Gold Hallmark : ಏಪ್ರಿಲ್ 1ರಿಂದ ಚಿನ್ನದ ಖರೀದಿ ಹಾಗೂ ಮಾರಾಟ ಮಾಡುವವರಿಗೆ ಇಲ್ಲಿದೆ ನೋಡಿ ಹೊಸ ನಿಯಮ! ಏನದು ಇಂದೇ ತಿಳಿಯಿರಿ. ಇಡೀ ಪ್ರಪಂಚಕ್ಕೆ ಹೋಲಿಸಿದರೆ ಚಿನ್ನವನ್ನು ಅತ್ಯಂತ ಆಮದು ಮಾಡಿಕೊಳ್ಳುವಂತಹ ದೇಶ ಎಂದರೆ ಅದು ಭಾರತ. ಇಡೀ ವಿಶ್ವದ ಹನ್ನೊಂದು ಪ್ರತಿಶತಕ್ಕೂ ಅಧಿಕ ಚಿನ್ನ ಎನ್ನುವುದು ನಮ್ಮ ಭಾರತ ದೇಶದಲ್ಲಿದೆ. ಅಷ್ಟರ ಮಟ್ಟಿಗೆ ನಮ್ಮ ದೇಶದ ಹೆಣ್ಣು ಮಕ್ಕಳು ಸ್ವರ್ಣಪ್ರಿಯರಾಗಿದ್ದಾರೆ ಎಂದರೆ ತಪ್ಪಾಗಲಾರದು. ಕೆಲವರು ಅಲಂಕಾರಕ್ಕಾಗಿ ಚಿನ್ನವನ್ನು ಖರೀದಿಸಿದರೆ ಇನ್ನು ಕೆಲವರು ಹೂಡಿಕೆಗಾಗಿ ಚಿನ್ನವನ್ನು ಖರೀದಿಸುತ್ತಾರೆ.

ಒಟ್ಟಾರೆಯಾಗಿ ಹಲವಾರು ವಿಧಗಳಲ್ಲಿ ಚಿನ್ನ ಎನ್ನುವುದು ಪ್ರತಿಯೊಬ್ಬರ ಕಷ್ಟಕಾಲದಲ್ಲಿ ಆಪತ್ಬಾಂಧವನಂತೆ ಚಿನ್ನ ಕಾಣಿಸಿಕೊಳ್ಳುತ್ತದೆ. ಇನ್ನೂ ಇದೇ ಬರುವ ಏಪ್ರಿಲ್ ಒಂದರಿಂದ ಚಿನ್ನದ ಮಾರಾಟಗಾರರು ಹಾಗೂ ಖರೀದಿದಾರರಿಗೆ ಹೊಸ ನಿಯಮ ಒಂದು ಜಾರಿಗೆ ಬರಲಿದೆ ಎನ್ನುವುದಾಗಿ ಸರ್ಕಾರದಿಂದ ಅದಿನಿಯಮದ ಸೂಚನೆ ಹೊರ ಬಂದಿದೆ. ಅಷ್ಟಕ್ಕೂ ಆ ಅಧಿನಿಯಮಗಳು ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಇದನ್ನೂ ಓದಿ..ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಖಾಲಿ ಇದೆ ಆಸಕ್ತರು ಅರ್ಜಿಹಾಕಿ

ಹಾಲ್ ಮಾರ್ಕ್ ಇಲ್ಲದ ಚಿನ್ನವನ್ನು ಖರೀದಿ ಮಾಡುವುದು ಅಥವಾ ಮಾರಾಟ ಮಾಡುವುದು ಅಪರಾಧ ಎನ್ನುವುದಾಗಿ ಸರ್ಕಾರ ಎರಡು ವರ್ಷಗಳ ಹಿಂದೇನೆ ಘೋಷಿಸಿತ್ತು. ಆದರೆ ಇದೇ ಏಪ್ರಿಲ್ ಒಂದರಿಂದ ಇದನ್ನು ಕಠಿಣವಾಗಿ ಜಾರಿಗೆ ತಂದಿದ್ದು ಕಡ್ಡಾಯವಾಗಿ ಈ ಕುರಿತಂತೆ ನಿಯಮವನ್ನು ಪಾಲಿಸಲೇಬೇಕು ಎನ್ನುವುದಾಗಿ ಎಲ್ಲರಿಗೂ ಕೂಡ ಸರ್ಕಾರ ಎಚ್ಚರಿಕೆಯನ್ನು ನೀಡಿದೆ. ಮುಂದಿನ ದಿನಗಳಲ್ಲಿ ಇದು ಪ್ರತಿಯೊಬ್ಬ ಚಿನ್ನದ ಮಾರಾಟಗಾರ ಹಾಗೂ ಖರೀದಿದಾರರಿಗೆ ಪಾಲಿಸಲೇ ಬೇಕಾದಂತಹ ನಿಯಮವಾಗಿದೆ.

ಪ್ರತಿ ಚಿನ್ನದ ಗುಣಮಟ್ಟ ಹಾಗೂ ಟ್ರೇಸ್ ಮಾಡಲು ಮತ್ತು ಅಕ್ರಮ ಚಿನ್ನದ ಮಾರಾಟವನ್ನು ತಡೆಯಲು ಸರ್ಕಾರ ಈ ಕಠಿಣ ನಿಯಮವನ್ನು ಜಾರಿಗೆ ತಂದಿದ್ದು ಇದರ ಮೂಲಕ ಚಿನ್ನದ ಮಾರುಕಟ್ಟೆಯನ್ನು ಸುವ್ಯವಸ್ಥೆಯಲ್ಲಿ ಇಡುವಂತಹ ಪ್ರಯತ್ನವನ್ನು ಮಾಡಲಾಗುತ್ತಿದೆ.

ಇದನ್ನೂ ಓದಿ..SSLC ಪಾಸ್ ಆದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಕೆಲಸ ಖಾಲಿ ಇದೆ ಆಸಕ್ತರು ಅರ್ಜಿಹಾಕಿ

ಹಾಲ್ ಮಾರ್ಕ್ ಇಲ್ಲದೆ ಇರುವಂತಹ ಒಡವೆಗಳನ್ನು ಹಾಲ್ ಮಾರ್ಕ್ ಸೆಂಟರ್ ಗೆ ಹೋಗಿ ಶುದ್ಧತೆಯನ್ನು ಪರೀಕ್ಷಿಸಿ ನಂತರವೇ ಮಾರಾಟ ಮಾಡಬಹುದಾಗಿದೆ. ಚಿನ್ನದ ಅಂಗಡಿಯವರು ಕೂಡ ಆ ಒಡವೆಯನ್ನು ಕರಗಿಸಿ ನಂತರ ಹಾಲ್ ಮಾರ್ಕ್ ದೃಢೀಕರಣವನ್ನು ಮಾಡಿಸಬಹುದಾಗಿದೆ ಎಂಬುದಾಗಿ ಹೊಸ ನಿಯಮದ ಪ್ರಕಾರ ತಿಳಿದು ಬಂದಿದೆ.

Leave a Reply

Your email address will not be published. Required fields are marked *