ಗೀರ್ ಹಸು ಶುದ್ಧ ದೇಸೀ ತಳಿಯ ಹಸು. ಇದು a2 ಹಾಲನ್ನ ಕೊಡುತ್ತದೆ. ಈ ಹಸುಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚು. ಕಡಿಮೆ ಖರ್ಚಿನಲ್ಲಿ ಹೆಚ್ಚು ಹಾಲನ್ನು ಕೊಡುತ್ತವೆ. ಹಾಗಾದ್ರೆ ಈ ತಳಿಯ ಹಸುಗಳನ್ನಾ ಕೊಂಡುಕೊಳ್ಳಬೇಕು ಅಂತ ಇರುವವರು ಇದು ಎಲ್ಲಿ ಸಿಗತ್ತೆ? ಇದರ ಬೆಲೆ ಎಷ್ಟು ಇವುಗಳನ್ನ ಮನೆಗೆ ತರೋದು ಹೇಗೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಗೀರ್ ಹಸುಗಳನ್ನ ಕೊಂಡುಕೊಳ್ಳುವುದು ಹೇಗೆ ಅದನ್ನ ಮನೆಗೆ ಲಕ್ಷ್ಮಿ ಮನೆಗೆ ಬರುತ್ತಾಳೆ ಅಂದರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ? ಹಿಂದೂ ಸಂಪ್ರದಾಯದಲ್ಲಿ ಪುಣ್ಯ ನಮ್ಮ ಮನೆಗೆ ಬರತ್ತೆ ಅಂದ್ರೆ ಕಾಲು ತೊಳೆದು ಪೂಜೆ ಮಾಡಿ ಒಳಗೆ ಬರಮಾಡಿಕೊಳ್ಳುತ್ತಿವಿ. ಹಿಂದೂ ಪರಂಪರೆಯಲ್ಲಿ ಗೋ ಪೂಜೆ, ಗೊ ದಾನ ಹೀಗೆ ಹಲವಾರು ರೀತಿಯಲ್ಲಿ ಗೋವುಗಳು ಮಹತ್ವ ಪಡೆದುಕೊಂಡಿದೆ. ಮುಕ್ಕೋಟಿ ದೇವತೆಗಳು ಒಂದೆಡೆ ನೆಲೆಸಿರುವ ಪ್ರಾಣಿ ಅಂದರೆ ಅದು ಗೋವು ಮಾತ್ರ. ಹೀಗೆ ದೇವತೆಗಳ ಸಾನಿಧ್ಯವೆ ಗೋವು ಎಂದು ಭಾವಿಸಿರುವ ಹಿಂದೂಗಳಿಗೆ ಗೋಪಾಲನೇ ಎಂದರೆ ಅದು ದೈವಕೆಲಸ ಎಂದು ಭಾವಿಸುತ್ತಾರೆ. ಹೆಚ್ಚು ಖರ್ಚಿನ ಕಡಿಮೆ ಹಾಲು ಕೊಡುವ ಹಸುಗಳನ್ನು ಸಾಕುವುದು ಕೂಡಾ ಕಷ್ಟ ಎನ್ನುವ ಮನೋಭಾವವು ಇಲ್ಲದೆ ಇಲ್ಲ. ಇತ್ತೀಚಿಗೆ ಗಿರ್ ತಳಿಯ ಹಸುಗಳು ಹೆಚ್ಚು ಪ್ರಚಲಿತದಲ್ಲಿದ್ದು, ನಗರ ವಾಸಿಗಳು ಸಹ ಗಿರ್ ತಳಿಯ ಹಸುಗಳನ್ನು ಸಾಕಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.

