ಬ್ರಾಹ್ಮೀ ಮುಹೂರ್ತದಲ್ಲಿ ಬೆಳಿಗ್ಗೆ ಬೇಗ ಏಳುವುದರಿಂದ ಆಗುವ ಲಾಭಗಳೇನು ಗೊತ್ತೇ

0 11

ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಬೆಳಿಗ್ಗೆ ಸೂರ್ಯ ಉದಯಿಸುವ ಮುನ್ನವೇ ಎಳುತ್ತಿದ್ದರಂತೆ. ಆದರೆ ಈಗಿನ ಕಾಲದಲ್ಲಿ ಬೆಳಗ್ಗೆ ಸೂರ್ಯೋದಯಕ್ಕೆ ಮೊದಲು ಬ್ರಾಹ್ಮೀ ಮುಹೂರ್ತದಲ್ಲಿ ಯಾರು ಏಳುವುದಿಲ್ಲ. ಏಳುವುದು ಇರಲಿ ಎಷ್ಟೋ ಜನರಿಗೆ ಸೂರ್ಯೋದಯ ಎಷ್ಟು ಗಂಟೆಗೆ ಆಗತ್ತೆ, ಬ್ರಾಹ್ಮೀ ಮುಹೂರ್ತ ಪ್ರತಿ ಅಂದ್ರೆ ಏನು ಅನ್ನೋದೇ ಗೊತ್ತಿರಲ್ಲ. ಹಾಗಾಗಿ ದಿನ ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಯಾಕೆ ಏಳಬೇಕು ಅನ್ನೋದರ ಬಗ್ಗೆ ಡಾಕ್ಟರ್ ಸೂರಜ್ ಎ ಆರ್ ಅವರು ಸಂಕ್ಷಿಪ್ತವಾಗಿ ಮಾಹಿತಿಯನ್ನ ತಿಳಿಸಿಕೊಡುತ್ತಾರೆ.

