ಇತ್ತೀಚಿನ ದಿನಗಳಲ್ಲಿ ಜನರು ಗ್ಯಾಸ್ಟ್ರಿಕ್ ಸಮಸ್ಯೆ ಅಂದರೆ ಜಠರದುರಿತ ಸಮಸ್ಯೆಯನ್ನ ಹೆಚ್ಚಾಗಿ ಎದುರಿಸುತ್ತಿದ್ದಾರೆ ಹಾಗಾದರೆ ಈ ಜಠರದುರಿತ ಯಾವಕಾರಣದಿಂದ ಉಂಟಾಗುತ್ತದೆ ಮತ್ತು ಅದನ್ನು ಹೇಗೆ ಬಗೆಹರಿಸಿ ಕೊಳ್ಳುವುದು ಎಂಬುದರ ಬಗ್ಗೆ ತಿಳಿದು ಕೊಳ್ಳೋಣ.

ಮನುಷ್ಯನಿಗೆ ಹೊಟ್ಟೆಯಲ್ಲಿ ಕರುಳಿನಲ್ಲಿ ಗ್ಯಾಸ್ ಉತ್ಪತ್ತಿಯಾಗುತ್ತದೆ ಸಣ್ಣ ಕರಳು ಆರು ಮೀಟರ್ ಮತ್ತು ದೊಡ್ಡ ಕರಳು ಒಂದೂವರೆ ಮೀಟರ್ ಇರುತ್ತದೆ ಈ ಗ್ಯಾಸ್ ಹೇಗೆ ಉತ್ಪತ್ತಿ ಆಗುತ್ತದೆ ಎಂದರೆ ನಾವು ಊಟ ಮಾಡುವಾಗ ಪ್ರತಿ ತುತ್ತನ್ನು ತಿನ್ನುವಾಗ ನಮಗೆ ತಿಳಿಯದೆ ಒಂದು ಸಿಸಿ ಗಾಳಿಯನ್ನು ನುಂಗುತ್ತೇವೆ ಅದು ನಮ್ಮ ಜಠರದಲ್ಲಿರುತ್ತದೆ. ಕೆಲವೊಬ್ಬರು ಊಟ ಮಾಡುವಾಗ ಅಥವಾ ಊಟದ ನಂತರ ತೆಗುತ್ತಾರೆ ಅದು ನಾವು ನುಂಗಿದ ಗಾಳಿ ಇಚೆಗೆ ಬರುವುದು ಅದು ಯಾವುದೇ ಕಾಯಿಲೆ ಅಲ್ಲ ಬಹಳಷ್ಟು ಜನರು ತುಂಬಾ ತೆಗುತ್ತೇವೆಂದು ವೈಧ್ಯರ ಬಳಿ ಹೋಗುತ್ತಾರೆ ತೇಗು ಬಂದಾಗ ತೇಗಬೇಕು ನೋಡುವವರು ಅಸಹ್ಯಾಪಡುತ್ತಾರೆಂದು ಅದನ್ನು ತಡೆಯಬಾರದು ಅದು ಕಾಯಿಲೆ ಅಲ್ಲ ಅದನ್ನು ರಿಫ್ಲೆಕ್ಸ್ ಎಂದು ಕರೆಯುತ್ತಾರೆ. ಜಠರಕ್ಕು ಅನ್ನನಾಳಕ್ಕು ಮಧ್ಯೆ ಒಂದು ಸ್ಟ್ರಿಂಕ್ ಟರ್ ಇರುತ್ತದೆ ಅದೇನಾದರೂ ಲ್ಯಾಪ್ಸ್ ಆದರೆ ಪದೇ ಪದೇ ತೇಗು ಬರುತ್ತದೆ ಅದಕ್ಕೆ ಬೇರೆ ಬೇರೆ ರೀತಿಯ ಔಷಧಗಳು ಸಿಗುತ್ತವೆ.