ದಕ್ಷಿಣ ಭಾರತದಲ್ಲಿ ಸುಮಾರು ಹದಿನೈದು ವರ್ಷಗಳಿಂದ ದೇಸೀ ತಳಿಯ ಹಸುಗಳನ್ನ ಇಲ್ಲಿ ಸಾಕಿಕೊಂಡು ಬಂದಿದ್ದಾರೆ. ಉತ್ತರದ ಗುಜರಾತಿನಲ್ಲಿ ಇಂದು ಗೋಶಾಲೆ ಇದೆ. ಈ ಮೂಲಕ ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ಗಿರ್ ಹಸುಗಳನ್ನು ಪರಿಚಯಿಸಿದವರು ಏ ಜಿ ರಾಮಚಂದ್ರ ಅವರು. ಇವರು ಬೆಂಗಳೂರಿನಿಂದ ಸ್ವಲ್ಪ ದೂರದಲ್ಲಿ ತಮಿಳುನಾಡಿನಲ್ಲಿ ಕೆಲಮಂಗಲ ಎಂಬ ಒಂದು ಗ್ರಾಮದಲ್ಲಿ ಅರವಿಂದ್ ಗೋ ಸೇವಾ ಎಂಬ ಸಂಸ್ಥೆ ಪ್ರಾರಂಭಿಸಿ ಇಪ್ಪತ್ತು ವರ್ಷದಿಂದ ದೇಸಿ ಹಸುಗಳನ್ನು ಸಾಕುತ್ತ ಇದ್ದಾರೆ. ಇವರು ಮೂಲತಃ ಗಿರ್ ಹಸುಗಳನ್ನು ಗುಜರಾತ್ ನಿಂದ ತಂದು ಅಲ್ಲಿನ ಪಶು ವೈದ್ಯರ ಬಳಿ ಇದನ್ನ ಕೊಂಡೊಯ್ಯುವುದು ಹೇಗೆ ಹಾಲಿನ ಮಹತ್ವ ಏನು ಅನ್ನೋದರ ಬಗ್ಗೆ ಸಲಹೆಯನ್ನು ಕೇಳಿಕೊಂಡು 5 ಹಸುಗಳನ್ನು ಕೊಂಡು ಬಂದಿದ್ದರು. ಆ 5 ಹಸುಗಳನ್ನು ತಂದು ಅವುಗಳಿಂದ ಗೋಮೂತ್ರ ಸಗಣಿಗಳಿಂದ ಕೃಷಿಗೆ ಉಪಯೋಗ ಮಾಡಿಕೊಂಡರು. ಹೊಸೂರು ಅಲ್ಲಿರುವ ಸುತ್ತ ಮುತ್ತಲು ಪ್ರದೇಶಗಳಲ್ಲೂ ಹಸಿರಿನಿಂದ ಕೂಡಿದ ಬೆಟ್ಟ ಗುಡ್ಡಗಳು ಇವುಗಳನ್ನ ಹಸುಗಳ ಸಾಕಾಣಿಕೆಗೆ ಮತ್ತು ತರಬೇತಿ ನೀಡಲು ಉಪಯೋಗಿಸುತ್ತಾರೆ.

ಅಲ್ಲಿ ಹಸುಗಳನ್ನು ಕೊಂಡುಕೊಳ್ಳಲು ಬಂದವರಿಗೆ ಹಾಲು ಕರೆಯುವುದು ಹೇಗೆ ಕರುಗೆ ಎಷ್ಟು ಹಾಲನ್ನ ಕೊಡಬೇಕು ಹಸುಗೆ ಯಾವ ಪ್ರಮಾಣದಲ್ಲಿ ಆಹಾರ ನೀಡಬೇಕು, ಹಸುಗೆ ಏನಾದ್ರೂ ಸಣ್ಣ ಖಾಯಿಲೆಗಳು ಏನಾದ್ರೂ ಬಂದ್ರೆ ಪಶು ವೈದ್ಯರು ಬರುವ ಮೊದಲು ನಾವೇ ಮನೆಯಲ್ಲಿ ಏನು ಉಪಚಾರ ಮಾಡಬಹುದು ಎಂದು ಎಲ್ಲಾ ಅಂಶಗಳನ್ನು ಸರಿಯಾಗಿ ತಿಳಿಸಿ ತರಬೇತಿ ನೀಡಿ ನಂತರ ಹಸುಗಳನ್ನು ಮಾರಾಟ ಮಾಡುತ್ತಾರೆ. ಅರವಿಂದ ಗೋ ಸೇವಾ ಸಂಸ್ಥೆ ಇಂದ ಮಾರಾಟಕ್ಕೆ ಒಂದು ಲಿಂಕ್ ಬಳಸುತ್ತಿದ್ದು ಇದರಿಂದ ಹಾಲು ತುಪ್ಪ, ಮೊಸರು, ಮಜ್ಜಿಗೆ, A2 ಹಾಲು ಇವುಗಳು ಮಾರಾಟ ಆಗ್ತಾ ಇದೆ.

