ಸಾಮಾನ್ಯವಾಗಿ ಹೆಣ್ಣು ಋತುಮತಿ ಆದರೆ ಮನೆಯವರೆಲ್ಲ ಸಂತೋಷ ಪಡುತ್ತಾರೆ. ಆದ್ರೆ ಆ ಸಮಯದಲ್ಲಿ ಹೆಣ್ಣುಮಕ್ಕಳು ಅನುಭವಿಸುವ ಕಷ್ಟಗಳು ಏನು ಯಾವ ವಯಸ್ಸಿನಲ್ಲಿ ಆಗಬೇಕಾಗುತ್ತದೆ ಮತ್ತು ಹೇಗೆ ಇರಬೇಕು ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ.

ಹೆಣ್ಣು ಋತುಮತಿ ಆದರೆ ಮನೆಯವರೆಲ್ಲ ಸಂತೋಷ ಪಡುವ ವಿಷಯವೇ. ಆದರೆ ಆ ಸಮಯದಲ್ಲಿ ಹೆಣ್ಣುಮಕ್ಕಳಿಗೆ ಆಗುವ ಕಷ್ಟ ಅವರು ಪಡುವ ತೊಂದರೆಗಳು ಯಾರಿಗೂ ತಿಳಿದಿರಲ್ಲ. ಈ ಸಮಯದಲ್ಲಿ ಹೆಣ್ಣುಮಕ್ಕಳಲ್ಲಿ ಸಾಮಾನ್ಯವಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಕೆಲವು ಬದಲಾವಣೆಗಳು ಆಗುತ್ತವೆ. ಋತುಮತಿ ಆಗುವುದು ಪ್ರತಿಯೊಂದು ಹೆಣ್ಣಿನ ಜೀವನದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ. ಇದರ ಕುರಿತಾಗಿ ಕೆಲವರಲ್ಲಿ ಭಯ ಇರತ್ತೆ ಹಾಗಾಗಿ ಮೊದಲೇ ಪಾಲಕರು ಇದರ ಕುರಿತಾಗಿ ತಿಳಿಹೇಳಬೇಕಾಗಿರುತ್ತದೆ. ಮನುಷ್ಯನ ದೇಹದ ಎಲ್ಲಾ ಪ್ರಕ್ರಿಯೆಗಳನ್ನು ನಿರ್ವಹಣೆ ಮಾಡುವುದು ನಮ್ಮ ಶ್ವಾಸಕೋಶ. ಆದರೆ ಒಂದು ಹೆಣ್ಣು ಋತುಮತಿ ಆಗುವುದನ್ನು ಮಾತ್ರ ಶ್ವಾಸಕೋಶದಿಂದ ನಿಯಂತ್ರಿಸುವುದು ಅಸಾಧ್ಯ. ಇದು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ ಮುತ್ತಿನ ನಿಯಂತ್ರಣ ವ್ಯವಸ್ಥೆಯೇ ಬೇರೆ ಆಗಿರುತ್ತದೆ. ಬಹಳ ಹಿಂದೆಯೇ ವರಾಹ ಮಿಹಿರ ಹೇಳಿದ್ದ “ಕುದಿಯೇಂದು ಹೇತು ಪ್ರತಿಮಾ ಸಾರ್ಥಂ” ಎಂದು. ಪ್ರತೀ ತಿಂಗಳು ಹೆಣ್ಣುಮಗು ಋತುಮತಿ ಆಗುವುದು ಸೂರ್ಯ ಚಂದ್ರರ ಗುರುತ್ವಾಕರ್ಷಣೆ ಶಕ್ತಿಯಿಂದ ಆಗುವುದು ಎಂದು ಹಾಗಾಗಿ ಈ ಒಂದು ಪ್ರಕ್ರಿಯೆಯನ್ನು ನಾವು ಯೋಗ ಪ್ರಾಣಾಯಾಮ ಏನೇ ಮಾಡಿದರೂ ನಾವು ನಿಯಂತ್ರಿಸುವುದು ಅಸಾಧ್ಯ.