ಜನರಿಗೆ ಗ್ಯಾಸ್ಟ್ರಿಕ್ ಮತ್ತು ಗ್ಯಾಸ್ ಪಾಸ್ ಇವುಗಳ ಬಗ್ಗೆ ಗೊಂದಲ ಉಂಟಾಗುತ್ತದೆ ಕೆಲವರಿಗೆ ಗ್ಯಾಸ್ ಪಾಸ್ ಸಮಸ್ಯೆ ಉಂಟಾಗುತ್ತದೆ ಇದಕ್ಕೆ ಕಾರಣ ಮತ್ತು ಪರಿಹಾರ ತಿಳಿದು ಕೊಳ್ಳೋಣ. ಕೆಲವರು ತಂದೆ ತಾಯಿಗಳು ಮಕ್ಕಳನ್ನು ವೈಧ್ಯರ ಬಳಿ ಕರೆದುಕೊಂಡು ಹೋಗಿ ಮಗ ಬಹಳ ಗ್ಯಾಸ್ ಪಾಸ್ ಮಾಡುತ್ತಾನೆ ಎಂದು ಹೇಳುತ್ತಾರೆ ಇದರಿಂದ ತಮಗೆ ಅಸಹ್ಯ ವಾಗುತ್ತದೆ ವಾಸನೆ ಬರುತ್ತದೆ ಎಂದು ಹೇಳುತ್ತಾರೆ ಇದಕ್ಕೆ ಕಾರಣ ನೀವು ತುಂಬಾ ಕಾಳು ಕಡಿ ಕೋಳಿ ಮಟ್ಟೆ ತಿಂದರೆ ಪ್ರೊಟೀನ್ ಡೈಜೇಶನ್ ಆಗುತ್ತದೆ ಅದರ ಎಂಡ್ ಪ್ರೊಡಕ್ಟ್ ಗ್ಯಾಸ್.

ಈ ಗ್ಯಾಸ್ ಪಾಸ್ ಅನ್ನು ಕಡಿಮೆ ಮಾಡುವುದು ಹೇಗೆ ಎಂದು ನೋಡುವುದಾದರೆ ಒಂದು ಮಕ್ಕಳಿಗೆ ಆಗಿಂದಾಗೆ ಮಲ ವಿಸರ್ಜನೆ ಮಾಡಿಸಬೇಕು ಮಲ ವಿಸರ್ಜನೆ ಸರಿಯಾಗಿ ಆಗದಿದ್ದಲ್ಲಿ ಗ್ಯಾಸ್ ಉತ್ಪತ್ತಿ ಆಗುತ್ತದೆ. ಎರಡನೆಯದಾಗಿ ತುಂಬಾ ಸುಲಭವಾಗಿದೆ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವುದು, ಸೊಪ್ಪು ತರಕಾರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಸುವುದು.ಸೊಪ್ಪು ತರಕಾರಿಯಲ್ಲಿ ಪ್ರೊಟೀನ್ ಅಂಶ ಕಡಿಮೆ ಇರುತ್ತದೆ ಇದರಿಂದ ಗ್ಯಾಸ್ ಉತ್ಪತ್ತಿ ಕಡಿಮೆಯಾಗುತ್ತದೆ.

ಹಾಗಾದರೆ ಗ್ಯಾಸ್ಟ್ರಿಕ್ ಸಮಸ್ಯೆ ಎಂದರೆ ಏನು ಎಂಬುದನ್ನು ತಿಳಿದುಕೊಳ್ಳೋಣ ಹೊಟ್ಟೆಉರಿ ಎದೆಯುರಿ ಹುಳಿತೇಗು ಬಾಯಲ್ಲಿ ನೀರು ಕಿತ್ತುಕೊಳ್ಳುವುದು ಇದನ್ನು ಗ್ಯಾಸ್ ಸೈಟ್ರಿಸ್ ಎನ್ನುತ್ತಾರೆ ಅಂದರೆ ಜಠರದ ಒಳಗಡೆ ಪದರು ಉದಿಕೊಂಡಿರುತ್ತದೆ ಸಣ್ಣ ಸಣ್ಣ ಹುಣ್ಣುಗಳಾಗಿರುತ್ತವೆ ಅದನ್ನು ಗ್ಯಾಸ್ಟ್ರಿಕ್ ಎನ್ನುತ್ತಾರೆ.