ಇನ್ನು A2 ಹೆಸರಿನ ಪ್ಯಾಕ್ಕೆಟ್ ಹಾಲು ಮಾರುಕಟ್ಟೆಗೆ ಬಂದಿರುವಾಗ ಹಸುಗಳನ್ನು ಕೊಳ್ಳುವುದು ಏಕೆ ಎಂಬ ಜನರು ಸಹ ಇದ್ದಾರೆ. ಇಲ್ಲಿ ಬಲವಂತದ ಅವಶ್ಯಕತೆಯ ಮಾತಿಲ್ಲ. ನಗರಗಳಲ್ಲಿ ತಾಜಾ ಉತ್ಕೃಷ್ಟ ಹಾಲು ಬೇಕು ಎನ್ನುವವರು ಗಿರ್ ಹಸುಗಳನ್ನು ಸಾಕುತ್ತಿದ್ದಾರೆ. ಗಿರ್ ತಳಿಯ ಹಸುಗಳು ಹೆಚ್ಚಾಗಿ ಸಿಗುವುದು ಗುಜರಾತಿನಲ್ಲಿ ಅಲ್ಲಿಂದ ಹಸುಗಳನ್ನು ಖರೀದಿಸಿ ತರಬೇಕು ಅಂದರೆ ಅದು ಸುಲಭವೇ ಅಲ್ಲ . ಸರಿಯಾದ ಮಾಹಿತಿ ಇಲ್ಲದೆ ಹೋದರೆ ಮೋಸ ಹೋಗುವ ಸಾಧ್ಯತೆಗಳು ಹೆಚ್ಚು. ಗುಜರಾತ್ ಇಂದನೆ ಹಸುಗಳನ್ನು ತರಬೇಕು ಅಂದುಕೊಂಡವರು ಹಸುಗಳ ಬಗ್ಗೆ ಸರಿಯಾದ ಹೆಚ್ಚಿನ ಮಾಹಿತಿ ಇರಬೇಕು ಇಲ್ಲವಾದರೆ ಗಿರ್ ಹಸುವಿನಂತೆ ಇರುವ ಬೇರೆ ಹಸುಗಳನ್ನು ತೋರಿಸಿ ಮೋಸ ಮಾಡುವ ಸಾಧ್ಯತೆಗಳು ಹೆಚ್ಚು.

ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹಸುಗಳನ್ನು ತರೋದು ಅಂದ್ರೆ ಅಷ್ಟು ಸುಲಭ ಅಲ್ಲ. ಅಲ್ಲಿ ಯಾಕಾಗಿ ಹಸುಗಳನ್ನು ಕೊಂಡುಕೊಂಡು ಹೋಗುತ್ತೀರಿ ಎಂದು ಹಲವರು ಗೋ ಸಂಘಟನೆಗಳು ಪ್ರಶ್ನೆ ಮಾಡುತ್ತವೆ ಹಾಗಾಗಿ ಕಲೆಕ್ಟರ್ ಆಫೀಸ್ ನಿಂದ ಒಂದು ಪರ್ಮಿಷನ್ ಲೆಟರ್ ತಗೊಂಡು ಹೋಗಬೇಕು.