ಸಾಮಾನ್ಯವಾಗಿ ಹೆಣ್ಣುಮಕ್ಕಳು ಋತುಮತಿ ಆಗುವ ಸಮಯ ಹನ್ನೆರಡು, ಹದಿಮೂರು ವರ್ಷಕ್ಕೆ ಆಗಿರುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ಏಳು, ಎಂಟು ವರ್ಷಕ್ಕೆ ಋತುಮತಿ ಆಗುತ್ತಿದ್ದಾರೆ ಇದರಿಂದ ಅವರಿಗೆ ಯಾವ ರೀತಿ ಪರಿಣಾಮ ಬೀರಬಹುದು? ದೈಹಿಕವಾಗಿ ಏನಾದರೂ ಅಪಾಯಕಾರಿ ಪರಿಣಾಮ ಉಂಟಾಗಬಹುದಾ? ಎಂದು ನೋಡುವುದಾದರೆ, ಬಹಳಷ್ಟು ಅಪಾಯಕಾರಿ ಇಲ್ಲದೆ ಹೋದರೂ ಕೂಡಾ ಇದಕ್ಕೆ ಮುಖ್ಯವಾಗಿ ನಾವೇ ಕಾರಣ. ನಾವು ಸೇವಿಸುವ ಆಹಾರ. ಇದರಿಂದಾಗಿ ಹಾರ್ಮೋನುಗಳು ಸಾಕಷ್ಟು ಬದಲಾವಣೆ ಆಗುತ್ತದೆ. ಈಗ ದನಗಳಿಗೆ ಹಾಲು ಹೆಚ್ಚು ಆಗೋಕೆ ಅಂತ ಏನೇನೋ ಪೌಡರ್ಗಳನ್ನು ಕೊಡ್ತಾರೆ ಈಗಿನ ಮಕ್ಕಳು ಅದೇ ಹಾಲನ್ನು ಕುಡಿದು ಬೆಳೆಯುತ್ತಾರೆ. ದನಗಳಿಗೆ ಹಾಲು ಹೆಚ್ಚಾಗಲು ಕೊಡುವ ಪೌಡರ್ಗಳಲ್ಲಿ ಇರುವ ಕೆಮಿಕಲ್ಸ್ ನಿಂದಾಗಿ ಹೆಣ್ಣು ಮಕ್ಕಳು ಅದನ್ನು ಕುಡಿಯುವುದರಿಂದ ಹಾರ್ಮೋನುಗಳು ಕೂಡಾ ಬೇಗ ಬೆಳವಣಿಗೆಯಾಗಿ ಬೇಗ ಏಳು ಎಂಟು ವರ್ಷಕ್ಕೆ ಋತುಮತಿ ಆಗುತ್ತಿದ್ದಾರೆ.

ಹಿಂದಿನ ಕಾಲದಲ್ಲಿ ಹದಿಮೂರು ವರ್ಷಕ್ಕೆ ಬೆಳವಣಿಗೆ ಆಗುತ್ತಿದ್ದರು ಆಗಿನ ಪರಿಸರ ಕೂಡಾ ಹಾಗೆ ಇತ್ತು ಹಾಗಾಗಿ ತಡವಾಗಿ ಆಗುತ್ತಿತ್ತು. ಆದರೆ ಈಗ ಇತ್ತೀಚಿನ ಬದಲಾದ ಪರಿಸರ ಇದರಿಂದಾಗಿ ಇದು ಹೆಣ್ಣುಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಪ್ರತೀ ತಿಂಗಳು ೨೫ ರಿಂದ ೩೦ ದಿನಗಳಲ್ಲಿ ಹೆಣ್ಣುಮಕ್ಕಳಿಗೆ ಋತುಮತಿ ಆಗುವುದು ಸಾಮಾನ್ಯವಾಗಿ ನೈಸರ್ಗಿಕ ಪ್ರಕ್ರಿಯೆ. ಆದರೆ ಕೆಲವೊಬ್ಬರಿಗೆ ತಿಂಗಳು ತಿಂಗಳಿಗೆ ಸರಿಯಾಗಿ ಆಗದೇ ಮೂರು ನಾಲ್ಕು ತಿಂಗಳಿಗೆ ಒಮ್ಮೆ ಆಗುವುದು ಇಲ್ಲಾ ಒಂದು ವರ್ಷಕ್ಕೆ ಆಗುವುದು e ರೀತಿಯ ಬದಲಾವಣೆಗಳು ಕೂಡಾ ಆಗುತ್ತಾ ಇರುತ್ತದೆ. ಇದಕ್ಕೆ ಹಲವಾರು ಬೇರೆ ಬೇರೆ ರೀತಿಯ ಕಾರಣಗಳು ಇರಬಹುದು. ಶರೀರದಲ್ಲಿನ ಬದಲಾವಣೆ, ಎಂಡೋಫಿನ್ ಬದಲಾವಣೆ ಇವೆಲ್ಲ ಕಾರಣಗಳು ಇರತ್ತೆ ಆದರೆ ಇದನ್ನ ಒಂದು ದೊಡ್ಡ ಕಾಯಿಲೆ ಅಂದೇನೂ ಹೇಳಲಾಗದು. ಸರಾಸರಿ ೨೫/೨೮ ದಿನಗಳಿಗೆ ಆಗಬೇಕು ಎಂದೇನೂ ನಿಯಮವೇನೂ ಇಲ್ಲ ಸ್ವಲ್ಪ ಹೆಚ್ಚು ಕಡಿಮೆ ಆಗಬಹುದು. ಆದರೆ ಯಾವಾಗಲೂ ಈ ರೀತಿ ಹೆಚ್ಚು ಕಡಿಮೆ ಆಗ್ತಾ ಇದ್ದರೆ ಅದಕ್ಕೆ ಕಾರಣ ಏನೂ ಅನ್ನುವುದನ್ನು ಕಂಡುಹಿಡಿದು ಅದಕ್ಕೆ ಸೂಕ್ತ ಔಷಧಿ ಪಡೆಯಬೇಕು.

