Ultimate magazine theme for WordPress.

ದೇವರು ಇದ್ದನೋ, ಇಲ್ಲವೋ ಅನ್ನೋ ಪ್ರಶ್ನೆ ನಿಮ್ಮಲ್ಲಿದ್ದರೆ ಇದನ್ನೊಮ್ಮೆ ತಿಳಿಯಿರಿ

0 16

ಕೆಲವರಿಗೆ ದೇವರ ಅಸ್ತಿತ್ವದ ಬಗ್ಗೆ ತಿಳಿದಿರುವುದಿಲ್ಲ. ಕೆಲವರು ದೇವರು ಇದ್ದಾನೆ ಅಂದ್ರೆ ಇನ್ನು ಕೆಲವರು ದೇವರು ಇಲ್ಲ ಅದು ಕೇವಲ ಮೂಢ ನಂಬಿಕೆ ಅಂತ ಹೇಳ್ತಾರೆ. ಹಾಗಾದ್ರೆ ಯಾವುದು ನಿಜ? ಯಾವುದು ಸುಳ್ಳು? ದೇವರು ಇದ್ದಾನೆ ಅನ್ನೋದಾ ಅಥವಾ ದೇವರು ಇಲ್ಲ ಅನ್ನೋದಾ? ಇದರ ಕುರಿತು ಚಿಕ್ಕದಾದ ಮಾಹಿತಿ ಡಾಕ್ಟರ್ ಪ್ರವೀಣ್ ಬಾಬು ಅವರಿಂದ.

ಯದ್ಭಾವಂ ತದ್ಭವತಿ . ದೇವರು ಇದ್ದಾನೆ ಇದ್ದಾನೆ ಅಂತ ಹೇಳಿದ್ರೆ ದೇವರು ಇದ್ದಾನೆ ಅದೇ ದೇವರು ಇಲ್ಲ ಇಲ್ಲ ಅಂತ ಹೇಳಿದ್ರೆ ದೇವರು ಇಲ್ಲ ಅಂತ ಅರ್ಥ ಅಲ್ಲ. ದೇವರು ಸರ್ವಾಂತರ್ಯಾಮಿ ಎಲ್ಲಾ ಕಡೆಯೂ ಇದ್ದಾನೆ. ದೇವರು ಇಲ್ಲ ಎಂದಾಕ್ಷಣ ಇಲ್ಲಾ ಅನ್ನೋದು ಇದ್ದಾನೆ ಅಂದ್ರೆ ಇದ್ದಾನೆ ಅಂತ ಹೇಳೋಕೆ ದೇವರು ಆಟದ ವಸ್ತು ಅಲ್ಲ. ದೇವರು ಇದ್ದಾನೆ ಅಥವಾ ಇಲ್ಲ ಎಂಬುದರ ಬಗ್ಗೆ ಹಲವಾರು ರೀಸರ್ಚ್ ಮಾಡಲಾಗುತ್ತೆ ಹಾಗೆ ಮಾಡಿ ನಿಮ್ಮ ಜೀವನದ ಅತೀ ಮುಖ್ಯವಾದ ಸಮಯವನ್ನ ಯಾಕೆ ವ್ಯರ್ಥ ಮಾಡಿಕೊಳ್ಳಬೇಕು ಅಂತ ಹೇಳ್ತಾರೆ ಡಾಕ್ಟರ್ ಪ್ರವೀಣ್ ಬಾಬು ಅವರು. ಇದು ನಮಗೆ ಕೇವಲ ಅನುಕೂಲಕರ ಅಷ್ಟೇ. ಹಿಂದೆ ಎಷ್ಟೋ ಋಷಿ ಮುನಿಗಳು ದೇವರು ಇದ್ದಾನೋ ಇಲ್ಲವೋ ಎಂದು ತಿಳಿಯಲು ಹಲವಾರು ಸಂಶೋಧನೆಗಳನ್ನು ಮಾಡಿದ್ದರು. ಆದರೆ ಇದುವರೆಗೂ ಕೂಡ ಯಾರೊಬ್ಬರೂ ಕೂಡ ಈ ವಿಷಯದ ಬಗ್ಗೆ ಸರಿಯಾದ ತೀರ್ಮಾನ ನೀಡಲಿಲ್ಲ.