ನೋಡಿದ ಕೂಡಲೇ ನಾವು ಗಿರ್ ಹಸುಗಳನ್ನು ಪತ್ತೆ ಹಚ್ಚಲು ಬೇಕಾದ ಸಾಮಾನ್ಯ ಜ್ಞಾನ ಎಂದರೆ, ಕಂದು ಮಿಶ್ರಿತ ಕಡು ಕೆಂಪು ಬಣ್ಣ, ಉದ್ದನೆಯ ಜೋತು ಬಿದ್ದ ಕಿವಿ, ದಪ್ಪನೆಯ ಬಾಗಿದ ಕೋಡುಗಳು, ಎತ್ತರದ ಭುಜ ಮತ್ತು ಕೊರಳಿನ ಬಳಿ ಸಾಮಾನ್ಯವಾಗಿ ಗಮನಿಸಬೇಕಾದ ಅಂಶಗಳು. ಆದರೆ ಇವುಗಳ ಹೊರತಾಗಿಯೂ ಹಸುಗಳ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟಿವೆ. ಇವಿಷ್ಟೇ ಅಲ್ಲದೇ ಗಿರ್ ನಲ್ಲಿ ಮತ್ತೆ ಒಂಭತ್ತು ಜಾತಿಗಳಿವೆ. ಹಸುವಿನ ಹಲ್ಲುಗಳನ್ನು ನೋಡಿ ವಯಸನ್ನ ತಿಳಿದುಕೊಳ್ಳುವುದು ಹಿಂದಿನಿಂದಲೂ ಈ ಪದ್ಧತಿ ಇದೆ. ಇದರ ಜೊತೆಗೆ ಹಸು ಹೇಗೆ ನಡೆಯುತ್ತೆ ಅವುಗಳ ಕಾಲಿನಲ್ಲಿ ಏನಾದ್ರೂ ತೊಂದರೆ ಇದ್ಯಾ ಅನ್ನೋದನ್ನು ಗಮನಿಸಬೇಕು. ಹಸುವನ್ನು ಕೊಂದುಕೊಳ್ಳುವಾಗ ಮೊದಲು ಅದರ ಹಲ್ಲು ನೋಡಬೇಕು ನಂತರ ೪ಕಾಲುಗಳು ಸರಿಯಾಗಿ ಇದೆಯೇ ಸರಿಯಾಗಿ ನಡೆಯುತ್ತಾ ಅನ್ನೋದನ್ನ ನೋಡಬೇಕು. ಹಾಗಾಗಿ ಪಶು ವೈದ್ಯರ ಸಲಹೆಯ ಮೇರೆಗೆ ಹಸುಗಳನ್ನು ಕೊಳ್ಳಬೇಕು.