ಕೆಲವರಲ್ಲಿ ಮದುವೆ ಆದ ನಂತರ ಈ ಸಮಸ್ಯೆ ಸರಿಯಾಗಬಹುದು ಎನ್ನುವ ನಂಬಿಕೆ ಇರತ್ತೆ. ಆದರೆ ಇದಂತೂ ತಪ್ಪು. ಆರಂಭದಲ್ಲಿಯೇ ಸರಿಯಾಗಿ ತಿಂಗಳು ತಿಂಗಳು ಆಗದೇ ಇದ್ದರೆ ಒಳ್ಳೆಯ ವೈದ್ಯರನ್ನು ಭೇಟಿ ಮಾಡಿ ಪರೀಕ್ಷೆ ಮಾಡಿಸಿಕೊಂಡು ಕಾರಣ ಏನು ಅನ್ನೋದನ್ನ ತಿಳಿದು ಔಷಧಿ ಪಡೆಯಬೇಕು. ಅದೂ ಬಿಟ್ಟು ಮದುವೆ ಆದ ನಂತರ ಸರಿ ಆಗಬಹುದು ಎಂದು ಬಿಡುವುದು ತಪ್ಪು. ಆದರೆ ಮದುವೆ ಆದ ನಂತರ ಈ ಒಂದು ಸಮಸ್ಯೆ ಸರಿಯಾಗಬಹುದು ಮುಟ್ಟಿನ ಸಮಯದಲ್ಲಿ ನೀವು ಇದ್ದರೆ ಅದೂ ಕಡಿಮೆ ಆದರೂ ಆಗಬಹುದು. ಇನ್ನೂ ಕೆಲವರಿಗೆ ಋತುಮತಿ ಆದಾಗ ಪ್ರತೀ ತಿಂಗಳು ನೋವು ಕಾಣಿಸಿಕೊಳ್ಳುತ್ತದೆ. ಆಗ ಅವರು ಯಾವುದೋ ಮಾತ್ರೆಗಳಿಗೆ ತಮ್ಮನ್ನು ರೂಢಿಸಿಕೊಂಡಿರುತ್ತಾರೆ. ಆದರೆ ಹೀಗೆ ಪ್ರತೀ ಸಲವೂ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬಾರದು ಇದು ಒಳ್ಳೆಯದೂ ಅಲ್ಲ. ಗರ್ಭ ಕೋಶದಲ್ಲಿ ಇರುವ ರಕ್ತ ಹೆಚ್ಚು ಆದಾಗ ಅದನ್ನ ಹೊರ ಹಾಕುವಾಗ ನೋವು ಕಾಣಿಸಿಕೊಳ್ಳುತ್ತದೆ. ಆಗ ಮಾತ್ರೆಯನ್ನು ತೆಗೆದುಕೊಳ್ಳದೆ ನೀರನ್ನು ಕಡಿಮೆ ಕುಡಿಯಬೇಕು ವಿಶ್ರಾಂತಿ ಪಡೆಯಬೇಕು.

Leave a Reply

Your email address will not be published. Required fields are marked *