದಿ ಎನ್ನುವ ಈ ಎಮ್ಮೆಯ ತಳಿ ಬಹಳ ವಿಶೇಷವಾದದ್ದು, ಈ ತಳಿ ನಮ್ಮ ದೇಶದ ಎಲ್ಲಾ ಪ್ರದೇಶಗಳಲ್ಲಿ ಸಿಗುವುದಿಲ್ಲ, ವಿಶೇಷವಾಗಿ ಗುಜರಾತ್ ರಾಜ್ಯದ ಸೌರಾಷ್ಟ್ರದಲ್ಲಿ ಸಿಗುತ್ತದೆ. ಹಾಗೆಯೇ ವಿಶ್ವದಲ್ಲಿ ಆಫ್ರಿಕಾದಲ್ಲಿ ಈ ತಳಿಯ ಎಮ್ಮೆ ಇರುತ್ತದೆ. ವಿಶ್ವದ ಒಂದೆರಡು ಪ್ರದೇಶಗಳಲ್ಲಿ ಮಾತ್ರ ಈ ತಳಿಯ ಎಮ್ಮೆ ಕಾಣಲು ಸಿಗಲಿದ್ದು, ಇದು ಭಾರತ ದೇಶದ ಜನರಾದ ನಮಗೆ ಹೆಮ್ಮೆಯ ವಿಚಾರ ಎಂದರೆ ತಪ್ಪಲ್ಲ. ಈ ಎಮ್ಮೆಯ ತಳಿ ಸಾಕಾಣಿಕೆ ಮಾಡಿದರೆ ನೀವು ಹೆಚ್ಚು ಹಣ ಗಳಿಸಬಹುದು.

jafrabadi buffalo Farming

ಈ ಎಮ್ಮೆ ದಿನಕ್ಕೆ ಎಷ್ಟು ಲೀಟರ್ ಹಾಲು ಕೊಡುತ್ತದೆ ಎಂದು ತಿಳಿದರೆ ನೀವು ಶಾಕ್ ಆಗುತ್ತೀರಿ, ಸಾಮಾನ್ಯವಾಗಿ ದಿನಕ್ಕೆ 35 ಲೀಟರ್ ಹಾಲು ಕೊಡುವಷ್ಟು ಸಾಮರ್ಥ್ಯ ಈ ಎಮ್ಮೆಗೆ ಇದೆ. ಗರ್ಭಿಣಿ ಆಗಿದ್ದರು ಸಹ, ಈ ಎಮ್ಮೆ ದಿನಕ್ಕೆ 10 ಲೀಟರ್ ವರೆಗು ಹಾಲು ಕೊಡುತ್ತದೆ. ಈ ಎಮ್ಮೆಯ ಹಾಲಿಗೆ ಅಷ್ಟೇ ಬೇಡಿಕೆ ಸಹ ಇದೆ, ಈ ಹಾಲು ಲೀಟರ್ ಗೆ 80 ರಿಂದ 100 ರೂಪಾಯಿಗೆ ಮಾರಾಟ ಆಗುತ್ತದೆ. ಈ ಹಾಲಿನಿಂದ ತಯಾರಾಗುವ ಬೆಣ್ಣೆ, ತುಪ್ಪ ಮತ್ತು ಇನ್ನಿತರ ಉತ್ಪನ್ನಕ್ಕೂ ಅಷ್ಟೇ ಬೇಡಿಕೆ ಇದೆ.

ಈ ಎಮ್ಮೆಗಳು ನೋಡಲು ಸಾಮಾನ್ಯವಾದ ಎಮ್ಮೆಯ ಹಾಗೆ ಕಾಣುವುದಿಲ್ಲ, ಇದರ ಕೊಂಬುಗಳು ಸುರುಳಿ ಸುಟ್ಟುಕೊಂಡ ಹಾಗೆ ಕಾಣುತ್ತದೆ, ಮುಂಭಾಗದಲ್ಲಿ ಬಾಗಿರುತ್ತದೆ. ನೋಡಲು ಗುಂಡಗೆ, ದಷ್ಟಪುಷ್ಟವಾಗಿ ಕಾಣುತ್ತದೆ, ಕಪ್ಪು ಬಣ್ಣ ಇರುತ್ತದೆ. ಎಲ್ಲಾ ವಾತವರಣಕ್ಕೂ ಹೊಂದಿಕೊಳ್ಳುತ್ತದೆ ಈ ಎಮ್ಮೆಗಳು..ಇದರ ಬೆಲೆ ಕೂಡ ಅಷ್ಟೇ ಜಾಸ್ತಿ ಒಂದು, 70 ಸಾವಿರ ಇಂದ 1 ಲಕ್ಷದವರೆಗು ಇರುತ್ತದೆ. ಸೌರಾಷ್ಟ್ರದಲ್ಲಿ ಮಾತ್ರ ಸಿಗುವ ಈ ತಳಿಯನ್ನು ಖರೀದಿ ಮಾಡುವುದಕ್ಕಿಂತ ಮೊದಲು ತಜ್ಞರ ಸಲಹೆ ಪಡೆಯುವುದು ಒಳ್ಳೆಯದು.

ಈ ಎಮ್ಮೆ ಪಡೆಯುವಾಗ ನೋಡಿ, ಹೆಚ್ಚಿನ ಅನುಭವ ಇರುವ ವ್ಯಕ್ತಿಯಿಂದ ಮಾತ್ರ ಖರೀದಿ ಮಾಡಿ. ಈ ಎಮ್ಮೆಯ ಹಾಲು ಮಾರಾಟ ಮತ್ತು ಉತ್ಪನ್ನ ಕೇಂದ್ರ ಶುರು ಮಾಡಿದರೆ, ಖಂಡಿತವಾಗಿ ಮೀವು ಹೆಚ್ಚು ಲಾಭ ಗಳಿಸುವುದರಲ್ಲಿ ಸಂದೇಹವಿಲ್ಲ. ಇದನ್ನೂ ಓದಿ 5 Rupees Old Note: ನಿಮ್ಮ ಹತ್ತಿರ 5 ರೂಪಾಯಿಯ ಈ ನೋಟ್ ಇದ್ರೆ ಸಾಕು, 5 ಲಕ್ಷ ಗೆಲ್ಲಬಹುದು

By

Leave a Reply

Your email address will not be published. Required fields are marked *