ಹಿಂದೆ ಹಿರಿಯರು ಬ್ರಾಹ್ಮೀ ಮುಹೂರ್ತದಲ್ಲಿ ಬೆಳಿಗ್ಗೆ ಬೇಗ ಎದ್ದು ಓದೋಕೆ ಹೇಳ್ತಾ ಇದ್ದರು. ಇದರ ಬಗ್ಗೆ ಆಯುರ್ವೇದದಲ್ಲಿ ಸುಮಾರು ಐದೂವರೆ ಸಾವಿರ ವರ್ಷಗಳ ಹಿಂದೆಯೇ ಉಲ್ಲೇಖಿಸಲಾಗಿದೆ. ಅದನ್ನ ಈಗಿನ ಕಾಲಕ್ಕೆ ಅನುಗುಣ ಆಗುವಂತೆ ಹೇಳುವುದಾದರೆ, ಮೊದಲು ಬ್ರಾಹ್ಮೀ ಮುಹೂರ್ತ ಅಂದ್ರೆ ಯಾವ ಸಮಯ ಅಂತ ನೋಡೋಣ. ಬ್ರಾಹ್ಮೀ ಮುಹೂರ್ತ ಅಂದ್ರೆ ಸೂರ್ಯ ಉದಯಿಸುವ ಒಂದೂವರೆ ಗಂಟೆ ಮೊದಲಿನ ಸಮಯ ಬ್ರಾಹ್ಮೀ ಮುಹೂರ್ತ. ಸೂರ್ಯ ಉದಯಿಸುವ ಒಂದೂವರೆ ಗಂಟೆ ಮೊದಲು ಏಳಬೇಕು. ಹಾಗಿದ್ರೆ ಯಾಕೆ ಈ ಮುಹೂರ್ತದಲ್ಲಿ ಏಳಬೇಕು ಅದರಿಂದ ಪ್ರಯೋಜನ ಏನು? ವೈಜ್ಞಾನಿಕವಾಗಿ ಇದರ ಬಗ್ಗೆ ನೋಡುವುದಾದರೆ ಭೂಮಿಯ ಮೇಲೆ ಇರುವ ಓಝೋನ್ ಪದರ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಕೆಲವೊಮ್ಮೆ ಇದು ಹೆಚ್ಚು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಆ ಆಮ್ಲಜನಕದ ಅಂಶವನ್ನು ನಾವು ಪಡೆದುಕೊಳ್ಳಬೇಕಾಗುತ್ತದೆ. ಈ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದರೆ ಆಮ್ಲಜನಕವನ್ನು ಪಡೆದುಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ. ಇದರಿಂದ ನಮ್ಮ ದೇಹದ ಆರೋಗ್ಯಕ್ಕೆ ಒಳ್ಳೆಯದು. ನಾವು ತೆಗೆದುಕೊಳ್ಳುವ ಆಹಾರದಿಂದ ಆಮ್ಲಜನಕ ನಮ್ಮ ದೇಹದಲ್ಲಿ ರಕ್ತದಲ್ಲಿ ಬೆರೆತು ನಂತರ ನಮ್ಮ ಮೆದುಳು, ಹೃದಯ ಹೇಗೆ ದೇಹದ ಎಲ್ಲಾ ಭಾಗಗಳಿಗೂ ಹೋಗುತ್ತದೆ. ನಾವು ತಿನ್ನುವ ಆಹಾರ ದಲ್ಲಿ ಶೇಕಡಾ ೬೦ ರಷ್ಟು ಆಮ್ಲಜನಕ ಇರತ್ತೆ. ಹೀಗೆ ಆಹಾರ ಸೇವನೆ ಮಾಡಿ ಆಮ್ಲ ಜನಕ ತೆಗೆದುಕೊಳ್ಳುವುದಕ್ಕಿಂತಲೂ ನೇರವಾಗಿ ನೈಸರ್ಗಿಕವಾಗಿಯೇ ನಮಗೆ ಆಮ್ಲಜನಕ ಸಿಗತ್ತೆ ಅದೂ ನಾವು ಬೆಳಿಗ್ಗೆ ಬೇಗ ಬ್ರಾಹ್ಮೀ ಮುಹೂರ್ತದಲ್ಲಿ ಎಳುವುದರಿಂದ. ಅದಕ್ಕಾಗಿಯೆ ನಮ್ಮ ಹಿರಿಯರು ಮತ್ತು ಶಾಸ್ತ್ರಗಳಲ್ಲಿ ಬೆಳಿಗ್ಗೆ ಬೇಗ ಬ್ರಾಹ್ಮೀ ಮುಹೂರ್ತದಲ್ಲಿ ಏಳಬೇಕು ಅಂತ ಹೇಳಿರುವುದು.

ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಯೋಗ ಮಾಡುವುದು, ದೇವರ ಜಪ ಮಾಡುವುದು ಅಥವಾ ಅಧ್ಯಯನ ಮಾಡುವುದು ಅಥವಾ ಏನಾದರೂ ಹೊಸತನ್ನು ಕಲಿಯಲು ಆರಂಭಿಸಿದಾಗ ತಾನಾಗಿ ತಾನೇ ಶುದ್ಧವಾದ ನೈಸರ್ಗಿಕವಾದ ಆಮ್ಲಜನಕ ಹೆಚ್ಚು ಹೆಚ್ಚು ನಮ್ಮ ದೇಹಕ್ಕೆ ಸಿಗುತ್ತದೆ. ಇದರಿಂದ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ ಹಾಗೆ ಯಾವುದೇ ರೋಗದ ವಿರುದ್ದ ಹೊರಡಲು ಶಕ್ತಿ ಕೂಡ ದೊರೆಯುತ್ತದೆ. ಹಾಗೆ ಮೆದುಳಿಗೆ ಮತ್ತು ಹೃದಯಕ್ಕೆ ಕೂಡ ಶುದ್ಧವಾದ ಆಮ್ಲಜನಕ ದೊರೆಯುತ್ತದೆ. ಹಾಗಾಗಿ ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಏಳಬೇಕು ಅಂತ ನಮ್ಮ ಹಿರಿಯರು, ಹಾಗೂ ಪೂರ್ವಜರು ಹೇಳು ವುದು ಹಾಗೂ ಆಯುರ್ವೇದದಲ್ಲಿ ಸಹ ಉಲ್ಲೇಖ ಆಗಿರುವುದು.

Leave A Reply

Your email address will not be published.