ಸಧ್ಯ ರಾಮಚಂದ್ರನ್ ಅವರು ಗಿರ್ ಹಸುವಿನ ಹಾಲನ್ನು ೮೦/೧೦೦ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದು, ಅರವಿಂದ್ ಗೋ ಸೇವಾ ಹೆಸರಿನಲ್ಲಿ ತುಪ್ಪ ಮತ್ತು ಇನ್ನಿತರ ಗೋ ಉತ್ಪನ್ನಗಳನ್ನು ಮಾರಾಟ ಮಾಡುತ್ತಾ ಇದ್ದಾರೆ. ಗಿರ್ ಹಸುಗಳ ಇನ್ನೊಂದು ಪ್ರಾಮುಖ್ಯತೆ ಅಂದರೆ, ಇವು ಒಮ್ಮೆ ಸಗಣಿ ಹಾಕಿದ ಜಾಗದಲ್ಲಿ ನಿಲ್ಲಲ್ಲ ಇವುಗಳನ್ನ ಸ್ವಚವಾಗಿ ಇಟ್ಟುಕೊಳ್ಳಬೇಕು. ಶಿವನ ಬಳಿ ನಂದಿ ಹೇಗೋ ಅದೇ ರೀತಿ ಈ ಗಿರ್ ಹಸುಗಳು. ಈ ಹಸುಗಳಿಗೆ ಮೇಲೆ ಇರುವ ಎತ್ತರದ ಭುಜ ಇವು ಬಿಸಿಲಿನಲ್ಲಿ ಹೋಗೋವಾಗ ಸೂರ್ಯನ ಕಿರಣಗಳನ್ನ ಪಡೆದುಕೊಂಡು ಇವುಗಳ ಹಾಲು A2 ಹಾಲಾಗಿ ಪರಿವರ್ತನೆ ಆಗತ್ತೆ. ಹಾಗಾಗಿ ಇದನ್ನ ಚಿಕ್ಕ ಮಕ್ಕಳಿಗೂ ಸಹ ನೀಡಬಹುದು. ಹಸುಗಳ ಸಗಣಿಯನ್ನ ಸಾವಯವ ಕೃಷಿಗೆ ಉಪಯೋಗ ಮಾಡಲಾಗುತ್ತೆ. ಕೃಷಿ ಮತ್ತು ಹೈನುಗಾರಿಕೆಯಿಂದ ಕೊಳಿ ಸಾಕಾಣಿಕೆ ಕೂಡ ಮಾಡುತ್ತಿದ್ದಾರೆ. ಇದರ ಜೊತೆಗೆ ಗರ್ಭ ಧರಿಸಿದ ಹಸುವನ್ನು ಕೊಂಡುಕೊಳ್ಳುವುದು ಸರಿಯೇ ಅಥವಾ ಕರು ಹಾಕಿದ ಹಸುವನ್ನು ಕೊಂಡುಕೊಳ್ಳುವುದು ಸರಿಯೇ ಅಥವಾ ಕರುಗಳನ್ನೆ ಕೊಂಡುಕೊಂಡು ಸಾಕಿ ದೊಡ್ಡದು ಮಾಡಿದರೆ ಸರಿಯೇ ಎಂಬ ಹಲವು ಪ್ರಶ್ನೆಗಳು ಸಹ ಹುಟ್ಟಿಕೊಳ್ಳುತ್ತವೆ.

ದೂರದ ಊರಿಗೆ ಕೊಂಡುಕೊಂಡು ಹೋಗುವುದರಿಂದ ಈ ಎಲ್ಲಾ ಅಂಶಗಳನ್ನು ಸರಿಯಾಗಿ ಗಮನಿಸಲೇ ಬೇಕು. ಇಲ್ಲವಾದರೆ ನಿಮಗೆ ಇಷ್ಟೆಲ್ಲಾ ತಿಳಿಯದೆ ಇದ್ದರೆ ಪಶು ವೈದ್ಯರನ್ನು ಕರೆದುಕೊಂಡು ಹೋಗಿ ಕೊಂಡುಕೊಳ್ಳುವುದು ಉತ್ತಮ. ಸಣ್ಣ ಕರು 3000, ಗರ್ಭ ಧರಿಸಿರುವ ಹಸು ಆದರೆ 80,000 ಹಾಗೂ ಇನ್ನೇನು ಕರು ಹಾಕಲು ಬಂದಿರುವ ಹಸು ಆದರೆ 95,000 ರೂಪಾಯಿ ಇಂದ ಒಂದು ಲಕ್ಷದವರೆಗೆ ಸಿಗುತ್ತವೆ. ಇವು ಹತ್ತರಿಂದ ಹದಿನೈದು ಲೀಟರ್ ಹಾಲನ್ನು ಕೊಡುತ್ತವೆ. ಹಸುಗಳನ್ನು ಕೊಂಡುಕೊಂಡು ಸಾಗಾಣಿಕೆಗೆ ಗಾಡಿಗಳ ತಿಂದರೆ ಆಗಬಾರದು ಅಂತ ರಾಮಚಂದ್ರನ್ ಅವರ ಬಳಿಯೇ ಪರ್ಮಿಷನ್ ಪಡೆದಿರುವ ಹಾಗೂ ಇನ್ಸೂರೆನ್ಸ್ ಆಗಿರುವ ಗಾಡಿಗಳು ಸಹ ಇವೆ . ಯಾವುದೇ ಊರಿಗೆ ಆದರೂ ಕಿಲೋ ಮೀಟರ್ ಗೆ 14ರೂಪಾಯಿ ಅಂತೆ ಚಾರ್ಜ್ ಮಾಡುತ್ತಾರೆ.