ಅದು ಯಾವ ಕಾರಣದಿಂದ ಉಂಟಾಗುತ್ತದೆ ಎನ್ನುವುದನ್ನು ನೋಡುವುದಾದರೆ ಇದಕ್ಕೆ ಮುಖ್ಯ ಕಾರಣ ಹರಿ ವರಿ ಕರಿ ಇದೇನಪ್ಪ ಹೀಗೆ ಅಂತ ತಲೆ ಕೆಡಿಸಿಕೊಳ್ಳಬೇಡಿ ಮುಂದೆ ಸಂಪೂರ್ಣವಾಗಿ ನೋಡಿ

ಹರಿಯಾರು ಹರಿಬರಿಯಾಗಿ ಊಟಮಾಡುತ್ತಾರೋ ಅಥವಾ ಸಮಯಕ್ಕೆ ಸರಿಯಾಗಿ ಊಟ ಮಾಡುವುದಿಲ್ಲವೋ ಮತ್ತು ಗಬಗಬನೆ ತಿನ್ನುತ್ತಾರೋ ಅವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ವರಿ ಯಾರು ಎಲ್ಲದಕ್ಕೂ ತಲೆ ಕೆಡಿಸಿಕೊಳ್ಳುತ್ತರೋ ಒತ್ತಡಗಳಿಗೆ ಒಳಗಾಗುತ್ತಾರೋ ಅವರಿಗೆ ಗ್ಯಾಸ್ಟ್ರಿಕ್ ಆಗುತ್ತದೆ ಏಕೆಂದರೆ ಮೆದುಳಿಗೂ ಹೊಟ್ಟೆಗೂ ಎರಡು ನರಗಳು ಬರುತ್ತವೆ ತೀರಾ ತಲೆ ಕೆಡಿಸಿಕೊಂಡಾಗ ಈ ನರಗಳು ಸ್ವಿಮ್ಯುಲೆಟ್ಆಗುತ್ತದೆ ಆಸಿಡ್ ಚಲ್ ಅಂತ ಉತ್ಪತ್ತಿ ಆಗಿ ಗ್ಯಾಸ್ಟಿಕ್ ಆಗುತ್ತದೆ.
ಕೆಲವರಿಗೆ ಕರಿದ ತಿಂಡಿಗಳನ್ನು ಹೆಚ್ಚಾಗಿ ತಿನ್ನುವುದು ಅಭ್ಯಾಸವಾಗಿರುತ್ತದೆ ಒಗ್ಗರಣೆ ಹಾಕಿದ ಉಪ್ಪಿಟ್ಟು ಚಿತ್ರನ್ನಗಳನ್ನು ಒಗ್ಗರಣೆ ಸಾರುಗಳನ್ನು ತಿನ್ನಬಹುದು ತೀರಾ ಕರಿದ ತಿಂಡತಿನಿಸುಗಳನ್ನು ತಿನ್ನುವವರಿಗೆ ಗ್ಯಾಸ್ಟ್ರಿಕ್ ಉಂಟಾಗುತ್ತದೆ.