ದೇವರು ಇದ್ದಾನೆ ಅಂತ ತಿಳಿದುಕೊಳ್ಳುವುದರಲ್ಲಿ ಆಗುವಂತಹ ಲಾಭ ಮತ್ತು ದೇವರು ಇಲ್ಲ ಅಂತ ಹೇಳುವುದರಲ್ಲಿ ಆಗುವಂತಹ ನಷ್ಟ ಇವುಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಆದರೂ, ದೇವರು ಇದ್ದಾನೆ ಅಥವಾ ಇಲ್ಲ ಎಂಬುದನ್ನ ಒಮ್ಮೆ ನಮ್ಮ ವಿವೇಚನೆಗೆ ಬಿಟ್ಟ ವಿಚಾರ. ಇವತ್ತಿನ ಕಾಲದಲ್ಲಿ. ನಮಗೆ ಯಾಕೆ ಇಷ್ಟೊಂದು ಸ್ಟ್ರೆಸ್, ಟೆನ್ಷನ್, ಪ್ರೆಶರ್, ಯಾಕೆ ಇಷ್ಟೊಂದು ಶುಗರ್, ಬಿ ಪಿ ಪೇಷಂಟ್, ಯಾಕೆ ಇಷ್ಟೊಂದು ಥೈರಾಯ್ಡ್ ಪೇಷಂಟ್, ಯಾಕೆ ಮಾನಸಿಕ ಅಸ್ವಸ್ಥರು ಹೆಚ್ಚು ಅನ್ನೋದನ್ನ ಒಮ್ಮೆ ಗಂಭೀರವಾಗಿ ವಿಚಾರ ಮಾಡಬೇಕು. ಇವತ್ತು ಮನುಷ್ಯ ತನ್ನ ಕಾಲ ಮೇಲೆ ತಾನು ನಿಲ್ಲಬೇಕು ತನ್ನ ಸ್ವಂತಿಕೆಯ ಮೇಲೆ ತಾನು ಬದುಕಬೇಕು ಎಲ್ಲದನ್ನೂ ನಾನೇ ಮಾಡಬೇಕು ಎಲ್ಲವೂ ನನ್ನಿಂದಲೇ, ನಾನಿಲ್ಲದೆ ಇದ್ದರೆ ಏನು ಇಲ್ಲ ಅನ್ನೋ ಭಾವನೆ. ಈ ರೀತಿಯಾಗಿ ನಾವು ನಮ್ಮ ಕಾಲಮೇಲೆ ನಿಂತುಕೊಳ್ಳುವುದು, ನನ್ನಿಂದನೆ ಎಲ್ಲಾ ಅನ್ನೋ ಈ ರೀತಿಯ ಒಂದು ಭಾವ, e ರೀತಿಯ ಒಂದು ಮನಸ್ಥಿತಿಯನ್ನು ಬೆಳೆಸಿಕೊಂಡರೆ ಅದರ ಪ್ರೆಶರ್ ನಮ್ಮ ಮೇಲೆಯೇ ಬರತ್ತೆ. ಸ್ಟ್ರೆಸ್ ಟೆನ್ಷನ್ ಎಲ್ಲವೂ ನಮ್ಮ ಮೇಲೆಯೇ ಬರತ್ತೆ. ಎಲ್ಲವೂ ಮನ್ನ ನನ್ನಿಂದಲೇ ಅಂತ ಇದ್ದಾಗ ಈ ಎಲ್ಲಾ ಟೆನ್ಷನ್ ಗಳು ನಮ್ಮ ಮೇಲೆಯೇ ಬರತ್ತೆ. ಒಂದುವೇಳೆ ನಾನು ಮಾಡುವುದು ಇದರಲ್ಲಿ ಏನೂ ಇಲ್ಲ ಮಾಡುವವನು ಮೇಲೆ ಇದ್ದಾನೆ, ಅವನು ಎಲ್ಲವನ್ನೂ ಆಡಿಸುವವನು, ಅವನು ಆಡಿಸಿದಂತೆ ನಾನು ಆಡುವೇನು ಅಂತ ಈ ರೀತಿಯ ಮನೋಭಾವ ಇಟ್ಟುಕೊಂಡರೆ ಆಗ ಯಾವುದೇ ರೀತಿಯ ಟೆನ್ಷನ್, ಸ್ಟ್ರೆಸ್ ನಮ್ಮ ಮೇಲೆ ಬರಲ್ಲ. ಪ್ರೆಶರ್, ಟೆನ್ಷನ್ ಸ್ಟ್ರೆಸ್ ಇದರಿಂದ ನಾವು ಮಾಡುವ ಕೆಲಸಗಳಲ್ಲಿ ಯಾವುದೇ ಗೊಂದಲ ಉಂಟಾಗಲ್ಲ. ಎಲ್ಲವನ್ನೂ ತೆಗೆದುಕೊಂಡು ಹೋಗಿ ಭಗವಂತನ ಮೇಲೆ ಹಾಕುತ್ತೇವೆ ಹಾಗಾದಾಗ ನಾವು ನಮ್ಮ ಕರ್ತವ್ಯವನ್ನು ಸುರಳಿತವಾಗಿ ಮಾಡೋಕೆ ಸಾಧ್ಯ.