ಇನ್ನು ದಾರಿ ಮಧ್ಯೆ ಪೊಲೀಸ್ ಹಿಡಿತಾರೆ ಅನ್ನೋ ಭಯ ಇದ್ರೆ, ಅದಕ್ಕೂ ಸಹ ಇವರು ಕಂಪನಿ ಕಡೆಯಿಂದ ಸರಿಯಾದ ಅನುಕೂಲಗಳನ್ನು ಮಾಡಿರುತ್ತಾರೆ. ಏ ಜಿ ರಾಮಚಂದ್ರ ಅವರು ಗುಜರಾತ್ ನಲ್ಲಿ ಕೂಡ ಅರವಿಂದ್ ಗೋಶಾಲಯನ್ನ ನಿರ್ಮಿಸಿ ಗಿರ್ ಹಸುಗಳನ್ನು ಸಾಕಣೆ ಮಾಡುತ್ತಿದ್ದು, ದಕ್ಷಿಣ ಭಾರತದಲ್ಲಿ ಹೆಚ್ಚು ಹಸುಗಳನ್ನು ಮಾರಾಟ ಮಾಡುತ್ತಾ ಇದ್ದಾರೆ. ಗಿರ್ ಹಸುಗಳನ್ನು ಕೊಳ್ಳಲು ಇಚ್ಛಿಸುವವರು ಅರವಿಂದ್ ಗೋಸೇವಾ ಪ್ರೈವೇಟ್ ಲಿಮಿಟೆಡ್ ನ ಮಾಲೀಕರಾದ ಏ ಜಿ ರಾಮಚಂದ್ರ ಅವರನ್ನ ಸಂಪರ್ಕಿಸಬಹುದು. ಇವರನ್ನ ಭೇಟಿ ಮಾಡಲು ಹಾಗೂ ಯಾವುದೇ ಸಲಹೆ ಪಡೆಯಲು ಬೆಂಗಳೂರಿಂದ 65km ಹೊಸೂರು, ಅಲ್ಲಿಂದ ಕೆಲಮಂಗಲ ಅಲ್ಲಿಂದ ಪಕ್ಕದ ಗ್ರಾಮ ಅರವಿಂದ ನಗರ, ಅರವಿಂದ್ ಗೋಸೇವಾ ಸಂಸ್ಥೆ ಇಲ್ಲಿ ಭೇಟಿ ನೀಡಬಹುದು. ಇವರ ಗೋಶಾಲೆಯ ನಂಬರ್:- 9585395555 / 9443077041. ಇನ್ನು ಇದೆ ರೀತಿಯ ಹೆಚ್ಚಿನ ಉಪಯುಕ್ತ ಮಾಹಿತಿಗಳನ್ನು ನಮ್ಮಲ್ಲಿ ತಿಳಿಯಲು ಮರೆಯದೆ ನಮ್ಮ ಪೇಜ್ ಅನ್ನು ಬೆಂಬಲಿಸಿ ಹಾಗೂ ಈ ಕೆಳಗಿನ ವಿಡಿಯೋ ನೋಡಿ

Leave a Reply

Your email address will not be published. Required fields are marked *