ಗ್ಯಾಸ್ಟ್ರಿಕ್ ಉಂಟಾಗಲು ಕೆಲವೊಮ್ಮೆ ನಾವು ತೆಗೆದುಕೊಳ್ಳುವ ಅವಶ್ಯಕತೆ ಇಲ್ಲದ ಮಾತ್ರೆ ಔಷಧಗಳು ಕಾರಣವಾಗಿರುತ್ತದೆ. ತಲೆ ನೋವು ಮೈ ಕೈ ನೋವು ಬಂದಾಗ ಮಾತ್ರೆಗಳನ್ನು ಯಾವಾಗ ಅಂದ್ರೆ ಆವಾಗ ತೆಗೆದುಕೊಳ್ಳುವಂತಿಲ್ಲ ಮಾತ್ರೆಗಳನ್ನು ತೆಗೆದುಕೊಳ್ಳಲೇ ಬೇಕೆನಿಸಿದಾಗ ಹೊಟ್ಟೆಗೆ ಏನಾದರೂ ತಿಂದು ಆಮೇಲೆ ಮಾತ್ರೆ ತೆಗೆದುಕೊಳ್ಳಬೇಕು. ಇನ್ನು ಕಾಲಿ ಹೊಟ್ಟೆಯಲ್ಲಿ ಧೂಮಪಾನ ಮಧ್ಯಪಾನ ಮಾಡುವುದರಿಂದಲೂ ಗ್ಯಾಸ್ಟ್ರಿಕ್ ಉಂಟಾಗುತ್ತದೆ.

ಗ್ಯಾಸ್ಟ್ರಿಕ್ ಉಂಟಾದಾಗ ಅದನ್ನು ಪರಿಹರಿಸಿ ಕೊಳ್ಳುವುದು ಹೇಗೆ ಎಂದು ನೋಡುವುದಾದರೆ ಮನೆಯಲ್ಲಿ ಆಂಟಿ ಆಸಿಡ್ ಡೈಸಿನ್ ಗಳನ್ನು ತಂಡಿಟ್ಟುಕೊಳ್ಳಬೇಕು ಹೊಟ್ಟೆಯುರಿ ಉಂಟಾದಾಗ ಇದನ್ನು ತೆಗೆದುಕೊಂಡರೆ ಹೊಟ್ಟೆ ತಣ್ಣಗಾಗುತ್ತದೆ. ಇನ್ನು ಕಾಯಿಸಿ ಆರಿಸಿದ ಹಾಲು ಕುಡಿದರೆ ಅಥವಾ ಹುಳಿ ಇಲ್ಲದ ಮಜ್ಜಿಗೆಯನ್ನು ಕುಡಿಯುವುದು ಅಥವಾ ಕೆಲವು ಹಣ್ಣುಗಳನ್ನು ಸೇವಿಸುವುದು ಉತ್ತಮ. ಇನ್ನು ಮನೆಯ ಒಳಗೆ ತಯಾರಿಸುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಹೊರಗಡೆ ಆಹಾರಗಳಾದ ಪಾನಿಪುರಿ ಮಾಸಲಪುರಿ ಇಂಥವುಗಳನ್ನು ತಿನ್ನುವುದರಿಂದ ಗ್ಯಾಸ್ಟ್ರಿಕ್ ಉಂಟಾಗುತ್ತದೆ.ಆದ್ದರಿಂದ ಸಾತ್ವಿಕ ಆಹಾರ ಸಮಯಕ್ಕೆ ತಕ್ಕ ಆಹಾರ ಸೇವಿಸುವುದರಿಂದ ಮತ್ತು ನೀರನ್ನು ಹೆಚ್ಚಾಗಿ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಆಗುವುದಿಲ್ಲ

ಗ್ಯಾಸ್ಟ್ರಿಕ್ ನಿಂದಾಗುವ ದುಷ್ಪರಿಣಾಮಗಳೆಂದರೆ ಪದೇ ಪದೇ ಗ್ಯಾಸ್ಟ್ರಿಕ್ ಆಗುತ್ತಿದ್ದರೆ ವೈದ್ಯರನ್ನು ಭೇಟಯಾಗಿ ಎಂಡೋಸ್ ಕಾಫಿ ಮಾಡಿಸಬೇಕು ಯಾಕೆಂದ್ರೆ ಅನೇಕ ಸಾರಿ ಪೇಪೇಟಿಕಲ್ಸ್ ಅಂತ ಇರುತ್ತದೆ ಅದು ಗೊತ್ತಾಗುವುದಿಲ್ಲ ಹೊಟ್ಟೆಯೊಳಗೆ ಗ್ಯಾಸ್ಟ್ರಿಕ್ ಕ್ಯಾನ್ಸರ್ ಇರುತ್ತದೆ ಅದು ನಮಗೆ ತಿಳಿಯುವುದಿಲ್ಲ ಆದ ಕಾರಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇನ್ನು ಕೆಲವೊಮ್ಮೆ ಪಿತ್ತಕೋಶದಲ್ಲಿ ಕಲ್ಲುಗಳಾಗಿ ಇನ್ಫೆಕ್ಷನ್ ಆಗಿರುತ್ತದೆ ಅದು ಗ್ಯಾಸ್ಟ್ರಿಕ್ ತರಹವೇ ಭಾಸವಾಗುತ್ತದೆ ಕೆಲವೊಮ್ಮೆ ಮಧುಮೇಹಿಗಳಿಗೆ ಸ್ಟಮಕ್ ಸ್ಟ್ರೆಂತ್ ಕಡಿಮೆಯಾದಾಗ ಅಂತವರಿಗೆ ಜೀರ್ಣ ಕ್ರಿಯೆ ಕಡಿಮೆಯಾಗಿ ಗ್ಯಾಸ್ಟ್ರಿಕ್ ಉಂಟಾಗುತ್ತದೆ.ಈ ರೀತಿ ಬೇರೆ ಬೇರೆ ಕಾರಣಗಳಿಗೆ ಗ್ಯಾಸ್ಟ್ರಿಕ್ ಉಂಟಾಗುತ್ತದೆ . ಇದರಿಂದ ತಪ್ಪಿಸಿಕೊಳ್ಳಲು ನಾವು ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು ಹೆಚ್ಚಿನ ಪ್ರಮಾಣದಲ್ಲಿನೀರನ್ನು ಕುಡಿಯುವುದು ಆದಷ್ಟು ಸಸ್ಯಾಹಾರ ಪದಾರ್ಥ ಸೇವಿಸಬೇಕು.

ಇನ್ನು ಕೆಲವೊಮ್ಮೆ ಗ್ಯಾಸ್ಟ್ರಿಕ್ ಆದಾಗ ಕೆಲವೊಬ್ಬರು ಏಳೆನೀರನ್ನು ಕುಡಿಯುತ್ತಾರೆ ಇದರಿಂದ ಗ್ಯಾಸ್ಟ್ರಿಕ್ ಕಡಿಮೆ ಆಗುವುದಿಲ್ಲ ಅದರಬದಲು ಹುಳಿ ಇಲ್ಲದಿರುವ ಜ್ಯೂಸ್ ಕುಡಿಯಬಹುದು. ರಾಗಿ ಅಂಬಲಿಯನ್ನು ಕುಡಿಯಬಹುದು ಅದಕ್ಕೆ ತಣ್ಣಗಿರುವಹಾಲನ್ನು ಬೆರೆಸಿ ಬೆಳಗಿನ ಜಾವ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಗ್ಯಾಸ್ಟ್ರಿಕ್ ಆದಾಗ ಮನೆಮದ್ದುಗಳನ್ನು ಮಾಡಿದಾಗ ಅದು ತಕ್ಷಣಕ್ಕೆ ಕಡಿಮೆಯಾಗುತ್ತದೆ ಆದರೆ ಅದು ಕ್ಯಾನ್ಸರ್ ಗೆ ತಿರುಗಿದೆಯೋ ಎಂಬುದು ನಮಗೆ ತಿಳಿಯುವುದಿಲ್ಲ ಆದ್ದರಿಂದ ಮನೆಮದ್ದುಗಳನ್ನು ತುಂಬಾ ಮಾಡಿಕೊಂಡು ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಬೇಡಿ ವೈದ್ಯರನ್ನು ಸಂಪರ್ಕಿಸಿ ಸರಿಯಾದ ಚಿಕತ್ಸೆಯನ್ನು ಪಡೆಯುವುದು ಉತ್ತಮ.

By

Leave a Reply

Your email address will not be published. Required fields are marked *