ಹಿಂದಿನ ಕಾಲದಲ್ಲಿ ಜನ ಎಲ್ಲಾ ದೇವರು ಇತ್ತಂಗೆ ಆಗತ್ತೆ ಎಲ್ಲಾ ಭಗವಂತನ ಇಚ್ಛೆ ಎಲ್ಲವೂ ಪೂರ್ವ ನಿಯೋಜಿತ ಏನು ಆಗಬೇಕು ಅದು ಆಗೇ ಆಗುತ್ತದೆ ಎಲ್ಲವೂ ಒಳ್ಳೆಯದೇ ಆಗತ್ತೆ ಅಂತ ಹೇಳ್ತಾ ಇದ್ರು. ನಮ್ಮೆಲ್ಲ ಜವಾಬ್ದಾರಿಗಳನ್ನು ದೇವರಿಗೆ ಬಿಟ್ಟಾಗ ನಮಗೆ ಈ ಏನು ಟೆನ್ಷನ್, ಸ್ಟ್ರೆಸ್ ಇರತ್ತೆ. ದೇವರು ಆಡಿಸುವವ ನಾವು ಆಡುವವರು. ದೇವರು ಸೂತ್ರಧಾರಿ ನಾವು ಕೇವಲ ಪಾತ್ರಧಾರಿಗಳು ಮಾತ್ರ ಎಂಬ ಭಾವನೆ ಮನಸ್ತಿತಿ ನಮ್ಮಲ್ಲಿ ಬಂದರೆ ಯಾವುದೇ ರೀತಿಯ ಟೆನ್ಷನ್ ಸ್ಟ್ರೆಸ್ ನಮ್ಮಲ್ಲಿ ಇರಲ್ಲ. ಯಾವುದೇ ಕೆಲಸದ ಒತ್ತಡ ಇರಲ್ಲ. ಯಾವಾಗಲೂ ಒತ್ತಡ ಇಲ್ಲದೆ ಮಾಡಿದ ಕೆಲಸ ಸರಿಯಾಗಿ ಇರತ್ತೆ. ಅದೇ ಟೆನ್ಷನ್ ಅಲ್ಲಿ ಯಾವುದೇ ಕೆಲಸ ಮಾಡಿದಾಗ ಅದು ಸರಿಯಾಗಿ ಬರಲ್ಲ . ಈ ರೀತಿಯ ಮನೋಭಾವ ವನ್ನ ಇಟ್ಟುಕೊಂಡರೆ ಖಂಡಿತವಾಗಿಯೂ ಅದು ನಮಗೆ ಒಳ್ಳೆಯದು.

ದೇವಸ್ಥಾನಕ್ಕೆ ಹೋಗಿ ದೇವರಿಗೆ ನೀನು ಇಲ್ಲ ನೀನು ಬರೀ ಕಲ್ಲು ಅಂತ ಹೇಳಿದ್ರೆ, ದೇವರು ಅಂತ ಅಂಥವರ ಪಾಲಿಗೆ ಕಲ್ಲಾಗಿಯೆ ಇರುತ್ತಾನೆ. ಅದೇ ಕೈ ಮುಗಿದು ನೀನು ಇದ್ದಿಯಪ್ಪ ಭಗವಂತ ಅಂತ ಹೇಳಿದ್ರೆ ತಥಾಸ್ತು ನಾನು ನಿನ್ನ ರಕ್ಷಣೆ ಮಾಡುತ್ತೇನೆ ಅಂತ ಹೇಳ್ತಾನೆ. ನಮ್ಮ ಮನದಲ್ಲಿ ಏನು ಅಂದುಕೊಂಡು ಇರುತ್ತೆವೋ ದೇವರು ಅದೆಲ್ಲದಕ್ಕು ತಥಾಸ್ತು ಅಂತ ಹೇಳ್ತಾರೆ. ದೇವರ ಬಳಿ ನಮ್ಮಲ್ಲಿರುವ ದುಃಖ ದುಮ್ಮಾನಗಳನ್ನು ಹೇಳಿಕೊಳ್ಳುವ ಬದಲು ಭಗವಂತ ನನಗೆ ಏನೇ ಕಷ್ಟ ಬಂದರೂ ಏನೇ ಸಮಸ್ಯೆ ಇದ್ದರೂ ಅದನ್ನ ನಿವಾರಿಸುವ ಶಕ್ತಿ ಕೊಟ್ಟಿದ್ದೀಯ ಅಂದರು ಅದಕ್ಕೂ ಸಹ ದೇವರು ತಥಾಸ್ತು ಅಂತ ಹೇಳ್ತಾರೆ. ಒಂದುವೇಳೆ ಏನಾದರೂ ನಾವು ಇನ್ನೊಬ್ಬರಿಗೆ ಕೆಡಕು ಮಾಡುವ ಉದ್ದೇಶ ಇಟ್ಟುಕೊಂಡು ದೇವರ ಬಳಿ ಪ್ರಾರ್ಥನೆ ಮಾಡಿದರೆ, ಅದು ನಮಗೂ ಕೂಡ ಒಂದಲ್ಲ ಒಂದು ದಿನ ಕಟ್ಟಿಟ್ಟ ಬುತ್ತಿ ತಥಾಸ್ತು ಅಂತ ಹೇಳ್ತಾರೆ.

ಈ ಎಲ್ಲಾ ಅಂಶಗಳನ್ನು ಡಾ. ಪ್ರವೀಣ್ ಅವರು ಮಾರ್ಮಿಕ, ಧಾರ್ಮಿಕ ದೃಷ್ಟಿಕೋನದಿಂದ ಕೂಲಂಕುಷವಾಗಿ ಸ್ಪಷ್ಟವಾಗಿ ಇದರ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದ್ದಾರೆ. ಇಷ್ಟರ ನಂತರ ದೇವರು ಇದ್ದಾನೆ ಅಥವಾ ಇಲ್ಲ ಎಂಬುದರ ಬಗ್ಗೆ ನಿಮ್ಮ ನಿಮ್ಮ ಯೋಚನೆಗೆ ಬಿಟ್ಟ ವಿಚಾರ. ಆದರೆ ಇಲ್ಲಿ ಮುಖ್ಯವಾಗಿ ದೇವರು ಇದ್ದಾನೆ ಅಂತ ಅಂದುಕೊಂಡಾಗ ನಮಗೆ ಆಗುವ ಲಾಭ ಮತ್ತು ನಷ್ಟ ಹಾಗೂ ದೇವರು ಇಲ್ಲ ಅಂತ ಅಂದುಕೊಂಡಾಗ ನಮಗೆ ಆಗುವ ಲಾಭ ಮತ್ತು ನಷ್ಟ ಇವೆರಡರ ನಡುವೆ ತುಲನೆ ಮಾಡಿ ನಮಗೆ ಆಗುವ ಲಾಭ ಮತ್ತು ನಷ್ಟ ಇವೆರಡರ ಕುರಿತು ಗಮನಿಸಬೇಕು. ಲಾಭ ಇಲ್ಲದೆ ಯಾವ ಮನುಷ್ಯ ಕೂಡ ಯಾವ ಕೆಲಸವನ್ನು ಸಹ ಮಾಡಲ್ಲ ಅದು ದೇವರ ಬಳಿಯೂ ಸಹ ಹೌದು. ಹಾಗಾಗಿ ದೇವರು ಇದ್ದಾನೆ ಅಂತ ಅಂದುಕೊಂಡಾಗ ನಮಗೆ ಲಾಭವೇ ಹೆಚ್ಚು.

Leave A Reply

Your email address will not be published.